14 January 2026
Coastal

RPIK ಮತ್ತು ದಲಿತ ಸಂಘರ್ಷ ಸಮಿತಿ ಭೀಮವಾದ (ರಿ) ಉಡುಪಿ ಜಿಲ್ಲೆ ಇದರ ವತಿಯಿಂದ ಬಿ.ಆರ್ ಅಂಬೇಡ್ಕರ್ ಅವರ ಧಮ್ಮದೀಕ್ಷೆ ದಿನಾಚರಣೆ ಮತ್ತು ಮೂಲನಿವಾಸಿಗಳ ರಾಜ ಮಹಿಷಾಸುರ ಹಬ್ಬ ಕಾರ್ಯಕ್ರಮ ಆಚರಣೆ.

ಅಕ್ಟೋಬರ್ -15-2023 swabhimananews@gmail.com

ದಿನಾಂಕ 14-10-2023 ರಿ ಶನಿವಾರ ಬೆಳಗ್ಗೆ 10 ಗಂಟೆಗೆ ಉಡುಪಿ ಜಿಲ್ಲೆಯ ಉಡುಪಿ ತಾಲೂಕಿನ ಬೈರಂಪಳ್ಳಿ ಗ್ರಾಮದ ಅಂಬೇಡ್ಕರ್ ಭವನದಲ್ಲಿ RPIK ಮತ್ತು ಕದಸಂಸ ಭೀಮವಾದ ಉಡುಪಿ ಜಿಲ್ಲೆ ಇದರ ವತಿಯಿಂದ ನಡೆದ ಅಂಬೇಡ್ಕರ್ ರವರ ಧಮ್ಮದೀಕ್ಷೆ ದಿನಾಚರಣೆ ಮತ್ತು ಮೂಲನಿವಾಸಿಗಳ ರಾಜ ಮಹಿಷಾಸುರ ಹಬ್ಬ, ಕಾರ್ಯಕ್ರಮ ಅದ್ಧೂರಿಯಾಗಿ, ಅರ್ಥಪೂರ್ಣವಾಗಿ ಪಕ್ಷದ ಮತ್ತು ಸಂಘಟನೆಯ ರಾಜ್ಯ ನಾಯಕರಾದ ಶೇಖರ್ ಹಾವಂಜೆ ರವರ ನೇತೃತ್ವದಲ್ಲಿ ನಡೆಯಿತು.

ಮುಖ್ಯ ಅತಿಥಿಗಳನ್ನು ಸ್ವಾಗತಿಸಿ,
ಪ್ರಾಸ್ತಾವಿಕವಾಗಿ ಮಾತನಾಡಿದ ಶೇಖರ್ ಹಾವಂಜೆ ಅವರು ದೇಶದಲ್ಲಿ ಸಮಾನತೆಗಾಗಿ ಹೋರಾಡಿದ ನಾಯಕರುಗಳ ನಿಜವಾದ ಇತಿಹಾಸವನ್ನು ಮರೆಮಾಚಿ ಮನುವಾದಿಗಳು ಸುಳ್ಳು, ತಪ್ಪು, ಕಾಲ್ಪನಿಕ ಕಥೆಗಳನ್ನು ಸೃಷ್ಟಿಸಿ ಇದೇ ಸತ್ಯ ಎಂದು ದೇಶದ ಬಹುಜನರನ್ನು ವಂಚಿಸುತ್ತಾಬಂದಿದೆ.

ಇದನ್ನು ಇಂದಿನ ವೈಜ್ಞಾನಿಕ ಮನೋಭಾವ ಹೊಂದಿರುವ ನಾವು ನೀವು ಅರ್ಥೈಸಿಕೊಂಡು ನಮ್ಮ ಪೂರ್ವಜರ ಇತಿಹಾಸವನ್ನು ಸಮಾಜಕ್ಕೆ ತಿಳಿಸುತ್ತಾ ಅಂಬೇಡ್ಕರ್ ಮಾರ್ಗದಲ್ಲಿ ಸಾಗಿ ಸಮಸಮಾಜ ನಿರ್ಮಾಣ ಮಾಡಬೇಕು‌ ಎಂದರು.

ಕಾರ್ಯಕ್ರಮ ಉದ್ಘಾಟಿಸಿ, ವಿಚಾರ ಮಂಡಿಸಿದ ಉಪನ್ಯಾಸಕರು, ಸಾಹಿತಿಗಳು, ಬರಹಗಾರರು, ಲೇಖಕರಾದ ಡಾ ಕೆಎ ಓಬಳೇಶ್ ಅವರು ಮಾತನಾಡಿ ಸಾವಿರಾರು ವರ್ಷಗಳ ಅಜ್ಞಾನದ ಕತ್ತಲೆಗೆ ಶಾಶ್ವತವಾಗಿ ಪರಿಹಾರವನ್ನು ರೂಪಿಸಿ ನಮ್ಮೆಲ್ಲರಿಗೂ ಸಮಾನತೆಯ ಅವಕಾಶವನ್ನು ಕಲ್ಪಿಸಿಕೊಟ್ಟ ತಂದೆ.

ಪರಮಪೂಜ್ಯ ಬಾಬಸಾಹೇಬ್ ಅಂಬೇಡ್ಕರ್ ರವರು ಸ್ವಾಭಿಮಾನಕ್ಕೊಸ್ಕರ ಬೌದ್ದ ಧಮ್ಮಸ್ವೀಕರಿಸಿದ ದಿನ ಅಕ್ಟೋಬರ್ 14-1956. ಬಾಬಾಸಾಹೇಬರು ಇದೇ ದಿನವನ್ನೇ ಯಾಕೆ ಆಯ್ಕೆ ಮಾಡಿಕೊಂಡರು.

ಎಂಬುದರ ಸಂಪೂರ್ಣ ಮಹತ್ವವನ್ನು ತಿಳಿಸಿದರು. ಈ ನೆಲದ ಮೂಲನಿವಾಸಿಗಳ ರಾಜ ಮಹಿಷಾಸುರ.

ಈ ದೇಶಕ್ಕೆ ವಲಸೆ ಬಂದ ಆರ್ಯರು ಮಹಿಷಾನನ್ನು ರಾಕ್ಷಸ ಎಂದು ಬಿಂಬಿಸಿ, ಚಿತ್ರಿಸಿದ್ದಾರೆ. ಮಹಿಷಾಸುರನ ಆಳ್ವಿಕೆಗೆ ಒಳಪಟ್ಟ ನಾಡು ಮಹಿಷಾಮಂಡಲವಾಗಿತ್ತು. ಮಹಿಷನ ಗುರುತು ಎಮ್ಮೆ ಎನ್ನುವ ಪರಿಕಲ್ಪನೆ.

ಮಹಿಷಾಸುರ ಯಾರು, ಆತನ ಹಿನ್ನೆಲೆ ಏನು, ಇಂದು ದಲಿತರ ಮುಂದಿರುವ ಬಿಕ್ಕಟ್ಟುಗಳೇನು ಎಂಬುದರ ಕುರಿತು ಸುಮಾರು
ಒಂದು ಗಂಟೆಗಳ ಕಾಲ ನೆರೆದ ಸಭಿಕರಿಗೆ ಉಪನ್ಯಾಸ ನೀಡಿ ಮನವರಿಕೆ ಮಾಡಿಕೊಟ್ಟರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ
ಕೆ ಬಿ ರಾಜು ಕೊಡಗು. ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ ರಾಜ್ಯಸಮಿತಿಯ ಸದಸ್ಯರು ಮಾತನಾಡಿ ಆರ್ಯರು ವಲಸೆ ಬಂದು ಈ ದೇಶದ ಮೂಲನಿವಾಸಿಗಳಾದ ನಮ್ಮನ್ನು ವಿಂಗಡಿಸಿ ಜಾತಿಯನ್ನು ಸೃಷ್ಟಿಸಿ ಇಂದು ಈ ದೇಶ ಆರ್ಯರ ಕೈವಶ ಆಗಿದೆ. ಅದರ ಹಿನ್ನೆಲೆಯನ್ನು ಸಂಪೂರ್ಣವಾಗಿ ಸಭಿಕರಿಗೆ ತಿಳಿಸಿದರು.

ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ ಪಕ್ಷದ ಉಡುಪಿ ಜಿಲ್ಲಾಧ್ಯಕ್ಷ ರಾದ ಸದಾಶಿವ ಶೆಟ್ಟಿ ಹೇರೂರು.ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ.ಸಂಜೀವಕುಕ್ಕೆಹಳ್ಳಿ ಜಿಲ್ಲಾ ಸಂಚಾಲಕರು ಕದಂಸಸ ಭೀಮವಾದ (ರಿ) ಉಡುಪಿ ಜಿಲ್ಲೆ ,

ರಮೇಶ್ ಹರಿಖಂಡಿಗೆ ಜಿಲ್ಲಾ ಸಂಘಟನಾ ಸಂಚಾಲಕರು ಕದಂಸಸ ಭೀಮವಾದ (ರಿ)ಉಡುಪಿ ಜಿಲ್ಲೆ
ಕಾರ್ಯಕ್ರಮದ ನಿರೂಪಣೆ ಮತ್ತು ಧನ್ಯವಾದ ಶರತ್ ಎಸ್ ಹಾವಂಜೆ.
ಕಾರ್ಯಕ್ರಮಕ್ಕೆ ನೂರಾರು ಅಂಬೇಡ್ಕರ್ ಹಾಗೂ ಮಹಿಷಾಸುರ ಅನುಯಾಯಿಗಳು ಭಾಗವಹಿಸಿದ್ದರು.


ಕಾರ್ಯಕ್ರಮ ಆಯೋಜಿಸಿದ್ದ ಅಂಬೇಡ್ಕರ್ ಭವನದ ಸುತ್ತಮುತ್ತ ಪೋಲಿಸರು ಭದ್ರತೆ ಒದಗಿಸಲಾಗಿತ್ತು.

swabhimananews@gmail.com

Related posts

ಹಿಂದೂ ಧರ್ಮದ ನಾಗರಪಂಚಮಿಯಂದು ಪೌಷ್ಟಿಕ ಆಹಾರವಾದ ಹಾಲು, ತುಪ್ಪ, ಜೇನುತುಪ್ಪ, ಹಣ್ಣುಹಂಪಲು ಗಳನ್ನು ನಿರ್ಜೀವ ಕಲ್ಲಿಗೆ ಎರೆದು ವ್ಯರ್ಥ ಮಾಡದೆ. ಜಿಲ್ಲಾದ್ಯಂತ ಇರುವ ಅಪೌಷ್ಟಿಕತೆಯಿಂದ ಬಳಲುತ್ತಿರುವವರಿಗೆ, ಅನಾಥರಿಗೆ, ವಿಶೇಷ ಚೇತನರಿಗೆ, ರೋಗಿಗಳಿಗೆ ನೀಡಿ.

Swabhimana News Desk

ಬೋಧಿಸತ್ವ ಬುದ್ಧ ವಿಹಾರದಲ್ಲಿ ಅಂಬೇಡ್ಕರ್ ಧಮ್ಮ ದೀಕ್ಷಾ ದಿನಾಚರಣೆ.

Swabhimana News Desk

ಪ್ರೀಯಕರನ ಜೊತೆ ಸೇರಿ ಗಂಡನನ್ನು ಕೊಂದೇ ಬಿಟ್ಟ ರೀಲ್ಸ್ ರಾಣಿ ಹೆಂಡತಿ ಪ್ರತಿಮಾ.

Swabhimana News Desk

Leave a Comment