15 August 2026
Coastal

ಬೋಧಿಸತ್ವ ಬುದ್ಧ ವಿಹಾರ ಹಾವಂಜೆ ಹಾಗೂ ಉಡುಪಿಯ ಅಂಬೇಡ್ಕರ್ ಭವನದಲ್ಲಿ BSI ವತಿಯಿಂದ.ಪಗ್ಗುಣೊ ಪುನ್ನಮಿ ಆಚರಣೆ

ಉಡುಪಿ, ಮಾರ್ಚ್ 04-2026 swabhimananews

ದಿನಾಂಕ 03-2026 ರಂದು ರಾಷ್ಟ್ರಾದ್ಯಂತ ಬಹುತೇಕರಿಗೆ ಬಣ್ಣದೋಕುಳಿಯ ಹೋಳಿ‌ಹುಣ್ಣಿಮೆಯ ಸಂಭ್ರಮವಾದರೆ‌ ಬುದ್ಧರ ಅನುಯಾಯಿಗಳು ಪಾಲಿ‌ ಭಾಷೆಯಲ್ಲಿ ಪಗ್ಗುಣೊ‌ ಪುನ್ನಮಿ( ಕನ್ನಡದಲ್ಲಿ ಫಾಲ್ಗುಣ ಹುಣ್ಣಿಮೆ)ಯನ್ನು ಅತ್ಯಂತ ಸರಳವಾಗಿ ಅರ್ಥ ಪೂರ್ಣ ಪೌರ್ಣಮಿಯನ್ನಾಗಿ‌ ಆಚರಿಸುವ ಪರಿಪಾಠವಿದೆ.

ಈ ನಿಟ್ಟಿನಲ್ಲಿ ಉಡುಪಿ ಜಿಲ್ಲೆಯಲ್ಲೂ ಫಾಲ್ಗುಣ ಹುಣ್ಣಿಮೆಯನ್ನು ಅತ್ಯಂತ ಶ್ರದ್ಧಾ ಪೂರ್ವಕವಾಗಿ ಆಚರಿಸಿದ ಬಗ್ಗೆ ವರದಿಯಾಗಿದೆ. ಉಡುಪಿಯ ಪ್ರಪ್ರಥಮ‌ ಬುದ್ಧ ವಿಹಾರ ಬೋಧಿ ಸತ್ವದಲ್ಲಿ ಚಂದಿರನ ಬೆಳಕಲ್ಲಿ ಬೋಧಿ ವೃಕ್ಷಕ್ಕೆ ಪೂಜೆ ಸಲ್ಲಿಸಿ ಸಸಿ ನೆಟ್ಟು ‌ ಮತ್ತೊಂದಿಷ್ಟು ಬೋಧಿ ವೃಕ್ಷದ ಬೀಜಗಳನ್ನು ಬಿತ್ತಲಾಯಿತು.

ಅದಕ್ಕೂ ಮೊದಲು ಆಧುನಿಕ ಬೋಧಿ ಸತ್ವ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಸ್ಮರಿಸುವ ಮೂಲಕ ಫಾಲ್ಗುಣ ಹುಣ್ಣಿಮೆಗೆ ಚಾಲನೆ ನೀಡಲಾಯಿತು.ನಂತರ ವಿಹಾರದಲ್ಲಿ ತಿಸರಣ, ಬುದ್ಧ ವಂದನೆ, ಪಂಚಸೀಲ ಮತ್ತು ಮೈತ್ರಿ ಧ್ಯಾನ -ದಾನಗಳನ್ನು ಧಮ್ಮಾಚಾರಿಗಳಾದ ಶಂಭು ಸುವರ್ಣ, ಶೇಖರ್ ಹಾವಂಜೆ ಅವರುಗಳು ನೆರವೇರಿಸಿದರು.ಈ ಸಂದರ್ಭದಲ್ಲಿ ಅನೇಕ ಉಪಾಸಕ-ಉಪಾಸಿಕರು‌ ಉಪಸ್ಥಿತರಿದ್ದು ಸದ್ಭಾವನೆ, ಮಾನಸಿಕ ಶಾಂತಿ, ಅಧ್ಯಾತ್ಮಿಕ ಅಭಿವೃದ್ಧಿಯನ್ನು ಪಡೆದುಕೊಂಡರು.
ಇದೇ ದಿನ ಆದಿ ಉಡುಪಿಯ ಅಂಬೇಡ್ಕರ್ ಭವನದಲ್ಲಿ ಕೂಡ ತಿಸ್ಸರಣ, ಪಂಚಸೀಲ, ಬುದ್ಧ ವಂದನೆ, ಮೈತ್ರಿ ಧ್ಯಾನ ಉಪೋಸತ್ತ‌ ಕಾರ್ಯಕ್ರಮದಲ್ಲಿ ಹಲವಾರು ಉಪಾಸಿಕರು ಉಪಾಸಕರು ಭಾಗವಹಿಸಿ ಅರ್ಥಪೂರ್ಣವಾಗಿ ಹುಣ್ಣಿಮೆಯನ್ನು ಆಚರಿಸಿ‌ ಬುದ್ಧ ಮಾರ್ಗದಲ್ಲಿ ಮುನ್ನಡೆಯಲು ಬದ್ಧರಾದರು.

ಬುದ್ಧ ಅನುಯಾಯಿಗಳು ಪ್ರತೀ‌ ತಿಂಗಳ ಹುಣ್ಣಿಮೆಯನ್ನು ಕೂಡ‌ ಅತ್ಯಂತ ಸರಳವಾಗಿ ಧರ್ಮಾಚರಣೆಯನ್ನು‌ ಪಾಲಿಸುವ ಮೂಲಕ ಪ್ರಕೃತಿ ನಿಯಮದಂತೆ ಬದುಕುವ‌ ಸರಳತೆಯನ್ನು ರೂಢಿಸಿಕೊಂಡು ಬಂದಿರುವುದನ್ನು ನಾವಿಲ್ಲಿ ಗಮನಿಸಬೇಕಾದ ಸಂಗತಿಯಾಗಿದೆ.ಬುದ್ಧ ತಿಳಿಸಿದ್ದಂತೆ‌ ಯಾವುದೂ‌ ಶಾಶ್ವತವಲ್ಲ, ಎಲ್ಲವೂ ಅನಿಚ್ಚ-ಅನಿತ್ಯತೆಗಳಿಂದ ಕೂಡಿರುವ ಕಾರಣ ಜೀವನದ ಎಲ್ಲಾ ಸುಖ ದುಃಖಗಳನ್ನೂ‌ ಸಮತೆಯಿಂದ‌ ಕಂಡು ಪ್ರಜ್ಞಾಪೂರ್ವಕವಾಗಿ ಜೀವಿಸುತ್ತಾ‌ ಸಕಲ ಜೀವ ಸಂಕುಲಕ್ಕೂ‌ ಒಳಿತನ್ನೇ‌ ಬಯಸುವ ಮೂಲಕ ವೈಜ್ಞಾನಿಕ, ಮಾನವೀಯ ನೆಲೆಯಲ್ಲಿ ಧರ್ಮ ಪಥದಲ್ಲಿ ಮುನ್ನಡೆಯುವುದು‌ ಕಂಡು ಬರುತ್ತದೆ.ರಾಜ್ಯ -ರಾಜ್ಯ, ದೇಶ ದೇಶಗಳ ನಡುವೆ, ಮನುಷ್ಯ -ಮನುಷ್ಯರ ನಡುವೆ ಮತ ಧರ್ಮಗಳು, ಸ್ವಾರ್ಥ ಲಾಲಸೆಗಳಿಂದ‌ ಕದನ ನಡೆಯುವ ಮೂಲಕ ಮನುಕುಲದ ನೆಮ್ಮದಿ ಕದಡುತ್ತಿರುವ‌ ಈ ಕಾಲಘಟ್ಟದಲ್ಲಿ ಸಕಲ ಜೀವ ಸಂಕುಲಕ್ಕೂ‌ ಬುದ್ಧ ಧಮ್ಮ‌ ಹೆಚ್ಚು ಪರಿಣಾಮಕಾರಿಯಾದ‌ ಔಷಧಿಯಾಗಬಲ್ಲುದು.

*****
ವರದಿ:-ಚನ್ನಬಸವ ಪುತ್ತೂರ್ಕರ‌ ಉಡುಪಿ
94816 89667

Swabhimananews

Related posts

ಬಯಲು ರಂಗಮಂದಿರ ಹಾಗೂ ಆಟದ ಮೈದಾನ ನಿರ್ಮಾಣ ಮಾಡುವಂತೆ ಒತ್ತಾಯ ವಿಜಯಕುಮಾರ್ ಕೊಡವೂರು…!

Swabhimana News Desk

ಕಟಪಾಡಿ:ಕಾರ್ಮಿಕರಿಬ್ಬರ ನಡುವೆ ಗಲಾಟೆ ಓರ್ವನ ಕೊಲೆ.!

Swabhimana News Desk

ಉಡುಪಿ ಜಿಲ್ಲೆಯ. ಬೈಂದೂರು ತಾಲೂಕಿನಾದ್ಯಂತ. ಅಕ್ರಮ ಕೆಂಪು ಕಲ್ಲು ಗಣಿಗಾರಿಕೆ,ಕೋಟ್ಯಾಂತರ ರೂಪಾಯಿ ಸರಕಾರಕ್ಕೆ ವಂಚನೆ, ದಲಿತರಿಗೆ ಮೀಸಲಿಟ್ಟ ಡಿ ಸಿ ಮನ್ನಾ ಭೂಮಿಯನ್ನು,ಹಾಗೂ ಬಹುಕೋಟಿ ರೂಪಾಯಿ ಮೌಲ್ಯದ ಸರಕಾರಿ
ಭೂಮಿ.ಲೂಟಿ ಹೊಡೆದರೂ,ಎಷ್ಟೇ ದೂರು ನೀಡಿದರು. ಕಣ್ಣ್ ಮುಚ್ಚಿ ಕುಳಿತ ಇಲಾಖೆಗಳ ಅಧಿಕಾರಿಗಳು.

Swabhimana News Desk

Leave a Comment