ಜುಲೈ-16-2023 swabhimananews@gmail.com ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಕೋಟ ಗ್ರಾಮಪಂಚಾಯತ್ ವ್ಯಾಪ್ತಿಯ ಸರ್ವೆ ನಂಬರ್ 202-2 ರಲ್ಲಿ 2ಎಕರೆ.0.6 ಸೆಂಟ್ಸ್.ವಿಸ್ತಿರ್ಣದ ಪುರಾತನ ವರುಣತೀರ್ಥ ಶ್ರೀ ರಾಜಶೇಖರ ದೇವಸ್ಥಾನಕ್ಕೆ ಹೊಂದಿ ಕೊಂಡಂತೆ ಇರುವ ಕೆರೆಯೇ “ವರುಣ ತೀರ್ಥ ಕೆರೆ” ಉತ್ತರಕ್ಕೆ ಕೋಟ-ಪಡುಕೆರೆ ಮುಖ್ಯ ರಸ್ತೆ, ಪಶ್ಚಿಮಕ್ಕೆ ಶ್ರೀ ನಾರಾಯಣ ಗುರು ಸಭಾ ಭವನ. ಕೆರೆಯ ಸಮೀಪದಲ್ಲೇ ಸುಪ್ರಸಿದ್ಧ ಅಮೃತೇಶ್ವರಿ ದೇವಸ್ಥಾನವಿದೆ.
swabhimananews@gmail.com
ಬಹುಜನರ ಅಪೇಕ್ಷೆ ಮೇರೆಗೆ ಕರ್ನಾಟಕ ಸರ್ಕಾರದ ಅನುದಾನದಲ್ಲಿ ವಿಶಾಲವಾದ ವರುಣತೀರ್ಥ ಕೆರೆಯ ನವೀಕರಣ ಕಾಮಗಾರಿಯನ್ನು ಸುಮಾರು ಮೂರು ವರ್ಷಗಳ ಹಿಂದೆಯೇ ಕೈಗೊಳ್ಳಲಾಗಿತ್ತು.
swabhimananews@gmail.com ನಿಸ್ಸಾoಶಯವಾಗಿಯೂ ಈ ಹಿಂದಿನ ಎಡಿಯೂರಪ್ಪ ಮತ್ತು ಬಸವರಾಜ್ ಬೊಮ್ಮಾಯಿ ಸಚಿವ ಸಂಪುಟಗಳಲ್ಲಿ ಸಂಪುಟ ಸಚಿವರಾಗಿದ್ದ ಸ್ಥಳೀಯ ಹಾಲಿ ವಿಧಾನ ಪರಿಷತ್ ಸದಸ್ಯರೊಬ್ಬರ ಮುತುವರ್ಜಿಯಿಂದಲೇ ಅಂದಾಜು ಹತ್ತಾರು ಕೋಟಿ ಸರ್ಕಾರದ ಹಣ ವ್ಯಯಿಸಿದರೂ ಗುತ್ತಿಗೆದಾರರಿಂದ ಕಾಮಗಾರಿ ಇದುವರೆಗೂ ಮುಕ್ತಾಯಗೊಳ್ಳದೆ ಅಪೂರ್ಣಗೊಂಡಿದೆ.
swabhimananews@gmail.com
ವಿಪರ್ಯಾಸವೆಂದರೆ ಅದೇ ಗುತ್ತಿಗೆದಾರರಿಂದಲೇ ಕೇವಲ ಒಂದೇ ವರ್ಷದಲ್ಲಿ ಇದೆ ಮಾಜಿ ಸಚಿವರು ಹಾಲಿ ವಿಧಾನ ಪರಿಷತ್ ಸದಸ್ಯರು ಹತ್ತಿರದಲ್ಲೇ ಕಟ್ಟಿಸಿಕೊಂಡ ಬಹುಕೋಟಿಯ ಭವ್ಯ ಬಂಗಲೆಯ!! ಕಾಮಗಾರಿ ಒಂದೇ ವರ್ಷದಲ್ಲಿ ಪೂರ್ಣಗೊಂಡಿರುವುದು ಸ್ಥಳೀಯರಲ್ಲಿ, ಮಾತ್ರ ವಲ್ಲದೆ ಸ್ವಪಕ್ಷೀಯ ಕಾರ್ಯಕರ್ತರಲ್ಲಿ, ವಿಪಕ್ಷೀಯರಲ್ಲೂ ಚರ್ಚೆಗೆ ಗ್ರಾಸವಾಗಿದೆ..?
swabhimananews@gmail.com
ಸುಳ್ಳೋ ಸತ್ಯವೋ .? ಕೆಲವು ಮಂದಿ ಈ ಹಿಂದಿನ ಸರ್ಕಾರವನ್ನು 40% ಸರ್ಕಾರವೆಂದು ಆಪಾದಿಸುತ್ತಿರುವುದನ್ನು ಸೂಕ್ಷ್ಮವಾಗಿ ಗಮನಿಸಿದರೆ ಆರೋಪವನ್ನು ಕಡೆಗಣಿಸುವಂತಿಲ್ಲವೆಂದು ಜನರಾಡಿಕೊಳ್ಳುತ್ತಿದ್ದಾರೆ.
swabhimananews@gmail.com
ಅದೇನೇ ಇರಲಿ ಕಾಲವೇ ಉತ್ತರಿಸುತ್ತದೆ.
ವರುಣತೀರ್ಥ ಕೆರೆಯ ಕಾಮಗಾರಿ ಆದಷ್ಟು ಶೀಘ್ರದಲ್ಲಿ ಪೂರ್ಣಗೊಳಿಸಲಿ. ವರುಣ ತೀರ್ಥ ಹೆಸರಿನಲ್ಲಿ ಹಣ ಗುಳುಂ ಮಾಡಿದವರ ವಿರುದ್ಧ ಈ ಸರಕಾರ ಉನ್ನತ ಮಟ್ಟದ ಸಮಿತಿ ರಚಿಸಿ ತನಿಖೆ ನಡೆಸಲಿ.
swabhimananews@gmail.com
ಇದರ ವಿರುದ್ಧ ಉನ್ನತ ಮಟ್ಟದ ಹೋರಾಟಕ್ಕೆ ಧುಮುಕಲು ಸದಾ ಸಿದ್ಧ ಎಂದು ಸ್ಥಳೀಯರು ದ ಸಂ ಸ ಭೀಮ ವಾದಕ್ಕೆ ಬೆಂಬಲ ಕೋರಿ ಲಿಖಿತ ಮನವಿಯ ಮೂಲಕ ತಿಳಿಸಿದ್ದಾರೆ.ಈ ಕೆರೆಯ ಅಭಿವೃದ್ಧಿ ಹೆಸರಿನಲ್ಲಿ ಹಣ ದೋಚಿದ್ದು ಮಾತ್ರ ವಲ್ಲದೆ.ಈ ಕೆರೆಯನ್ನು ಒತ್ತುವರಿ ಮಾಡಿಕೊಂಡು ಅತಿಕ್ರಮಣ ಮಾಡಿರುವ ಬಗ್ಗೆಯೂ ತನಿಖೆಯಾಗಬೇಕು.
swabhimananews@gmail.com.ಕೆರೆ, ಕಾಲುವೆ ಒತ್ತುವರಿ ತೆರವು ಮಾಡುವಂತೆ ಸರ್ವೋಚ್ಚ ನ್ಯಾಯಾಲಯದ ಆದೇಶ ಇದ್ದರೂ ಒಂದು ಎಕರೆಗೂ ಹೆಚ್ಚು ಕೆರೆಯನ್ನು ಒತ್ತುವರಿ ಮಾಡಿಕೊಂಡಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿ ಕಂಡುಬರುತ್ತದೆ ಆದರೂ ಸಂಬಂಧಿಸಿದ ಇಲಾಖಾಧಿಕಾರಿಗಳು ಕಣ್ಣಿದ್ದೂ ಕುರುಡರಾಗಿರುವುದು ನೋಡಿದರೆ ಅವರೂ ಕೂಡ ಈ ಪ್ರಕರಣದಲ್ಲಿ ಆರೋಪಿಗಳಾಗಿದ್ದಾರೆ.ಅಂತವರ ವಿರುದ್ಧ ನಾವಿಂದು ದ್ವನಿ ಎತ್ತಬೇಕು
swabhimananews@gmail.com
ಎಂದು ದ.ಸಂ.ಸ ಭೀಮವಾದ ಉಡುಪಿ ಜಿಲ್ಲೆ ಕೂಡ ಆಗ್ರಹಿಸುತ್ತೆದೆ.ಅದರೊಂದಿಗೆ ಇಡೀ ಜಿಲ್ಲೆಯಲ್ಲಿ ಇಂತಹ ಸರಕಾರಿ ಕೆರೆ ಒತ್ತುವರಿ ಮಾಡಿಕೊಂಡ ನೂರಾರು ಪ್ರಕರಣಗಳ ಪಟ್ಟಿಯೇ ಇದೆ.
swabhimananews@gmail.com
ಈ ಹೋರಾಟಕ್ಕೆ ನಮ್ಮ ಸಂಘಟನೆಯ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದೇವೆ.ಎಂದು
ದ ಸಂ ಸ ಭೀಮ ವಾದ ಸಂಘಟನೆಯ ಮುಖ್ಯಸ್ಥರು ತಿಳಿಸಿದ್ದಾರೆ.
swabhimananews@gmail.com
ಅಂದಾಜು 10 ಕೋಟಿ ರೂಪಾಯಿಗಳಿಗೂ ಅಧಿಕ ಸಾರ್ವಜನಿಕ ತೆರಿಗೆಯ ಹಣವನ್ನು ಸಾರ್ವಜನಿಕ ಉದ್ದೇಶಕ್ಕೆ ಬಳಸಿಕೊಳ್ಳಲು ಇರುವ ಕೋಟ್ಯಂತರ ರೂಪಾಯಿ ಅನುದಾನದ ಕಾಮಗಾರಿಯನ್ನು ಯಾವುದೇ ರೀತಿಯ ಟೆಂಡರ್ ಪ್ರಕ್ರಿಯೆ ನಡೆಸದೆ ಗೌಪ್ಯವಾಗಿ ತಮಗೆ ಬೇಕಾದ ವ್ಯಕ್ತಿಗೆ ಲಾಭಮಾಡಿಕೊಡುವ ಉದ್ದೇಶದಿಂದ ಒತ್ತಡದ ಮೂಲಕ ನಿರ್ಮಿತಿ ಕೇಂದ್ರದ ಮುಖಾಂತರ ತನ್ನ ಆಪ್ತರಿಗೆ ಕಾಮಗಾರಿಯ ಗುತ್ತಿಗೆ ನೀಡಲಾಗಿದೆ.
swabhimananews@gmail.com.ಎಂದು ಸ್ಥಳೀಯರು ಆರೋಪಿಸಿದ್ದಾರೆ. ಪ್ರಸ್ತುತ ಕಾಮಗಾರಿಯು ಅವ್ಯವಸ್ಥಿತ ಹಾಗೂ ಗುಣಮಟ್ಟದ ಕೊರತೆಯು ಎದ್ದು ಕಾಣುತ್ತದೆ,
ಭ್ರಷ್ಟಾಚಾರದ ವಾಸನೆ ಹಾಗೂ ಕಹಿನೆರಳಿನ ಕುರಿತು ಗುಸುಗುಸು ಪಿಸುಪಿಸು ಶುರುವಾಗಿದ್ದು ಇನ್ನಾದರು ಸಂಬಂಧಿಸಿದ ಆಡಳಿತ ವ್ಯವಸ್ಥೆ ಎಚ್ಚೆತ್ತುಕೊಂಡು ಕೆರೆಯ ಒತ್ತುವರಿಯನ್ನು ತೆರವು ಗೊಳಿಸಿ ಎರಡು ಎಕರೆ ಕೆರೆಯನ್ನು ಅಭಿವೃದ್ಧಿ ಗೊಳಿಸಿ.ಅಂತರ್ಜಲ ಹೆಚ್ಚಿಸುವ ಜೊತೆಗೆ ಕೃಷಿಗೆ ಅನುಕೂಲ ಮಾಡಿಕೊಡ ಬೇಕು,
swabhimananews@gmail.com
ಕಾಮಗಾರಿಯ ಬಗ್ಗೆ ಇರುವ ಅನುಮಾನದ ಹೊಗೆಯನ್ನು ಸಂಬಂಧಿಸಿದ ಇಲಾಖೆಯು ಪಾರದರ್ಶಕ ತನಿಖೆ ನಡೆಸಿ ನಿಷ್ಪಕ್ಷಪಾತ ವಾಗಿ ವರದಿ ನೀಡಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಹಾಗೂ ಕೂಡಲೆ ವರುಣತೀರ್ಥ ಕೆರೆಯ ಅಭಿವೃದ್ಧಿ ಕಾಮಗಾರಿ ಸಂಪೂರ್ಣ ಗೊಳಿಸುವಂತೆ ಸಾರ್ವಜನಿಕರ ಅಗ್ರಹ ವಾಗಿದೆ.
swabhimananews@gmail.com
ತಪ್ಪಿದಲ್ಲಿ ಜಿಲ್ಲೆಯ ಅನೇಕ ಸಂಘಟನೆಗಳು, ಹೋರಾಟಗಾರರ,ಸಮಾನ ಮನಸ್ಕರು ಸೇರಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು.ಹಾಗೂ ಈ ಸರ್ಕಾರಕ್ಕೆ ಪ್ರಕರಣದ ತನಿಖೆಯನ್ನು ಉನ್ನತ ಮಟ್ಟದಲ್ಲಿ ನಡೆಸುವಂತೆ ಒತ್ತಾಯಿಸಲಾಗುವುದು ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ. ಒಟ್ಟಾರೆಯಾಗಿ ವರುಣತೀರ್ಥದ ಕತೆ ಮುಂದೆ ಬೃಹತ್ ಆಂದೋಲನಕ್ಕೆ ರೂಪುರೇಷೆ ಗೊಂಡಿರುವುದಂತು ಸತ್ಯ.ವರುಣತೀರ್ಥದ ಕೆರೆ ಅಭಿವೃದ್ಧಿ ಹೆಸರಲ್ಲಿ ಬಹುಕೋಟಿ ಹಗರಣದ ಕತೆ ಯಾವ ಹಂತದವರೆಗೆ ಹೋಗುತ್ತದೆ ಎಂದು ಕಾದುನೋಡಬೇಕಿದೆ.
swabhimananews@gmail.com