17.8 C
New York
14 June 2025
Coastal

ಡಾ| ಬಾಬಸಾಹೇಬ್ ಅಂಬೇಡ್ಕರ್ ರವರ ಪರಿನಿರ್ವಾಣ ದಿನದ ಅಂಗವಾಗಿ ಅಂಬೇಡ್ಕರ್ ವಿಚಾರ ವಿನಿಮಯ ಚರ್ಚೆ ಮತ್ತು ಸಂವಿಧಾನ ಜಾಗೃತಿ ಕಾರ್ಯಕ್ರಮ.

December -07-2024 swabhimananews

ದಿನಾಂಕ 06/12/2024 ಶುಕ್ರವಾರದಂದು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ ಉಡುಪಿ ಜಿಲ್ಲೆ ಹಾಗೂ ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮವಾದ (ರಿ)ನೋಂದಣಿ ನಂ.ಎಸ್-138-2014/15 ಉಡುಪಿ ಜಿಲ್ಲೆ ಇದರ ವತಿಯಿಂದ ಹಾವಂಜೆ ಜಿಲ್ಲಾ ಕಚೇರಿಯಲ್ಲಿ ಡಾ| ಬಾಬಸಾಹೇಬ್ ಅಂಬೇಡ್ಕರ್ ರವರ 68ನೇ ಪರಿನಿರ್ವಾಣ ದಿನದ ಅಂಗವಾಗಿ ಅಂಬೇಡ್ಕರ್ ರವರ ವಿಚಾರ ವಿನಿಮಯ, ಚರ್ಚೆ ಮತ್ತು ಸಂವಿಧಾನ ಜಾಗೃತಿ ಕಾರ್ಯಕ್ರಮ ನಡೆಯಿತು.

ಡಾ| ಬಾಬಸಾಹೇಬ್ ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮೇಣದಬತ್ತಿ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.ಕಾರ್ಯಕ್ರಮವನ್ನು ಉದ್ದೇಶಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮವಾದದ ರಾಜ್ಯ ಸಂಘಟನಾ ಸಂಚಾಲಕರಾದ ಶ್ರೀ ಶೇಖರ್ ಹಾವಂಜೆಯವರು ಪ್ರಾಸ್ತವಿಕವಾಗಿ ಮಾತನಾಡಿದರು.

ನಂತರ ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿರುವ
ಡಾ. ಕೆ.ಎ ಓಬಳೇಶ್ ಆರ್‌ಪಿಐ ಕ‌ ಪಕ್ಷದ
ಪ್ರಧಾನ ಕಾರ್ಯದರ್ಶಿಗಳು, ಬರಹಗಾರರು, ಸಂಪಾದಕರು, ವಕೀಲರು,ಉಪನ್ಯಾಸಕರು ದಾವಣಗೆರೆ.ಇವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

ಇವರು ಈ ಸಂದರ್ಭದಲ್ಲಿ ಇಲ್ಲಿ ನೆರೆದಿರುವಂತಹ ಎಲ್ಲರಿಗೂ ಸ್ವತಂತ್ರ ಭಾರತದ ಸಂವಿಧಾನ ಶಿಲ್ಪಿ ಡಾಕ್ಟರ್ ಬಾಬಸಾಹೇಬ್ ಅಂಬೇಡ್ಕರ್ ರವರು ಯಾರು, ಅವರು ನಮ್ಮ ದೇಶಕ್ಕೆ ಕೊಟ್ಟಂತಹ ಕೊಡುಗೆ ಏನು ಮತ್ತು ಭಗವಾನ್ ಬುದ್ಧರ ತತ್ವ ಸಿದ್ಧಾಂತವೇನು ಎಂಬುದರ ಬಗ್ಗೆ ಎಲ್ಲರಿಗೂ ಮನಮುಟ್ಟುವಂತೆ ಇದರ ಬಗ್ಗೆ ಅರ್ಥಪೂರ್ಣವಾಗಿ ಅರಿವನ್ನು ಮೂಡಿಸಿದರು,ಆರ್‌ಪಿಐಕೆ ಪಕ್ಷದ ಉಡುಪಿ ಜಿಲ್ಲಾಧ್ಯಕ್ಷರು

ಸದಾಶಿವ ಶೆಟ್ಟಿ ಹೇರೂರು ಇವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ ಈ ದೇಶದ ಸರ್ವ ಜನರಿಗೂ ಬಾಬಸಾಹೇಬ್ ಅಂಬೇಡ್ಕರ್ ರವರು ಸಂವಿಧಾನದಲ್ಲಿ ನೀಡಿರುವಂತಹ ಮಹತ್ವದ ಕೊಡುಗೆಗಳನ್ನು ನೀಡಿರುವುದನ್ನು ಈ ದೇಶದ ಸರ್ವರು ಅರ್ಥೈಸಿಕೊಂಡು ಸ್ವತಂತ್ರ ಭಾರತದ ಸಂವಿಧಾನ ಶಿಲ್ಪಿ ಪರಮಪೂಜ್ಯ ಡಾ. ಬಾಬಸಾಹೇಬ್ ಅಂಬೇಡ್ಕರ್ ರವರು ನೀಡಿರುವಂತಹ ಎಲ್ಲಾ ಕೊಡುಗೆಗಳನ್ನು ಅರ್ಥೈಸಿಕೊಂಡು ಜೀವನ ಮಾಡಬೇಕಾದಂತಹ ಮನಸ್ಥಿತಿಯನ್ನು ಎಲ್ಲರೂ ಬೆಳೆಸಿಕೊಳ್ಳಬೇಕಾಗಿದೆ ಎಂದು ಈ ಕಾರ್ಯಕ್ರಮದಲ್ಲಿ ನೆರೆದಿದ್ದ ಸಭಿಕರಿಗೆ ವಿವರಿಸಿ ಹೇಳಿದರು.

ಉಡುಪಿ ಜಿಲ್ಲೆಯ ಧಮ್ಮಾಚಾರಿಗಳಾದ ಶಂಭು ಸುವರ್ಣರವರ ಮಾತಿನಲ್ಲಿ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ರವರು 68ನೇ ಪರಿನಿರ್ವಾಣ ದಿನದ ಇಂದು ಇಲ್ಲಿ ನೆರೆದಿರುವಂತಹ ಪ್ರತಿಯೊಬ್ಬರು ಮಾನಸಿಕವಾಗಿ ಬಾಬಾ ಸಾಹೇಬರು ಹೇಳಿರುವಂತಹ ಮಾರ್ಗದರ್ಶನದಲ್ಲಿ ಮುಂದೆ ನಡೆದುಕೊಂಡಲ್ಲಿ ಮಾತ್ರ ಸ್ವತಂತ್ರ ರಾಜಕಾರಣ, ಬೌದ್ಧ ಧರ್ಮ ಮಾರ್ಗದಲ್ಲಿ ಮುಂದುವರೆಯಲು ಸಾಧ್ಯವೆಂದು ಸಂಪೂರ್ಣವಾಗಿ ವಿವರಿಸಿದರು.

ಬೌದ್ಧ ಉಪಾಸಕರಾದ ವಿಠಲ್ ಸಾಲಿಕೇರಿರವರು ಮಾತನಾಡಿ ಭಾರತ ದೇಶದಲ್ಲಿ ಸ್ವತಂತ್ರ ಭಾರತದ ಸಂವಿಧಾನ ಶಿಲ್ಪಿ ಡಾ|ಬಾಬ ಸಾಹೇಬ್ ಅಂಬೇಡ್ಕರ್ ರವರು ನಮ್ಮೆಲ್ಲರಿಗೂ ಸ್ವತಂತ್ರವಾಗಿ ಬಾಳ್ವೆ ಮಾಡುವಂತೆ ನೀಡಿರುವಂತಹ ಸಂವಿಧಾನದಲ್ಲಿ ಯಾವ ಯಾವ ಅವಕಾಶಗಳನ್ನು ಕೊಟ್ಟಿದ್ದಾರೆ ಅದನ್ನು ನಾವೆಲ್ಲರೂ ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಪ್ರತಿಯೊಬ್ಬರೂ ಕೂಡ ಸ್ವತಂತ್ರರಾಗಿ ಬದುಕ ಬೇಕೆನ್ನುವುದು ಬಾಬಾ ಸಾಹೇಬರ ಕನಸಾಗಿತ್ತು.

ಆದರೆ ಇದನ್ನು ನಾವು ಇವತ್ತು ಯಾವ ರೀತಿಯಲ್ಲಿ ಅಳವಡಿಸಿಕೊಂಡಿದ್ದೇವೆ ಯಾವ ರೀತಿಯಾಗಿ ಸಮಾಜಕ್ಕೆ ಸಂದೇಶಗಳನ್ನು ಕೊಡುತ್ತಿದ್ದೇವೆ ಅನ್ನೋದನ್ನು ನಾವು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಬೇಕಾಗಿದೆ ‌ಎಂದು ನುಡಿದರು. ಹಾಗೂ ಕ.ದ.ಸಂ.ಸ. ಭೀಮವಾದದ ಜಿಲ್ಲಾ ಸಂಘಟನಾ ಸಂಚಾಲಕರಾದ ಗೋಪಾಲ್ ಶಿವಪುರರವರು ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ವಹಿಸಿ ಮಾತನಾಡಿ ಪ್ರತಿಯೊಬ್ಬರು ತಮ್ಮ ತಮ್ಮ ಮನೆಗಳಲ್ಲಿ ಮೊದಲು ಬಾಬಸಾಹೇಬರು ಹೇಳಿರುವಂತ ಮಾರ್ಗದರ್ಶನದಲ್ಲಿ ಧಮ್ಮದ ಮಾರ್ಗವನ್ನು ಅನುಸರಿಸಿಕೊಂಡು ನಡೆದಲ್ಲಿ ಮಾತ್ರ ಬಬಾಸಾಹೇಬರಿಗೆ ಗೌರವವನ್ನು ಸಲ್ಲಿಸಿದಂತಾಗುತ್ತದೆ ಎಂದು ಸಭೀಕರಿಗೆ ತಿಳಿಸಿದರು.

ಮುಖ್ಯ ಅತಿಥಿಗಳಾದ ರವಿಕಲಾ.ಎಸ್ ಕೊಡವೂರುರವರು ಮಾತನಾಡಿ ಡಾ| ಬಾಬಸಾಹೇಬ್ ಅಂಬೇಡ್ಕರ್ ರವರು ಈ ದೇಶದ ಮಹಿಳೆಯರಿಗೆ, ಮಕ್ಕಳಿಗೆ, ವೃದ್ಧರಿಗೆ, ಕಾರ್ಮಿಕರಿಗೆ ಹಾಗೂ ಸರ್ವರಿಗೂ ನೀಡಿದಂತಹ ಕೊಡುಗೆಯ ಮಹತ್ವವನ್ನು ನಾವೆಲ್ಲರೂ ತಿಳಿದುಕೊಂಡು ಮುನ್ನಡೆಯಬೇಕಾಗಿದೆ ಎಂದರು.
ಹಾಗೂ ವೇದಿಕೆಯಲ್ಲಿ ಉಪಸ್ಥಿತರಿದ್ದ ವಿಠಲ ಹಾವಂಜೆ ಮತ್ತು ಪ್ರಭಾಕರ್ ಮೆಸ್ತಾ ಮಾತನಾಡಿ ಸರ್ವರಿಗೂ ಸಮಬಾಳು, ಸಮಪಾಲು ನೀಡಿದಂತಹ ಅಂಬೇಡ್ಕರ್ ರವರ ಕೊಡುಗೆ ಮಹತ್ವದ್ದು ಅದನ್ನು ನಾವೆಲ್ಲರೂ ಜೀವನದಲ್ಲಿ ಅಳವಡಿಸಿಕೊಂಡಲ್ಲಿ ನಮ್ಮೆಲ್ಲರ ಜೀವನ ಸುಖಮಯವಾಗಿ ಸಾಗಲಿದೆ ಎನ್ನುವುದನ್ನು ನಾವೆಲ್ಲರೂ ಅರ್ಥ ಮಾಡಿಕೊಳ್ಳಬೇಕಾಗಿದೆ ಎಂದರು.


ಈ ಸಂದರ್ಭದಲ್ಲಿ ಸುಜಾತ ಎಸ್ ಹಾವಂಜೆ, ರೂಪ ಹಾವಂಜೆ, ಪ್ರಭಾಕರ ಹಾವಂಜೆ, ರಮೇಶ್ ಮಾಬಿಯಾನ್, ನಾಥು ಒಳಗುಡ್ಡೆ, ಪೂರ್ಣಿಮಾ ಬೈರಂಪಳ್ಳಿ, ಸುನೀತಾ ಒಳಗುಡ್ಡೆ, ವನಿತಾ ಒಳಗುಡ್ಡೆ, ದಿನೇಶ್, ಲೀಲಾ, ನಾರಾಯಣ, ರಾಜೇಶ್, ವಸಂತ, ನಾರಾಯಣ, ಸತೀಶ್ ಹಾವಂಜೆ, ಮುತ್ತಕ್ಕ, ಸುರೇಖಾ, ಪುಟಾಣಿ ಸನ್ನತಿ, ಪುಟಾಣಿ ಸಾನ್ವಿ, ಪುಟಾಣಿ ಗೌತಮಿ, ತಾರ, ಬೇಬಿ, ಕಿಟ್ಟಿ,ಕ.ದ.ಸಂ.ಸ ಭೀಮವಾದದ ಉಡುಪಿ ಜಿಲ್ಲೆಯ ಜಿಲ್ಲಾ ಸಂಘಟನಾ ಸಂಚಾಲಕರು, ಸದಸ್ಯರು, ಆರ್.ಪಿ.ಐ.ಕ ಪಕ್ಷದ ಪದಾಧಿಕಾರಿಗಳು, ಸದಸ್ಯರು ಮತ್ತು ಅಂಬೇಡ್ಕರರ ಅನುಯಾಯಿಗಳು, ಅಭಿಮಾನಿಗಳು,

ಬೌದ್ಧ ಧಮ್ಮದ ಉಪಾಸಕ ,ಉಪಾಸಿಕರು ಮತ್ತು ಬೌದ್ಧ ಅನುಯಾಯಿಗಳು ಹಾಗೂ ಅನೇಕರು ಉಪಸ್ಥಿತರಿದ್ದರು. ಕ.ದ.ಸಂ.ಸ ಭೀಮವಾದದ ರಾಜ್ಯ ಸಂಘಟನಾ ಸಂಚಾಲಕರಾದ ಶ್ರೀ ಶೇಖರ್ ಹಾವಂಜೆಯವರು ವಂದನಾರ್ಪಣೆಗೈದರು.ಪೃಥ್ವಿ ಒಳಗುಡ್ಡೆ ನಿರೂಪಿಸಿ, ಸ್ವಾಗತಿಸಿದರು.
Swabhimananews

Related posts

ಅಕ್ರಮ ಮರಳು ಅಡ್ಡೆಗೆ ಮಂಗಳೂರು ಗಣಿ ಇಲಾಖೆಯ ಹಿರಿಯ ಭೂವಿಜ್ಞಾನಿ ಕೃಷ್ಣವೇಣಿ ಎಂಬ ದಿಟ್ಟ ಮಹಿಳಾ ಅಧಿಕಾರಿಯ ಮಿಂಚಿನ ದಾಳಿ; 20 ಇಂಜಿನ್ ಮತ್ತು ಗ್ಯಾಸ್ ಸಿಲಿಂಡರ್ ಸಹಿತ ಬೋಟ್‌ಗಳ ವಶ.

Swabhimana News Desk

ಉಡುಪಿ ಜಿಲ್ಲೆಯ. ಬೈಂದೂರು ತಾಲೂಕಿನಾದ್ಯಂತ. ಅಕ್ರಮ ಕೆಂಪು ಕಲ್ಲು ಗಣಿಗಾರಿಕೆ,ಕೋಟ್ಯಾಂತರ ರೂಪಾಯಿ ಸರಕಾರಕ್ಕೆ ವಂಚನೆ, ದಲಿತರಿಗೆ ಮೀಸಲಿಟ್ಟ ಡಿ ಸಿ ಮನ್ನಾ ಭೂಮಿಯನ್ನು,ಹಾಗೂ ಬಹುಕೋಟಿ ರೂಪಾಯಿ ಮೌಲ್ಯದ ಸರಕಾರಿ
ಭೂಮಿ.ಲೂಟಿ ಹೊಡೆದರೂ,ಎಷ್ಟೇ ದೂರು ನೀಡಿದರು. ಕಣ್ಣ್ ಮುಚ್ಚಿ ಕುಳಿತ ಇಲಾಖೆಗಳ ಅಧಿಕಾರಿಗಳು.

Swabhimana News Desk

ಬೋಧಿಸತ್ವ ಬುದ್ಧ ಫೌಂಡೇಶನ್ ಉಡುಪಿ ಜಿಲ್ಲೆ ಇದರ ವತಿಯಿಂದ ಭಗವಾನ್ ಬುದ್ಧರ 2568 ನೇ ಜಯಂತಿ ಆಚರಣೆ.

Swabhimana News Desk

Leave a Comment