23 C
New York
30 September 2026
Coastal

ಬೋಧಿಸತ್ವ ಬುದ್ಧ ಫೌಂಡೇಶನ್ (ರಿ) ಉಡುಪಿ ಜಿಲ್ಲೆ ಇವರ ಬೋಧಿಸತ್ವ ಕಲಾತಂಡದ ಉದ್ಘಾಟನಾ ಕಾರ್ಯಕ್ರಮ.    

ಉಡುಪಿ:ಮೇ 18-2026 swabhimananews

ದಿನಾಂಕ:- 17/05/2026ರ ಭಾನುವಾರ ಬೆಳಿಗ್ಗೆ 11:30 ಕ್ಕೆ ಹಾವಂಜೆಯ ಬೋಧಿಸತ್ವ ಬುದ್ಧ ವಿಹಾರದಲ್ಲಿ ಬೋಧಿಸತ್ವ ಕಲಾತಂಡವನ್ನು ಕಿರುಚಿತ್ರ ನಿರ್ದೇಶಕ, ನಿರ್ಮಾಪಕ, ಚಿತ್ರಕಲಾ ಶಿಕ್ಷಕ, ಸಂಗೀತ ನಿರ್ದೇಶಕ, ಗಾಯಕರಾದ ದಿನೇಶ್ ಕೊಡವೂರು ರವರು ಮತ್ತು ಸಾಮಾಜಿಕ ಹೋರಾಟಗಾರ, ಗಾಯಕ ವಿಜಯ ಬಾರ್ಕೂರು ರವರು ಉದ್ಘಾಟಿಸಿದರು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬ್ರಹ್ಮಾವರದ ರುಡ್ ಸೆಟ್ ಸಂಸ್ಥೆಯ ನಿರ್ದೇಶಕ ಡಾ. ಬೊಮ್ಮಯ್ಯ ಮುಳಬಾಗಿಲು ವಹಿಸಿದ್ದರು,

ಉಡುಪಿಯ ಹಿರಿಯ ಧಮ್ಮಾಚಾರಿಗಳಾದ ಶಂಭು ಸುವರ್ಣ ಹಾಗೂ ನೂತನವಾಗಿ ಬೌದ್ಧ ಧಮ್ಮದ ನಿಯಮದಂತೆ ವಿವಾಹವಾಗಿದ್ದ ಶರತ್ ರೋಷನ್ ಹಾಗೂ ಪ್ರತಿಮಾ ಶರತ್ ರೋಷನ್ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.

ಕಾರ್ಯಕ್ರಮವು ಬುದ್ಧ ವಂದನೆ, ಧಮ್ಮ ವಂದನೆ, ಸಂಘ ವಂದನೆಯೊಂದಿಗೆ ಪ್ರಾರಂಭಗೊಂಡು ಬಾಬಾ ಸಾಹೇಬ್ ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮೇಣದ ಬತ್ತಿಯ ಬೆಳಕನ್ನು ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಉದ್ಘಾಟಕರಾಗಿ ಆಗಮಿಸಿದಂತಹ ದಿನೇಶ್ ಕೊಡವೂರುರವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು ತನಗೆ ಸಂಗೀತದ ಬಗ್ಗೆ ಗೊತ್ತಿರುವಂತಹ ವಿಷಯಗಳನ್ನು ತಿಳಿಸುವುದಾಗಿ ಹಾಗೂ ಕಲಾಮಂಡಳಿಗೆ ಪ್ರೋತ್ಸಾಹವನ್ನು ನೀಡುವುದಾಗಿ ತಿಳಿಸಿದರು

ಮತ್ತು ತಮ್ಮ ಸುಂದರವಾದ ಕಂಠದಿಂದ ಹಾಡನ್ನು ಹಾಡಿ ಕಲಾ ತಂಡಕ್ಕೆ ಚಾಲನೆಯನ್ನು ನೀಡಿದರು. ಮತ್ತೋರ್ವ ಉದ್ಘಾಟಕರಾಗಿ ಆಗಮಿಸಿದಂತಹ ವಿಜಯ್ ಬಾರ್ಕೂರುರವರು ಸಭೆಯನ್ನು ಉದ್ದೇಶಿಸಿ ಮಾತನಾಡಿದರು ಮುಂದಿನ ದಿನಗಳಲ್ಲಿ ಈ ಬೋಧಿಸತ್ವ ಕಲಾತಂಡವು ಹೆಚ್ಚು ಹೆಚ್ಚು ಅವಕಾಶಗಳನ್ನು ಪಡೆದು ದೊಡ್ಡ ದೊಡ್ಡ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ತುಂಬಾ ಎತ್ತರಕ್ಕೆ ಕಲಾ ತಂಡವು ಬೆಳೆಯಲಿ ಎಂದು ಶುಭ ಹಾರೈಸಿದರು.

ಉಡುಪಿಯ ಹಿರಿಯ ಧಮ್ಮಾಚಾರಿಗಳಾದ ಶಂಭು ಸುವರ್ಣ ರವರು ಮಾತನಾಡುತ್ತಾ ನಾವು ಇವತ್ತು ಏನೇ ಸಾಧನೆ ಮಾಡಿದ್ದರು ಅದಕ್ಕೆ ಕಾರಣ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರವರು ಎಂದರು. ಹಾಗೂ ನಾವು ಯಾವುದೇ ಕೆಲಸವನ್ನು ಮಾಡುವಾಗ ಆ ಕೆಲಸದ ಮೇಲೆ ಶ್ರದ್ಧೆ ಇಟ್ಟರೆ ಮಾತ್ರ ನಾವು ಯಶಸ್ಸಿನ ಮೆಟ್ಟಿಲುಗಳನ್ನು ಏರಲು ಸಾಧ್ಯ ಎಂದು ಎಲ್ಲರಿಗೂ ಅರ್ಥಪೂರ್ಣವಾದಂತಹ ಕಿವಿ ಮಾತನ್ನು ಹೇಳಿದರು. ಬೌದ್ಧ ಧಮ್ಮದ ನಿಯಮದಂತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಂತಹ ನವ ದಂಪತಿಗಳಾದ ಶರತ್ ರೋಶನ್ ಹಾಗೂ ಪ್ರತಿಮಾ ಶರತ್ ರೋಶನ್ ರವರು ಕಲಾ ಮಂಡಳಿಯ ಎಲ್ಲಾ ಸದಸ್ಯರಿಗೆ ಶುಭ ಹಾರೈಸಿದರು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಡಾ. ಬೊಮ್ಮಯ್ಯ. ಎಂ ರವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಾ ನಶಿಸಿ ಹೋಗಿರುವಂತಹ ಬೌದ್ಧ ಧಮ್ಮವನ್ನು ಇಡೀ ಪ್ರಪಂಚಕ್ಕೆ ಪರಿಚಯಿಸಿದವರು ಹಾಗೂ ಪ್ರಬುದ್ಧ ಭಾರತವನ್ನು ನಿರ್ಮಾಣ ಮಾಡಬೇಕು ಎಂದು ಪಣ ತೊಟ್ಟರುವ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರವರು. ಇಂದು ನಾವೆಲ್ಲರೂ ಅವರು ತೋರಿದ ಹಾದಿಯಲ್ಲಿ ನಡೆಯಬೇಕಾಗಿದೆ ಎಂದರು ಹಾಗೂ ಸಂಗೀತ ಎಂದರೆ ಅಂಬೇಡ್ಕರ್ ರವರಿಗೆ ತುಂಬಾ ಪ್ರಿಯವಾಗಿತ್ತು.

ಅದರಂತೆ ಒಂದು ಕಲಾ ತಂಡವನ್ನು ರಚಿಸಿ ಅಂಬೇಡ್ಕರ್ ರವರ ಕನಸನ್ನು ನನಸಾಗಿಸಲು ಪ್ರಯತ್ನಿಸುತ್ತಿರುವ ಶೇಖರ್ ಹಾವಂಜೆರವರಿಗೆ ಹಾಗೂ ಎಲ್ಲರಿಗೆ ಅಭಿನಂದನೆಯನ್ನು ಸಲ್ಲಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಶೇಖರ್ ಹಾವಂಜೆಯವರು ನೆರವೇರಿಸಿದರು.

ಕಾರ್ಯಕ್ರಮಕ್ಕೆ ಆಗಮಿಸಿದಂತಹ ಎಲ್ಲರನ್ನೂ ವಿಠಲ್ ಸಾಲಿಕೇರಿರವರು ಸ್ವಾಗತಿಸಿ ವಂದಿಸಿದರು. ಈ ಸಂದರ್ಭದಲ್ಲಿ ಬೋಧಿಸತ್ವ ಬುದ್ಧ ಫೌಂಡೇಶನ್ (ರಿ) ಉಡುಪಿ ಜಿಲ್ಲೆ ಇದರ ಅಧ್ಯಕ್ಷರಾದ ಶೇಖರ್ ಹಾವಂಜೆ ಹಾಗೂ ಕುಟುಂಬ, ಯುವ ಧಮ್ಮಾಚಾರಿಗಳಾದ ಮುರಳೀಧರ್ ಮಾರ್ಪಳ್ಳಿ, ಹಿರಿಯ ಧಮ್ಮಾಚಾರಿಗಳಾದ ಶಂಭು ಸುವರ್ಣರವರ ಕುಟುಂಬ, ವಿಠಲ್ ಸಾಲಿಕೇರಿ ಹಾಗೂ ಕುಟುಂಬ, ಧಮ್ಮಾಚಾರಿಗಳಾದ ಪುಷ್ಪಾಕರ್ ಕುಟುಂಬ, ಕುಶಲ ರವೀಂದ್ರ ಬಂಟೆಕಲ್ಲು, ಮುತ್ತಕ್ಕ ಹಾಗೂ ಕುಟುಂಬ, ಸುನೀತಾ ಒಳಗುಡ್ಡೆ, ವಿಜಯ್ ಬಾರ್ಕೂರುರವರ ಕುಟುಂಬ, ಬೋಧಿಸತ್ವ ಬುದ್ಧ ಫೌಂಡೇಶನ್ (ರಿ) ನ ಕಾರ್ಯದರ್ಶಿಗಳು, ಟ್ರಸ್ಟಿಗಳು, ಪದಾಧಿಕಾರಿಗಳು, ಬೌದ್ಧ ಉಪಾಸಕ, ಉಪಾಸಿಕರು ಹಾಗೂ ಬೌದ್ಧ ಅನುಯಾಯಿಗಳು ಉಪಸ್ಥಿತರಿದ್ದರು.

Swabhimananews.

Related posts

ಸರಕಾರದ ಕೋಟಿ ಕೋಟಿ ರೂಪಾಯಿ ಹಾಗೂ ಕೋಟ್ಯಂತರ ರೂಪಾಯಿ ಮೌಲ್ಯದ ಕೆರೆಯ ಭೂಮಿಯನ್ನೇ ನುಂಗಿದ.
ವರುಣತೀರ್ಥದ ಕರುಣಕಥೆ.ಇದು

Swabhimana News Desk

ನಾಗರ ಪಂಚಮಿ ಆಚರಣೆ ಹೆಸರಲ್ಲಿ ಪೌಷ್ಟಿಕ ಆಹಾರ  ವ್ಯರ್ಥವಾಗದೆ ಅಗತ್ಯವಿರುವವರ ಪಾಲಾಗಲಿ.

Swabhimana News Desk

ಕಾರ್ಕಳ ಕಟ್ಟಡ ಕಲ್ಲು ಕ್ವಾರಿಯಲ್ಲಿ ಸ್ಪೋಟ.ಕಾರ್ಮಿಕ ಸಾವು; ಗಣಿ ಮಾಲಿಕ ದಿನೇಶ್ ಶೆಟ್ಟಿ ಸೇರಿ
ಇಬ್ಬರ ವಿರುದ್ಧ ಪ್ರಕರಣ ದಾಖಲು.ಕಲ್ಲುಕ್ವಾರೆ, ಕ್ರಷರ್ ಮುಚ್ಚುವಂತೆ ಸಾರ್ವಜನಿಕರ ಒತ್ತಾಯ.

Swabhimana News Desk

Leave a Comment