ಬ್ರಹ್ಮಾವರ:ಡಿಸೆಂಬರ್ -19-2025 swabhimananews.

ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಚೇರ್ಕಾಡಿ ಗ್ರಾಮಪಂಚಾಯತ್ ವ್ಯಾಪ್ತಿಯ ಪೇತ್ರಿ ಸಂತೆ ಮಾರುಕಟ್ಟೆ ಹತ್ತಿರ ರಸ್ತೆಮಾರ್ಜೀನ್ ನಲ್ಲಿ.

ಸರಕಾರಿ ಭೂಮಿಯಲ್ಲಿ ಅಕ್ರಮವಾಗಿ ನಿರ್ಮಾಣವಾಗಿರುವ ಕೆಂಪು ಕಲ್ಲು ಗೊಡೆಯ ಕಟ್ಟಡ. ಈ ಅಕ್ರಮ ಕಟ್ಟಡ ಗ್ರಾಮಪಂಚಾಯತ್ ಕಟ್ಟಡದ ಒಟ್ಟಿಗೆ ಸೇರಿಕೊಂಡು ನಿರ್ಮಾಣ ಮಾಡಲು ಅಕ್ರಮದಾರರೊಂದಿಗೆ ಒಳ ಒಪ್ಪಂದ ಮಾಡಿಕೊಂಡು ನಿರ್ಮಿಸಿರುವ ಈ ಅಕ್ರಮ ಕಟ್ಟಡ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತಿದ್ದಾರೆ.

ಈ ಕೂಡಲೇ ಈ ಅಕ್ರಮ ಕಟ್ಟಡವನ್ನು ತೆರವುಗೊಳಿಸಿ ಅಕ್ರಮದಾರರ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಂಡು ಇದಕ್ಕೆ ಸಹಕರಿಸಿದ ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಕಾರ್ಯದರ್ಶಿ ಸ್ಥಳೀಯ ಕಂದಾಯ ಅಧಿಕಾರಿಗಳ ಮತ್ತು ಸ್ಥಳೀಯ ಜನಪ್ರತಿನಿಧಿಗಳ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳುವಂತೆ

ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ
ಭೀಮವಾದ (ರಿ) ಉಡುಪಿ ಜಿಲ್ಲೆ
ಜಿಲ್ಲಾಧಿಕಾರಿಗಳಿಗೆ, ಜಿಲ್ಲಾಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ,

ಪೋಲಿಸ್ ವರಿಷ್ಠಾಧಿಕಾರಿಗಳಿಗೆ, ಬ್ರಹ್ಮಾವರ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗೆ ಹಾಗೂ ತಹಶೀಲ್ದಾರ್, ಗೆ ಚೆರ್ಕಾಡಿ ಗ್ರಾಮಪಂಚಾಯತ್ ಗೆ ಹಾಗೂ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳಿಗೆ ಲಿಖಿತವಾಗಿ ದೂರು ಸಲ್ಲಿಸಿದೆ.

ಬ್ರಹ್ಮಾವರ ತಾಲೂಕಿನ ಚೇರ್ಕಾಡಿ ಗ್ರಾಮಪಂಚಾಯತ್ ವ್ಯಾಪ್ತಿಯ ಪೇತ್ರಿ ಸಂತೆ ಮಾರುಕಟ್ಟೆ ಹತ್ತಿರ ರಸ್ತೆಮಾರ್ಜೀನ್ ನಲ್ಲಿ ಸರಕಾರಿ ಭೂಮಿಯಲ್ಲಿ ಅಕ್ರಮವಾಗಿ ಕಾನೂನು ಬಾಹಿರವಾಗಿ ನಿರ್ಮಾಣ ಮಾಡಿರುವ ಕೆಂಪು ಕಲ್ಲು ಗೊಡೆಯ ಕಟ್ಟಡದಿಂದಾಗಿ ದಿನನಿತ್ಯ ಮಾರುಕಟ್ಟೆಗೆ ಬರುವ ಸಾರ್ವಜನಿಕರಿಗೆ,

ಮಾರುಕಟ್ಟೆಗೆ ಬರುವ ವಾಹನಗಳಿಗೆ ಸಂಚರಿಸಲು ಸಾದ್ಯವೇ ಇಲ್ಲ ಎನ್ನುವ ರೀತಿಯಲ್ಲಿ ನಿರ್ಮಾಣ ಮಾಡಿದ್ದಾರೆ ಈ ಅಕ್ರಮ ಕಟ್ಟಡ.

ಈ ಹಿಂದೆ ಇದ್ದಂತಹ ಪೆಟ್ಟಿಗೆ ಅಂಗಡಿ ಇಂದು ಇಷ್ಟೊಂದು ದೊಡ್ಡ ಕಟ್ಟಡವಾಗಿ ಎದ್ದು ನಿಂತಿದೆ.ಈ ಪೆಟ್ಟಿಗೆ ಅಂಗಡಿ ಇಷ್ಟೊಂದು ದೊಡ್ಡದಾಗಿ ಬೆಳೆಯಲು ಗ್ರಾಮಪಂಚಾಯತ್ ನ ಅಭಿವೃದ್ಧಿ ಅಧಿಕಾರಿ, ಕಾರ್ಯದರ್ಶಿ, ಸಿಬ್ಬಂದಿಗಳು.
ಒಟ್ಟಾರೆಯಾಗಿ ಪಂಚಾಯತ್ ಆಡಳಿತ ಸಮಿತಿಯೇ ಇದರಲ್ಲಿ ಭಾಗಿಯಾಗಿದೆ ಎಂದು ಗ್ರಾಮಸ್ಥರು ಸ್ಪಷ್ಟವಾಗಿ ತಿಳಿಸಿದ್ದಾರೆ.

ಈ ಕೆಂಪು ಕಲ್ಲು ಗೊಡೆಯ ಅಕ್ರಮ ಕಟ್ಟಡವನ್ನು ಈ ಕೂಡಲೇ ತೆರವುಗೊಳಿಸಿ ಅಕ್ರಮದಾರರ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಂಡು ಇದಕ್ಕೆ ಸಂಪೂರ್ಣವಾಗಿ ಬೆಂಬಲವಾಗಿ ನಿಂತಿರುವ ಅಧಿಕಾರಿಗಳ ವಿರುದ್ಧ ಇಲಾಖಾ ವಿಚಾರಣೆ ನಡೆಸಬೇಕು.ಚೇರ್ಕಾಡಿ ಗ್ರಾಮಪಂಚಾಯತ್ ನ ಎದುರಲ್ಲೇ ಇಷ್ಟೊಂದು ದೊಡ್ಡ ಶಾಶ್ವತ ಕಟ್ಟಡ ನಿರ್ಮಾಣ ಆದರು ಕಣ್ಣು, ಕಿವಿ, ಬಾಯಿ. ಇದ್ದೂ ಕುರುಡರು, ಕಿವೂಡರು,ಮೂಗರಾಗಿ ಸುಮ್ಮನಿದ್ದು ಕರ್ತವ್ಯ ಲೋಪ ಎಸಗಿರುವ ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಕಾರ್ಯದರ್ಶಿ ಸಿಬ್ಬಂದಿಗಳ ವಿರುದ್ಧ ಮತ್ತು ಸ್ಥಳಿಯ ಜನಪ್ರತಿನಿಧಿಗಳ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳುವಂತೆ.

ಗ್ರಾಮಸ್ಥರು, ಸಂಘಟನೆಗಳು, ಸಾಮಾಜಿಕ ಹೋರಾಟಗಾರರು ದಲಿತ ಸಂಘಟನೆಗಳು ಆಗ್ರಹಿಸಿದೆ.ತಪ್ಪಿದಲ್ಲಿ ಈ ಅಕ್ರಮ ಕಟ್ಟಡದ ಪಕ್ಕದಲ್ಲೇ ಕಾಲಿ ಇರುವ ಗ್ರಾಮಪಂಚಾಯತ್/ ಸರಕಾರಿ ಭೂಮಿಯಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಸಮುದಾಯದವರಿಗಾಗಿ ಹೊಸ ಅಂಗಡಿ ಕೋಣೆಗಳನ್ನು ನಿರ್ಮಾಣ ಮಾಡಲಾಗುವುದು ಎಂದು ಗ್ರಾಮಸ್ಥರು, ಸಾರ್ವಜನಿಕರು, ಸಾಮಾಜಿಕ ಹೋರಾಟಗಾರರು ಎಚ್ಚರಿಕೆ ನೀಡಿದ್ದಾರೆ.ಹೋರಾಟಗಾರರ ಒತ್ತಡಕ್ಕೆ ಗ್ರಾಮ ಪಂಚಾಯತ್ ಕಾರ್ಯದರ್ಶಿ, ಹಾಗೂ ಅಧ್ಯಕ್ಷರು ಸ್ಥಳಕ್ಕೆ ಆಗಮಿಸಿ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ಸ್ಥಗಿತಗೊಳಿಸಿ ಯಥಾಸ್ಥಿತಿ ಕಾಪಾಡುವಂತೆ ಅಕ್ರಮದಾರರಿಗೆ ಮೌಖಿಕ ಆದೇಶ ಮಾಡಿದಂತೆ ಗ್ರಾಮಸ್ಥರ ಮುಂದೆ ನಾಟಕ ಪ್ರದರ್ಶನ ಮಾಡಿ ಹೋಗಿದ್ದಾರೆ.

ಸ್ಥಳದಲ್ಲಿದ್ದ ಅಕ್ರಮ ಕಟ್ಟಡ ಮಾಲಿಕ ಸಾಮಾಜಿಕ ಹೋರಾಟಗಾರರಿಗೆ ನನ್ನ ಈ ಕಟ್ಟಡಕ್ಕೆ ಇದುವರೆಗೂ ಯಾವುದೇ ಒಬ್ಬ ಅಧಿಕಾರಿಯೂ ಏನು ಹೇಳಲಿಲ್ಲ ನೀವು ಯಾರು, ಎಂದು ಆವೇಶ ಭರಿತ ಏರು ದನಿಯಲ್ಲಿ ಬೆದರಿಕೆ ಹಾಕಿದ್ದಾರೆ ಎಂದು ಸಾಮಾಜಿಕ ಹೋರಾಟಗಾರರ ಆರೋಪ.

ಮತ್ತು ರಾತ್ರಿ ಆಗುತ್ತಿದ್ದಂತೆ ರಾತ್ರಿಯ ವೇಳೆ ಈ ಅಕ್ರಮ ಕಟ್ಟಡದ ಸುತ್ತಮುತ್ತ ಹಸಿರು ಪರದೆ ಹೊದಿಸಿ ನಿರ್ಮಾಣ ಕಾಮಗಾರಿ ಭರದಿಂದ ಸಾಗುತ್ತಲೇ ಇದೆ ಎಂದು ಸಾರ್ವಜನಿಕರು ತಿಳಿಸಿದ್ದಾರೆ. ಹಾಗಾದರೆ ಈ ಪ್ರಕರಣದ ಹಿಂದೆ ಇರುವಂತಹ
ಇಷ್ಟೊಂದು ಪವರ್ ಫುಲ್ ಶಕ್ತಿಯಾದರೂ ಯಾವುದು ಎಂದು ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಕಾರ್ಯದರ್ಶಿ, ಗ್ರಾಮ ಪಂಚಾಯತ್ ಸಮಿತಿ ಉತ್ತರಿಸಬೇಕು.

Swabhimananews
