19.1 C
New York
13 September 2024
Coastal

ಹೆಣದಿಂದ ಹಣ.
ಮಾಜಿ ಗ್ರಾಮಪಂಚಾಯತ್ ಅಧ್ಯಕ್ಷ ಹಾಲಿ ಪಂಚಾಯತ್ ಅಧ್ಯಕ್ಷೆ ಸೇರಿ ನಾಲ್ವರ ವಿರುದ್ದ ಲೋಕಾಯುಕ್ತಕ್ಕೆ ದೂರು.

ಆಗಸ್ಟ್ -09-2023 swabhimananews@gmail.com
ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ 21ನೇ ಆರೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಇರುವ ಸರಕಾರಿ ಭೂಮಿ ಸ ನಂ 243/1ರಲ್ಲಿ 1.06 ಭೂಮಿಯಲ್ಲಿ .ಸಾರ್ವಜನಿಕರ ಉಪಯೋಗಕ್ಕಾಗಿ ಸ್ಮಶಾನ ನಿರ್ಮಾಣ ಮಾಡುವ ಬಗ್ಗೆ ಗ್ರಾಮ ಪಂಚಾಯತ್ ಸಮಿತಿ ತಿರ್ಮಾನಿಸಿ. ಈ ಬಗ್ಗೆ ಸಭೆ ನೆಡೆಸಿ ಸ್ಮಶಾನ ಅಭಿವೃಧಿ ಸಮಿತಿ ಆರೂರು ಹೆಸರಿನಲ್ಲಿ.

ಸಮಿತಿಯನ್ನು ನೇಮಕ ಮಾಡುವ ಬಗ್ಗೆ ತೀರ್ಮಾನಿಸಲಾಗಿತ್ತು.
ಈ ಸಮಿತಿಗೆ 2017-18 ರಲ್ಲಿ ಗ್ರಾಮ ಪಂಚಾಯತ್‌ ಅಧ್ಯಕ್ಷರಾಗಿದ್ದ ರಾಜೀವ್ ಕುಳಾಲ್ ಇವರನ್ನು ಅಧ್ಯಕ್ಷರನ್ನಾಗಿ ಹಾಗೂ 10 ಜನ ಆಡಳಿತ ಮಂಡಳಿಯ ಸದಸ್ಯರನ್ನಾಗಿ ಆಯ್ಕೆ.

ದಿನಾಂಕ 05-10-2018ರಂದು ಈ ಸಮಿತಿಯು ಸಭೆ ನೆಡೆಸಿ ಸಮಿತಿ ಹೆಸರಿನಲ್ಲಿ ರಶೀದಿ ಪುಸ್ತಕ ಬಿಲ್ಲು ಪುಸ್ತಕ,ಮತ್ತು ಒಚ‌ರ್ ಮತ್ತು ಸಾರ್ವಜನಿಕ ದೇಣಿಗೆ ಪುಸ್ತಕ ಮುದ್ರಿಸುವುದು ಎಂದು ತೀರ್ಮಾನಿಸಿ.

ಸ್ಮಶಾನ ಅಭಿವೃದ್ಧಿ ಸಮಿತಿಯ ಹೆಸರಿನಲ್ಲಿ ಸಾರ್ವಜನಿಕರಿಂದ ವಂತಿಗೆ ಹಣ ಸೇರಿದಂತೆ ಸಾರ್ವಜನಿಕರಿಂದ ಶವ ಸಂಸ್ಕಾರದ ಬಗ್ಗೆ ವಸೂಲಿ ಮಾಡಿರುವ ಮೊತ್ತದ ಜೊತೆಯಲ್ಲಿ ಸರಕಾರದ ವಿವಿಧ ಯೋಜನೆಗಳಾದ ವರ್ಗ 1ರ ನಿಧಿ 14ನೇ ಹಣಕಾಸು ನಿಧಿ, ಜಿಲ್ಲಾ ಪಂಚಾಯತ್ ಶಾಸನಬದ್ಧ ನಿಧಿ, ಶಾಸಕರ ನಿಧಿ, ಸಂಸದರ ನಿಧಿ, ಜಿಲ್ಲಾ ಪಂಚಾಯತ್ ಅನಿರ್ಬಂಧಿತ ನಿಧಿ, ತಾಲೂಕು ಪಂಚಾಯತ್ ನಿಧಿ,
ಧಾರ್ಮಿಕ ದತ್ತಿ ಇಲಾಖೆಯ ನಿಧಿ ಸೇರಿದಂತೆ ಒಟ್ಟು 33 ಲಕ್ಷದ 40,000/- ರೂಪಾಯಿ ಅನುದಾನವನ್ನು ಈ ಆರೂರು ಸ್ಮಶಾನ ಅಭಿವೃದ್ಧಿಯ ಹೆಸರಿನಲ್ಲಿ ಮಂಜೂರು ಮಾಡಿಕೊಂಡಿರುವ ಬಗ್ಗೆ. ದಾಖಲೆಗಳು ಸ್ಪಷ್ಟಪಡಿಸುತ್ತದೆ.ಇನ್ನು ದಾಖಲೆಗಳೆ ಇಲ್ಲದೆ ಯಾವ ಯಾವ ರೀತಿಯಲ್ಲಿ ಎಷ್ಟೆಷ್ಟು ಅನುದಾನವನ್ನು ಅಕ್ರಮವಾಗಿ ಬಳಸಲಾಗಿದೆ ಎನ್ನುವ ಬಗ್ಗೆ ತನಿಖೆಯಾಗಬೇಕು.

ಈ ಅನುದಾನದಲ್ಲಿ ಧಾರ್ಮಿಕ ದತ್ತಿ ಇಲಾಖೆ ಉಡುಪಿ ಜಿಲ್ಲೆ ಇದರ ಆಯುಕ್ತರಿಗೆ.ಸ್ಮಶಾನ ಅಭಿವೃಧಿಯ ಸಮಿತಿಯ ಅಧ್ಯಕ್ಷರು 16-03-20222ರಂದು ಅಫಿದಾವಿತ್‌ ಮೂಲಕ ಪ್ರಮಾಣಿಕರಿಸಿ ಸ .ನಂ 243-ಸಿ1 ರಲ್ಲಿ ಇರುವ ಸ್ಮಶಾನವನ್ನು ಖಾಸಗಿ ದೇವಸ್ಥಾನವಾಗಿದೆ ಅಂತ ಸುಳ್ಳು, ನಕಲಿ ಪ್ರಮಾಣಪತ್ರ ನೀಡಿ ಸರಕಾರದ 5, ಲಕ್ಷ ರೂಪಾಯಿ ಅನುದಾನ ಪಡೆಯಲಾಗಿದೆ.

ಈ ಅನುದಾನವು ದಿನಾಂಕ 01-04-2022ರಂದು ಧಾರ್ಮಿಕ ದತ್ತಿ ಇಲಾಖೆಯ ಬ್ಯಾಂಕ್ ಖಾತೆ ಹೊಂದಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಉಡುಪಿ ಶಾಖೆಯ ಚೆಕ್‌ ನಂಬ್ರ 117660 ಮೂಲಕ ಸ್ಮಶಾನ ಅಭಿವೃದ್ಧಿ ಸಮಿತಿಯ ಹೆಸರಿನಲ್ಲಿರುವ ಕಾರ್ಪೋರೇಷನ್ ಬ್ಯಾಂಕ್ ಆರೂರು ಬ್ಯಾಂಕ್ ಖಾತೆಗೆ ಜಮಾ ಆಗುತ್ತದೆ.

ದಿನಾಂಕ 11-04-2022 ರಂದು ಸ್ಮಶಾನ ಅಭಿವೃದ್ಧಿ ಸಮಿತಿಯ ಅಧ್ಯಕ್ಷರು ಸಹಿಮಾಡಿ. ಸೆಲ್ಫ್ ಚೆಕ್ ನಂಬ್ರ 360991 ಮೂಲಕ 5,00,00,000/- ರೂಪಾಯಿ ಡ್ರಾ ಮಾಡಲಾಗುತ್ತದೆ. ಈ ಹಿಂದೆ 2017-18ರಲ್ಲಿ ಲೋಕೋಪಯೋಗಿ ಇಲಾಖೆಯೂ ಆರೂರು ಸ್ಮಶಾನ ಅಭಿವೃದ್ಧಿ ಕಾಮಗಾರಿಗೆ ಒಟ್ಟು 20,00,000/- ಅಂದಾಜು ಪಟ್ಟಿಮಾಡಿರುತ್ತದೆ.

ಮತ್ತು ಧಾರ್ಮಿಕ ದತ್ತಿ ಇಲಾಖೆಯ ಅನುದಾನ ಪಡೆಯುವ ಮೊದಲೇ ಈ ಪ್ರದೇಶದಲ್ಲಿ ಎಲ್ಲಾ ಸೌಕರ್ಯಗಳನ್ನು ಒಳಗೊಂಡ ಸ್ಮಶಾನವು ನಿರ್ಮಾಣವಾಗಿತ್ತು. ಎಂದು ಕಂದಾಯ ಅಧಿಕಾರಿಗಳು ವರದಿ ನೀಡಿರುತ್ತಾರೆ. ಸದ್ರಿ ಅನುದಾನ ಪಡೆಯುವುದರ ಜೊತೆಯಲ್ಲಿ ಇದಕ್ಕೆ ಸಂಬಂಧ ಪಟ್ಟ ದಾಖಲೆಗಳನ್ನು ನಾಶಪಡಿಸಲಾಗಿದೆ.

ಆದುದರಿಂದ ಈ ಕೆಳಗಿನ 4 ಜನರ ವಿರುದ್ಧ ಅಧಿಕಾರ ದುರುಪಯೋಗ, ಕರ್ತವ್ಯ ಲೋಪ, ಸಾಕ್ಷಿ ನಾಶ, ಸರಕಾರದ ಅನುದಾನ ದುರ್ಬಳಕೆ, ಸರಕಾರಿ ನೌಕರರಿಗೆ ತರವಲ್ಲದ ರೀತಿಯಲ್ಲಿ ವರ್ತಿಸಿರುವುದು,ಅಧಿಕಾರ ದುರ್ಬಳಕೆ ಮಾಡಿಕೊಂಡು ಅವ್ಯವಹಾರ ನಡೆಸಿರುವುದು ದಾಖಲೆಗಳಿಂದ ಕಂಡು ಬರುತ್ತಿದೆ. ಇದು ಮೇಲ್ನೋಟಕ್ಕೆ ಆರೋಪ ಸಾಬೀತಾದಂತಾಗುತ್ತದೆ. ಆದುದ್ದರಿಂದ ಇಲ್ಲಿ ಹೆಸರಿಸಲಾದ.

  1. ಶ್ರೀ ರಾಜೀವ ಕುಲಾಲ್‌ ಮಾಜಿ ಅಧ್ಯಕ್ಷರು ಹಾಲಿ ಸದಸ್ಯರು ಮತ್ತು ಸ್ಮಶಾನ ಅಭಿವೃದ್ಧಿಯ ಅಧ್ಯಕ್ಷರು 2018 ರಿಂದ 2023 ರವರೆಗೆ ಇವರ ಅವಧಿಯಲ್ಲಿ ಸ್ಮಶಾನದ ಈ ಹಗರಣವು ನಡೆದಿರುತ್ತದೆ. 2018-19 ರಿಂದ 2021 ರವರೆಗೆ ಇವರು ಪಂಚಾಯತ್‌ ಅಧ್ಯಕ್ಷರಾಗಿರುತ್ತಾರೆ.
  2. ಉಡುಪಿ ಜಿಲ್ಲೆಯ ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತರಾಗಿ ಈ ಹಿಂದೆ ಸೇವೆ ಸಲ್ಲಿಸಿರುವ ರವೀಂದ್ರ ಇವರು ಸ್ಮಶಾನ ಅಭಿವೃದ್ಧಿ ಸಮಿತಿಯ ಹೆಸರಿನಲ್ಲಿ. ಖಾಸಗಿ ದೇವಸ್ಥಾನ ಎಂದು ಅಫಿದಾವಿತ್ ನೀಡಿದರು. ಚೆಕ್‌ ನೀಡುವಾಗ ಇಲಾಖೆಯ ನಿಯಮಗಳನ್ನು ಪಾಲನೆ ಮಾಡದೆ ಸರ್ಕಾರದ 5 ಲಕ್ಷ ಅನುದಾನ ದುರ್ಬಳಕೆ ಮಾಡುವಲ್ಲಿ ಸಹಕರಿಸಿರುತ್ತಾರೆ.

3, ಉಡುಪಿ ಜಿಲ್ಲಾ ಪಂಚಾಯತ್ ಇಂಜಿನಿಯರ್ ವಿಭಾಗದ ಇಂಜಿನಿಯರ್ ಆಗಿರುವ ಶಶಿಧ‌ರ್. ಇವರು ಆರೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಸ್ಮಶಾನದ ಕಾಮಗಾರಿಗಳಿಗೆ ನಕಲಿ ಅಂದಾಜು ಪಟ್ಟಿ ತಯಾರಿಸಿ.ಅನುದಾನಗಳನ್ನು ಬಿಡುಗಡೆ ಮಾಡುವ ಬಗ್ಗೆ ನಕಲಿ ದಾಖಲೆಗಳನ್ನು ನೀಡುವುದರ ಮೂಲಕ ಸರ್ಕಾರದ ಖಜಾನೆಗೆ ನಷ್ಟ ಉಂಟು ಮಾಡಿ ಕರ್ತವ್ಯ ಲೋಪವೆಸಗಿರುತ್ತಾರೆ.

  1. ಆರೂರು ಗ್ರಾಮ ಪಂಚಾಯತ್‌ನ ಪ್ರಸ್ತುತ ಅಧ್ಯಕ್ಷರಾಗಿರುವ ಹಾಲಿ ಸದಸ್ಯರಾಗಿರುವ ಮಮತಾ ಸಂತೋಷ್ ಶೆಟ್ಟಿ. ಇವರು ಅರೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಸ್ಮಶಾನ ಅಭಿವೃದ್ಧಿ ಸಮಿತಿಯ ಹೆಸರಿಗೆ. ಧಾರ್ಮಿಕ ದತ್ತಿ ಇಲಾಖೆಯಿಂದ 5 ಲಕ್ಷ ರೂಪಾಯಿ ಅನುದಾನ ಬಿಡುಗಡೆಯಾಗಿ ಅದನ್ನು ಸೆಲ್ಫ್ ಚೆಕ್ ಮೂಲಕ ಡ್ರಾ ಮಾಡಿರುವುದು ಗೊತ್ತಿದ್ದು, ಸರಕಾರದ ಅನುದಾನ ದುರ್ಬಳಕೆ: ಆಗುತ್ತಿರುವ ಬಗ್ಗೆ ಸರ್ಕಾರದ ಗಮನಕ್ಕಾಗಲಿ ಮೇಲಾಧಿಕಾರಿಗಳ ಗಮನಕ್ಕಾಗಲಿ ತಾರದೆ ಈ ಹಗರಣವನ್ನು ಮುಚ್ಚಿ ಹಾಕಲು ತನ್ನ ಹುದ್ದೆಯ ಪ್ರಭಾವವನ್ನು ಬಳಸಿಕೊಂಡು ಇವರಿಗೆ ಸಹಕಾರ ನೀಡಿರುತ್ತಾರೆ. ಇವರ ಅವಧಿಯಲ್ಲಿ ಈ 5 ಲಕ್ಷ ರೂಪಾಯಿ ಅನುದಾನ ಬಂದಿರುತ್ತದೆ.ಆದುದರಿಂದ ಇವರ
    ಮೇಲೆ ಕಠಿಣ ಕಾನೂನು ಕ್ರಮ ಕೈಗೊಂಡು, ಕ್ರಿಮಿನಲ್‌ ಪ್ರಕರಣ ದಾಖಲಿಸುವಂತೆ, ಹಾಗೂ ಪಂಚಾಯತ್ ಸದಸ್ಯರಾಗಿರುವ ಇಬ್ಬರನ್ನು ಪಂಚಾಯತ್‌ ಸದಸ್ಯತ್ವದಿಂದ ವಜಾಗೊಳಿಸಬೇಕೆಂದು, ಜಿಲ್ಲಾ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ಹೋರಾಟ ವೇದಿಕೆ (ರಿ.) ಉಡುಪಿ ಜಿಲ್ಲೆ. ಮಾನ್ಯ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ.

swabhimananews@gmail.com

Related posts

ಕಾಲೇಜು ವಿಡಿಯೋ ಪ್ರಕರಣ: ಸ್ವತಂತ್ರ ತನಿಖೆಯ ನಿಟ್ಟಿನಲ್ಲಿ ಸಿಐಡಿ ಗೆ ಹಸ್ತಾಂತರ. ಲಕ್ಷ್ಮೀ ಹೆಬ್ಬಾಳ್ಕರ್

Swabhimana News Desk

ದಕ್ಷಿಣಕನ್ನಡ: ಎಳನೀರು ಕುಡಿದು ಅಸ್ವಸ್ಥ ಪ್ರಕರಣ – ಫ್ಯಾಕ್ಟರಿಗೆ ಭೇಟಿ ನೀಡಿದ ಅಧಿಕಾರಿಗಳ ತಂಡ.

Swabhimana News Desk

ಶ್ರೀಪತಿ ಅಸೋಶಿಯೇಟ್ಸ್ ಪ್ರೈವೇಟ್ ಲಿಮಿಟೆಡ್ ನ ಅಕ್ರಮ.ತೂಕ ಮತ್ತು ಮಾಪನ ಇಲಾಖೆ ಅಧಿಕಾರಿಗಳು ಕುಳಾಯಿ ಬಂದರು ಕಾಮಗಾರಿ ಪ್ರದೇಶಕ್ಕೆ ದಿಡೀರ್ ದಾಳಿ.

Swabhimana News Desk

Leave a Comment