ಜುಲೈ -15-2023.
Swabhimananews@gmail.comಇಂದು ಉಡುಪಿ, ಮಂಗಳೂರು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ.
Swabhimananews@gmail.com
ಇಂದು ಉಡುಪಿ, ಮಂಗಳೂರು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ.
Swabhimananews@gmail.com ಮುಂದಿನ 24 ಗಂಟೆಗಳಲ್ಲಿ ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಹಾಗಾಗಿ ಈ ಜಿಲ್ಲೆಗಳಲ್ಲಿ ಆರೇಂಜ್ ಅಲರ್ಟ್ ಘೋಷಿಸಲಾಗಿದೆ.
ಜುಲೈ 15 ಮತ್ತು 16 ರಂದು ಕರಾವಳಿ ಜಿಲ್ಲೆಗಳು ಹಾಗೂ ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಶಿವಮೊಗ್ಗ ಹಾಗೂ ಕೊಡಗು ಜಿಲ್ಲೆ ಸೇರಿದಂತೆ 6 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ದಕ್ಷಿಣ ಒಳನಾಡು, ಉತ್ತರ ಒಳನಾಡು ಜಿಲ್ಲೆಗಳಲ್ಲಿ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
Swabhimananews@gmail.com
ಕೊಪ್ಪಳ ಜಿಲ್ಲೆಯಲ್ಲಿ ಭಾರಿ ಮಳೆ
ಕೊಪ್ಪಳ ನಗರದಲ್ಲಿ ನಾಲ್ಕು ಗಂಟೆಗೂ ಅಧಿಕ ಮಳೆ ಸುರಿದಿದ್ದರಿಂದ ಎಲ್ಲೆಲ್ಲಿ ನೀರೋ ನೀರು ಎನ್ನುವಂತಾಗಿದೆ. ಚರಂಡಿಗಳು ತುಂಬಿ ರಸ್ತೆಗಳಲ್ಲಿಯೇ ನೀರು ನದಿಯಂತೆ ಹರಿಯುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು.ಕೊಪ್ಪಳ ನಗರದ ಜವಾಹರ ರಸ್ತೆ ಸೇರಿದಂತೆ ಮೊದಲಾದ ಕಡೆಯಲ್ಲಿ ರಸ್ತೆಯಲ್ಲಿಯೇ ನೀರು ರಭಸವಾಗಿ ಹರಿಯುತ್ತಿರುವುದರಿಂದ ಸಂಚಾರಕ್ಕೆ ಸಮಸ್ಯೆಯಾಗಿತ್ತು.
Swabhimananews@gmail.com.
ಉತ್ತರ ಕನ್ನಡದಲ್ಲಿಯೂ ಮಳೆ ಚುರುಕು.
ಭಟ್ಕಳದಲ್ಲಿ ಮನೆಯೊಂದು ಕುಸಿದು ಅಪಾರ ಪ್ರಮಾಣದ ನಷ್ಟ ಉಂಟಾಗಿದೆ.
Swabhimananews@gmail.com
ಕಲಬುರಗಿ ನಗರದಲ್ಲಿ ಒಂದೆಡೆ ತುಂತುರು ಮಳೆಯಾದರೆ ಇನ್ನೊಂದೆಡೆ ರಣಬಿಸಿಲು. ಹೀಗಾಗಿ ಮಳೆಯಾದರೂ ಬೆಳೆಗಳಿಗೆ ಕಳೆಯಿಲ್ಲದಂತಾಗಿದೆ. ಪ್ರತಿದಿನ ಮೋಡ ಕವಿದ ವಾತಾವರಣ. ಅಲ್ಲಲ್ಲಿ ಸಣ್ಣ ಮಳೆಯಾಗುತ್ತಿದೆ.
Swabhimananews@gmail.com
ಬೆಳಗಾವಿ ಜಿಲ್ಲೆಯಲ್ಲಿ ಮಳೆಯಿಲ್ಲದೆ ಕುಡಿಯುವ ನೀರಿಗಾಗಿ ಪರದಾಟ, ಜನತೆ
ಅನ್ಯ ಜಿಲ್ಲೆಗಳಿಂದ ದುಡ್ಡು ಕೊಟ್ಟು ಟ್ಯಾಂಕರ್ ಮೂಲಕ ಕುಡಿಯುವ ನೀರು ಸರಬರಾಜು ಮಾಡಿಕೊಳ್ಳುತ್ತಿದ್ದಾರೆ.
Swabhimananews@gmail.com