ಅಕ್ಟೋಬರ್ 22-2024-swabhimaananews
ದೇವರ ಭಜನೆಯ ಹೆಸರಲ್ಲಿ ಹಿಂದುಳಿದ ವರ್ಗದ /ಪರಿಶಿಷ್ಟಜಾತಿ /ಪಂಗಡದ ಹೆಣ್ಣು ಮಕ್ಕಳನ್ನು ಹಾದಿ ಬೀದಿಗಳಲ್ಲಿ ಕುಣಿಸುತಿದ್ದಾರೆ ಎಂದು ಪ್ರತಿಭಾ ಕುಳಾಯಿ ರವರು ಸಂಘಪರಿವಾರದ ನೈಜತೆಯನ್ನು ಸಮಾಜದಮುಂದೆ ಇಟ್ಟಿದ್ದಾರೆ.
ಶನಿವಾರ ಸುರತ್ಕಲ್‌ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಹಿಂದೆ ಭಕ್ತಿ ಭಾವದಿಂದ ದೇವಸ್ಥಾನಗಳಲ್ಲಿ, ಭಜನಾ ಮಂದಿರಗಳಲ್ಲಿ ನಡೆಯುತ್ತಿದ್ದ ಭಜನೆ ಕಾರ್ಯಕ್ರಮಗಳನ್ನು ಇತ್ತೀಚಿನ ದಿನಗಳಲ್ಲಿ ರಾಜಕೀಯವಾಗಿ ಬಳಸಿಕೊಳ್ಳಲಾಗುತ್ತಿದೆ. ಅದಕ್ಕಾಗಿಯೇ ಹಿಂದುಳಿದ,ಪರಿಶಿಷ್ಟ ಜಾತಿ /ಪಂಗಡದ ಹೆಣ್ಣು ಮಕ್ಕಳನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಪ್ರತಿಭಾ ಕುಳಾಯಿ ಗಂಭೀರವಾಗಿ ಆರೋಪಿಸಿದರು.
ಮೇಲ್ಜಾತಿಯ ಹೆಣ್ಣು ಮಕ್ಕಳು ಸಭೆ ಸಮಾರಂಭಗಳ ವೇದಿಕೆಗಳಲ್ಲಿ ಗೌರವಯುತವಾಗಿ ಕುಣಿಯುತ್ತಿದ್ದರೆ, ಹಿಂದುಳಿದ, ಪರಿಶಿಷ್ಟಜಾತಿ /ಪ ಪಂಗಡದ ಹೆಣ್ಣು ಮಕ್ಕಳನ್ನು ಹಾದಿ ಬೀದಿಗಳಲ್ಲಿ ಕುಣಿಸಲಾಗುತ್ತಿದೆ. ಭಜನೆ ಹಿಂದೂ ಧರ್ಮದ ಸಂಸ್ಕೃತಿಯೇ ಆಗಿದ್ದರೂ, ಭಜನೆ ಮಾಡುತ್ತಾ ರಸ್ತೆ, ಬಿದಿಗಳಲ್ಲಿ ಕುಣಿಯವುದು ತಪ್ಪು. ಅದು ಭಾರತೀಯ ಸಂಸ್ಕೃತಿ ಅಲ್ಲ ಎಂದು ಅವರು ಹೇಳಿದರು. ಹಿಂದೂ ಸಂಘಟನೆಗಳ ಮುಖಂಡರು ತಮ್ಮ ಮನೆಯ ಹೆಣ್ಣು ಮಕ್ಕಳನ್ನು ರಸ್ತೆ, ಬೀದಿಗಳಲ್ಲಿ ನಡೆಯುವ ಕುಣಿತ ಭಜನೆಗೆ ಕಳುಹಿಸುತ್ತಾರಾ..? ಎಂದು ಪ್ರಶ್ನಿಸಿದ ಪ್ರತಿಭಾ ಕುಳಾಯಿ, ಈ ಬಗ್ಗೆ ಹೆಣ್ಣು ಮಕ್ಕಳ ಹೆತ್ತವರು ಯೋಚಿಸಬೇಕಿದೆ ಎಂದರು.
ಹೆಣ್ಣು ಮಕ್ಕಳನ್ನು ಬಳಸಿಕೊಂಡು ರಸ್ತೆ, ಬೀದಿಗಳಲ್ಲಿ ಮಾಡುವ ಭಜನೆಗಳು ಸಮಂಜಸವೇ ಅಥವಾ ಅಸಮಂಜಸವೇ ಎಂಬ ಕುರಿತಾಗಿ ಸ್ವಾಮೀಜಿಗಳು, ಧರ್ಮ ಗುರುಗಳು ಹಾಗೂ ಸ್ವಯಂಘೋಷಿತ ಹಿಂದೂ ಸಂಘಟನೆಗಳ ನಾಯಕರು ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಿದರು.
SWABHIMAANANEWS