ನವೆಂಬರ್ -26-2024 Swabhimananews
ಸಂವಿಧಾನ ಸಮರ್ಪಣಾ ದಿನಾಚರಣೆ ದಿನಾಂಕ:- 26/ 11/ 2024 ಮಂಗಳವಾರ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಬೋಧಿಸತ್ವ ಬುದ್ಧ ಫೌಂಡೇಶನ್ ನ ಬೋಧಿಸತ್ವ ಬುದ್ಧ ವಿಹಾರ ಹಾವಂಜೆಯಲ್ಲಿ.
ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮವಾದ (ರಿ) ಮತ್ತು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ ಉಡುಪಿ ಜಿಲ್ಲೆ ಇದರ ವತಿಯಿಂದ ಸಂವಿಧಾನ ಸಮರ್ಪಣಾ ದಿನಾಚರಣೆ ಕಾರ್ಯಕ್ರಮ RPIK ರಾಜ್ಯ ಉಪಾಧ್ಯಕ್ಷರಾದ ಶೇಖರ್ ಹಾವಂಜೆರವರ.
ನೇತೃತ್ವದಲ್ಲಿ ನಡೆಯಿತು. ಸಂವಿಧಾನ ಸಮರ್ಪಣಾ ದಿನಾಚರಣೆಯ ಬಗ್ಗೆ ಮುಖ್ಯ ಅತಿಥಿಗಳಾಗಿ ಈ ಕಾರ್ಯಕ್ರಮಕ್ಕೆ ಆಗಮಿಸಿದಂತ ಉಡುಪಿ ಜಿಲ್ಲೆಯ ಧಮ್ಮಾಚಾರಿಗಳಾದ ಶಂಭು ಸುವರ್ಣರವರು ಪ್ರಾಸ್ತಾವಿಕ ನುಡಿಯನ್ನಾಡಿದರು.
ಮತ್ತೋರ್ವ ಮುಖ್ಯ ಅತಿಥಿಗಳಾಗಿ ಈ ಕಾರ್ಯಕ್ರಮಕ್ಕೆ ಆಗಮಿಸಿದಂತಹ ಕ. ದ. ಸಂ. ಸ ಭೀಮವಾದ (ರಿ) ನ ರಾಜ್ಯ ಸಂಘಟನಾ ಸಂಚಾಲಕರಾದ ಶೇಖರ್ ಹಾವಂಜೆಯವರು ಸಂವಿಧಾನ ಬರೆಯುವಾಗ ಡಾ|| ಬಿ.ಆರ್ ಅಂಬೇಡ್ಕರ್ ರವರು ಪಟ್ಟಂತಹ ಕಷ್ಟ- ನೋವುಗಳನ್ನು ಸಂಕ್ಷಿಪ್ತವಾಗಿ ವಿವರಿಸಿದರು. ಉಡುಪಿ ಜಿಲ್ಲಾ ಸಂಚಾಲಕರಾದ ಸಂಜೀವ್ ಕುಕ್ಕೆಹಳ್ಳಿಯವರು
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನುವಹಿಸಿ ಮಾತನಾಡಿದರು.ರವಿಕಲಾ.
ಎಸ್ ಬ್ರಹ್ಮಾವರ. ಇವರು ಸಂವಿಧಾನದ ಕುರಿತು ಸಂಕ್ಷಿಪ್ತವಾಗಿ ವಿವರಿಸಿದರು. ಈ ಸಂದರ್ಭದಲ್ಲಿ ವಿಠಲ ಸಾಲಿಕೇರಿ,
ರಮೇಶ್ ಮಾಬಿಯಾನ್ ಜಿಲ್ಲಾ ಸಂಘಟನಾ ಸಂಚಾಲಕರು, ನಾಥು ಒಳಗುಡ್ಡೆ ಸಮಿತಿ ಸದಸ್ಯರು, ಪೃಥ್ವಿ ಜಿಲ್ಲಾ ಖಜಾಂಚಿ, ಸುಜಾತ ಹಾವಂಜೆ ಸಮಿತಿ ಸದಸ್ಯರು, , ನಾರಾಯಣ ಸಮಿತಿ ಸದಸ್ಯರು, ವನಿತಾ ಸಮಿತಿ ಸದಸ್ಯರು,
ರೂಪಾ ಹಾವಂಜೆ ಸಮಿತಿ ಸದಸ್ಯರು, ಪುಟಾಣಿ ಸನ್ನತಿ, ಪುಟಾಣಿ ಸಾನ್ವಿ, ಅಂಬೇಡ್ಕರ್ ಅನುಯಾಯಿಗಳು ಮುಂತಾದವರು ಈ ಅರ್ಥಪೂರ್ಣವಾದ ಸಂವಿಧಾನ ಸಮರ್ಪಣಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
Swabhimananews.