19 C
New York
18 November 2024
Coastal

ಅಭಿವೃದ್ಧಿಯತ್ತ ದಾಪುಗಾಲು ಹಾಕುತ್ತಿರುವ ಉಡುಪಿಯಲ್ಲಿ ಮತ್ತೊಂದು ಬೃಹತ್ ಅಕ್ರಮ ಕಟ್ಟಡ ಲೋಕಾರ್ಪಣೆಗೆ ಸಿದ್ದತೆ.ಇದು‌ ಬಿಜೆಪಿಯ ಕನಸಿನ ಕೂಸಿಗೆ. ಕಾಂಗ್ರೆಸ್ಸೇ ಇದಕ್ಕೆ ಶ್ರೀರಕ್ಷೆ.

04-10-2023 swabhimananews@gmail.com
ಉಡುಪಿ ಜಿಲ್ಲೆಯ ಉಡುಪಿ ತಾಲೂಕಿನ ನಗರಸಭಾ ವ್ಯಾಪ್ತಿಯ
ಚಿತ್ತಂರಜನ್ ಸರ್ಕಲ್ ಬಳಿ
ತಲೆ ಎತ್ತುತ್ತಿರುವ ಈ ಅಕ್ರಮ‌ ಕಟ್ಟಡಕ್ಕೆ ಒಂದಿಂಚು ಸೆಟ್ ಬ್ಯಾಕ್.ಬಿಡದೆ ರಸ್ತೆಯಲ್ಲೇ… ಮೆಟ್ಟಿಲುಗಳನ್ನು, ವಿದ್ಯುತ್ ಟ್ರಾನ್ಸ್ ಫಾರ್ಮ್ ಗಳು ರಸ್ತೆ ಗೆ ವಾಲಿಕೊಂಡಿವೆ.

ಅಗ್ನಿಶಾಮಕ ದಳದ ಒಂದೇ ಒಂದು ನಿಯಮಗಳನ್ನು ಈ ಕಟ್ಟಡ ನಿರ್ಮಾಣ ಮಾಡುವಾಗ ಪಾಲಿಸಿಲ್ಲ.ಹಾಗೂ ZR ನಿಯಮದ ಸಂಪೂರ್ಣ ವಿರುದ್ಧವಾಗಿ ಬೃಹತ್ ಅಕ್ರಮ ಕಟ್ಟಡ ನಿರ್ಮಾಣ ಮಾಡಿರುವುದು ಬೇರೆಲ್ಲೂ ಅಲ್ಲ ನಗರಸಭೆಯ ಕಣ್ಣ ಮುಂದೆಯೇ ನಡಿತಿದೆ.

ಅದರೂ ನಗರಸಭೆಯ ಇಂಜಿನಿಯರ್, ಪೌರಾಯುಕ್ತರು,ಅಧಿಕಾರಿಗಳು,
ಎಲ್ಲಾ ರೀತಿಯ ಪರವಾನಗಿ, ಅನುಮತಿ, ನಿರಾಕ್ಷೇಪಣಾ ದೃಢಪತ್ರ ಹಾಗೂ ಇನ್ನಿತರ ಅನುಮತಿಗಳನ್ನು ಈ ಅಕ್ರಮ ಕಟ್ಟಡಕ್ಕೆ ನೀಡಿರುವುದು ಅಕ್ರಮಕ್ಕೆ ಸಾಕ್ಷಿಯಾಗಿದೆ.

ಈ ಹಿಂದೆ ಉಡುಪಿ ನಗರ ಸಭೆಯಲ್ಲಿ ಬಿಜೆಪಿ ಆಡಳಿತ ಇರುವಾಗ ಈ ಅಕ್ರಮ‌ ಕಟ್ಟಡ ನಿರ್ಮಿಸಲು ಅನುಮತಿ ನೀಡಿತ್ತು.

ಇದೀಗ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದೆ.ನಗರ ಸಭೆಯಲ್ಲಿ ಬಿಜೆಪಿಯ ಒಂದು ಅವಧಿಯ ಅಡಳಿತ ಮುಗಿದಿದೆ.
ಹೀಗಾಗಿ‌ ಇಲ್ಲಿ ಕಾಂಗ್ರೆಸ್ ಸದಸ್ಯರು ಅಡಿದ್ದೇ ಅಟ.

ಕಾಂಗ್ರೆಸ್ ಸದಸ್ಯ ರೊಬ್ಬರ ಶ್ರೀ‌ರಕ್ಷೆಯಿಂದ, ಬೆಂಬಲದಿಂದ ನಗರ ಸಭೆಯ ಭ್ರಷ್ಟ ಇಂಜಿನಿಯರ್ ಗಳು ಈ ಅಕ್ರಮಕ್ಕೆ ಬೆನ್ನೆಲುಬಾಗಿ ನಿಂತು ಕೆಲಸ ಮಾಡಿಸುತ್ತಿದ್ದಾರೆ ಎಂದು ಸಾರ್ವಜನಿಕರು ಆಡಿಕೊಳ್ಳುತ್ತಿದ್ದಾರೆ.

ಸಾಮಾಜಿಕ ಕಾರ್ಯಕರ್ತರು,ಸಾರ್ವಜನಿಕರು ಅದೆಷ್ಟೋ ದೂರು ನೀಡಿದರೂ ಕೂಡ ಪೌರಯುಕ್ತರಾಗಲೀ…ಇಂಜಿನಿಯರ್ ಗಳಾಗಲಿ, ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಸ್ವಲ್ಪವೂ ತಲೆ ಕೆಡಿಸಿಕೊಳ್ಳುತ್ತಿಲ್ಲ ಎನ್ನುವ ಅರೋಪಗಳು ಕೇಳಿ ಬಂದಿದೆ.

ಬಡವರ ಮನೆಗಳಿಗೆ ಬಂದು ಪೌರುಷ ತೋರಿಸುವ ನಗರ ಸಭೆಯ ಇಂಜಿನಿಯರ್ ಹಾಗೂ ಪೌರಯುಕ್ತರು,ಶ್ರೀಮಂತ ಕುಳಗಳು ರಾಜಾರೊಷವಾಗಿ, ನಿಯಮಬಾಹಿರವಾಗಿ,ಅದೆಷ್ಟೋ ಅಕ್ರಮ ಬೃಹತ್ ಕಟ್ಟಡಗಳನ್ನು ಕಟ್ಟುತ್ತಿದ್ದರು ಮೌನಿಯಾಗಿದ್ದಾದರೂ ಯಾಕೆ..? ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

ಈ ಪ್ರಕರಣದಲ್ಲಿ ಕಾಂಗ್ರೆಸ್ಸಿಗರು, ಬಿಜೆಪಿಯವರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಪಡೆದುಕೊಂಡಿರುವ ಲಂಚವಾದರೂ ಎಷ್ಟೀರಬಹುದು ಎಂದು ನೀವೇ ಊಹಿಸಿ.

ಮಾನ್ಯ ಉಡುಪಿ ಜಿಲ್ಲೆಯ ಲೋಕಾಯುಕ್ತ ಅಧಿಕಾರಿಗಳು ತಮ್ಮ ಕಣ್ಮುಂದೆ ನಡೆಯುವ ಇಂತಹ ಅಕ್ರಮಗಳಿಗೆ ಕಡಿವಾಣ ಹಾಕುವ ಬದಲು.ಕಣ್ಣಿದ್ದು‌ ಕುರುಡರಾಗದೇ..
ಈ ಕಟ್ಟಡದ ಸ್ಥಳ‌ ಪರಿಶೀಲನೆ ನಡೆಸಿ ಸ್ವಯಂ ಪ್ರೇರಿತರಾಗಿ ಪ್ರಕರಣದ ದಾಖಲಿಸಿ ನಗರ ಸಭೆಯ ಅಧಿಕಾರಿಗಳ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.

ಮಾನ್ಯ ಜಿಲ್ಲಾ ಉಸ್ತುವಾರಿ ಮಂತ್ರಿಗಳು. ಈ ಅಕ್ರಮಕ್ಕೆ ಬೆಂಬಲ ನೀಡುವ ಕಾಂಗ್ರೆಸ್ ಸದಸ್ಯ ನನ್ನು ಕರೆದು ಬುದ್ದಿ ಹೇಳಿ ಅಕ್ರಮಕ್ಕೆ ಬ್ರೇಕ್ ಹಾಕುವಂತೆ ಜನಸಾಮಾನ್ಯರು ಆಗ್ರಹಿಸುತ್ತಿದ್ದಾರೆ.

ಈ ಅಕ್ರಮಕ್ಕೆ ಬಿಜೆಪಿಯ ಕೊಡುಗೆ ಅಪಾರವಾಗಿದ್ದು ಉಡುಪಿ ಜಿಲ್ಲೆಯ ಜನರ ಪರ ನಿಜವಾಗಿಯೂ ಬಿಜೆಪಿಗೆ ಕಾಳಜಿ, ಕಳಕಳಿ ಇದ್ದದ್ದೇಹೌದಾದರೆ.ನಗರ ಸಭೆಯ ಹೆಚ್ಚಿನ‌‌ ಸದಸ್ಯರು ಹಾಗೂ ಶಾಸಕರುಗಳು ಈ ಅಕ್ರಮದ ವಿರುದ್ದ ಧ್ವನಿ ಎತ್ತಿ .ಅಕ್ರಮ‌ ಕಟ್ಟಡವನ್ನು ತೆರವುಗೊಳಿಸುವ ಮೂಲಕ ನಿಜವಾದ ದೇಶ ಭಕ್ತರು ಅನ್ನುವುದನ್ನು ಸಾಬೀತು ಪಡಿಸಿ.
ಎಂದು ಸಾಮಾಜಿಕ ಕಾರ್ಯಕರ್ತರು, ಹೋರಾಟಗಾರರು, ಸಂಘಟನೆಗಳು ಸವಾಲು ಹಾಕಿದ್ದಾರೆ.

swabhimananews@gmail.com

Related posts

ಮೂವತ್ತಮೂರು ಎಕರೆ ಕೆರೆ ಈವಾಗ ಇರೋದು ಬರೀ ಇಪ್ಪತ್ತ ಮೂರು ಎಕರೆ.!

Swabhimana News Desk

ಹಾವಂಜೆ ಗ್ರಾಮ ಪಂಚಾಯತ್ ಹಾಗೂ ಗ್ರಂಥಾಲಯ ಹಾಗೂ ಅರಿವು ಕೇಂದ್ರದ ವತಿಯಿಂದ ನಡೆದ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ.

Swabhimana News Desk

ದಲಿತ ಸಂಘರ್ಷ ಸಮಿತಿ ಭೀಮವಾದ (ರಿ) ಉಡುಪಿ ಜಿಲ್ಲೆ ಇದರ ನೂತನ ಉಡುಪಿ ಜಿಲ್ಲಾ ಸಂಚಾಲಕರಾಗಿ.ಸಂಜೀವ ಕುಕ್ಕೆಹಳ್ಳಿ ಆಯ್ಕೆ.

Swabhimana News Desk

Leave a Comment