15 C
New York
27 September 2026
Coastal

ಬಯಲು ರಂಗಮಂದಿರ ಹಾಗೂ ಆಟದ ಮೈದಾನ ನಿರ್ಮಾಣ ಮಾಡುವಂತೆ ಒತ್ತಾಯ ವಿಜಯಕುಮಾರ್ ಕೊಡವೂರು…!

Udupi:February -8-2026 swabhimananews

ಉಡುಪಿ ಜಿಲ್ಲೆಯ ಉಡುಪಿ ತಾಲೂಕಿನ ಕೊಡವೂರು ಗ್ರಾಮದ ಪಾಳೇಕಟ್ಟೆ ಎಂಬಲ್ಲಿ ಸಾರ್ವಜನಿಕ ಆಟದ ಮೈದಾನ ಹಾಗೂ ಬಯಲು ರಂಗಮಂದಿರ ನಿರ್ಮಾಣ ಆಗಲೇ ಬೇಕು ಎಂದು ನಗರಸಭಾ ಸದಸ್ಯ ವಿಜಯ್ ಕೊಡವೂರು ಅವರು ಆಗ್ರಹಿಸಿದರು. ಪ್ರಸ್ತಾವಿತ‌ ಜಾಗದಲ್ಲಿ ಅಂಬೇಡ್ಕರ್ ಬಯಲು ರಂಗಮಂದಿರ ಸಮಿತಿಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ ನಾವು ಸಣ್ಣವರಿದ್ದಾಗ ಗದ್ದೆ‌ ಬಯಲಿನಲ್ಲಿ ಆಟವಾಡುತ್ತಿದ್ದೆವು. ಈಗ ಅಂಥ ಅವಕಾಶವಿಲ್ಲ.

ಶಾಲೆ ಕಾಲೇಜುಗಳ ಆಟದ ಮೈದಾನ ಪ್ರತೀ ಸಲವೂ‌ ಸಾರ್ವಜನಿಕ ಕಾರ್ಯಕ್ರಮ ಅಥವಾ ಆಟೋಟ ಸ್ಪರ್ಧೆಗಳಿಗೆ ಲಭ್ಯವಾಗುವುದಿಲ್ಲ.

ಹಾಗಾಗಿ‌ ಪಾಳೆಕಟ್ಟೆಯ‌ ಇದೇ‌ ಸರ್ಕಾರಿ ಜಾಗ ಸ್ಥಳೀಯ ಪಂಚಾಯತ್ ಮತ್ತು ನಗರಸಭೆಯ ಆಡಳಿತ ವ್ಯಾಪ್ತಿಯಲ್ಲಿದೆ. ಇಲ್ಲಿರುವ ಸರಕಾರಿ ಭೂಮಿ ಸುಮಾರು 80 ಸೆಂಟ್ಸ್ ಜಾಗವನ್ನು ಸ್ಥಳೀಯರು ಆಟೋಟ , ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳನ್ನು‌ ನಡೆಸಲು ಅನುವಾಗುವಂತೆ ಮೀಸಲಿರಿಸಬೇಕು‌ ಹಾಗೂ ಮಂಜೂರು ಮಾಡಬೇಕು ಎಂದು ಈಗಾಗಲೇ ಆಗ್ರಹಿಸಿದರು. ಇಂದು ನಡೆದ ಸಭೆಯಲ್ಲಿ ಒಕ್ಕೊರಲಿನಿಂದ ನಿರ್ಣಯಿಸಲಾಯಿತು ಹಾಗೂ ಭಾರತದ ದೇಶದ ಸಂವಿಧಾನ ಪಿತಾಮಹ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರವರ ಹೆಸರಿನಲ್ಲಿ ಇಲ್ಲಿ ಬಯಲು ರಂಗಮಂದಿರ ನಿರ್ಮಾಣಕ್ಕೆ ಮುಂದಾಗಲೇಬೇಕು ಎಂಬುದು ಸಮಿತಿಯ ಆಶಯವಾಗಿದೆ ಎಂದರು.

ಸಭೆಯಲ್ಲಿ ಕೌನ್ಸಿಲರ್ ವಿಜಯಕುಮಾರ್, ಹವ್ಯಾಸಿ ಪತ್ರಕರ್ತ ಚನ್ನಬಸವ ಪುತ್ತೂರ್ಕರ‌, ನಿವೃತ್ತ ಅಧ್ಯಾಪಕ ಶಂಭು ಸುವರ್ಣ, ಕೇಶವ ಶೇರಿಗಾರ್, ನಾಗರಾಜ್ ಆಚಾರ್ಯ, ರವಿರಾಜ್, ಮಾಧವ ಕರ್ಕೇರ,ಮೂಕಾಂಬಿಕಾ ಭಜನಾ ಮಂದಿರ ಹಾಗೂ ಸ್ಥಳೀಯ ಸಂಘಟನೆಗಳ ಅಧ್ಯಕ್ಷರು, ಪದಾಧಿಕಾರಿ ಸದಸ್ಯರು ಸ್ಥಳೀಯ ಕ್ರೀಡಾ ಪಟುಗಳು ಪಾಲ್ಗೊಂಡಿದ್ದರು.

Related posts

ಅಕ್ರಮ ಮರಳು ಅಡ್ಡೆಗೆ ಮಂಗಳೂರು ಗಣಿ ಇಲಾಖೆಯ ಹಿರಿಯ ಭೂವಿಜ್ಞಾನಿ ಕೃಷ್ಣವೇಣಿ ಎಂಬ ದಿಟ್ಟ ಮಹಿಳಾ ಅಧಿಕಾರಿಯ ಮಿಂಚಿನ ದಾಳಿ; 20 ಇಂಜಿನ್ ಮತ್ತು ಗ್ಯಾಸ್ ಸಿಲಿಂಡರ್ ಸಹಿತ ಬೋಟ್‌ಗಳ ವಶ.

Swabhimana News Desk

ದಕ್ಷಿಣಕನ್ನಡ: ಎಳನೀರು ಕುಡಿದು ಅಸ್ವಸ್ಥ ಪ್ರಕರಣ – ಫ್ಯಾಕ್ಟರಿಗೆ ಭೇಟಿ ನೀಡಿದ ಅಧಿಕಾರಿಗಳ ತಂಡ.

Swabhimana News Desk

ಹೆಣದಿಂದ ಹಣ.
ಮಾಜಿ ಗ್ರಾಮಪಂಚಾಯತ್ ಅಧ್ಯಕ್ಷ ಹಾಲಿ ಪಂಚಾಯತ್ ಅಧ್ಯಕ್ಷೆ ಸೇರಿ ನಾಲ್ವರ ವಿರುದ್ದ ಲೋಕಾಯುಕ್ತಕ್ಕೆ ದೂರು.

Swabhimana News Desk

Leave a Comment