ಆಗಸ್ಟ್ 09-2024 swabhimananews
ಇಂದು ದಿನಾಂಕ09/08/2024ರ ಶುಕ್ರವಾರ ಹಿಂದೂ ಧರ್ಮದ ನಾಗರ ಪಂಚಮಿ ಆಚರಣೆಯ ದಿನ.
ಇಂದು ಜಿಲ್ಲಾದ್ಯಂತ ಹಾಗೂ ರಾಜ್ಯಾದ್ಯಂತ ಅನೇಕ ಭಾಗಗಳಲ್ಲಿ ನಾಗರ ಪಂಚಮಿ ಆಚರಣೆ ಮಾಡಲಾಗುತ್ತದೆ.
ಈ ನಾಗರ ಪಂಚಮಿ ಆಚರಣೆಯ ಹೆಸರಿನಲ್ಲಿ ಎಲ್ಲಾ ಕಡೆ ಕಲ್ಲು ನಾಗನಿಗೆ ಪೌಷ್ಟಿಕ ಆಹಾರವಾದ ಹಾಲು, ತುಪ್ಪ, ಎಳನೀರು, ಹಣ್ಣು-ಹಂಪಲುಗಳನ್ನು ಸುರಿದು ವ್ಯರ್ಥ ಮಾಡುತ್ತಿರುವುದನ್ನು ನಾವೆಲ್ಲರೂ ನೋಡ್ತಾ ಬಂದಿದ್ದೇವೆ.
ಆದರೆ ವೈಜ್ಞಾನಿಕವಾಗಿ ಇವತ್ತು ಯಾರೂ ಕೂಡ ಈ ಬಗ್ಗೆ ಚಿಂತನೆ ಮಾಡ್ತಾ ಇಲ್ಲ. ನಿರ್ಜೀವ ಕಲ್ಲಿಗೆ ಹಾಲು, ತುಪ್ಪ ,ಹಣ್ಣು- ಹಂಪಲು ಏರೆದರೆ ಏನು ಪ್ರಯೋಜನ ಇಲ್ಲ ಎನ್ನುವುದು.
ಯಾರಿಗೂ ವಿರೋಧ ಮಾಡಲು ಸಾಧ್ಯವಾಗ್ತಾ ಇಲ್ಲ. ಇದನ್ನು ಇಡೀ ರಾಜ್ಯದ ಹಾಗೂ ಜಿಲ್ಲೆಯ ಪ್ರಜ್ಞಾವಂತರಿಗೆ ಅರಿವು ಮೂಡಿಸಬೇಕೆಂಬ ಹಾಗೂ ಇದೊಂದು ಎಲ್ಲರಿಗೂ ಸಂದೇಶ ನೀಡಬೇಕೆಂಬ ಉದ್ದೇಶದಿಂದ.
ನಮ್ಮ ಸಂಘಟನೆಯು ಕಳೆದ 15 ವರ್ಷಗಳಿಂದ ನಿರಂತರವಾಗಿ ಅನೇಕ ಅನಾಥಾಶ್ರಮಗಳಿಗೆ ವಿಕಲಚೇತನರ ಮತ್ತು ಅಪೌಷ್ಟಿಕತೆಯಿಂದ ಬಳಲುತ್ತಿರುವವರಿಗೆ.
ಈ ಹಿಂದೂ ಧರ್ಮದ ಅವೈಜ್ಞಾನಿಕ ನಾಗರ ಪಂಚಮಿಯ ದಿನದಂದು ಹಾಲು,ಹಣ್ಣುಹಂಪಲು ಮತ್ತು ದಿನ ಬಳಕೆ ಸಾಮಗ್ರಿಗಳನ್ನು ನೀಡುತ್ತಾ ಬರುತ್ತಿದ್ದು .
ಈ ಬಾರಿಯೂ ಕೂಡ ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮವಾದ , ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ ಮತ್ತು ಬೋಧಿಸತ್ವ ಬುದ್ಧ ಫೌಂಡೇಶನ್ ಹಾವಂಜೆ ಉಡುಪಿ ಜಿಲ್ಲೆ .
ಇದರ ವತಿಯಿಂದ ಬ್ರಹ್ಮಾವರ ತಾಲೂಕಿನ ಸಾಲ್ಮರದ ಸ್ಪಂದನ ಚಾರಿಟೇಬಲ್ ಟ್ರಸ್ಟ್ ನ ವಿಶೇಷ ಚೇತನರಿಗೆ, ಉಡುಪಿ ತಾಲೂಕಿನ ಸಂತೆಕಟ್ಟೆಯ ಕೃಷ್ಣಾನುಗ್ರಹದ ಮಮತೆಯ ತೊಟ್ಟಿಲು ಎಂಬಲ್ಲಿಗೆ.
ಮತ್ತು ನೇಜಾರಿನ ಚೈತನ್ಯ ಚಾರಿಟೇಬಲ್ ಟ್ರಸ್ಟ್ ನ ದಿವ್ಯಾಂಗರ ತರಬೇತಿ ಕೇಂದ್ರಕ್ಕೆ ವಿತರಿಸಲಾಯಿತು. ಈ ಸಂದರ್ಭದಲ್ಲಿ ಬೋಧಿಸತ್ವ ಬುದ್ಧ ಫೌಂಡೇಶನ್ ನ ಅಧ್ಯಕ್ಷರಾದ ಶೇಖರ್ ಹಾವಂಜೆ,ಟ್ರಸ್ಟಿಗಳಾದ ವಿಠಲ ಹಾವಂಜೆ, ಪ್ರತಾಪ್ ಒಳಗುಡ್ಡೆ, RPIK ಪಕ್ಷದ ಜಿಲ್ಲಾಧ್ಯಕ್ಷರಾದ ಸದಾಶಿವ ಶೆಟ್ಟಿ ಹೇರೂರು,
ಅನಿಲ್ ಫೆರ್ನಾಂಡಿಸ್, ಪೃಥ್ವಿ ಒಳಗುಡ್ಡೆ, ಸುಜಾತ ಹಾವಂಜೆ, ರೂಪ, ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕರಾದ ಸಂಜೀವ ಕುಕ್ಕೆಹಳ್ಳಿ, ಸುನೀತಾ ಒಳಗುಡ್ಡೆ,ಸುರೇಖಾ ಕುಕ್ಕೆಹಳ್ಳಿ, ನಾಥು, ರಮೇಶ್, ಮಿಥುನ್,
ಬೌದ್ಧ ಧಮ್ಮ ಪ್ರಚಾರಕ ಮುರಳೀಧರ್ ಮಾರ್ಪಳ್ಳಿ, ಪುಟಾಣಿ ಸನ್ನತಿ, ಪುಟಾಣಿ ಗೌತಮಿ, ಹಾಗೂ ಸ್ಪಂದನ,ಚೈತನ್ಯ,ಕೃಷ್ಣಾನುಗೃಹ ಇದರ ಮುಖ್ಯಸ್ಥರುಗಳು, ವಿಶೇಷ ಚೇತನರ ಪಾಲಕರು ಪೋಷಕರು ಹಾಗೂ ಇನ್ನಿತರರು ಉಪಸ್ಥಿತರಿದ್ದರು.