ಜೂನ್ -22-2024 SWABHIMANANEWS.
ಹೆಬ್ರಿ:ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸ್ವಸಹಾಯ ಸಂಘದ ಸಾಲ ವಸೂಲಾತಿ ನೆಪದಲ್ಲಿ ದಲಿತರ ಮನೆಗೆ ನುಗ್ಗಿ ಹಲ್ಲೆಗೆ ಯತ್ನ ,ಅವಾಚ್ಯ ಪದಗಳಿಂದ ಜಾತಿ ನಿಂದನೆ. ಕಾನೂನು , ಮಾಹಿತಿ ನೀಡಲು ಬಂದ ಸಂಚಾರಿ ಯೂಟ್ಯೂಬ್ ಚಾನೆಲ್ ಸಿಬ್ಬಂದಿಗಳ ವಿರುದ್ಧವೂ ಹಲ್ಲೆಗೆ ಯತ್ನ.ದೂರು ನೀಡಿ 15 ದಿನ ಕಳೆದರೂ ಕಾನೂನು ಕ್ರಮ ಕೈ ಗೊಳ್ಳದ ಇಲಾಖೆಗಳು.ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ಮುದ್ರಾಡಿ ಗ್ರಾಮದ ಎಲ್ಕೋಡು ಜಡ್ಡು ಉಪ್ಪಳ ಎಂಬಲ್ಲಿ ದಲಿತರ ಮನೆಗೆ ನುಗ್ಗಿ ಸಂಘದ ಹಣ ವಸೂಲಿಗೆ ಮುಂದಾದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ಗೂಂಡಾಗಳು.
ಅನೇಕ ವರ್ಷಗಳ ಹಿಂದೆ SKDRDP ಸಂಸ್ಥೆಯ ವ್ಯಕ್ತಿಗಳು ಹಳ್ಳಿ ಹಳ್ಳಿಯ ಮುಗ್ಧ , ಅನಕ್ಷರಸ್ಥ, ಅಮಾಯಕ, ಆರ್ಥಿಕವಾಗಿ ತೀರ ಹಿಂದುಳಿದ ದಲಿತ ಕುಟುಂಬಗಳ ಮನೆ ಮನೆಗೆ ತೆರಳಿ ಆ ಮುಗ್ಧ, ಅಮಾಯಕ, ಅನಕ್ಷರಸ್ಥ ಜನಗಳಿಗೆ ಹಣ ಸಾಲ ನೀಡುತ್ತೇವೆ. ನಿಮ್ಮನ್ನು ಉದ್ದಾರ ಮಾಡುತ್ತೇವೆ ಎಂದು ಹತ್ತು, ಹತ್ತು ಜನರ ಗುಂಪು ರಚಿಸುವಂತೆ ಮುಗ್ಧ ಅನಕ್ಷರಸ್ಥ, ದಲಿತರಿಗೆ ಆಮಿಷ ಒಡ್ಡಿ ಮೊದಲಿಗೆ 6 ತಿಂಗಳ ತನಕ ನೀವು ಉಳಿತಾಯದ ಹಣ ಕಟ್ಟುವಂತೆ ಹೇಳಿ 6 ತಿಂಗಳ ನಂತರ ತಾವೇ ಉಳಿಸಿದ ಉಳಿತಾಯದ ಹಣದಲ್ಲಿ ಮೊದಲಿಗೆ ಗುಂಪಿನ ಎಲ್ಲಾ ಸದಸ್ಯರಿಗೆ ತಲಾ ಹತ್ತತ್ತು ಸಾವಿರ ರೂಪಾಯಿ ಸಾಲ ನೀಡಿ.
ಅದೇ ಸಾಲ ಇಂದಿಗೂ ಸಂಪೂರ್ಣ ಮುಕ್ತಾಯವಾಗದೆ ಮತ್ತೆ ಮತ್ತೆ ಸಾಲ ಬಡ್ಡಿ, ಅಸಲು, ಇನ್ಸೂರೆನ್ಸ್, ಭದ್ರತೆ ಅದು ಇದು ಎಂದು ಕಳೆದ 23 ವರ್ಷಗಳಿಂದ ನಮ್ಮ ಅನೇಕ ಕುಟುಂಬಗಳನ್ನು ಶೋಷಣೆ ಮಾಡುತ್ತಲೇ ಬಂದಿದ್ದಾರೆ ಎಂದು ಗಂಭೀರವಾದ ಆರೋಪ ಕೇಳಿಬರುತ್ತಿದೆ.
ಪ್ರತಿ ವಾರ ವಾರ ಹಣ ಪಾವತಿ ಮಾಡುತ್ತಲೇ ಬರಬೇಕು, ನಮ್ಮ ಜೀವನದ ಎಲ್ಲಾ ದುಡಿಮೆಯ ಹಣವನ್ನು ಸಂಘಕ್ಕೆ ಸುರಿಯುತ್ತಲೇ ಬಂದಿದ್ದೇವೆ.ಇದರ ಬಡ್ಡಿ ಎಷ್ಟು ? ಇದರ ಸಾಧಕ ಬಾದಕ ಏನೆಂದು ನಮಗ್ಯಾರಿಗೂ ಗೊತ್ತಿಲ್ಲ.
ನಮಗೆ ಯಾವ ಬ್ಯಾಂಕ್ ನಿಂದ ಲೋನ್ ನೀಡುತ್ತಾರೆ, ಅದಕ್ಕೆ ಎಷ್ಟು ಪರ್ಸೆಂಟ್ ಬಡ್ಡಿ, ನಾವು ಕಳೆದ 23 ವರ್ಷಗಳಿಂದ ಉಳಿತಾಯ ಮಾಡಿದ ಹಣ ಎಲ್ಲಿದೆ ಅದಕ್ಕೆ ಎಷ್ಟು ಪರ್ಸೆಂಟ್ ಬಡ್ಡಿ, ಮತ್ತು ಬೇರೆ ಬೇರೆ ವಿಮೆ, ಭದ್ರತೆ ಡಿಪಾಸಿಟ್ ಎಂದೆಲ್ಲ ಹೇಳುತ್ತಿರುವ ಈ ಸಂಸ್ಥೆಯ ವಿಷಯ/ ವಿಚಾರವನ್ನು ತಿಳಿದುಕೊಳ್ಳಬೇಕು ಎಂದು ಕಳೆದ 10 ವಾರಗಳ ಹಿಂದೆ ಸಂಘಕ್ಕೆ ಸಂಬಂಧಪಟ್ಟ ಮುಖ್ಯಸ್ಥರಿಗೆ ನಾವು ತಿಳಿಸಿದ್ದೇವೆ. ನಮ್ಮ ಸಾಲದ ಹಣ ನಾವೇ ನೇರವಾಗಿ ಬ್ಯಾಂಕಿಗೆ ಪಾವತಿ ಮಾಡುತ್ತೇವೆ ನಮ್ಮ ಸಂಘಕ್ಕೆ ಸಂಬಂಧಿಸಿದ ಬ್ಯಾಂಕ್ ಪಾಸ್ ಪುಸ್ತಕ ನೀಡಿ ಎಂದು ಕೇಳುತ್ತಲೇ ಬಂದಿದ್ದೇವೆ.
ನಮಗೆ ಇದುವರೆಗೂ ಬ್ಯಾಂಕ್ ಪಾಸ್ ಪುಸ್ತಕ ವಾಗಲಿ ,ನಮ್ಮ ಉಳಿತಾಯ ಹಣದ ವಿಷಯವಾಗಲಿ,ವಿಮೆಗಳ ವಿಚಾರವನ್ನಾಗಲಿ ಇದಕ್ಕೆ ಸಂಬಂಧಪಟ್ಟ ಯಾರೊಬ್ಬರೂ ನೀಡುತ್ತಿಲ್ಲ.
ಬದಲಿಗೆ ಹಣವನ್ನು ಮಾತ್ರ ಬೀಡಾ ಅಂಗಡಿ, ಹಾಲಿನ ಬೂತ್ ಗಳಲ್ಲಿ ನೀಡಲು ತಾಕಿತು ಮಾಡುತ್ತಾರೆ. ಅದಕ್ಕಾಗಿಯೇ ನಾವು ಹಣವನ್ನು ಕಳೆದ 10 ವಾರಗಳಿಂದ ಬೀಡಾ ಅಂಗಡಿ , ಹಾಲಿನ ಬೂತ್ ಗಳಲ್ಲಿ ನೀಡುವುದನ್ನು ನಿಲ್ಲಿಸಿದ್ದೇವೆ. ಸಂಸ್ಥೆಯ ಮುಖ್ಯಸ್ಥರು ನಮ್ಮ ಸಂಘದ ಬ್ಯಾಂಕ್ ನ ಪಾಸ್ ಪುಸ್ತಕ ನೀಡಿದರೆ ನಾವೇ ಬ್ಯಾಂಕಿಗೆ ಹಣ ಪಾವತಿ ಮಾಡುತ್ತೇವೆ ಎಂದು ಎಷ್ಟೇ ಕೇಳಿದರು ಪಾಸ್ ಪುಸ್ತಕ ನೀಡುತ್ತಿಲ್ಲ.
ಹಾಗಾಗಿಯೇ ದಿನಾಂಕ 9/06/2024 ರ ಭಾನುವಾರ ಮಧ್ಯಾಹ್ನ ಸುಮಾರು 2 ಗಂಟೆ ಸಮಯದಲ್ಲಿ ನಮ್ಮ ಸಂಘದ ಸದಸ್ಯರಿಗೆ ಈ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಾಲದ ಮತ್ತು ಬಡ್ಡಿಯ ಸಂಪೂರ್ಣ ಮಾಹಿತಿಯನ್ನು ತಿಳಿದಿರುವ ಮಂಗಳೂರಿನ ಸಂಚಾರಿ ಯೂಟ್ಯೂಬ್ ಚಾನೆಲ್ ನವರು.
ಮುದ್ರಾಡಿ ಗ್ರಾಮದ ಎಲ್ಕೋಡು ಜಡ್ಡು ಉಪ್ಪಳ ಎಂಬಲ್ಲಿರುವ ನಾಲ್ಕು ದಲಿತರ ಮನೆಗೆ ತೆರಳಿ. ಸಂಘದ ಸದಸ್ಯರಿಗೆ ಈ ಸಾಲದ ಹಾಗೂ ಅದರ ಬಡ್ಡಿಯ ಬಗ್ಗೆ ಮಾಹಿತಿ ನೀಡುತ್ತಿರುವ ಸಮಯದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ಸುಮಾರು ನೂರು ಜನರ ತಂಡ ನಮ್ಮ ಮನೆಯ ಸುತ್ತ ಮುತ್ತ ಮುತ್ತಿಗೆ ಹಾಕಿ ಸಂಘದ ಸಾಲದ ಹಣ ನೀಡುವಂತೆ ಬೆದರಿಸಿದ್ದು ಮಾತ್ರವಲ್ಲದೆ ಹಣ ನೀಡದಿದ್ದರೆ ಕೊಲೆ ಮಾಡುವುದಾಗಿ ಬೆದರಿಸಿ ಅವಾಚ್ಯ ಪದಗಳಿಂದ ನಿಂದಿಸಿ ಅಲ್ಲಿದ್ದ ಕೆಲವು ಮಹಿಳೆಯರ ಮೈಮೇಲೆ ಕೈ ಹಾಕಿ ದೂಡಿ ನಿಮ್ಮ ಜಾತಿಯವರಿಗೆ ಸಾಲ ನೀಡುವುದೇ ದೊಡ್ಡ ತಪ್ಪು ಇನ್ನುಮುಂದೆ ನಿಮಗೆ ಯಾರು ಯಾವುದೇ ಸಾಲ ನೀಡದಂತೆ ಮಾಡುತ್ತೇವೆ ಎಂದು ಆರ್ಥಿಕ ಬಹಿಷ್ಕಾರ ಹಾಕಿ.
ಮುಗ್ಧ ದಲಿತರಿಗೆ ಕಾನೂನು ಮಾಹಿತಿ ನೀಡಲು ಬಂದ ಸಂಚಾರಿ ಯೂಟ್ಯೂಬ್ ಚಾನೆಲ್ ಸಿಬ್ಬಂದಿಗಳ ಮೇಲೆ ಹಲ್ಲೆಗೆ ಯತ್ನಿಸಿ,ಅವರ ಕ್ಯಾಮೆರಾಗಳನ್ನು ಕಸಿದುಕೊಳ್ಳಲು ಪ್ರಯತ್ನಿಸಿ ದಲಿತರಿಗೆ ಯಾರು ಯಾವುದೇ ಮಾಹಿತಿ, ಕಾನೂನು ಅರಿವು ನೀಡದಂತೆ ನಿರ್ಭಂಧ ಹೇರಿ ದಲಿತರಿಗೆ ಬಹುದೊಡ್ಡ ದೌರ್ಜನ್ಯ ವೆಸಗಿದ್ದಾರೆ.ಎಂದು ದೂರುದಾರರಾದ ಗುಲಾಬಿ ಮತ್ತು ಸಂಘದ ಎಲ್ಲಾ ಸದಸ್ಯರು.ಸ್ವಾಭಿಮಾನ ನ್ಯೂಸ್ ನೊಂದಿಗೆ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಈ ಬಗ್ಗೆ ಅದೇ ದಿನ ಹೆಬ್ರಿ ಪೊಲೀಸ್ ಠಾಣೆಗೆ ದೂರು ನೀಡಿದರು ಇದುವರೆಗೂ. ದಲಿತರ ಮನೆಗೆ ನುಗ್ಗಲು ಪ್ರಯತ್ನಿಸಿ ಅವಾಚ್ಯ ಪದಬಳಸಿ ಇಡೀ ರಾಜ್ಯದ, ರಾಷ್ಟ್ರದ ದಲಿತ ಸಮುದಾಯಕ್ಕೆ ಜಾತಿನಿಂದನೆ ಮಾಡಿ ಕೊಲೆ ಬೆದರಿಕೆ ಹಾಕಿ ದೌರ್ಜನ್ಯ ಎಸಗಿದ ಎಲ್ಲಾ ದಲಿತೇತರ ವ್ಯಕ್ತಿಗಳ ವಿರುದ್ಧ ಪೊಲೀಸ್ ಇಲಾಖೆ ದಲಿತ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿ ಅವರನ್ನು ಬಂಧಿಸಬೇಕೆಂದು.
ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮವಾದ ಮತ್ತು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ ಪಕ್ಷ ಆಗ್ರಹಿಸಿದೆ.
ಹಾಗೂ ಮುಂದಿನ ದಿನಗಳಲ್ಲಿ ಈ ಧರ್ಮಸ್ಥಳದ ಹೆಸರಲ್ಲಿ ಮೀಟರ್ ಬಡ್ಡಿ ದಂಧೆ ನಡೆಸುವ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಎಲ್ಲಾ ಮೀಟರ್ ಬಡ್ಡಿ ದಂಧೆಯ ಬಂಡವಾಳ ಬಯಲು ಮಾಡಲಿದ್ದೇವೆ.ಎಂದು ಸಂಘಟನೆಯ ರಾಜ್ಯ ಮುಖಂಡರು ತಿಳಿಸಿದ್ದಾರೆ.
ನೊಂದ ಎಲ್ಲಾ ಸಂತ್ರಸ್ತರಿಗೆ ನ್ಯಾಯ ಕೊಡಿಸುವ ಪ್ರಯತ್ನವನ್ನು ಸಂಘಟನೆ ಮತ್ತು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ ಉಡುಪಿ ಜಿಲ್ಲೆ.ಮಾಡಲಿದೆ ಅದಕ್ಕಾಗಿ ಇಡೀ ಜಿಲ್ಲೆಯಲ್ಲಿ ಮತ್ತು ಮಂಗಳೂರು ಜಿಲ್ಲೆಯಲ್ಲಿ ಈ ಧರ್ಮಸ್ಥಳ ಗ್ರಾಮಾಭಿವೃದ್ಧಿ.ಸಂಘದ ಸಾಲದಿಂದ ನೊಂದವರು, ದೌರ್ಜನ್ಯಕ್ಕೊಳಗಾದವರು ನಮ್ಮೊಂದಿಗೆ ಕೈಜೋಡಿಸಬೇಕು. ಎಂದು ಸಂಘಟನೆ ಮತ್ತು ಪಕ್ಷದ ರಾಜ್ಯ ನಾಯಕರಾದ ಶೇಖರ್ ಹಾವಂಜೆ ಮತ್ತು ರಾಜ್ಯ ಪದಾಧಿಕಾರಿಗಳು ಅವಳಿ ಜಿಲ್ಲೆಯ ಜನರನ್ನು ಈ ಮೂಲಕ ವಿನಂತಿಸಿಕೊಂಡಿದ್ದಾರೆ.
Swabhimananews