25.3 C
New York
8 July 2025
National

ಮಹಿಳಾ ಹತ್ಯೆ ಕೇಸ್ ನಲ್ಲಿ 9 ಮಂದಿ ಅರೆಸ್ಟ್ : ನಾಗಾ ಪ್ರದೇಶ ಬಂದ್…

ಜುಲೈ-17-2023 swabhimananews@gmail.com
ಇಂಫಾಲ್ : ಮಣಿಪುರದಲ್ಲಿ ಕಳೆದ 70 ದಿನಗಳಿಂದ ನಡೆಯುತ್ತಿರುವ ಹಿಂಸಾಚಾರ ಸದ್ಯಕ್ಕೆ ಕಡಿಮೆಯಾಗುವ ಲಕ್ಷಣಗಳು ಕಾಣುತ್ತಿಲ್ಲ. ಮಹಿಳೆ ಹತ್ಯೆ ಪ್ರಕರಣದಲ್ಲಿ ಒಂಬತ್ತು ಮಂದಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹತ್ಯೆಗೈದವರಲ್ಲಿ ಐವರು ಮಹಿಳೆಯರಿದ್ದು, ಜಿಲ್ಲೆಯ ವಿವಿಧೆಡೆ ಅವರನ್ನು ಬಂಧಿಸಲಾಗಿದೆ. ಇವರಿಂದ ಎರಡು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದರು. ಇಂಫಾಲ್ ಪೂರ್ವ ಜಿಲ್ಲೆಯ ಸವೊಂಬಾಂಗ್ ಪ್ರದೇಶದಲ್ಲಿ ಶನಿವಾರ ಸಂಜೆ ಮಹಿಳೆಯೊಬ್ಬರನ್ನು ಗುಂಡಿಕ್ಕಿ ಹತ್ಯೆ ಮಾಡಿರುವುದು ತಿಳಿದುಬಂದಿದೆ.

ಈ ಘಟನೆಯ ತನಿಖೆ ಮುಂದುವರಿದಿದ್ದು, ಈ ಕೊಲೆಯಲ್ಲಿ ಯಾರೇ ಭಾಗಿಯಾಗಿದ್ದರೂ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಇಂಫಾಲ್ ಪೂರ್ವ ಎಸ್ಪಿ ಹೇಳಿದ್ದಾರೆ. ಕೊಲೆಯಾದ ಮಹಿಳೆ ಮಾರಿಂಗ್ ನಾಗ ಸಮುದಾಯಕ್ಕೆ ಸೇರಿದವಳಾಗಿದ್ದು, ಆರೋಪಿಗಳ ಪೈಕಿ ಮೂವರನ್ನು ಈ ಪ್ರದೇಶದಿಂದ ಗಡಿಪಾರು ಮಾಡಲಾಗುವುದು ಎಂದು ಹಿಕಪ್ಮಲ್ ಗ್ರಾಮಿಣಾಭಿವೃದ್ಧಿ ಸಮಿತಿ ತಿಳಿಸಿದೆ.

ಮಹಿಳೆಯ ಹತ್ಯೆಯನ್ನು ವಿರೋಧಿಸಿ ನಾಗಾ ಅಪೆಕ್ಸ್ ಕಮಿಟಿ ಯುನೈಟೆಡ್ ನಾಗಾ ಕೌನ್ಸಿಲ್ (ಯುಎನ್‌ಸಿ) ಸೋಮವಾರ ಬಂದ್‌ಗೆ ಕರೆ ನೀಡಿದೆ. ರಾಜ್ಯದಲ್ಲಿ ನಾಗಾ ಜನಾಂಗ ಹೆಚ್ಚಿರುವ ಪ್ರದೇಶಗಳಲ್ಲಿ ಬೆಳಗ್ಗೆ 6 ಗಂಟೆಗೆ ಆರಂಭವಾದ ಬಂದ್ 12 ಗಂಟೆಗಳ ಕಾಲ ಮುಂದುವರಿಯಲಿದೆ ಎಂದು ಘೋಷಿಸಲಾಗಿದೆ. ಹತ್ಯೆಯ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕು ಮತ್ತು ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಯುಎನ್‌ಸಿ ಒತ್ತಾಯಿಸಿದೆ. ಮೇ 3 ರಿಂದ ಇದುವರೆಗೆ, 150 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು ಸಾವಿರಾರು ಜನರು ಗಾಯಗೊಂಡಿದ್ದರು.

Related posts

ಪಾಂಡೇಶ್ವರ ಗ್ರಾಮದ ಸುರೇಶ್ .ಬಿ. ಪೂಜಾರಿ.ವಿಶ್ವ ಚಾಂಪಿಯಾನ್.ಭಾರತಕ್ಕೆ ಎರಡು ಚಿನ್ನದ ಪದಕ.

Swabhimana News Desk

ಮಧ್ಯಪ್ರದೇಶದಲ್ಲಿ ಕಂದಾಯ ಅಧಿಕಾರಿಯೊಬ್ಬರು ಲಂಚದ ಹಣವನ್ನು ಅಕ್ಷರಶಃ ತಿಂದು ತೇಗಿದ್ದಾರೆ.

Swabhimana News Desk

ಮಹೇಂದ್ರಗಢ: ಶಾಲೆ ಬಸ್ ಪಲ್ಟಿ – ಐವರು ವಿದ್ಯಾರ್ಥಿಗಳು ಸಾವು, ಹಲವರಿಗೆ ಗಾಯ!

Swabhimana News Desk

Leave a Comment