9.2 C
New York
21 November 2024
Coastal

ಆಭರಣ ಹೆಸರಿನ ಚಿನ್ನಾಭರಣ ತಯಾರಿಕಾ ಘಟಕದಲ್ಲಿ ವಿಷ ಅನಿಲ ಸೋರಿಕೆ.ಉಡುಪಿ ನಗರದ ಜನತೆ ಆತಂಕದಲ್ಲಿ..!!

ಜುಲೈ-24-2023 swabhimananews@gmail.com
ಉಡುಪಿ ಜಿಲ್ಲೆಯ ನಗರಸಭಾ ವ್ಯಾಪ್ತಿಯ ಕಾರ್ಪೋರೇಷನ್ ಬ್ಯಾಂಕ್ ಹತ್ತಿರ,ನಗರದ ಮಧ್ಯಭಾಗದಲ್ಲಿರುವ ಆಭರಣ ಹೆಸರಿನ ಚಿನ್ನಾಭರಣ ತಯಾರಿಕಾ ಘಟಕದಲ್ಲಿ ವಿಷ ಅನಿಲ ಸೋರಿಕೆಯಾಗಿದ್ದು ಸ್ಥಳಿಯರಲ್ಲಿ ಆತಂಕ ಶುರುವಾಗಿದೆ.
ಈ ಆಭರಣ ತಯಾರಿಕಾ ಘಟಕವು ಚಿನ್ನಾಭರಣ ತಯಾರಿಸಲು ಚಿನ್ನದ ಬಿಲ್ಲೆಗಳನ್ನು ಕರಗಿಸುವಾಗ ಸಲ್ಫರ್ ನಂತಹ ರಾಸಾಯನಿಕ ಉಪಯೋಗಿಸಿದ್ದು ಇದರಿಂದ ಹೊರಸೂಸುವ ವಿಷಯುಕ್ತ ಅನಿಲ ನಗರವಿಡಿ ಹರಡಿದೆ.ಇದರ ಹೊರಸೂಸುವ ವಿಷಯುಕ್ತ ರಾಸಾಯನಿಕ ಹೊಗೆ ನಗರವಿಡೀ ಹರಡುತಿದ್ದರೂ ನಗರಸಭೆಯ ಅಧಿಕಾರಿಗಳು ಮೌನವಾಗಿರುವುದಾದರು ಯಾಕೆ..?
ಎಂದು ಜನರು ಆಡಿಕೊಳ್ಳುತ್ತಿದ್ದಾರೆ ಅಲ್ಲಿ ನಡೆದಾಡುವ ಅನೇಕರಿಗೆ ಉಸಿರಾಟದ ತೊಂದರೆ ಆಗಿರುವ ಬಗ್ಗೆ ಬಲ್ಲವರು ಹೇಳುತ್ತಾರೆ.
ಈ ಘಟಕದ ಪಕ್ಕದಲ್ಲೇ ಪ್ರಾಥಮಿಕ ಶಾಲೆ ಇದೆ ಅಲ್ಲಿ ನೂರಾರು ಸಣ್ಣ ಪುಟ್ಟ ಮಕ್ಕಳು ವಿಧ್ಯಾಭ್ಯಾಸ ಮಾಡುತ್ತಿದ್ದಾರೆ ಆ ಪುಟಾಣಿ ಮಕ್ಕಳ ಆರೋಗ್ಯದ ಮೇಲೆ ಗಂಭೀರ ದುಷ್ಪರಿಣಾಮ ಬೀರುತ್ತಿದೆ.

ಇದರಿಂದ ಮುಂದೆ ಬಹುದೊಡ್ಡ ಅನಾಹುತ ಸಂಭವಿಸುವ ಲಕ್ಷಣಗಳು ಕಂಡು ಬರುತ್ತಿದೆ.
ಇಂತಹ ಒಂದು ಅಪಾಯಕಾರಿ ಚಿನ್ನಾಭರಣ ತಯಾರಿಕಾ ಘಟಕವನ್ನು ನಗರದ ಒಳಗಡೆ ದಿನನಿತ್ಯ ಲಕ್ಷಾಂತರ ಜನ ಓಡಾಡುವ ಪ್ರದೇಶದಲ್ಲಿ ಅನುಮತಿ ನೀಡಿರುವುದು ಎಷ್ಟು ಸರಿ.? ನಗರಸಭೆಯ ಅಧಿಕಾರಿಗಳ ಉದ್ದೇಶವಾದರೂ ಏನು..?
ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.


ಮುಂದೆ ಬಹುದೊಡ್ಡ ಅನಾಹುತ ಸಂಭವಿಸುವ ಮುಂಚೆನೆ ಈ ಆಭರಣ ಹೆಸರಿನ. ಚಿನ್ನಾಭರಣ ತಯಾರಿಕಾ ಘಟಕವನ್ನು ನಗರಸಭೆಯ ಅಧಿಕಾರಿಗಳು,ಇಲ್ಲಿಂದ ಕೈಗಾರಿಕಾ ಪ್ರದೇಶಕ್ಕೆ ವರ್ಗಾವಣೆ ಮಾಡಿ ಘಟಕದ ಮುಖ್ಯಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಂಡು ಸಾರ್ವಜನಿಕರ ಜೀವ ಹಾನಿಯಂತಹ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು,

ಉಡುಪಿ ಜಿಲ್ಲೆಯ ನೂತನ ಜಿಲ್ಲಾಧಿಕಾರಿಗಳು ಈ ಬಗ್ಗೆ ಗಂಭೀರವಾಗಿ ಪರಿಗಣಿಸಿ ನಿಯಮ ಉಲ್ಲಂಘಿಸಿ ಜನವಸತಿ, ಪ್ರದೇಶಗಳಲ್ಲಿ ಮತ್ತು ನಗರದ ಮಧ್ಯ ಭಾಗದಲ್ಲಿ ಅಕ್ರಮವಾಗಿ ಚಿನ್ನಾಭರಣ ತಯಾರಿಕಾ ಘಟಕಕ್ಕೆ ಅನುಮತಿ ನೀಡಿದ ಅಧಿಕಾರಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.ಈ ಬಗ್ಗೆ ಈಗಾಗಲೇ ಅಗ್ನಿಶಾಮಕ ದಳದವರಿಗೆ ಸಾರ್ವಜನಿಕರು ಮಾಹಿತಿ ನೀಡಿರುವ ಬಗ್ಗೆ ತಿಳಿದುಬಂದಿದೆ.

swabhimananews@gmail.com

Related posts

ಸೌಜನ್ಯಾಳ ಅತ್ಯಾಚಾರ ಮತ್ತು ಹತ್ಯೆ ಪ್ರಕರಣವನ್ನು ಮರುತನಿಖೆಗೆ
ಒತ್ತಾಯಿಸಿ ಉಡುಪಿಯಲ್ಲಿ ಅಂಬೇಡ್ಕರ್ ಯುವಸೇನೆ ಮತ್ತು ಪ್ರಗತಿಪರ ಸಂಘಟನೆಗಳ ಪ್ರತಿಭಟನೆ,

Swabhimana News Desk

ಮಣಿಪಾಲ: ವೇಶ್ಯಾವಾಟಿಕೆ ದಂಧೆ – ಇಬ್ಬರ ಬಂಧನ,ಐವರು ಯುವತಿಯರ ರಕ್ಷಣೆ, ವೇಶ್ಯಾವಾಟಿಕೆ ಕಿಂಗ್ ಪಿನ್ ಖಾಲಿದ್ ಬಂಧನಕ್ಕೆ ವ್ಯಾಪಕ ಶೋಧ!

Swabhimana News Desk

ದಕ್ಷಿಣಕನ್ನಡ: ಎಳನೀರು ಕುಡಿದು ಅಸ್ವಸ್ಥ ಪ್ರಕರಣ – ಫ್ಯಾಕ್ಟರಿಗೆ ಭೇಟಿ ನೀಡಿದ ಅಧಿಕಾರಿಗಳ ತಂಡ.

Swabhimana News Desk

Leave a Comment