ಏಪ್ರಿಲ್ 24-2024-Swabhimananews
ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಕೋಟತಟ್ಟು ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ಅಕ್ರಮವಾಗಿ, ಕಾನೂನು ಬಾಹಿರವಾಗಿ ಇಡೀ ಗ್ರಾಮದ ಮಾತ್ರವಲ್ಲದೆ ಅಕ್ಕ ಪಕ್ಕದ ಗ್ರಾಮದ ಜನಜೀವನಕ್ಕೆ ಮಾರಕವಾಗಿರುವ ಜನತಾ ಫಿಶ್ ಮಿಲ್ ಬಂದ್ ಮಾಡಿ.
ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಮಾನ್ಯ ಮುಖ್ಯ ಚುನಾವಣಾಧಿಕಾರಿಗಳು ಹಾಗೂ ಉಡುಪಿ ಜಿಲ್ಲಾಧಿಕಾರಿಗಳಿಗೆ ಮತ್ತು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ದಲಿತ ಸಂಘಟನೆ ಮತ್ತು ರಿಪಬ್ಲಿಕನ್ ಪಾರ್ಟಿ ದೂರುನೀಡಿದೆ.
ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಕೋಟತಟ್ಟು ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ಅಕ್ರಮವಾಗಿ, ಕಾನೂನು ಬಾಹಿರವಾಗಿ ಇಡೀ ಗ್ರಾಮದ ಮಾತ್ರವಲ್ಲದೆ ಅಕ್ಕ ಪಕ್ಕದ ಗ್ರಾಮದ ಜನಜೀವನಕ್ಕೆ ಮಾರಕವಾಗಿರುವ ಜನತಾ ಫಿಶ್ ಮಿಲ್ ಯಾವ ರೀತಿಯಾಗಿ ಅಕ್ರಮ ಮತ್ತು ಜನಜೀವನಕ್ಕೆ ಯಾವ ಯಾವ ರೀತಿಯಾಗಿ ಸಮಸ್ಯೆಯಾಗುತ್ತದೆ ಎನ್ನುವುದನ್ನು ಸಂಘಟನೆಯು ಅಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದು ಸಂಘಟನೆಯ ಮುಖಂಡರು ತಿಳಿಸಿದ್ದಾರೆ.
ನಮ್ಮ ಕರಾವಳಿ ಜಿಲ್ಲೆಗಳಲ್ಲೊಂದಾದ ಉಡುಪಿ ಜಿಲ್ಲೆ ಎಂದರೆ ಬುದ್ಧಿವಂತರ ಜಿಲ್ಲೆ ಎಂದೇ ಪ್ರಸಿದ್ಧಿ ಪಡೆದಿದೆ.ಇಲ್ಲಿ ಇಲ್ಲಿನದ್ದೇ ಆದ ಅನೇಕ ಅದ್ಭುತವಾದ ಇತಿಹಾಸವಿದೆ.
ಇಲ್ಲಿಗೆ ಹಲವಾರು ವರ್ಷಗಳಿಂದ ಪ್ರತೀ ವರ್ಷ ಸಾವಿರಾರು
ದೇಶ – ವಿದೇಶಿಗರು,ಪ್ರವಾಸಿಗರು ಉಡುಪಿ ಜಿಲ್ಲೆಯ ವಾತಾವರಣ, ಪ್ರಕೃತಿ ಸೌಂದರ್ಯ,ಇಲ್ಲಿನ ಆಹಾರ ಪದ್ಧತಿ, ಮೀನಿನ ರುಚಿಯನ್ನು ಸವಿಯಲು ಆಗಮಿಸುತ್ತಾರೆ.
ದೇಶ-ವಿದೇಶಗಳಲ್ಲಿ ನಮ್ಮ ಜಿಲ್ಲೆಯ ಹೆಸರನ್ನು ಅತೀ ಎತ್ತರಕ್ಕೆ ಕೊಂಡೊಗಿರುವುದು ಹೆಮ್ಮೆಯ ವಿಷಯ.
ಇದೇ ಉಡುಪಿ ಜಿಲ್ಲೆಯ ಇಂದಿನ ಬ್ರಹ್ಮಾವರ ತಾಲೂಕಿನ ಕೋಟತಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲೇ ಜನಿಸಿದ ಕಡಲತೀರದ ಭಾರ್ಗವ ಕೋಟ ಶಿವರಾಮ ಕಾರಂತರು ಹುಟ್ಟಿದ ಗ್ರಾಮವಿದು.
ಅಂದಿನ ಕಾಲದಲ್ಲಿ ತುರ್ತು ಪರಿಸ್ಥಿತಿಯನ್ನು ವಿರೋಧಿಸಿ ತನ್ನ ಪದ್ಮ ಭೂಷಣ ಪ್ರಶಸ್ತಿಯನ್ನೇ ವಾಪಸ್ ನೀಡಿದ ಅಪ್ಪಟ ದೇಶಪ್ರೇಮಿ.ಈ ನಾಡಿನ ಪರಿಸರದ ಬಗ್ಗೆ ಅಪಾರವಾದ ಕಾಳಜಿ ಹೊಂದಿದ್ದು ಸುತ್ತಮುತ್ತಲಿನ ಪರಿಸರಕ್ಕೆ ಯಾವುದೇ ರೀತಿಯ ತೊಂದರೆ ಆದಲ್ಲಿ ಸಿಡಿದೇಳುವ ಪರಿಸರ ಪ್ರೇಮಿ ಶಿವರಾಮ ಕಾರಂತರು.ಇಂತಹ ಮಹಾನ್ ನಾಯಕರು ಹುಟ್ಟಿದ ಗ್ರಾಮವೇ ಈ ಕೋಟತಟ್ಟು ಗ್ರಾಮ.
ವಿಶೇಷವೆಂದರೆ ಈ ಗ್ರಾಮಪಂಚಾಯತ್ ವ್ಯಾಪ್ತಿಯ ಜನರಿಗೆ ಡಿಜಿಟಲ್ ಸಾಕ್ಷರತೆ ಬಗ್ಗೆ ಅರಿವು ಮೂಡಿಸುವ ಕಾರ್ಯ ಮಾಡಲಾಗಿದ್ದು ಇದರಲ್ಲಿ ರಾಜ್ಯಮಟ್ಟದಿಂದ ಉಡುಪಿ ಜಿಲ್ಲೆಯ ಕೋಟತಟ್ಟು ಗ್ರಾಮಪಂಚಾಯತ್ ಮಾತ್ರ ಈ ಯೋಜನೆಗೆ ಆಯ್ಕೆಯಾಗಿರುವುದು ವಿಶೇಷ.
ಹಾಗೂ ಇದೇ ಗ್ರಾಮದಲ್ಲಿ ಹಾಲಿ ವಿಧಾನಪರಿಷತ್ ಸದಸ್ಯ ,ಮಾಜಿ ಪ್ರಭಾವಿ ಮಂತ್ರಿ ಕೋಟ ಶ್ರೀನಿವಾಸ್ ಪೂಜಾರಿಯವರ ಹುಟ್ಟೂರು
ಇದೇ ಕೋಟತಟ್ಟು ಗ್ರಾಮ.
ಇದೇ ಗ್ರಾಮದಲ್ಲೊಂದು ಅವರ ಸಣ್ಣ ಮನೆಯೂ ಇದೇ.ಪೂಜಾರು ಆ ಮನೆಯಲ್ಲೇ ವಾಸಿಸುತ್ತಿರುವುದು ಇನ್ನೊಂದು ವಿಶೇಷತೆ. ಕೋಟತಟ್ಟು ಗ್ರಾಮ ರಾಷ್ಟ್ರಮಟ್ಟದಲ್ಲಿ ಹೆಸರು ವಾಸಿಯಾದ ಗ್ರಾಮವಾಗಿದೆ.ಆದರೆ ಇವಾಗಿನ ದುರಂತವೆಂದರೆ.ಈ ಗ್ರಾಮದಲ್ಲಿ ಮನುಷ್ಯರು ವಾಸಿಸಲು ಹರಸಾಹಸ ಪಡುತ್ತಿದ್ದಾರೆ,ತಮ್ಮ ತಮ್ಮ ಆರೋಗ್ಯದ ಬಗ್ಗೆ ಇಲ್ಲಿನ ಜನರಿಗೆ ಬಹುದೊಡ್ಡ ಭಯ ಶುರುವಾಗಿ ದಿನನಿತ್ಯ ಭಯದಿಂದಲೇ ಬದುಕು ಸಾಗಿಸುತ್ತಿದ್ದಾರೆ.
ಹೌದು ಇದು ಕಡಲತೀರದ ಭಾರ್ಗವ ಕೋಟ ಶಿವರಾಮ ಕಾರಂತರ ಹುಟ್ಟೂರು ಎಂದು ಹೇಳಲು ನಾಚಿಕೆ ಆಗುತ್ತದೆ.ಯಾಕೆಂದರೆ ಇಲ್ಲಿ ಕಳೆದ ಅನೇಕ ವರ್ಷಗಳಿಂದ ನೂರಾರು ಬಡ ಕುಟುಂಬ ಮತ್ತು ಹತ್ತಾರು ದಲಿತ ಕುಟುಂಬಗಳು ವಾಸಿಸುತ್ತಿರುವ ಜನವಸತಿ ಪ್ರದೇಶದಲ್ಲಿ ಅಕ್ರಮವಾಗಿ, ಸಂಪೂರ್ಣ ಕಾನೂನು ಬಾಹಿರವಾಗಿ ದಿನನಿತ್ಯ ವಿಷಕಾರಿ ಹೊಗೆಯನ್ನು ಗ್ರಾಮದ ಉದ್ದ ಅಗಲಕ್ಕೂ ಹರಡಿ ಕೊಂಡು,ಕೊಳಚೆ ನೀರಿನ ದುರ್ವಾಸನೆಯಿಂದ .
ಮನೆಯ ಒಳಗೂ ಹೊರಗೂ ವಾಸಿಸಲು ಸಾಧ್ಯವೇ ಇಲ್ಲದಂತಹ ಸ್ಥಿತಿ ನಿರ್ಮಾಣವಾಗಿದೆ. ಸುತ್ತಮುತ್ತಲಿನ ನಿವಾಸಿಗಳು ಕುಡಿಯುವ ನೀರಿನ ಬಾವಿ,ಕೆರೆಗಳ ನೀರು ಸಂಪೂರ್ಣ ಕಲುಷಿತಗೊಂಡು ವಿಷಪೂರಿತ ನೀರಾಗಿ ಮಾರ್ಪಟ್ಟಿದೆ. ಇದನ್ನು ಕುಡಿದರೆ ಮಕ್ಕಳಿಗೆ,ವೃದ್ಧರಿಗೆ ಅನೇಕ ತರದ ಕಾಯಿಲೆಗಳು ಬರುತ್ತಿದೆ.
ಯಾವ ಅಧಿಕಾರಿಗಳಿಗೂ ಈ ಬಗ್ಗೆ ದೂರು ನೀಡಿದರೂ ಯಾವುದೇ ರೀತಿಯ ಕಾನೂನು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಅಲ್ಲಿನ ನೂರಾರು ಕುಟುಂಬಗಳು ಒಳಗಿಂದೊಳಗೆ ರೋಧಿಸುತ್ತಿದೆ. ಮತ್ತು ನಮ್ಮ ಸಂಘಟನೆಗೆ ಅನೇಕ ದೂರುಗಳು ಬಂದಿವೆ.ಅಷ್ಟೇ ಅಲ್ಲ ಅಕ್ರಮವಾಗಿ ಸರಕಾರಿ ಮತ್ತು ಖಾಸಗಿ ವ್ಯಕ್ತಿಗಳ ಭೂಮಿಯಲ್ಲಿ ಸಾರ್ವಜನಿಕ ರಸ್ತೆಯಲ್ಲೇ ಅಕ್ರಮ ಪೈಪ್ ಲೈನ್ ಅಳವಡಿಸಿ ಕಲುಷಿತ, ರಾಸಾಯನಿಕ,ಯ್ಯಾಸಿಡ್ ಯುಕ್ತ ನೀರನ್ನು ನೇರವಾಗಿ ಸಮುದ್ರಕ್ಕೆ /ನದಿಗೆ ಬಿಡುತ್ತಿದ್ದಾರೆ.
ಇದು ಸಮುದ್ರದ /ನದಿಯ ಜಲಚರಗಳು ಸಂಪೂರ್ಣವಾಗಿ ಸಾಯುತ್ತಿದೆ.ಕಳೆದ ಕೆಲವು ತಿಂಗಳ ಹಿಂದೆ ಇದೇ ಕಲುಷಿತ, ಯ್ಯಾಸಿಡ್ ಯುಕ್ತ ನೀರನ್ನು ಒಮ್ಮೆಲೆ ನದಿಗೆ ಬಿಟ್ಟ ದುಷ್ಪರಿಣಾಮದಿಂದ ಕೋಟ್ಯಾಂತರ ರೂಪಾಯಿ ಬೆಲೆಬಾಳುವ ಮೀನುಗಳು, ಜಲಚರಗಳು ಸತ್ತು ಮೇಲೆ ಬಂದಿದೆ.ಈ ಬಗ್ಗೆ ಸಂಬಂಧಪಟ್ಟ ಎಲ್ಲಾ ಇಲಾಖೆಗಳ ಅಧಿಕಾರಿಗಳು ಬಂದು ಸ್ಥಳ ಪರಿಶೀಲನೆ ನಡೆಸಿದ್ದಾರೆ.
ಆದರೆ ಪರಿಶೀಲನೆಯ ವರದಿ ಮಾತ್ರ ಇಂದಿಗೂ ಮಂಗಮಾಯ ಆಗಿದೆ.ಈ ಅಕ್ರಮ ಫಿಶ್ ಮಿಲ್ ಬಗ್ಗೆ ಯಾವುದೇ ರೀತಿಯ ಕಾನೂನು ಕ್ರಮ ಇಂದಿಗೂ ಆಗಿರುವುದಿಲ್ಲ.
ಇಷ್ಟೆಲ್ಲಾ ಘನಘೋರ ದುರಂತಕ್ಕೆ ಕಾರಣವಾದ ಫಿಶ್ ಮಿಲ್ ನ ಮಾಲೀಕರು ಯಾರು ಗೊತ್ತೆ..?
ಇದೇ ಗ್ರಾಮದ ಬಹುದೊಡ್ಡ ದಾನಿ,ಬಡವರ ಬಂಧು, ಎಲ್ಲಾ ವರ್ಗದ ಜನರೂ ಕೇಳಿದಾಗ ಕೇಳಿದಷ್ಟು ದಾನ ಮಾಡುವ, ಮಹಾದಾನಿ, ಧಾರ್ಮಿಕ, ರಾಜಕೀಯ, ಕ್ಷೇತ್ರದ ಪ್ರಭಾವಿ ವ್ಯಕ್ತಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ವ್ಯವಹಾರ ನಡೆಸುತ್ತಿರುವ ಉದ್ಯಮಿಯೊಬ್ಬರಾದ
ಆನಂದ ಸಿ ಕುಂದರ್ ಎಂಬವರ ಮಾಲಿಕತ್ವದ ಜನತಾ ಫಿಶ್ ಮಿಲ್.
ಇಲ್ಲಿ ದಿನನಿತ್ಯ ಕೋಟ್ಯಾಂತರ ರೂಪಾಯಿ ವಹಿವಾಟು ನಡೆಯುತ್ತದೆ.ಇಲ್ಲಿ ಉತ್ಪಾದಿಸುವ ಮೀನಿನ ಉತ್ಪನ್ನಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿದೆ.ಹಾಗಾಗಿ ಈ ಜನತಾ ಫಿಶ್ ಮಿಲ್ ನಲ್ಲಿ ಉತ್ಪಾದನೆಯಾಗುವ ಎಲ್ಲಾ ಉತ್ಪನ್ನಗಳು ಹೊರ ದೇಶಕ್ಕೆ ದಿನನಿತ್ಯ ರವಾನೆ ಆಗುತ್ತಿದೆ.ದಿನನಿತ್ಯ ಕೋಟ್ಯಾಂತರ ರೂಪಾಯಿ ವ್ಯವಹಾರ ನಡೆಸುತ್ತಿದೆ ಈ ಜನತಾ ಫಿಶ್ ಮಿಲ್.
ಇದು ಅದರ ಮಾಲಿಕರ ವ್ಯವಹಾರದ ಚಾಣಕ್ಯತನ.ನಮ್ಮ ಊರಿನ ಒಬ್ಬರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೃಹತ್ ಉದ್ಯಮ ನಡೆಸುತ್ತಿರುವುದು, ಬಡವರಿಗೆ ದಾನಧರ್ಮ ಮಾಡುತ್ತಿರುವುದು ಇಡೀ ಜಿಲ್ಲೆಗೆ ಮಾತ್ರವಲ್ಲ ಕರ್ನಾಟಕ ರಾಜ್ಯಕ್ಕೆ ಹೆಮ್ಮೆತರುವ ವಿಷಯ ಅಲ್ಲವೇ…?ಆದರೆ….ಕುಂದರ್ ರವರು ತಮ್ಮ ವ್ಯಾಪಾರ ವ್ಯವಹಾರದಲ್ಲಿ ತನಗೆ ದಿನ ನಿತ್ಯ ಕೋಟಿ ಕೋಟಿ ಲಾಭ ಬರುತ್ತದೆ ಎಂದು ಇಡೀ ಕೋಟತಟ್ಟು ಗ್ರಾಮವನ್ನು ಮತ್ತು ಅಕ್ಕ ಪಕ್ಕದ ಗ್ರಾಮದ ಬಡ, ಮುಗ್ಧ ಜನರನ್ನೇ ಬಲಿ ನೀಡುತ್ತಿದ್ದಾರೆ ಎಂದು ಯಾವತ್ತಾದರೂ ಸಂಬಂಧಪಟ್ಟ ಇಲಾಖೆಗಳಿಗೆ,ಅಧಿಕಾರಿಗಳಿಗೆ, ಗಮನಕ್ಕೆ ಬಂದಿಲ್ಲವೇ ..?
ನೂರಾರು ಕುಟುಂಬಗಳು ವಾಸಿಸುತ್ತಿರುವ ಜನ ವಸತಿ ಪ್ರದೇಶದಲ್ಲಿ ಈ ಅಕ್ರಮ ಫಿಶ್ ಮಿಲ್ ನಿರ್ಮಾಣ ಮಾಡಿರುವುದು, ಎಷ್ಟು ಸರಿ.ಮೆಸ್ಕಾಂ ಅಧಿಕಾರಿಗಳು ಈ ಅಕ್ರಮ ಫಿಶ್ ಮಿಲ್ ಗೆ 11.KV ವಿದ್ಯುತ್ ಸಂಪರ್ಕವನ್ನು ಸಾರ್ವಜನಿಕ ರಸ್ತೆ, ಸರಕಾರಿ ಭೂಮಿ,ಖಾಸಗಿ ಪಟ್ಟ ಸ್ಥಳಗಳಲ್ಲಿ ಅಕ್ರಮವಾಗಿ ನೆಲ ಅಗೆದು, ಯಾವುದೇ ಇಲಾಖೆಗಳ, ಪ್ರಾಧಿಕಾರದ, ಗ್ರಾಮಪಂಚಾಯತ್ ಗಳ ಅನುಮತಿ, ನಿರಾಕ್ಷೇಪಣಾ ದೃಢಪತ್ರ ಪಡೆದುಕೊಳ್ಳದೆ 11.KV ವಿದ್ಯುತ್ ಸಂಪರ್ಕವನ್ನು ಕಲ್ಪಿಸಿರುವುದು ಬಹುದೊಡ್ಡ ಅಪರಾಧವಾಗಿದೆ.ಜನವಸತಿ ಪ್ರದೇಶವಾದ ಇಲ್ಲಿ ದಿನನಿತ್ಯ ವಿಷಪೂರಿತ ಹೊಗೆ , ಗಾಳಿ,ಕಲುಷಿತ ಯ್ಯಾಸಿಡ್ ಯುಕ್ತ ನೀರು ಹೊರಹಾಕುವ ಫಿಶ್ ಮಿಲ್ ನಿರ್ಮಾಣ ಮಾಡಿರುವುದೇ ಅಪರಾಧ.
ಈ ಫಿಶ್ ಮಿಲ್ ನಿರ್ಮಾಣ ಮಾಡಲು. ಸಿ ಆರ್ ಝಡ್ ಇಲಾಖೆ,ಪರಿಸರ ಇಲಾಖೆ, ಕಾರ್ಮಿಕ ಇಲಾಖೆ, ಕಂದಾಯ ಇಲಾಖೆ, ಗ್ರಾಮ ಪಂಚಾಯತ್ ಪರವಾನಗಿ ಪಡೆಯದೆನೇ ಇಷ್ಟೊಂದು ವರ್ಷಗಳಿಂದ ಇಲ್ಲಿನ ಕಲುಷಿತ ನೀರು, ಸಮುದ್ರಕ್ಕೆ /ನದಿಗೆ ಬಿಟ್ಟು ಇಡೀ ಗ್ರಾಮವನ್ನೇ ಸಂಪೂರ್ಣ ಮಾಲಿನ್ಯದಿಂದ ತುಂಬಿ ಇಲ್ಲಿನ ಜನಗಳು ದಿನನಿತ್ಯ ಪರದಾಡುವ ಬಗ್ಗೆ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳಿಗೆ ಗೊತ್ತಿಲ್ಲವೇ..? ಇಲ್ಲಿನ ನಿವಾಸಿಗಳಿಗೆ ಈ ಅಕ್ರಮ ಫಿಶ್ ಮಿಲ್ ನಿಂದ ಆಗುತ್ತಿರುವ ಜ್ವಲಂತ ಸಮಸ್ಯೆಗಳ ಬಗ್ಗೆ ಉಡುಪಿ ಜಿಲ್ಲಾಧಿಕಾರಿಗಳಿಗೆ,CRZ ಇಲಾಖೆ, ಮೀನುಗಾರಿಕಾ ಇಲಾಖೆ ಹಾಗೂ ಸಂಬಂಧಪಟ್ಟ ಎಲ್ಲಾ ಇಲಾಖೆಗಳ ಅಧಿಕಾರಿಗಳಿಗೆ ಲಿಖಿತವಾಗಿ ನೂರಾರು ಜನರು ಧರಣಿ ನಡೆಸಿ ಅನೇಕ ದೂರು ನೀಡಿದರೂ ಇದುವರೆಗೂ ಯಾವುದೇ ಅಧಿಕಾರಿಗಳು ಈ ಅಕ್ರಮ ಜನತಾ ಫಿಶ್ ಮಿಲ್ ನ ವಿರುದ್ಧ ಕಾನೂನು ಕ್ರಮ ಕೈಗೊಂಡಿಲ್ಲ ಎಂದರೆ ಇದರ ಅರ್ಥ ಏನು..?
ಈ ಅಕ್ರಮ ಫಿಶ್ ಮಿಲ್ ನಲ್ಲಿ ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳು , ಜನಪ್ರತಿನಿಧಿಗಳು ಪಾಲುದಾರರು ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಕಾಲಬುಡದಲ್ಲೇ ಇರುವಂತಹ ಹಾಲಿ ವಿಧಾನಪರಿಷತ್ ಸದಸ್ಯ,2024 ರ ಲೋಕಸಭಾ ಚುನಾವಣೆಯ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಪಕ್ಷದ ಅಭ್ಯರ್ಥಿ ಮಾಜಿ ಸಚಿವರಾದ ಶ್ರೀ ಕೋಟ ಶ್ರೀನಿವಾಸ ಪೂಜಾರಿರವರು ತನ್ನ ಸ್ವಗ್ರಾಮಸ್ಥರಿಗೆ ಇಂತಹ ಒಂದು ಮಾರಕವಾದ ವಾತಾವರಣ ಸೃಷ್ಟಿಸಿದ ಈ ಅಕ್ರಮ ಫಿಶ್ ಮಿಲ್ ಬಗ್ಗೆ ಯಾಕಾದರೂ ಸುಮ್ಮನಿದ್ದಾರೆ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.
ಇನ್ನಾದರು ಈ ಪರಿಸರ ನಾಶದ ಜೊತೆಗೆ, ಗ್ರಾಮದ ಜನರ ಜೀವನದ ಜೊತೆ ಕಣ್ಣಾಮುಚ್ಚಾಲೆ ಆಡುತ್ತಿರುವ ಅಕ್ರಮ ಜನತಾ ಫಿಶ್ ಮಿಲ್ ಅನ್ನು ಬಂದ್ ಮಾಡಿ ಕೂಡಲೇ ಕಾನೂನು ಕ್ರಮ ಕೈಗೊಂಡು , ಗ್ರಾಮದ ಜನತೆಗೆ ಬರಬಹುದಾದ ರೋಗ ರುಜಿನಗಳಿಂದ ಪಾರು ಮಾಡಿ ಗ್ರಾಮವನ್ನು ರಕ್ಷಿಸಬೇಕೆಂದು ಮತ್ತು ಈ ಲೋಕಸಭಾ ಚುನಾವಣೆಯಲ್ಲಿ ಈ ಅಕ್ರಮ ಫಿಶ್ ಮಿಲ್ ನಿಂದ ಕೋಟ್ಯಾಂತರ ರೂಪಾಯಿ ಅಕ್ರಮ ದಂಧೆ ನಡೆಸುವ ಎಲ್ಲಾ ಲಕ್ಷಣಗಳು ಕಂಡುಬರುತ್ತದೆ ಎಂದು ಎಲ್ಲಾ ಮೂಲಗಳಿಂದ ಸಂಘಟನೆಗೆ ತಿಳಿದು ಬಂದಿದೆ.ಆದುದ್ದರಿಂದ ಜಿಲ್ಲೆಯ ಮುಖ್ಯ ಚುನಾವಣಾಧಿಕಾರಿಗಳು ಈ ಕೂಡಲೇ ಈ ಅಕ್ರಮ ಫಿಶ್ ಮಿಲ್ ಬಗ್ಗೆ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಬೇಕು ಎಂದು
ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮವಾದ(ರಿ)ಮತ್ತು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ ಉಡುಪಿ ಜಿಲ್ಲೆ
ಮಾನ್ಯ ಉಡುಪಿ ಜಿಲ್ಲೆಯ ಮುಖ್ಯ ಚುನಾವಣಾಧಿಕಾರಿಗಳಾದ ಮಾನ್ಯ ವಿದ್ಯಾಕುಮಾರಿರವರಿಗೆ ಮತ್ತು ಸಂಬಂಧಪಟ್ಟ ಎಲ್ಲಾ ಇಲಾಖೆಗಳ ಅಧಿಕಾರಿಗಳನ್ನು ಈ ಮೂಲಕ ಆಗ್ರಹಿಸಿದೆ.ತಪ್ಪಿದಲ್ಲಿ ಮುಂದೆ ಆಗಬಹುದಾದ ಅನಾಹುತಗಳಿಗೆ ನೀವೇ ಹೊಣೆಯನ್ನು ಹೊತ್ತುಕೊಳ್ಳಬೇಕಾದಿತು ಮತ್ತು ಲೋಕಾಯುಕ್ತ/ಉಚ್ಚ ನ್ಯಾಯಾಲಯ, ಸರ್ವೋಚ್ಚ ನ್ಯಾಯಾಲಯ,ರಾಷ್ಟ್ರೀಯ ಹಸಿರು ಪೀಠದಲ್ಲಿ ದಾವೆ ಹೂಡಲು ನಮ್ಮ ಸಂಘಟನೆ, ಮತ್ತು ಪಕ್ಷ ಸಿದ್ದತೆ ನಡೆಸಿದೆ ಎಂಬ ವಿಚಾರವನ್ನು ದೂರಿನಲ್ಲಿ ಪ್ರಸ್ತಾಪಿಸಲಾಗಿದೆ ಎಂದು.ಸಂಘಟನೆ ಮತ್ತು RPIK ಪಕ್ಷದ ಮುಖಂಡರು ತಿಳಿಸಿದ್ದಾರೆ.
Swabhimana news.