17.3 C
New York
8 September 2024
Coastal

ಉಡುಪಿ ಜಿಲ್ಲೆಯ. ಬೈಂದೂರು ತಾಲೂಕಿನಾದ್ಯಂತ. ಅಕ್ರಮ ಕೆಂಪು ಕಲ್ಲು ಗಣಿಗಾರಿಕೆ,ಕೋಟ್ಯಾಂತರ ರೂಪಾಯಿ ಸರಕಾರಕ್ಕೆ ವಂಚನೆ, ದಲಿತರಿಗೆ ಮೀಸಲಿಟ್ಟ ಡಿ ಸಿ ಮನ್ನಾ ಭೂಮಿಯನ್ನು,ಹಾಗೂ ಬಹುಕೋಟಿ ರೂಪಾಯಿ ಮೌಲ್ಯದ ಸರಕಾರಿ
ಭೂಮಿ.ಲೂಟಿ ಹೊಡೆದರೂ,ಎಷ್ಟೇ ದೂರು ನೀಡಿದರು. ಕಣ್ಣ್ ಮುಚ್ಚಿ ಕುಳಿತ ಇಲಾಖೆಗಳ ಅಧಿಕಾರಿಗಳು.

ಏಪ್ರಿಲ್ -11-2024 swabhimananews@gmail.com

ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನಾದ್ಯಂತ ಅಕ್ರಮ ಕೆಂಪು ಕಲ್ಲು ಗಣಿಗಾರಿಕೆಯಿಂದ ಕೋಟ್ಯಾಂತರ ರೂಪಾಯಿ ಸರಕಾರಕ್ಕೆ ವಂಚನೆ ಹಾಗೂ ಸಾವಿರಾರು ಕೋಟಿ ರೂಪಾಯಿ ಬೆಲೆಬಾಳುವ
ಸರಕಾರಿ/ ಅರಣ್ಯ/ ಗೋಮಾಳ/ ದಲಿತರಿಗೆ ಮೀಸಲಿಟ್ಟ ಡಿ.ಸಿ ಮನ್ನಾ ಭೂಮಿಯನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ಅದರಲ್ಲಿ ಅಕ್ರಮವಾಗಿ ಕೋಟ್ಯಾಂತರ ರೂಪಾಯಿ ಮೌಲ್ಯದ ಕೆಂಪುಕಲ್ಲು ಅಕ್ರಮವಾಗಿ ಗಣಿಗಾರಿಕೆ ನಡೆಸುತ್ತಿರುವುದು.ಇಂದುನಿನ್ನೆಯಲ್ಲ

ಕಾನೂನು, ನಿಯಮಾವಳಿ, ಸರಕಾರದ ಆದೇಶಗಳು. ಕೇವಲ ಬಡವರಿಗೆ, ನಿರ್ಗತಿಕರಿಗೆ,ತಿಳಿವಳಿಕೆ ಇಲ್ಲದವರಿಗೆ ಮಾತ್ರ ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಆದೇಶ ಮಾಡುವ ಹೊಲಸು ರಾಜಕಾರಣಿಗಳೇ, ಭ್ರಷ್ಟ ಅಧಿಕಾರಿಗಳೇ. ಇಂತಹ ಬಹುದೊಡ್ಡ ಅಕ್ರಮದಲ್ಲಿ ಸಂಬಂಧಪಟ್ಟ.ಕೆಲವು ಅಧಿಕಾರಿಗಳು ,ಇಲಾಖೆಗಳು ಪಾಲುದಾರರು ಎನ್ನುವುದನ್ನು ಸಾಬೀತು ಪಡಿಸಿದ್ದಾರೆ.

ಉಡುಪಿ ಜಿಲ್ಲೆಯ ಕೆಲವು ಅಧಿಕಾರಿಗಳು.ಬೈಂದೂರು ತಾಲೂಕಿನಲ್ಲಿ ಜನವಿರೋಧಿ, ಕಾನೂನು ಬಾಹಿರವಾಗಿ ಸರಕಾರಿ ಭೂಮಿಯಲ್ಲಿ ಅಕ್ರಮವಾಗಿ ಕೆಂಪುಕಲ್ಲು ಗಣಿಗಾರಿಕೆ ನಡೆಸಿ.ಈಡೀ ಬೈಂದೂರು ತಾಲೂಕನ್ನೆ ಸಂಪೂರ್ಣ ಅಕ್ರಮವಾಗಿ ಒತ್ತುವರಿ ಮಾಡಿಕೊಂಡ.ಅಕ್ರಮ ಕೆಂಪು ಕಲ್ಲು ದಂಧೆಕೋರರು.ಇದು ಕಸ್ತೂರಿ ರಂಗನ್ ವರದಿ ವ್ಯಾಪ್ತಿಯ ತಾಲೂಕಾಗಿದೆ. ಇಲ್ಲಿ ದಿನನಿತ್ಯ ನೂರಾರು ಕಾಡು ಪ್ರಾಣಿಗಳು, ಪಕ್ಷಿಗಳು ನಾಶವಾಗುತ್ತಿದೆ.ಹಾಗೂ ಈ ಅಕ್ರಮ ಕೆಂಪುಕಲ್ಲು ಗಣಿಗಾರಿಕೆಯ ದೂಳು, ಕಲ್ಲು ಕಟ್ಟಿಂಗ್ ಮಾಡುವ ಬೃಹತ್ ಯಂತ್ರಗಳ ಬೃಹತ್ ಶಬ್ದ, ದಿನನಿತ್ಯ ಅಕ್ರಮವಾಗಿ ಕೆಂಪುಕಲ್ಲು ತುಂಬಿಕೊಂಡು ಓಡಾಡುವ ನೂರಾರು ಲಾರಿ, ಟೆಂಪೋಗಳ ಶಬ್ದ , ಕರ್ಕಶ ಹಾರ್ನ್ ಶಬ್ದ, ಹೊಗೆ.ಇಡೀ ಬೈಂದೂರು ತಾಲೂಕಿನ ಜನರನ್ನೆ ದಿಗ್ಭ್ರಮೆ ಗೊಳಿ‌ಸಿರುವುದು ಮಾತ್ರ ಅಕ್ಷರಶಃ ಸತ್ಯ,

ಇಲ್ಲಿ ಆಗುತ್ತಿರುವ ನಾನ ರೀತಿಯ ಸಮಸ್ಯೆಗಳನ್ನು. ಯಾರು ಕೇಳೋರಿಲ್ಲ, ಹೇಳೋರಿಲ್ಲ.ಇಲ್ಲಿನ ಜನರಿಗೆ ಬರಬಹುದಾದ ರೋಗ ರುಜಿನಗಳಿಂದ ರಕ್ಷಿಸುವಂತೆ ಕೋರಿ. ಹಾಗೂ ಅಕ್ರಮದಾರರ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮವಾದ (ರಿ)ಮತ್ತು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ ಉಡುಪಿ ಜಿಲ್ಲೆ. 

ಸಂಭಂದಪಟ್ಟ ಇಲಾಖೆಗಳ ಅಧಿಕಾರಿಗಳಿಗೆ ಅನೇಕ ಲಿಖಿತವಾಗಿ,ಮೌಖಿಕವಾಗಿ, ಫೋನ್ ಮೂಲಕ ದೂರು ನೀಡಿದ್ದರು ಇದುವರೆಗೆ ಯಾವುದೇ ರೀತಿಯ ಕಾನೂನು ಕ್ರಮ ಕೈ ಗೊಂಡಿಲ್ಲ.
ಉಡುಪಿ ಜಿಲ್ಲೆಯ ಬೈಂದೂರು‌ ತಾಲೂಕಿನ ಶೀರೂರು, ಯಡ್ತಾರೆ, ಬೈಂದೂರು,ಗೋಳಿಹೊಳೆ, ಕಾಲ್ತೋಡು,ಹೇರೂರು,ಜಡ್ಕಲ್, ಮುದೂರು,ಹಾಲ್ಗಲ್,ಆಲೂರು, ಹರ್ಕೂರು,ಗಂಗನಾಡು ಹಾಗೂ ಇಡೀ ಬೈಂದೂರು ತಾಲೂಕಿನಾದ್ಯಂತ ಎಲ್ಲೆಂದರಲ್ಲಿ ಸರಕಾರಿ‌, ಅರಣ್ಯ ,ಗೋಮಾಳ ಹಾಗೂ ದಲಿತರಿಗೆ ಮೀಸಲಿಟ್ಟ‌ ಡಿಸಿಮನ್ನಾ ಭೂಮಿಯಲ್ಲಿ ರಾತ್ರಿ ಹಗಲು ಎನ್ನದೆ ನಿರಂತರವಾಗಿ ದಿನನಿತ್ಯ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಕೆಂಪುಕಲ್ಲು ಅಕ್ರಮವಾಗಿ ಗಣಿಗಾರಿಕೆ ನಡೆಸಿ ಸಾಗಾಟ ಮಾಡುತ್ತಿದ್ದಾರೆ.ಹಾಗೂ ಅದಕ್ಕೂ ಮುಂಚೆ ಆ ಸರಕಾರಿ ಭೂಮಿಯಲ್ಲಿ ಇದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಬೆಲೆಬಾಳುವ ಮರಗಳನ್ನು ಅಕ್ರಮವಾಗಿ ಕಡಿದು ಸಾಗಾಟ ಮಾಡುತ್ತಿದ್ದಾರೆ.

ಈ ಬಗ್ಗೆ ದಲಿತ
ಸಂಘಟನೆಗಳು ಅದೆಷ್ಟೋ ಬಾರಿ ದೂರು ನೀಡಿದರು ಇದುವರೆಗೆ ಯಾವುದೇ ರೀತಿಯ ಕಾನೂನು ಕ್ರಮ ಕೈಗೊಂಡಿರುವುದಿಲ್ಲ.ಇದರಲ್ಲಿ ಸಂಬಂಧಪಟ್ಟ ಎಲ್ಲಾ ಇಲಾಖೆಗಳ ಹೆಚ್ಚಿನ ಅಧಿಕಾರಿಗಳು, ಸಿಬ್ಬಂದಿಗಳೂ ಪಾಲುದಾರರೆಂದು.ಬೈಂದೂರು ತಾಲೂಕಿನ ಹೆಚ್ಚಿನ ಜನರು ಬಹಿರಂಗವಾಗಿ ಆಡಿಕೊಳ್ಳುತ್ತಿದ್ದಾರೆ.ಈ ಬೈಂದೂರು ತಾಲೂಕಿನಲ್ಲಿ ಎಲ್ಲೆಂದರಲ್ಲಿ ನಿರಂತರವಾಗಿ ಅಕ್ರಮ ಕೆಂಪುಕಲ್ಲು ಗಣಿಗಾರಿಕೆ ಮತ್ತು ಸಾಗಾಟದಿಂದ ಸ್ಥಳೀಯ ನಿವಾಸಿಗರಿಗೆ ನಾನಾ ರೀತಿಯ ಸಮಸ್ಯೆ,ರೋಗ ರುಜಿನಗಳು ಬರುತ್ತಿದ್ದು ಈ ಬಗ್ಗೆ
ಯಾವುದೇ ಇಲಾಖೆ ಕೂಡ ಗಮನವೇ ಹರಿಸುತ್ತಿಲ್ಲ.
ಗಣಿ ಮತ್ತು ಭೂವಿಜ್ಞಾನ ಇಲಾಖೆ ,ಅರಣ್ಯ ಇಲಾಖೆ , ಕಂದಾಯ ಇಲಾಖೆ,ಪರಿಸರ ಇಲಾಖೆ, ಹಾಗೂ ಸಂಬಂಧಪಟ್ಟ ಎಲ್ಲರೂ.ಈ ಅಕ್ರಮ ದಂಧೆಕೋರರಿಗೆ ಬೆನ್ನೆಲುಬಾಗಿ ಕಾವಲು ಕಾಯುತ್ತಿದ್ದಾರೆ.ಎಂದು ಸ್ಥಳೀಯರು ಗಂಭೀರವಾಗಿ ಆರೋಪಿಸುತ್ತಿದ್ದಾರೆ.

ಇಲ್ಲಿ ಕೆಂಪುಕಲ್ಲು ಗಣಿಗಾರಿಕೆ ನಡೆಸುವವರಿಗೆ ಯಾವುದೇ ರೀತಿಯ ಪರವಾನಗಿ,ಅನುಮತಿ ಇರುವುದಿಲ್ಲ.ಅನುಮತಿ/ಪರವಾನಗಿ/ಲೈಸೆನ್ಸ್.ನೀಡಲು ಕಾನೂನಿನಲ್ಲಿ ಅವಕಾಶವೇ ಇಲ್ಲ ಒಂದು ವೇಳೆ ಅಂತಹ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆ ನಡೆಸಿದರೆ ಅಂತವರ ವಿರುದ್ಧ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸುವಂತೆ ಕಾಯ್ದೆಯಲ್ಲಿ ತಿಳಿಸಲಾಗಿದೆ.ಹಾಗೂ ಬೈಂದೂರು ತಾಲೂಕಿನ ಹೆಚ್ಚಿನ ವ್ಯಾಪ್ತಿಯು ಸಂಪೂರ್ಣ ಕಸ್ತೂರಿ ರಂಗನ್ ವರದಿ ವ್ಯಾಪ್ತಿಗೆ ಬರುತ್ತದೆ.ಆದರೂ ಈ ವ್ಯಾಪ್ತಿಯಲ್ಲಿ ನಿರಂತರವಾಗಿ
ಅಕ್ರಮ ಗಣಿಗಾರಿಕೆ ನಡೆಯುತ್ತಲೇ ಇದೆ.ಕೆಲವೊಬ್ಬರಲ್ಲಿ ವಿಚಾರಿಸಿದಾಗ ನಮ್ಮ ಪಟ್ಟಾಭೂಮಿಯಲ್ಲಿ ಕಲ್ಲು ಗಣಿಗಾರಿಕೆ ನಡೆಸುತ್ತೇವೆ ಇದನ್ನು ಕೇಳಲು ನೀವ್ಯಾರು ಎಂದು ಸ್ಥಳೀಯ ಸಾಮಾಜಿಕ ಹೋರಾಟಗಾರರಿಗೆ ಬೆದರಿಕೆ ಒಡ್ಡುತ್ತಾರೆ ಎಂಬ ಆರೋಪವೂ ಇದೆ.

ಪಟ್ಟಾಭೂಮಿ ಎಂದರೆ ಸರಕಾರ ಅಕ್ರಮ ಸಕ್ರಮದಡಿಯಲ್ಲಿ ಕೃಷಿಗಾಗಿ. ಭೂಮಿಯನ್ನು ಮಂಜೂರು ಮಾಡಿದ್ದೇ ಹೊರತು.

ಅಕ್ರಮ ಗಣಿಗಾರಿಕೆ ನಡೆಸಿ.ಅದರಲ್ಲಿದ್ದ ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ಮರಗಳನ್ನು ಕಡಿದು ಖನಿಜ ಸಂಪತ್ತು ಅಕ್ರಮವಾಗಿ ಮಾರಾಟ ಮಾಡಿ ಆ ಹೊಂಡಕ್ಕೆ ಮತ್ತೆ ಮಣ್ಣು ತುಂಬಿಸಿ

ಆ ಭೂಮಿಯನ್ನು ಬೇರೆಯವರಿಗೆ ಕೋಟ್ಯಾಂತರ ರೂಪಾಯಿಗೆ ಮಾರಾಟ ಮಾಡಲೆಂದು ಕೃಷಿ ಭೂಮಿ ಮಂಜೂರು ಮಾಡಿದ್ದು ಅಲ್ಲ.

ಇದು ಬಹಳ ಗಂಭೀರವಾದ ವಿಷಯ ಮತ್ತು ಕಳೆದ ಬಾರಿ ಕೆಲವರು ಭೂ ಮಂಜೂರಾತಿ ಕಾಯ್ದೆಯ 94 ಸಿ ರಡಿಯಲ್ಲಿ. ಅಕ್ರಮವಾಗಿ 09 ಸೆಂಟ್ಸ್ ಭೂಮಿ ಮಂಜೂರು ಮಾಡಿಕೊಂಡು ಅದರ ಸುತ್ತ ಮುತ್ತ ಹತ್ತಾರು ಎಕರೆ ಸರಕಾರಿ ಅರಣ್ಯ,ಗೋಮಾಳ ,ಭೂಮಿಯನ್ನು ಒತ್ತುವರಿ ಮಾಡಿಕೊಂಡು ಅದರಲ್ಲಿ ಇದ್ದಂತಹ ಬೃಹತ್ ಗಾತ್ರದ ಲಕ್ಷಾಂತರ ರೂಪಾಯಿ ಮೌಲ್ಯದ ಉತ್ತಮ ತಳಿಯ ಮರಗಳನ್ನು ಕಡಿದು ಸಾಗಾಟ ಮಾಡಿ ಕಾಟು ಮರಗಳನ್ನು ಅಲ್ಲೇ ಜೆಸಿಬಿ , ಹಿಟಾಚಿ ಗಳಿಂದ ಬೃಹತ್ ಕಂದಕ ನಿರ್ಮಾಣ ಮಾಡಿ ಅದಕ್ಕೆ ಹಾಕಿ ಆ ಭೂಮಿಯಲ್ಲಿ ಅಕ್ರಮವಾಗಿ ಕೆಂಪುಕಲ್ಲು ಗಣಿಗಾರಿಕೆ ನಡೆಸಿರುವುದು/ ನಡೆಸುತ್ತಿರುವುದು.ಸಾಕ್ಷಿ ಸಮೇತ ಬೈಂದೂರು ತಾಲೂಕಿನಾದ್ಯಂತ ಕಾಣಸಿಗುತ್ತದೆ.ಈ ಹಿಂದೆ ಅಕ್ರಮ ಸಕ್ರಮದಡಿ ಕೃಷಿ ಭೂಮಿ ಮಂಜೂರು ಮಾಡುವಾಗ
ಮಂಜೂರಾತಿ ಆದೇಶದಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ.ಕೃಷಿಗಾಗಿ ಮಂಜೂರು ಮಾಡಿರುವ ಭೂಮಿಯಲ್ಲಿ ಯಾವುದೇ ರೀತಿಯ ಕೃಷಿಯೇತರ ಚಟುವಟಿಕೆ ನಡೆಸಿದರೆ ಸದ್ರಿ ಮಂಜೂರಾತಿಯನ್ನು ರದ್ದು ಗೊಳಿಸಿ ಭೂಮಿಯನ್ನು ಸರಕಾರ ವಾಪಾಸು ಪಡೆದುಕೊಳ್ಳುವಂತೆ ತಿಳಿಸಲಾಗಿದೆ.

ಆದರೂ ಈ ಕಾನೂನನ್ನು ಕಾಯ್ದೆಗಳನ್ನು ಗಾಳಿಗೆ ತೂರಿ ತಮ್ಮ ತಮ್ಮ ರಾಜಕೀಯ ಬೆಂಬಲ,ಹಣಬಲ, ತೋಳ್ಬಲ, ದುರಹಂಕಾರದಿಂದ
ಕಾನೂನಿಗಿಂತಲೂ ನಾವೇ ಅತೀತರೆಂದು ಅಕ್ರಮವಾಗಿ ನಿರಂತರ ಕೆಂಪುಕಲ್ಲು ಗಣಿಗಾರಿಕೆ
ನಡೆಸಿ ಸರ್ಕಾರಕ್ಕೆ ಕೋಟ್ಯಾಂತರ ರೂಪಾಯಿ ರಾಜಧನ,ಇತರ ಶುಲ್ಕಗಳನ್ನು ವಂಚಿಸಿದ್ದು ಮಾತ್ರವಲ್ಲದೆ ದಲಿತರಿಗೆ ಮಂಜೂರು ಮಾಡಲು ಕಾದಿರಿಸಿದ ಡಿ.ಸಿ ಮನ್ನಾ ಭೂಮಿಯನ್ನೂ ಬಿಡದೆ ಅಕ್ರಮವಾಗಿ ಕೆಂಪುಕಲ್ಲು ಗಣಿಗಾರಿಕೆ ನಡೆಸಿ ಇಡೀ ಬೈಂದೂರು ತಾಲೂಕನ್ನೆ ಸಂಪೂರ್ಣ ನಾಶ ಮಾಡುತ್ತಿದ್ದಾರೆ.ಇಲ್ಲಿ ದಲಿತರು ಸೂರಿಲ್ಲದೆ ಬೀದಿ ಪಾಲಾಗುತ್ತಿದ್ದಾರೆ . ಬೈಂದೂರು ತಾಲೂಕಿನಲ್ಲಿ ಸೂರಿಲ್ಲದ ದಲಿತರು,ಬಡವರು, ಕೃಷಿ ಕೂಲಿ ಕಾರ್ಮಿಕರು,ನಿರ್ಗತಿಕರು ಸಾವಿರಾರು ನಿವೇಶನ ರಹಿತರು ನಿವೇಶನಕ್ಕಾಗಿ.ಅದೆಷ್ಟೋ ಬಾರಿ ಅರ್ಜಿ ಸಲ್ಲಿಸಿದರು ಅವರಿಗೆ ಸೂರು ಕಟ್ಟಿಕೊಳ್ಳಲು ಭೂಮಿ ಲಭ್ಯವಿಲ್ಲ ಎಂದು ಉಡಾಫೆ ಉತ್ತರ ನೀಡುವ ಇಲಾಖೆಯ ಅಧಿಕಾರಿಗಳು.ಈ ಅಕ್ರಮ ಕೆಂಪುಕಲ್ಲು ಗಣಿಗಾರಿಕೆ ನಿರಂತರವಾಗಿ ರಾತ್ರಿ ಹಗಲು ಎನ್ನದೆ ನಡೆಸಿ ಸರ್ಕಾರಕ್ಕೆ ಕೋಟಿ ಕೋಟಿ ರೂಪಾಯಿ ರಾಜಧನ ಹಾಗೂ ಸಾವಿರಾರು ಕೋಟಿ ರೂಪಾಯಿಯ ಸರಕಾರಿ ಭೂಮಿಯನ್ನು ಪ್ರಭಾವಿಗಳು ಲೂಟಿ ಮಾಡಿದರು ಅಧಿಕಾರಿಗಳು ,ಕಣ್ಣಿದ್ದು ಕುರುಡರು,ಬಾಯಿದ್ದು ಮೂಗರು, ಕಿವಿ ಇದ್ದೂ ಕಿವುಡರಾಗಿರುವುದಾದರೂ
ಯಾಕೆ..? ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ಈ ಬಗ್ಗೆ ಅನೇಕ ಬಾರಿ ಸಂಬಂಧಪಟ್ಟವರಿಗೆ ದೂರು ನೀಡಿದರು ಯಾವುದೇ ರೀತಿಯ ಪರಿಣಾಮ ಆಗಿರುವುದಿಲ್ಲ.

swabhimananews@gmail.com

ಬೈಂದೂರು ತಾಲೂಕಿನ ಎಲ್ಲಾ ಕೆಂಪುಕಲ್ಲು , ಮತ್ತು ಇತರ ಅಕ್ರಮ ಗಣಿಗಾರಿಕೆ ಈ ಕೂಡಲೇ ಸ್ಥಗಿತಗೊಳಿಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮದೊಂದಿಗೆ ಇದುವರೆಗೆ ಸರ್ಕಾರಕ್ಕೆ ವಂಚನೆ ಮಾಡಿದ ಕೋಟ್ಯಾಂತರ ರೂಪಾಯಿಯ ಬಡ್ಡಿ ಸಮೇತ ವಸೂಲಿ ಮಾಡಿ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಹಾಗೂ ಅಕ್ರಮ ಸಕ್ರಮದಡಿಯಲ್ಲಿ ಮಂಜೂರಾದ ಕೃಷಿ ಭೂಮಿಯಲ್ಲಿ ಅಕ್ರಮ ಗಣಿಗಾರಿಕೆ ನಡೆಸಿದವರ ವಿರುದ್ಧ ಕಾನೂನು ಕ್ರಮಕೈಗೊಂಡು ಮಂಜೂರಾದ ಕೃಷಿ ಭೂಮಿಯ ಮಂಜೂರಾತಿ ರದ್ದುಗೊಳಿಸಬೇಕು ಹಾಗೂ ಈ ಬಹುಕೋಟಿ ಹಗರಣದಲ್ಲಿ ಭಾಗಿಯಾದ ಎಲ್ಲಾ ಇಲಾಖೆಗಳ ಅಧಿಕಾರಿಗಳನ್ನು ಕೂಡಲೇ ಸೇವೆಯಿಂದ ವಜಾ ಮಾಡಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮವಾದ (ರಿ) ಉಡುಪಿ ಜಿಲ್ಲೆ ಮತ್ತು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ ಉಡುಪಿ ಜಿಲ್ಲೆ ಆಗ್ರಹಿಸಿದೆ.

ಇದೊಂದು ಗಂಭೀರವಾದ ಪ್ರಕರಣವಾಗಿರುವುದರಿಂದ ಈ
ಮೇಲೆ ಹೆಸರಿಸಲಾದ ಎಲ್ಲಾ ಇಲಾಖೆಗಳ ಅಧಿಕಾರಿಗಳು ಇದರ ಬಗ್ಗೆ ಈ ಕೂಡಲೇ ಎಚ್ಚೆತ್ತುಕೊಳ್ಳಬೇಕು,ತಪ್ಪಿದ್ದಲ್ಲಿ ನಿಮ್ಮೆಲ್ಲರನ್ನು ಹೊಣೆಗಾರರನ್ನಾಗಿಸಿ ಮಾನ್ಯ ಲೋಕಾಯುಕ್ತ/ಉಚ್ಚನ್ಯಾಯಾಲಯದಲ್ಲಿ ತಮ್ಮನ್ನೇ ಹೊಣೆಗಾರರನ್ನಾಗಿಸಿ ಪ್ರಕರಣ ದಾಖಲಿಸುವುದು ಸಂಘಟನೆಗೆ ಅನಿವಾರ್ಯ ಎಂದು   ಸಂಘಟನೆ ಮತ್ತು ಪಕ್ಷ ಗಂಭೀರವಾಗಿ ಎಚ್ಚರಿಕೆಯನ್ನು ನೀಡಿದೆ.

swabhimananews@gmail.com

Related posts

ಫ್ಲೈಓವರ್‌ನಿಂದ ಸರ್ವಿಸ್ ರಸ್ತೆಗೆ ಬಿದ್ದ ಕಾರು ದಂಪತಿ ಸಾವು; ಪುತ್ರ ಪ್ರಾಣಾಪಾಯದಿಂದ ಪಾರು

Swabhimana News Desk

ಕಟಪಾಡಿ:ಕಾರ್ಮಿಕರಿಬ್ಬರ ನಡುವೆ ಗಲಾಟೆ ಓರ್ವನ ಕೊಲೆ.!

Swabhimana News Desk

ಬಾಬಸಾಹೇಬ್ ಅಂಬೇಡ್ಕರ್ ರವರನ್ನು ಸ್ವಾರ್ಥಕ್ಕಾಗಿ ಬಳಸುವುದು ದೇಶದ್ರೋಹಕ್ಕೆ ಸಮಾನ ದಲಿತ ಮುಖಂಡ ಶೇಖರ್ ಹಾವಂಜೆ !!

Swabhimana News Desk

Leave a Comment