9.3 C
New York
19 April 2026
Karnataka

ದಲಿತರ PTCL ಭೂಮಿಯಲ್ಲಿ ಅಕ್ರಮವಾಗಿ ಖಾಸಗಿ ಶಾಲೆಗೆ ರಸ್ತೆ ನಿರ್ಮಾಣ, ಸರಕಾರದ 4 ಕೋಟಿ ರೂಪಾಯಿ ದುರುಪಯೋಗದ ಕುರಿತು ದಲಿತ ಮುಖಂಡ ಶೇಖರ್ ಹಾವಂಜೆ ಆಕ್ರೋಶ.

ಉಡುಪಿ: ಫೆಬ್ರವರಿ -03-2026 Swabhimananews,

ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಚೇರ್ಕಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಾಳ್ಕೊಟ್ಟು ಎಂಬಲ್ಲಿ ಸರಕಾರದ ಅಂದಾಜು ಸುಮಾರು 4 ಕೋಟಿ ರೂಪಾಯಿ ವೆಚ್ಚದಲ್ಲಿ
ಕಾಮಗಾರಿಗೆ ಅನುಮೋದನೆ ನೀಡಲಾಗಿದೆ.

ಈ ಕಾಮಗಾರಿಗೆ ಉಡುಪಿ ಲೋಕೋಪಯೋಗಿ ಇಲಾಖೆ ಕ್ರಿಯಾ ಯೋಜನೆ ತಯಾರಿಸಿದ್ದು ಸದ್ರಿ ಕಾಮಗಾರಿ ನಡೆಯುವ ಪ್ರದೇಶವು ಇತ್ತೀಚೆಗೆ ನಿರ್ಮಾಣಗೊಂಡಿರುವ ಖಾಸಗಿ ಶಾಲೆಗೆ ಹೋಗುವ ಸಂಪರ್ಕ ರಸ್ತೆಯಾಗಿರುತ್ತದೆ.

ಈ ಪ್ರದೇಶದಲ್ಲಿ ಯಾವುದೇ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳಿರುವುದಿಲ್ಲ, ಹಾಗೂ ಸಾರ್ವಜನಿಕರಿಗೆ ಈ ರಸ್ತೆ ಉಪಯೋಗ ಇಲ್ಲ ಮತ್ತು ಸದ್ರಿ ರಸ್ತೆ ನಿರ್ಮಾಣ ಮಾಡುತ್ತಿರುವ ಭೂಮಿಯು ದಲಿತರಿಗೆ ಮಂಜೂರಾದ PTCL ದರ್ಖಾಸ್ತು ಭೂಮಿಗಳಾಗಿದ್ದು ಇದರ ಭೂಮಾಲೀಕರು ಮುಗ್ದ, ಅನಕ್ಷರಸ್ಥ ದಲಿತರಾಗಿದ್ದು ಇವರನ್ನು ಪುಸಲಾಯಿಸಿ ಅವರಿಗೆ ಅಲ್ಪ ಮೊತ್ತದ ಹಣ ನೀಡಿ ಸದ್ರಿ ಖಾಸಗಿ ದರ್ಖಾಸ್ತು ಭೂಮಿಯಲ್ಲಿ ಖಾಸಗಿ ಶಾಲೆಗೆ ಅಕ್ರಮವಾಗಿ ರಸ್ತೆ ನಿರ್ಮಿಸಿ ದಲಿತರಿಗೆ ದೌರ್ಜನ್ಯವೆಸಗಿರುವುದು ಸ್ಪಷ್ಟವಾಗಿ ಕಂಡು ಬರುತ್ತದೆ.

ಈ ದಲಿತರ ಭೂಮಿಯನ್ನು ಅಕ್ರಮವಾಗಿ ಕಬಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ PWD ಇಲಾಖೆಯ ಇಂಜಿನಿಯರ್ ಗಳು, ಗ್ರಾಮ ಪಂಚಾಯತ್ PDO, ಕಾರ್ಯದರ್ಶಿ, ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳೇ ಕಾರಣ ಅವರೆಲ್ಲರ ವಿರುದ್ಧ ದಲಿತ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿ ಸೇವೆಯಿಂದ ಅಮಾನತುಗೊಳಿಸುವಂತೆ ಹಾಗೂ ಸಾರ್ವಜನಿಕ ತೆರಿಗೆಯ 4ಕೋಟಿ ಹಣವನ್ನು ಲೂಟಿ ಹೊಡೆದು ಕರ್ತವ್ಯ ಲೋಪವೆಸಗಿರುವುದು ಸ್ಪಷ್ಟವಾಗಿ ಕಂಡು ಬರುತ್ತದೆ.ಈ ರಸ್ತೆಯು ಸುಮಾರು 40 ಅಡಿ ಅಗಲ, 2 ಕಿ.ಮೀ. ಉದ್ದದ ರಸ್ತೆ ಮತ್ತು ಮಿನಿ ಸೇತುವೆ ನಿರ್ಮಾಣ ಮಾಡುತ್ತಿರುವುದು ಕಂಡು ಬರುತ್ತದೆ.

ಸದ್ರಿ ಕಾಮಗಾರಿ ನಿರ್ಮಾಣ ಮಾಡುವಾಗ ಲೋಕೋಪಯೋಗಿ ಇಲಾಖೆಯ 14 ನಿಬಂಧನೆಗಳಲ್ಲಿ ಎಲ್ಲಾ ನಿಬಂಧನೆಗಳನ್ನು ಸಂಪೂರ್ಣವಾಗಿ ಉಲ್ಲಂಘನೆ ಮಾಡಿ ಸರ್ಕಾರಿ ಅನುದಾನ ಬಳಸಿ ಖಾಸಗಿ ಶಾಲೆಗೆ ರಸ್ತೆ ನಿರ್ಮಿಸಲು ಇಲಾಖೆಯೇ ಸಂಪೂರ್ಣ ಬೆಂಬಲ ನೀಡಿರುವುದು ಬಹಿರಂಗವಾಗಿ ಭ್ರಷ್ಟಾಚಾರಕ್ಕೆ ಪ್ರೇರಣೆಯಾಗಿರುತ್ತದೆ.

ಅದೆಷ್ಟೋ ಗ್ರಾಮೀಣ ಭಾಗದ ರಸ್ತೆಗಳು, ಸರಕಾರಿ ಶಾಲೆಯ ರಸ್ತೆಗಳನ್ನು ಅಭಿವೃದ್ಧಿ ಪಡಿಸದೇ ಯಾವುದೇ ಗ್ರಾಮಗಳಿಗೆ ಸಂಪರ್ಕಕ್ಕೆ /ಸಾರ್ವಜನಿಕ ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿಕೊಡದೆ ಕೇವಲ ಖಾಸಗಿ ಶಾಲೆಯ ವಾಹನಗಳ ಸಂಚಾರಕ್ಕೆ ಮಾತ್ರ ನಿರ್ಮಾಣ ಮಾಡಿರುವ ರಸ್ತೆಗೆ ಸರಕಾರದ 4 ಕೋಟಿ ರೂಪಾಯಿ ಅನುದಾನ ನೀಡಿರುವ ಇಲಾಖೆಗಳ ಮತ್ತು ಸರಕಾರದ ಉದ್ದೇಶವಾದರೂ ಏನು ಎಂದು PWD ಇಲಾಖೆ ಮತ್ತು ಗ್ರಾಮ ಪಂಚಾಯತ್, ಕಂದಾಯ ಇಲಾಖೆಯ ಇಂಜಿನಿಯರ್/ಅಧಿಕಾರಿಗಳ ತಲೆದಂಡ ಆಗಲೇ ಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಾರ್ವಜನಿಕರ ತೆರಿಗೆಯ ಹಣ ದುರುಪಯೋಗವಾಗುತ್ತಿರುವುದನ್ನು ತಕ್ಷಣ ತನಿಖೆ ನಡೆಸಿ, ದಲಿತರ PTCL ಭೂಮಿಯಲ್ಲಿ ನಿರ್ಮಾಣ ಆಗುತ್ತಿರುವ ಕಾಮಗಾರಿಯನ್ನು ತಕ್ಷಣವೇ ಸ್ಥಗಿತಗೊಳಿಸಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ದಲಿತ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿ ಸರಕಾರದ 4 ಕೋಟಿ ರೂಪಾಯಿ ದುರುಪಯೋಗ ಪಡಿಸಿ ಕರ್ತವ್ಯಲೋಪವೆಸಗಿದ ಎಲ್ಲಾ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಂಡು
ಕರ್ತವ್ಯ ಲೋಪವೆಸಗಿದ ಎಲ್ಲಾ ಅಧಿಕಾರಿಗಳ ವಿರುದ್ಧ ದಲಿತ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿ ಸೇವೆಯಿಂದ ವಜಾ ಮಾಡುವಂತೆ ಸಂಬಂಧಪಟ್ಟ ಸರಕಾರಕ್ಕೆ ಮತ್ತು ಇಲಾಖೆಗಳಿಗೆ,

ಉಡುಪಿ ಜಿಲ್ಲಾಡಳಿತಕ್ಕೆ ಲಿಖಿತವಾಗಿ ದೂರು ನೀಡಲಾಗಿದೆ. ಎಂದು ಹೇಳಿದರು ಇದರಲ್ಲಿ ಭಾಗಿಯಾದ ಎಲ್ಲರಿಗೂ ಕಾನೂನು ಶಿಕ್ಷೆ ಆಗಲೇ ಬೇಕು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ತಪ್ಪಿದ್ದಲ್ಲಿ ಮುಂದೆ ಎಲ್ಲರ ವಿರುದ್ಧ ಕಾನೂನು ಹೋರಾಟ ಸಂಘಟನೆಗೆ ಅನಿವಾರ್ಯ ಎನ್ನುವುದನ್ನು ಎಚ್ಚರಿಸಲಾಗಿದೆ.
Swabhimananews.

Related posts

ರಾಜ್ಯದಲ್ಲಿ ಕಳೆದ ಐದು ವರ್ಷಗಳಲ್ಲಿ 10ಸಾವಿರಕ್ಕೂ ಅಧಿಕ ‘ಅಟ್ರಾಸಿಟಿ ಕೇಸ್’ ದಾಖಲು

Swabhimana News Desk

ಇಂದು ಮತ್ತು ನಾಳೆ ಕರಾವಳಿ ಜಿಲ್ಲೆಗಳಲ್ಲಿ ಭಾರಿ ಮಳೆ ಸಾಧ್ಯತೆ : ಆರೇಂಜ್ ಅಲರ್ಟ್ ಘೋಷಣೆ.

Swabhimana News Desk

ನಾಗರಹೊಳೆ: ವನ್ಯಪ್ರಾಣಿಗಳ ಬೇಟೆಗೆ ಹೊಂಚು ಹಾಕುತ್ತಿದ್ದ ಇಬ್ಬರ ಬಂಧನ, ಮೂವರು ಪರಾರಿ!

Swabhimana News Desk

Leave a Comment