18.4 C
New York
8 June 2025
Karnataka

ಬೋಧಿಸತ್ವ ಬುದ್ಧವಿಹಾರ ಹಾವಂಜೆಯಲ್ಲಿ ವೈಶಾಖ ಬುದ್ಧ ಪೂರ್ಣಿಮೆ ಕಾರ್ಯಕ್ರಮ.

ಉಡುಪಿ: ಮೇ 13 -2025 swabhimananewsಬೋಧಿಸತ್ವ ಬುದ್ಧ ಫೌಂಡೇಶನ್ (ರಿ) ಉಡುಪಿ ಜಿಲ್ಲೆ , ಬೋಧಿಸತ್ವ ಬುದ್ಧ ವಿಹಾರ ಹಾವಂಜೆ ಮತ್ತು ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮವಾದ (ರಿ) ಉಡುಪಿ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ2569ನೇ ಬುದ್ದ ಜಯಂತಿಯ ಪ್ರಯುಕ್ತ ಉಡುಪಿ ಜಿಲ್ಲಾ ಆಸ್ಪತ್ರೆ ಅಜ್ಜರ್ ಕಾಡು ಇಲ್ಲಿನ ಎಲ್ಲಾ 150 ಒಳರೋಗಿಗಳಿಗೆ ಹಣ್ಣು ಹಂಪಲುಗಳನ್ನು ವಿತರಿಸಲಾಯಿತು.ಟ್ರಸ್ಟ್ ನ ಇಂತಹ ಅರ್ಥಪೂರ್ಣವಾದ ಸಾಮಾಜಿಕ ಕಾರ್ಯವನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾ ಸರ್ಜನ್ ಡಾ.ಅಶೋಕ್ ಹೆಚ್ ಮತ್ತು ಡಾ.ವಾಸುದೇವ್.ಎಸ್ ರವರು ಫೌಂಡೇಶನ್ ನ ಈ ಕಾರ್ಯವನ್ನು ಶ್ಲಾಘಿಸಿ ಈ ಉಡುಪಿ ಜಿಲ್ಲೆಯ ಬೋಧಿಸತ್ವ ಬುದ್ಧ ಫೌಂಡೇಶನ್ ಇಂತಹ ನೂರಾರು ಕಾರ್ಯಗಳನ್ನು ಮಾಡುವಂತಾಗಲಿ ಅತೀ ಎತ್ತರಕ್ಕೆ ಬೆಳೆಯಲಿ ಎಂದು ಶುಭ ಹಾರೈಸಿದರು.ಈ ಸಂದರ್ಭದಲ್ಲಿ ಬೋಧಿಸತ್ವ ಬುದ್ಧ ಫೌಂಡೇಶನ್ ನ ಅಧ್ಯಕ್ಷರಾದ ಶೇಖರ್ ಹಾವಂಜೆ, ಕಾರ್ಯದರ್ಶಿ ಶರತ್ಎಸ್, ಟ್ರಸ್ಟಿಗಳಾದ ವಿಠಲ್, ಪ್ರತಾಪ್ ಹಾಗೂ ವಿಹಾರದ ಮತ್ತು ಸಂಘಟನೆಯ ಪದಾಧಿಕಾರಿಗಳು ಮಹಾ ಉಪಾಸಕ, ಉಪಾಸಿಕರಾದ ಪ್ರಕಾಶ್ ಬಿ ಬಿ,ಪಕೀರಪ್ಪ ಎಂ, ಸಂಜೀವ ನಾಯ್ಕ್ ಕುಕ್ಕೆಹಳ್ಳಿ,ಗೋಪಾಲ್ ಶಿವಪುರ, ರಮೇಶ್ ಮಾಬಿಯಾನ್,ಸುಜಾತ ಎಸ್ ಹಾವಂಜೆ, ವಿಜಯ್ ಬಾರ್ಕೂರು, ಧಮ್ಮ ಪ್ರಾಧ್ಯಾಪಕಿ ಪೃಥ್ವಿ ಒಳಗುಡ್ಡೆ, ವನಿತಾ ಇನ್ನಿತರರು ಉಪಸ್ಥಿತರಿದ್ದರು.ಆ ನಂತರ ಹಾವಂಜೆಯಲ್ಲಿರುವ ಬೋಧಿಸತ್ವ ಬುದ್ಧ ವಿಹಾರದಲ್ಲಿ ಧಮ್ಮಾಚಾರಿಗಳಾದ ಶಂಭು ಸುವರ್ಣರವರ ನೇತೃತ್ವದಲ್ಲಿ ಬುದ್ಧ ವಂದನೆ, ಧ್ಯಾನ ಮತ್ತು ಮೈತ್ರಿ ಧ್ಯಾನ ನೆರವೇರಿತು.ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಿ ಪ್ರೋತ್ಸಾಹಿಸಲಾಯಿತು.(ಫೌಂಡೇಶನ್ ನ ವತಿಯಿಂದ ನಿರಂತರವಾಗಿ ಶಿಕ್ಷಣ, ಆರೋಗ್ಯ ಮತ್ತು ಸಮಾಜ ಸೇವೆಯನ್ನು ಮಾಡಲಾಗುತ್ತಿದೆ.)ಕೊನೆಗೆ ನೇಜಾರಿನ ಸ್ಪಂದನ ವಿಶೇಷ ಚೇತನ ಮಕ್ಕಳು ಹಾಗೂ ಸಾಲ್ಮರದ ವಿಶೇಷ ಚೇತನ ಮಕ್ಕಳೊಂದಿಗೆ ಸಹಭೋಜನ ಮಾಡಲಾಯಿತು.ಬುದ್ಧ ಜಯಂತಿಯ ಅಂಗವಾಗಿ ಬೋಧಿ ಸತ್ತಹ (ಸಪ್ತಾಹ) ಕಾರ್ಯಕ್ರಮವನ್ನು ದಿನಾಂಕ:- 05/05/2025 ರಿಂದ 11/05/2025 ರವರೆಗೆ ಮನೆ ಮನೆಗೆ ಬುದ್ಧನಡಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ಮೊದಲನೇ ದಿನದಂದು ಉಡುಪಿಯ ಧಮ್ಮಾಚಾರಿ ಶಂಭು ಸುವರ್ಣ ರವರ ಸಹೋದರಿ ಕೊಡವೂರಿನ ಕಮಲ ಸುವರ್ಣ ರವರ ಮನೆಯಲ್ಲಿ ಹಾಗೂ ಪೆರಂಪಳ್ಳಿಯ ಬೌದ್ಧ ಚಿಂತಕರಾದ ಸೋಮಪ್ಪ ಹೆಚ್. ಜಿ ರವರ ಮನೆಯಲ್ಲಿ ಬುದ್ಧವಂದನೆ ಮಾಡಲಾಯಿತು.

ಎರಡನೇ ದಿನ ಶಿವಪುರದ ಗೋಪಾಲ್ ಮತ್ತು ವಸಂತಿ ದಂಪತಿಯವರ ಮನೆಯಲ್ಲಿ, ಮೂರನೇ ದಿನ ಕುಕ್ಕೆಹಳ್ಳಿಯ ಸಂಜೀವ ಮತ್ತು ಸುರೇಖಾ ದಂಪತಿಗಳ ಮನೆಯಲ್ಲಿ, ನಾಲ್ಕನೇ ದಿನ ಚೇರ್ಕಾಡಿಯ ಜಾರ್ಜೆಡ್ಡಿನ ಮುತ್ತಕ್ಕ ರಾಮಣ್ಣನವರ ಮನೆಯಲ್ಲಿ,5ನೇ ದಿನ ಹೆಬ್ರಿ ತಾಲೂಕಿನ ಪಡುಕುಡೂರಿನ ನಾಥು ಮತ್ತು ಬೇಬಿರವರ ಮನೆಯಲ್ಲಿ ,ಆರನೇ ದಿನ ಬ್ರಹ್ಮಾವರದ ಅಪ್ಪ-ಅಮ್ಮ ಅನಾಥಾಶ್ರಮದಲ್ಲಿ ವೃದ್ಧರಿಗೆ ದಿನಬಳಕೆ ವಸ್ತುಗಳ ವಿತರಣೆ ಹಾಗೂ ಹೇರೂರಿನ ಸದಾಶಿವ ಶೆಟ್ಟಿ ಮತ್ತು ವಿನೋದ ಶೆಡ್ತಿ ದಂಪತಿಗಳ ಮನೆಯಲ್ಲಿ,ಏಳನೇ ದಿನ ಉಪ್ಪೂರಿನ ಸರಸ್ವತಿ ನಗರದ ಅಂಬೇಡ್ಕರ್ ಭವನದಲ್ಲಿ ಬುದ್ಧ ವಂದನೆ, ಧ್ಯಾನ, ಮೈತ್ರಿ ಧ್ಯಾನ, ಧಮ್ಮದಾನ ಕಾರ್ಯಕ್ರಮ ನೆರವೇರಿಸುವುದರೊಂದಿಗೆ ವಿಶಿಷ್ಟವಾಗಿ, ಅರ್ಥಪೂರ್ಣವಾಗಿ ಬುದ್ಧ ಜಯಂತಿ ಆಚರಿಸಲಾಯಿತು.12/05/2025 ರಂದು ಬೋಧಿಸತ್ವ ಬುದ್ಧ ವಿಹಾರ ಹಾವಂಜೆಯಲ್ಲಿ ನಡೆದ ಬುದ್ಧ ಜಯಂತಿ ಕಾರ್ಯಕ್ರಮದಲ್ಲಿ ದೇವರಾಜ್ , ಶಂಭು ಸುವರ್ಣ, ಫಕೀರಪ್ಪ ಎಂ, ಗೋಪಾಲ್ ಶಿವಪುರ, ಸಂಜೀವ ನಾಯ್ಕ್ ಕುಕ್ಕೆಹಳ್ಳಿ,ಪ್ರಕಾಶ್ ಬಿಬಿ, ಸುಜಾತ, ಪೃಥ್ವಿ ಮುಂತಾದವರು ಉಪಸ್ಥಿತರಿದ್ದರು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭೋದಿಸತ್ವ ಬುದ್ಧ ಫೌಂಡೇಶನ್ ನ ಅಧ್ಯಕ್ಷರಾದ ಶೇಖರ್ ಹಾವಂಜೆ ರವರು ವಹಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಜಯಶೀಲ.ಬಿ.ರೋಟೆ, ಸ್ವಾಗತವನ್ನು ಶರತ್ .ಎಸ್ ಹಾವಂಜೆ , ಧನ್ಯವಾದವನ್ನು ವಿಠ್ಠಲ್ ಸಾಲಿಕೇರಿ ರವರು ನೆರವೇರಿಸಿದರು.

Related posts

ಎಸ್ಸಿ, ಎಸ್ಟಿಗೆ ವಿಶೇಷ ಅನುದಾನ, ದೇಶದಲ್ಲಿ ಜಾತಿ ಗಣತಿ ಜಾರಿ ಮಾಡ್ತೇವೆ: ಪ್ರಿಯಾಂಕಾ ಗಾಂಧಿ

Swabhimana News Desk

ಸೌಜನ್ಯ ಕೇಸ್: ‘ಅಭಿಮಾನಿಗಳನ್ನು ನಾನೇ ತಡೆದಿರುವೆ, ಏನನ್ನಾದರೂ ಮಾಡಲು ಸಿದ್ದ’: ಹೋರಾಟಗಾರರಿಗೆ ಹೆಗ್ಗಡೆ ಪರೋಕ್ಷ ಬೆದರಿಕೆ?

Swabhimana News Desk

ಎಸ್‍ಸಿ-ಎಸ್‍ಟಿ ಮೀಸಲು ಹಣ ಬಳಕೆಗೆ ಪಂಚತಂತ್ರ-2 ಜಾರಿ: ಸಚಿವ ಪ್ರಿಯಾಂಕ್ ಖರ್ಗೆ

Swabhimana News Desk

Leave a Comment