13.2 C
New York
14 October 2025
National

ಸಿಪಿಐ-ಎಂ ಪಕ್ಷದ ಹಿರಿಯ ನಾಯಕ ಸೀತಾರಾಂ ಯೆಚೂರಿ ಇನ್ನಿಲ್ಲ.

ಸೆಪ್ಟೆಂಬರ್ -12-2024 swabhimananews

ನವದೆಹಲಿ: ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ, ಹಿರಿಯ ನಾಯಕ ಸೀತಾರಾಮ್ ಯೆಚೂರಿ ಅವರು ಇಂದು ನಿಧನರಾಗಿದ್ದಾರೆ.

72 ವರ್ಷದ ಸೀತಾರಾಂ ಯೆಚೂರಿ ಅವರು ತೀವ್ರ ಉಸಿರಾಟದ ಸೋಂಕಿನಿಂದಾಗಿ ಏಮ್ಸ್ ನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ನಿಧನರಾಗಿದ್ದಾರೆ ಎಂದು ಪಕ್ಷ ಮತ್ತು ಆಸ್ಪತ್ರೆಯ ಮೂಲಗಳು ತಿಳಿಸಿವೆ.

ಸ್ಪೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ (SFI) ಸದಸ್ಯರಾದ ಒಂದು ವರ್ಷದ ನಂತರ 1975 ರಲ್ಲಿ ಸೀತಾರಾಮ್ ಯೆಚೂರಿ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್ವಾದಿ) ಗೆ ಸೇರಿದರು.

ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದಲ್ಲಿ (ಜೆಎನ್‌ಯು) ವಿದ್ಯಾರ್ಥಿಯಾಗಿದ್ದಾಗ ತುರ್ತು ಪರಿಸ್ಥಿತಿಯ ಸಮಯದಲ್ಲಿ ಅವರನ್ನು ಬಂಧಿಸಲಾಗಿತ್ತು. 1977 ಮತ್ತು 1988 ರ ನಡುವೆ ಮೂರು ಬಾರಿ ಜೆಎನ್‌ಯು ವಿದ್ಯಾರ್ಥಿಗಳ ಒಕ್ಕೂಟದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.

2004 ರಲ್ಲಿ ಯುಪಿಎ ಸರ್ಕಾರವನ್ನು ರಚಿಸುವಲ್ಲಿ ಸೀತಾರಾಂ ಯೆಚೂರಿ ಮಹತ್ವದ ಪಾತ್ರವನ್ನು ವಹಿಸಿದರು. ಇತ್ತೀಚೆಗೆ 45 ಲ್ಯಾಟರಲ್ ಎಂಟ್ರಿ ಅಧಿಕಾರಿಗಳ ನೇಮಕ ಜಾಹೀರಾತು ಕುರಿತು ಕೇಂದ್ರ ಸರ್ಕಾರದ ವಿರುದ್ಧ ಯೆಚೂರಿ ತೀವ್ರ ಟೀಕೆ ಮಾಡಿದ್ದರು. ನಂತರ ಕೇಂದ್ರ ಸರ್ಕಾರ ಆ ಹುದ್ದೆಗಳ ಜಾಹೀರಾತನ್ನು ಹಿಂಪಡೆದಿತ್ತು. ಭ್ರಷ್ಟ ರಾಜಕಾರಣಿಗಳ ಕಿವಿ ಹಿಂಡುತಿದ್ದ ಹಿರಿಯ ಮುತ್ಸದ್ದಿವೊಬ್ಬರು ಅಗಲಿದ್ದು ಇಡೀ ದೇಶಕ್ಕೆ ತುಂಬಲಾರದ ನಷ್ಟ ಎನ್ನಲಾಗಿದೆ.

Swabhimananews.

Related posts

ಪಾಂಡೇಶ್ವರ ಗ್ರಾಮದ ಸುರೇಶ್ .ಬಿ. ಪೂಜಾರಿ.ವಿಶ್ವ ಚಾಂಪಿಯಾನ್.ಭಾರತಕ್ಕೆ ಎರಡು ಚಿನ್ನದ ಪದಕ.

Swabhimana News Desk

ಮಹೇಂದ್ರಗಢ: ಶಾಲೆ ಬಸ್ ಪಲ್ಟಿ – ಐವರು ವಿದ್ಯಾರ್ಥಿಗಳು ಸಾವು, ಹಲವರಿಗೆ ಗಾಯ!

Swabhimana News Desk

ಮಧ್ಯಪ್ರದೇಶದಲ್ಲಿ ಕಂದಾಯ ಅಧಿಕಾರಿಯೊಬ್ಬರು ಲಂಚದ ಹಣವನ್ನು ಅಕ್ಷರಶಃ ತಿಂದು ತೇಗಿದ್ದಾರೆ.

Swabhimana News Desk

Leave a Comment