25 C
New York
26 June 2025
Karnataka

ಲಂಚ ಪಡೆದು ಸಿಕ್ಕಿಬಿದ್ದು ಓಡಿ ಹೋಗುತ್ತಿದ್ದ ಭ್ರಷ್ಟ ಅಧಿಕಾರಿಯನ್ನು ಬೆನ್ನಟ್ಟಿ ವಶಕ್ಕೆ ಪಡೆದ ಲೋಕಾಯುಕ್ತ ಪೊಲೀಸರು,

ಜುಲೈ -15–2023 swabhimananews@gmail.com
ಬೆಂಗಳೂರು: ನಗರದಲ್ಲಿ ಲಂಚ ಪಡೆಯುತ್ತಿದ್ದ ಅಧಿಕಾರಿಯನ್ನು ಲೋಕಾಯುಕ್ತ ಅಧಿಕಾರಿಗಳು 15 ಕಿ.ಮೀ ತನಕ ಬೆನ್ನಟ್ಟಿ ತಮ್ಮ ವಶಕ್ಕೆ ಪಡೆದ ಘಟನೆ ನೆಲಮಂಗಲ ಬಳಿಯ ಸೊಂಡೇಕೊಪ್ಪದಲ್ಲಿ ನಡೆದಿದೆ.
swabhimananews@gmail.com
ರಂಗದಾಮಯ್ಯ ಎಂಬುವವರು ಕೆ.ಜಿ ಸರ್ಕಲ್ ಬಳಿಯಿರುವ ತಹಶೀಲ್ದಾರ್ ಆಫೀಸ್‌ನ ಫುಡ್ ಇನ್‌ಸ್ಪೆಕ್ಟರ್ ಆಗಿರುವ ಮಹಂತೇಗೌಡ ಬಳಿ ಟ್ರೇಡ್ ಲೈಸೆನ್ಸ್ ಮಾಡಿಸಲು ತೆರಳಿದ್ದರು. ಈ ವೇಳೆ ಅಧಿಕಾರಿ 1 ಲಕ್ಷ ರೂ. ಹಣವನ್ನು ಲಂಚವನ್ನಾಗಿ ಕೇಳಿದ್ದ. ಮುಂಗಡವಾಗಿ 43 ಸಾವಿರ ರೂ. ಹಣವನ್ನು ಪಡೆಯುವಾಗ ಲೋಕಾಯುಕ್ತ ಅಧಿಕಾರಿಗಳಿಗೆ ಸಿಕ್ಕಿ ಬಿದ್ದಿದ್ದಾನೆ ಎನ್ನಲಾಗಿದೆ.

swabhimananews@gmail.com
ಲೋಕಾಯುಕ್ತ ಅಧಿಕಾರಿಗಳು ಈ ಬಗ್ಗೆ ಮಾಹಿತಿ ಪಡೆದು ಟ್ರ್ಯಾಪ್ ಮಾಡಿದ್ದಾರೆ. ಹಣ ಪಡೆಯುವ ವೇಳೆ ಟ್ರ್ಯಾಪ್ ಎಂದು ತಿಳಿದು ಪರಾರಿಯಾಗಲು ಮಹಂತೇಗೌಡ ಯತ್ನಿಸಿದ್ದಾನೆ. ಹಣ ಪಡೆದು ಸುಮಾರು 15 ಕಿ.ಮೀ ದೂರದ ವರೆಗೆ ಪರಾರಿಯಾದ. ಆದರೆ ಬೆನ್ನಟ್ಟಿದ ಲೋಕಾಯುಕ್ತ ಅಧಿಕಾರಿಗಳು ಮಹಂತೇಗೌಡನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

swabhimananews@gmail.com

Related posts

ಮುರುಘಾ ಶ್ರೀ ಮತ್ತೆ ಜೈಲಿಗೆ: ಜಾಮೀನು ರದ್ದುಗೊಳಿಸಿ ಸುಪ್ರೀಂಕೋರ್ಟ್ ಆದೇಶ

Swabhimana News Desk

ಕೇಸ್ ಖುಲಾಸೆ ಮಾಡಿಕೊಡಲು ಲಂಚ : ಲೋಕಾಯುಕ್ತ ಬಲೆಗೆ ಬಿದ್ದ ಹೆಡ್‌ ಕಾನ್‌ಸ್ಟೇಬಲ್‌.

Swabhimana News Desk

ದಲಿತರಿಗೆ ವಂಚನೆ ಮಾಡಿದ ಕಾಂಗ್ರೆಸ್ ಸರಕಾರ.ನೈತಿಕ ಹೊಣೆ ಹೊತ್ತು. ಸಮಾಜಕಲ್ಯಾಣ ಸಚೀವ ಡಾ.ಹೆಚ್ ಸಿ ಮಹದೇವಪ್ಪ ರಾಜಿನಾಮೆಗೆ RPIK ಮತ್ತು ಕದಸಂಸ ಭೀಮವಾದ ಆಗ್ರಹ.

Swabhimana News Desk

Leave a Comment