ಉಡುಪಿ ಎಪ್ರಿಲ್ 15-2026.swabhimaana
news

ಉಡುಪಿ, ಏಪ್ರಿಲ್ 14, 2026
ಉಡುಪಿ ಜಿಲ್ಲೆಯ ಹಾವಂಜೆಯ ಬೋಧಿಸತ್ವ ಬುದ್ಧ ವಿಹಾರದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ರವರ 135ನೇ ಜಯಂತಿ ಅಂಗವಾಗಿ ಭೀಮ್ ಜಯಂತೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಈ ಕಾರ್ಯಕ್ರಮವನ್ನು ಬೋಧಿಸತ್ವ ಬುದ್ಧ ಫೌಂಡೇಶನ್ (ರಿ) ಉಡುಪಿ ಜಿಲ್ಲೆ, ಬೋಧಿಸತ್ವ ಬುದ್ಧ ವಿಹಾರ ಹಾವಂಜೆ ಮತ್ತು ಕರ್ನಾಟಕ ದಲಿತ ಸಂಘರ್ಷ ಸಮಿತಿ(ರಿ) (ಅಂಬೇಡ್ಕರ್ ಮಾರ್ಗ) ಇವರ ಸಹಯೋಗದಲ್ಲಿ ಆಯೋಜಿಸಲಾಗಿತ್ತು.
ಬೆಳಿಗ್ಗೆ 10 ಗಂಟೆಗೆ ಆರಂಭವಾದ ಕಾರ್ಯಕ್ರಮದಲ್ಲಿ ಬೆಂಗಳೂರಿನ ಮಹಾಬೋಧಿ ಲೋಕಶಾಂತಿ ಬುದ್ಧವಿಹಾರದ ಪೂಜ್ಯ ಬಿಕ್ಕು ಪಣ್ಯಪಾಲ ಭಂತೇಜಿ, ಪೂಜ್ಯ ಸದ್ಧಾರಖಿತ ಭಂತೇಜಿ, ಪೂಜ್ಯ ಧಮ್ಮವರೋ ಭಂತೇಜಿ, ಪೂಜ್ಯ ಸಂತಚಿತ್ತೋ ಭಂತೇಜಿ ರವರ ಸಾನಿಧ್ಯದಲ್ಲಿ ಬುದ್ಧ ವಂದನೆ, ಧಮ್ಮ ವಂದನೆ ಹಾಗೂ ಸಂಘ ವಂದನೆ ನೆರವೇರಿಸಲಾಯಿತು.
ನಂತರ ಈ ಕಾರ್ಯಕ್ರಮಕ್ಕೆ ಆಗಮಿಸಿದಂತಹ ಎಲ್ಲಾ ಮುಖ್ಯ ಅತಿಥಿಗಳಿಗೆ ಬಾಬಾ ಸಾಹೇಬರ ಪುಸ್ತಕಗಳನ್ನು ನೀಡಿ ಕಾರ್ಯಕ್ರಮಕ್ಕೆ ಸ್ವಾಗತಿಸಲಾಯಿತು.

ಕಾರ್ಯಕ್ರಮದಲ್ಲಿ ಭಂತೇಜಿಗಳು ಭಗವಾನ್ ಬುದ್ಧರ ಧಮ್ಮದ ಪ್ರವಚನ ನೀಡಿ, ಅಂಬೇಡ್ಕರ್ ಅವರ ಸಮಾನತೆ, ಶಿಕ್ಷಣ ಮತ್ತು ಸಾಮಾಜಿಕ ನ್ಯಾಯದ ತತ್ವಗಳನ್ನು ವಿವರಿಸಿದರು.
ಈ ಕಾರ್ಯಕ್ರಮದ ಉದ್ಘಾಟನೆಯನ್ನು ಬುದ್ಧಿಸ್ಟ್ ಸೊಸೈಟಿ ಆಫ್ ಇಂಡಿಯಾ ಉಡುಪಿ ಜಿಲ್ಲೆ ಇದರ ಅಧ್ಯಕ್ಷರಾದ ಅಜಯ್ ಕುಮಾರ್ ರವರು ಬಾಬಾ ಸಾಹೇಬರ ಭಾವಚಿತ್ರಕ್ಕೆ ಮೇಣದಬತ್ತಿಯ ಬೆಳಕನ್ನು ಬೆಳಗಿಸುವ ಮೂಲಕ ಉದ್ಘಾಟಿಸಿದರು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ) (ಅಂಬೇಡ್ಕರ್ ಮಾರ್ಗ) 138/2014-15 ಇದರ ರಾಜ್ಯ ಸಂಘಟನಾ ಸಂಚಾಲಕರಾದ ಬೆಳಗಾವಿಯ ರಾಜು ಎಂ ತಳವಾರ ವಹಿಸಿದ್ದರು.
ಪ್ರಾಸ್ತಾವಿಕವಾಗಿ ಬೋಧಿಸತ್ವ ಬುದ್ಧ ಫೌಂಡೇಶನ್ ನ ಅಧ್ಯಕ್ಷರಾದ ಶೇಖರ್ ಹಾವಂಜೆ ರವರು ಫೌಂಡೇಶನ್ ಹುಟ್ಟಿರುವ ಕುರಿತು ಮತ್ತು ಬೋಧಿಸತ್ವ ಬುದ್ಧ ವಿಹಾರದಲ್ಲಿ ನಡೆಯುತ್ತಿರುವ ಕಾರ್ಯಚಟುವಟಿಕೆಗಳ ಬಗ್ಗೆ ಸಂಪೂರ್ಣವಾಗಿ ತಿಳಿಸಿದರು.
ಹಾಗೂ
ಪ್ರಮುಖ ಭಾಷಣಕಾರರಾಗಿ ಆಗಮಿಸಿದ್ದ ಸಾಹಿತಿ, ಬರಹಗಾರರು, ಪತ್ರಕರ್ತರಾದ ಡಾ. ಕೆ ಎ ಓಬಳೇಶ್ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಾ
ಅಂಬೇಡ್ಕರ್ ರವರು ಬುದ್ಧರು ತೋರಿದ ಧಮ್ಮ ಮಾರ್ಗದಲ್ಲಿ ಆಸಕ್ತಿ ಹೊಂದಲು ಕಾರಣದ ಬಗ್ಗೆ ವಿವರವಾಗಿ ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಡಾ ಬೊಮ್ಮಯ್ಯ ನಿರ್ದೇಶಕರು
ರುಡ್ ಸೆಟ್ ಹೇರೂರು ಬ್ರಹ್ಮಾವರ ರವರು ಅಂಬೇಡ್ಕರ್ ಅವರು ಈ ದೇಶಕ್ಕೆ ನೀಡಿದ ಸಂವಿಧಾನದ ಹಕ್ಕುಗಳನ್ನು, ಅದರ ಪರಿಣಾಮವನ್ನು ಹಾಗೂ ಸಮಾನತೆಯ ಸಮಾಜ ನಿರ್ಮಾಣದ ವಿವರವನ್ನು ತಿಳಿಸಿದರು.
ಅಶೋಕ್ ಸಂಪಾದಕರು ಸುದ್ಧಿ ಪಾರಿಜಾತ ದಾವಣಗೆರೆ ರವರು ಮಾತನಾಡಿ ನಾನೊಬ್ಬ ಪತ್ರಕರ್ತನಾಗಿ ಸಮರ್ಥವಾಗಿ ಇಂದು
ಕಾರ್ಯನಿರ್ವಹಿಸುತಿದ್ದೇನೆ ಎಂದರೆ ಅದಕ್ಕೆ ಕಾರಣ ಬಾಬಾಸಾಹೇಬ್ ಅಂಬೇಡರ್ ರವರ ಸಂವಿಧಾನವೇ ಹೊರತು ಬೇರೆ ಯಾವುದೇ ಶಕ್ತಿ ಅಲ್ಲ ಎಂದರು.
ಶ್ರೀಮತಿ ದಿವ್ಯ ಶೇಖರ್ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಆವರ್ಸೆ ಗ್ರಾಮ ಪಂಚಾಯತ್ ಇವರು ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ ಧರ್ಮ ಮಹಿಳೆಯರನ್ನು ಮನೆಗೆ ಸೀಮಿತಗೊಳಿಸಿದರೆ ಬಾಬಾ ಸಾಹೇಬರ ಸಂವಿಧಾನ ಇಂತಹ ಒಂದು ತುಂಬಿದ ಸಭೆಯಲ್ಲಿ ಮಹಿಳೆಗೆ ಸ್ಥಾನಮಾನ ನೀಡಿದೆ ಇದು ಬಾಬಾ ಸಾಹೇಬರ ಸಂವಿಧಾನಕ್ಕೆ ಇರುವ ಶಕ್ತಿ ಎಂದು ಹೇಳುತ್ತಾ ಸಂವಿಧಾನ ಮಹಿಳೆಯರಿಗೆ ನೀಡಿರುವ ಅವಕಾಶಗಳ ಕುರಿತು ತಿಳಿಸಿದರು.
ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲೆ, ಇದರ ಜಿಲ್ಲಾಧ್ಯಕ್ಷರಾದ ಫ್ರಾಂಕಿ ಡಿಸೋಜ ಕೊಳಲಗಿರಿ ಇವರು ಕಾರ್ಯಕ್ರಮವನ್ನು ಉದ್ದೇಶಿಸಿ ತುಳುವಿನಲ್ಲೇ ಮಾತನಾಡುತ್ತಾ ಅಂಬೇಡ್ಕರ್ ಅವರ ಜೀವನ ಮತ್ತು ಅವರು ಬೌದ್ಧ ಧರ್ಮವನ್ನು ಸೇರಲು ಕಾರಣವೇನು ಎಂಬುದನ್ನು ಸಂಕ್ಷಿಪ್ತವಾಗಿ ಸಭಿಕರಿಗೆ ತಿಳಿಸಿದರು ಇವರ ತುಳುನಾಡ ತುಳು ಬಾಷೆ ಸಬಿಕರಿಗೆ ತುಂಬನೇ ಇಷ್ಟವಾಯಿತು.
ಮುರಳಿ. ಎಂ. ಮಾರ್ಪಳ್ಳಿ ಯುವ ಧಮ್ಮಾಚಾರಿಗಳು ಉಡುಪಿ ಜಿಲ್ಲೆ, ಇವರು ಮಾತನಾಡುತ್ತಾ ಒಂದು ಮರಕ್ಕೆ ನೀರು ಎಷ್ಟು ಮುಖ್ಯವೋ ಹಾಗೆ ಒಬ್ಬ ಮನುಷ್ಯನಿಗೆ ಚಿಂತನೆಗಳು ಅಷ್ಟೇ ಮುಖ್ಯ ಎಂದು ಹೇಳಿದರು.
ಸದಾಶಿವ ಹಾವಂಜೆ ಗುಮಾಸ್ತರು ಹಾವಂಜೆ ಗ್ರಾಮ ಪಂಚಾಯತ್ ಇವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಾ ಡಾಕ್ಟರ್ ಬಿ. ಆರ್ ಅಂಬೇಡ್ಕರ್ ರವರು ಈ ಮಣ್ಣಿನಲ್ಲಿ ಹುಟ್ಟಿಲ್ಲದಿದ್ದರೆ ನಾವು ಇವತ್ತು ಈ ಸಭೆಯಲ್ಲಿ ನಿಂತು ಮಾತನಾಡಲು ಅವಕಾಶ. ಇರುತ್ತಿರಲಿಲ್ಲ ಅಂಬೇಡ್ಕರ್ ರವರು ಈ ಸಮಾಜಕ್ಕೆ ನೀಡಿದ ಕೊಡುಗೆಗಳ ಬಗ್ಗೆ ಸಂಕ್ಷಿಪ್ತಾವಾಗಿ ತಿಳಿಸಿದರು.
ಶಂಭು ಸುವರ್ಣ ಹಿರಿಯ ಧಮ್ಮಾಚಾರಿಗಳು ಉಡುಪಿ ಜಿಲ್ಲೆ ಮತ್ತು ವಿವಿಧ ಸಮಾಜದ ಮುಖಂಡರು ಮತ್ತು ಗಣ್ಯರು ಭಾಗವಹಿಸಿ, ಡಾ. ಬಿ.ಆರ್ ಅಂಬೇಡ್ಕರ್ ರವರ ವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಅಗತ್ಯವನ್ನು ಒತ್ತಿ ಹೇಳಿದರು.
ನಂತರ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮುಗ್ಗೇರಿ ಇಲ್ಲಿನ ವಿದ್ಯಾರ್ಥಿಗಳು ಅಂಬೇಡ್ಕರ್ ರವರ ಜೀವನ ಮತ್ತು ಅವರು ಈ ದೇಶಕ್ಕೆ ನೀಡಿದ ಕೊಡುಗೆಗಳ ಬಗ್ಗೆ ಪುಟ್ಟ ಭಾಷಣವನ್ನು ಮಾಡಿದರು ಅವರಿಗೆ ಬಾಬಾ ಸಾಹೇಬರ ಪುಸ್ತಕವನ್ನು ನೀಡಿ ಗೌರವಿಸಲಾಯಿತು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ) (ಅಂಬೇಡ್ಕರ್ ಮಾರ್ಗ) ಇದರ ರಾಜ್ಯ ಸಂಘಟನಾ ಸಂಚಾಲಕರಾದ ಬೆಳಗಾವಿಯ ರಾಜು ಎಂ ತಳವಾರ ರವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಾ ಅಂಬೇಡ್ಕರ್ ರವರ ಆಸೆ ಏನೆಂದರೆ ನಾನು ಬರೆದಂತಹ ಸಂವಿಧಾನ ಜಾರಿಯಾಗುವ ಜಾಗದಲ್ಲಿ ನನ್ನ ಜನ ಇರಬೇಕು ಎಂದು ಹೇಳಿದ್ದರು ಆದರೆ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರವರು ಹೇಳಿದ ಜನ ಈಗ ಎಲ್ಲಿದ್ದಾರೆ, ಅವರು ಹೇಳಿದ ಮಾರ್ಗದಲ್ಲಿ ನಡೆಯುವ ಬದಲು ಹಾದಿ ಬೀದಿಯಲ್ಲಿ ಹೋರಾಟ ಮಾಡುತ್ತಿದ್ದಾರೆ ಏಕೆಂದರೆ ಇದಕ್ಕೆ ಮುಖ್ಯ ಕಾರಣ ಅಜ್ಞಾನ ಮತ್ತು ಶಿಕ್ಷಣದ ಕೊರತೆ. ಎಲ್ಲರೂ ಬಾಬಾಸಾಹೇಬರು ಹೇಳಿದಂತೆ ಶಿಕ್ಷಣವನ್ನು ಪಡೆದು ಬಡವರ, ನೊಂದವರ ಕಣ್ಣೀರನ್ನು ಒರೆಸುವ ಕೆಲಸವನ್ನು ಡಾ” ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಮಾಡಿದರು ಹಾಗೆ ನಾವು ಕೂಡ ಶಿಕ್ಷಣವನ್ನು ಪಡೆದು ಬಡವರ ನೊಂದವರ ಕಣ್ಣೀರನ್ನು ಒರೆಸುವ ಕೆಲಸವನ್ನು ಮಾಡಬೇಕೆ ಹೊರತು ಗುಲಾಮಗಿರಿ ಅಲ್ಲ ಎಂದರು.ಶಿಕ್ಷಣ ಮತ್ತು ಅಂಬೇಡ್ಕರ್ ಅವರ ಬಗ್ಗೆ ಎಲ್ಲರಿಗೂ ಮನ ಮುಟ್ಟುವಂತೆ ತಿಳಿಹೇಳಿದರು.
ಕಾರ್ಯಕ್ರಮದಲ್ಲಿ BSI ಉಡುಪಿ ಜಿಲ್ಲೆಯ ಪದಾಧಿಕಾರಿಗಳು, ಸ್ಥಳೀಯ ಸಾರ್ವಜನಿಕರು, ಸಂಘಟನೆಯ ಪದಾಧಿಕಾರಿಗಳು ಹಾಗೂ ಬೌದ್ಧ ಉಪಾಸಕ, ಉಪಾಸಿಕರು, ಬೌದ್ಧ ಅನುಯಾಯಿಗಳು ಮತ್ತು ಅಂಬೇಡ್ಕರ್ ರವರ ಅನುಯಾಯಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ಮುಖ್ಯ ಅಥಿತಿಗಳನ್ನು ಕನ್ನಡ ಪಂಡಿತರು, ಬೌದ್ಧ ಉಪಾಸಕರಾದ ಪಕೀರಪ್ಪ ಎಂ ರವರು ಸ್ವಾಗತಿಸಿದರು.
ಸಂವಿಧಾನದ ಪೀಠಿಕೆ ಪ್ರಸ್ತಾವನೆ, ವಾಚನವನ್ನು ಶರತ್.ಎಸ್ ಹಾವಂಜೆ ವಕೀಲರು ಉಚ್ಚ ನ್ಯಾಯಾಲಯ ಬೆಂಗಳೂರು ಇವರು ನೆರವೇರಿಸಿದರು.
ಕಾರ್ಯಕ್ರಮದ ನಿರೂಪಣೆಯನ್ನು ಜಯಶೀಲ ಬಿ ರೋಟೆ ಬ್ರಹ್ಮಾವರ ಇವರು ನೆರವೇರಿಸಿದರು.
ವಂದನಾರ್ಪಣೆಯನ್ನು ಶರತ್.ಎಸ್ ಹಾವಂಜೆ ವಕೀಲರು ಉಚ್ಚ ನ್ಯಾಯಾಲಯ ಬೆಂಗಳೂರು ಇವರು ನೆರವೇರಿಸಿದರು.
