3 September 2025
Karnataka

ನಿಮ್ಮೊಳಗಿನ ವಿಷ ಅರಿಯದ, ವಿಷಾದ ಪಡಲೇಬೇಕಾದ ದಿನಗಳು: ವಿಶ್ವೇಶ್ವರ ಭಟ್‌ ಕುರಿತು ಪ್ರಕಾಶ್ ರಾಜ್ ಕಿಡಿನುಡಿ.

ಜುಲೈ-17-2023 Swabhimananews@gmail.com

ವಿಶ್ವವಾಣಿ ಪ್ರಧಾನ ಸಂಪಾದಕ ವಿಶ್ವೇಶ್ವರ್ ಭಟ್ ತಮ್ಮ ಪುಸ್ತಕಗಳ ಬಿಡುಗಡೆ ಸಮಾರಂಭಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯರವರನ್ನು ಆಹ್ವಾನಿಸಿರುವ ಚರ್ಚೆಯ ಕಾವು ಇನ್ನೂ ಆರಿಲ್ಲ. ಸಿದ್ದರಾಮಯ್ಯನವರು ಕಾರ್ಯಕ್ರಮಕ್ಕೆ ಹೋಗಬಾರದೆಂದು ಮನವಿ ಮಾಡಿದ್ದ ಬಹುಭಾಷ ನಟ ಪ್ರಕಾಶ್ ರಾಜ್, “ನಿಮ್ಮೊಳಗಿನ ವಿಷ ಅರಿಯದ, ವಿಷಾದ ಪಡಲೇಬೇಕಾದ ದಿನಗಳು” ಎಂದು ವಿಶ್ವೇಶ್ವರ ಭಟ್‌ ಕುರಿತು ಹೇಳಿದ್ದಾರೆ.

ಜುಲೈ 22ರಂದು ಬೆಂಗಳೂರಿನ ಟೌನ್‌ಹಾಲ್‌ನಲ್ಲಿ ವಿಶ್ವವಾಣಿ ಪ್ರಕಟಿಸಿರುವ ಆರು ಪುಸ್ತಕಗಳು ಬಿಡುಗಡೆಯಾಗುತ್ತಿವೆ. ಈ ಪುಸ್ತಕಗಳ ಲೋಕಾರ್ಪಣೆಗೆ ಸಿದ್ದರಾಮಯ್ಯ ಅವರನ್ನು ಆಹ್ವಾನಿಸಿದ್ದು, ಆಹ್ವಾನ ಪತ್ರಿಕೆಯು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ವಿಶ್ವೇಶ್ವರ ಭಟ್ ಪತ್ರಕರ್ತರಾಗಿ ಕೆಲಸ ಮಾಡುವುದಕ್ಕಿಂತಲೂ ಮಹಿಳೆಯರನ್ನು ಹೀಗಳೆಯುತ್ತಾ, ಸಾವುಗಳನ್ನು ಸಂಭ್ರಮಿಸುತ್ತಾ ವಿಕೃತತೆ ಮೆರೆದಿದ್ದಾರೆ. ತಮ್ಮ ಲೇಖನದಲ್ಲಿ ರಾಷ್ಟ್ರಪತಿ ದ್ರೌಪತಿ ಮುರ್ಮುರವರ ಬಣ್ಣವನ್ನು ಹೀಯಾಳಿಸಿ ಜನಾಂಗೀಯತೆ ಮೆರೆದಿದ್ದಾರೆ. ಖ್ಯಾತ ಪತ್ರಕರ್ತೆ ಗೌರಿ ಲಂಕೇಶ್ ಕೊಲೆಯನ್ನು ಸಮರ್ಥಿಸಿದ್ದಾರೆ. ಅಂತಹ ವ್ಯಕ್ತಿಯ ಪುಸ್ತಕಗಳನ್ನು ಜಾತ್ಯಾತೀತರೆನಿಸಿಕೊಂಡ ಸಿದ್ದರಾಮಯ್ಯನವರು ಬಿಡುಗಡೆ ಮಾಡುವುದು ಎಷ್ಟು ಸರಿ ಎಂಬ ಪ್ರಶ್ನೆ ಜೋರಾಗಿ ಕೇಳಿಬಂದಿದೆ.

ಇದೇ ಹಿನ್ನಲೆಯಲ್ಲಿ ಟ್ವೀಟ್ ಮಾಡಿದ್ದ ಪ್ರಕಾಶ್ ರಾಜ್‌ರವರು, “ಸನ್ಮಾನ್ಯ ಸಿದ್ದರಾಮಯ್ಯನವರೇ.. ದಯವಿಟ್ಟು ಒಮ್ಮೆ ಯೋಚಿಸಿ .. ಇದು ತಮಗೆ ಶೊಭೆಯಲ್ಲ ಎಂದು ಮನವಿ ಮಾಡಿದ್ದರು.

ಇದಕ್ಕೆ ತಿರುಗೇಟು ನೀಡಿದ ವಿಶ್ವೇಶ್ವರ ಭಟ್, “ನೆನಪುಗಳು ಮಾಸುವುದಿಲ್ಲ! ನನ್ನ ಪುಸ್ತಕ ಬಿಡುಗಡೆಗೆ ಹೋಗಬೇಡಿ ಎನ್ನುವವರು, ನನ್ನೊಂದಿಗೆ ಪುಸ್ತಕ ಬಿಡುಗಡೆ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದೇಕೋ? ಡಬಲ್ ಸ್ಟ್ಯಾಂಡರ್ಡ್ ಅಂದ್ರೆ ಇದೇ ನೋಡಿ. (ಅವರು ನನ್ನೊಂದಿಗೆ ಭಾಗವಹಿಸಿದ ಹಲವು ಕಾರ್ಯಕ್ರಮಗಳ ಇನ್ನೂ ಅನೇಕ ಫೋಟೋಗಳು ನನ್ನ ಸಂಗ್ರಹದಲ್ಲಿದೆ. ಆಸಕ್ತಿಯಿದ್ದರೆ ಹೇಳಿ, ಬಿಡುಗಡೆ ಮಾಡುವೆ.)” ಎಂದು ತಮ್ಮ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದರು.

Related posts

ದಲಿತರ ನಿಧಿ ದುರ್ಬಳಕೆ ಕಾಂಗ್ರೆಸ್ ಸರಕಾರದ ವಿರುದ್ಧ.ಹೋರಾಟ.
ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ ಉಡುಪಿ ಜಿಲ್ಲೆ. ಮತ್ತು ದಲಿತ ಸಂಘರ್ಷ ಸಮಿತಿ
ಭೀಮ ವಾದ (ರಿ) ಉಡುಪಿ ಜಿಲ್ಲೆ.

Swabhimana News Desk

ಎಸ್ಸಿ, ಎಸ್ಟಿಗೆ ವಿಶೇಷ ಅನುದಾನ, ದೇಶದಲ್ಲಿ ಜಾತಿ ಗಣತಿ ಜಾರಿ ಮಾಡ್ತೇವೆ: ಪ್ರಿಯಾಂಕಾ ಗಾಂಧಿ

Swabhimana News Desk

ಇಂದು ಮತ್ತು ನಾಳೆ ಕರಾವಳಿ ಜಿಲ್ಲೆಗಳಲ್ಲಿ ಭಾರಿ ಮಳೆ ಸಾಧ್ಯತೆ : ಆರೇಂಜ್ ಅಲರ್ಟ್ ಘೋಷಣೆ.

Swabhimana News Desk

Leave a Comment