25 November 2025
Coastal

ನಕಲಿ ಚಿನ್ನಾಭರಣಗಳನ್ನು ಅಡವಿಟ್ಟು ಅನೇಕ ಬ್ಯಾಂಕ್, ಕೋಆಪರೇಟಿವ್ ಸೊಸೈಟಿಗೆ ವಂಚನೆ.ಕೆಲವು ಆರೋಪಿಗಳ ನ್ಯಾಯಾಂಗ ಬಂಧನ.

ಉಡುಪಿ: ನವೆಂಬರ್ 10-2025-swabhimananews

ನಕಲಿ ಚಿನ್ನಾಭರಣ ಅಡವಿಟ್ಟು ವಂಚಿಸಿದ ಬಗ್ಗೆ ಕರ್ಣಾಟಕ ಬ್ಯಾಂಕ್ ಕಟ್ಟಿಂಗೇರಿ ಶಾಖೆಯ ವ್ಯವಸ್ಥಾಪಕರು ನೀಡಿದ ದೂರಿನಂತೆ ಶಿರ್ವ ಪೊಲೀಸರು ಐವರನ್ನು ಬಂಧಿಸಿ ರೂ 4,30,000 ನಗದು ಹಣ ಹಾಗೂ ನಕಲಿ ಹಾಲ್ ಮಾರ್ಕ್ ಹಾಕಲು ಬಳಸಿದ್ದ ಲೇಸರ್ ಯಂತ್ರ ಹಾಗೂ ಕಂಪ್ಯೂಟರ್‌ನ್ನು ವಶಪಡಿಸಿಕೊಂಡಿದ್ದಾರೆ.

ಪುನೀತ್ ಆನಂದ ಕೋಟ್ಯಾನ್ ತಂದೆ: ಆನಂದ ಸುವರ್ಣ, ಕಪ್ಪೆಟ್ಟು, ಅಂಬಲಪಾಡಿ ಗ್ರಾಮ, ಉಡುಪಿ, ಸುದೀಪ್ ತಂದೆ : ತುಕ್ರ ಪೂಜಾರಿ, ಲಕ್ಷ್ಮೀನಗರ, ತೆಂಕನಿಡಿಯೂರು, ರಂಜನ್ ಕುಮಾರ್ ತಂದೆ : ಸಾಧು ಮೆಂಡನ್, ಏಣಗುಡ್ಡೆ ಕಟಪಾಡಿ, ಸರ್ವಜೀತ್ ಹೆಚ್, ಕೆ ತಂದೆ : ಹ್ಯಾನ್‌ಸನ್, ಅಲಂಗಾರು, ಪೆರ್ಡೂರು, ರಾಜೇಶ್ ದೀಲೀಪ್ ಪಾಟೇಲ್ ತಂದೆ : ದಿಲೀಪ್ ಪಾಟೀಲ್, ಶ್ರೀನಗರ, ರಹತಾನಿ, ಪುಣೆ, ಮಹಾರಾಷ್ಟ್ರ ಬಂಧಿತರು.ಉಡುಪಿ ಜಿಲ್ಲೆಯಲ್ಲಿ ನಕಲಿ ಚಿನ್ನಾಭರಣಗಳನ್ನು ಇರಿಸಿ ಸಾಲ ಪಡೆಯುವರ ಹಾವಳಿ ಹೆಚ್ಚಾಗಿದ್ದ ಹಿನ್ನಲೆ ಯಲ್ಲಿ ಸಾರ್ವಜನಿಕರಿಂದ ದೂರನ್ನು ಗಂಭೀರವಾಗಿ ಪರಿಗಣಿಸಿ ಪೊಲೀಸ್ ವೃತ್ತ ನಿರೀಕ್ಷಕರು ಕಾಪುರವರ ನೇತೃತ್ವದಲ್ಲಿ ಮೂರು ವಿಶೇಷ ತಂಡಗಳನ್ನು ರಚಿಸಿ ಬೆಂಗಳೂರು, ಗೋವಾ, ಮುಂಬೈ ಹಾಗೂ ದೆಹಲಿಯಿಂದ ಆರೋಪಿಗಳಾದ ಇವರುಗಳನ್ನು ದಸ್ತಗಿರಿ ಮಾಡಿ, ಸೊತ್ತುಗಳನ್ನು ವಶಕ್ಕೆ ಪಡೆಯಲಾಗಿದೆ.ಈ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದಾಗ ಬ್ರಹ್ಮಾವರ, ಹಿರಿಯಡ್ಕ, ಉಡುಪಿ ನಗರ ಠಾಣಾ ವ್ಯಾಪ್ತಿಯಲ್ಲಿಯೂ ಸಹಾ ನಕಲಿ ಚಿನ್ನಾಭರಣಗಳನ್ನು ಬ್ಯಾಂಕಿನಲ್ಲಿ ಇರಿಸಿ ಸಾಲ ಪಡೆದ ಬಗ್ಗೆ ತಿಳಿದು ಬಂದಿದ್ದು ಈ ಬಗ್ಗೆ ಪ್ರಕರಣ ದಾಖಲಾಗಿರುತ್ತವೆ.ಈ ಕಾರ್ಯಾಚರಣೆಯಲ್ಲಿ ಕಾರ್ಕಳ ಸಹಾಯಕ ಪೊಲೀಸ್ ಅಧೀಕ್ಷಕರಾದ ಡಾ. ಹರ್ಷ ಪ್ರಿಯಂವದಾ ಐಪಿಎಸ್ ಮತ್ತು ಕಾಪು ವೃತ್ತ ನಿರೀಕ್ಷಕರಾದ ಅಜ್‌ಮತ್ ಆಲಿ ರವರ ಮಾರ್ಗದರ್ಶನದಲ್ಲಿ ಶಿರ್ವ ಪೊಲೀಸ್ ಠಾಣಾ ಪಿಎಸ್‌ಐ ಮಂಜುನಾಥ ಮರಬದ, ಪಿಎಸ್‌ಐ ಲೋಹಿತ್ ಕುಮಾರ್ ಸಿಎಸ್, ಪಡುಬಿದ್ರೆ ಪೊಲೀಸ್ ಠಾಣಾ ಪಿಎಸ್‌ಐ ಅನಿಲ್‌ಕುಮಾರ್ ಟಿ ನಾಯ್ಕ, ಶ್ರೀಧರ್ ಕೆಜೆ ಎಎಸ್ ಐ ಹಾಗೂ, ಶಿರ್ವ ಪೊಲೀಸ್ ಠಾಣಾ ಸಿಬ್ಬಂದಿಯವರಾದ ಕಿಶೋರ್, ಮಂಜುನಾಥ, ಅರುಣ್, ಸಿದ್ದರಾಯಪ್ಪ, ನಾಗರಾಜ ಹಾಗೂ ಪಡುಬಿದ್ರೆ ಠಾಣಾ ಸಿಹೆಚ್‌ಸಿ 68 ನಾಗರಾಜ ರವರು ನಡೆಸಿರುತ್ತಾರೆ.

ಇದು ಕೇವಲ ಕೆಲವೇ ಕೆಲವು ಬ್ಯಾಂಕ್ ಗಳಲ್ಲಿ ಸೊಸೈಟಿಯಲ್ಲಿ ನಡೆದ ನಕಲಿ ಚಿನ್ನಾಭರಣಗಳನ್ನು ಅಡವಿಟ್ಟ ಪ್ರಕರಣವಲ್ಲ ಜಿಲ್ಲಾದ್ಯಂತ, ರಾಜ್ಯಾದ್ಯಂತ, ದೇಶಾದ್ಯಂತ ಅನೇಕ ಪ್ರಕರಣಗಳಲ್ಲಿ ಇವರು ಇವರ ತಂಡ ಕೆಲಸ ಮಾಡಿರುವ ಆರೋಪಗಳು ಕೇಳಿಬರುತ್ತಿದೆ ಹಾಗೂ ಇದರ ಹಿಂದೆ ಅನೇಕ ಉನ್ನತ ಮಟ್ಟದ ಅಧಿಕಾರಿಗಳು, ಮತ್ತು ಜನಪ್ರತಿನಿಧಿಗಳು, ಹಾಗೂ ಈ ಪ್ರಕರಣದಲ್ಲಿ ಈಗಾಗಲೇ ಒಬ್ಬ ಪೋಲಿಸ್ ಪೇದೆ ಕೂಡ ಬಂದನವಾಗಿರುವುದು ನೋಡಿದರೆ.ಇದು ರಾಷ್ಟ್ರಮಟ್ಟದ ನಕಲಿ ಚಿನ್ನಾಭರಣ ಚೋರರು ಇರುವುದಾಗಿ ಸಾಮಾಜಿಕ ಹೋರಾಟಗಾರರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.ಈ ಪ್ರಕರಣವನ್ನು ಉನ್ನತ ಮಟ್ಟದ ತನಿಖಾ ಸಂಸ್ಥೆಗೆ ಸರಕಾರ ವಹಿಸಬೇಕೆಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.

Swabhimananews.

Related posts

ಬುದ್ಧ ಪೂರ್ಣಿಮೆ ಪ್ರಯುಕ್ತ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಿ, ಬಹುಮಾನ ವಿತರಿಸಿ, ಹತ್ತನೇ ತರಗತಿಯಲ್ಲಿ ಹೆಚ್ಚಿನ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್ ನೀಡಿದ.ಬುದ್ದಿಸ್ಟ್ ಸೊಸೈಟಿ ಆಫ್ ಇಂಡಿಯಾ.ಉಡುಪಿ

Swabhimana News Desk

ಬಾಬಸಾಹೇಬ್ ಅಂಬೇಡ್ಕರ್ ರವರನ್ನು ಸ್ವಾರ್ಥಕ್ಕಾಗಿ ಬಳಸುವುದು ದೇಶದ್ರೋಹಕ್ಕೆ ಸಮಾನ ದಲಿತ ಮುಖಂಡ ಶೇಖರ್ ಹಾವಂಜೆ !!

Swabhimana News Desk

ಬೋಧಿಸತ್ವ ಬುದ್ಧವಿಹಾರ. ಹಾವಂಜೆಯಲ್ಲಿ ಧಮ್ಮಚಕ್ಕ ಪವತ್ತನ ದಿನಾಚರಣೆ.

Swabhimana News Desk

Leave a Comment