24.5 C
New York
31 July 2025
Karnataka

ಎಸ್‍ಸಿ-ಎಸ್‍ಟಿ ಮೀಸಲು ಹಣ ಬಳಕೆಗೆ ಪಂಚತಂತ್ರ-2 ಜಾರಿ: ಸಚಿವ ಪ್ರಿಯಾಂಕ್ ಖರ್ಗೆ

ಜುಲೈ-15-2023 swabhimananews@gmail.com
ಬೆಂಗಳೂರು, : ರಾಜ್ಯದಲ್ಲಿ ಗ್ರಾಮ ಪಂಚಾಯಿತಿಗಳಲ್ಲಿ ಪರಿಶಿಷ್ಟ ಜಾತಿ, ಪಂಗಡದ ಕಲ್ಯಾಣ ಕಾರ್ಯಕ್ರಮಗಳಿಗೆ ಮೀಸಲಿಟ್ಟ ಹಣವನ್ನು ಸಮರ್ಪಕವಾಗಿ ಬಳಕೆ ಮಾಡಲು ಅನುಕೂಲವಾಗುವಂತೆ ಪಂಚತಂತ್ರ-2 ತಂತ್ರಜ್ಞಾನವನ್ನು ಮುಂದಿನ ತಿಂಗಳಿನಿಂದ ಜಾರಿ ಮಾಡಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ ಖರ್ಗೆ ತಿಳಿಸಿದ್ದಾರೆ.
swabhimananews@gmail.com
ಶುಕ್ರವಾರ ವಿಧಾನ ಪರಿಷತ್ತಿನ ಪ್ರಶೋತ್ತರ ಅವಧಿಯಲ್ಲಿ ಕಾಂಗ್ರೆಸ್‌ನ ಸದಸ್ಯ ಡಾ.ತಿಮ್ಮಯ್ಯ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಪಂಚತಂತ್ರ-2 ತಂತ್ರಜ್ಞಾನ ಅಳವಡಿಕೆ ಮಾಡುವುದರಿಂದ ಯಾವ ಪಂಚಾಯಿತಿಯಲ್ಲಿ ಎಷ್ಟು ಹಣವಿದೆ. ಎಷ್ಟು ಹಣ ಖರ್ಚು ಮಾಡಿದ್ದಾರೆ. ಬಾಕಿ ಉಳಿದಿರುವ ಹಣ ಯಾಕೆ ಖರ್ಚು ಮಾಡಿಲ್ಲ ಎನ್ನುವ ಮಾಹಿತಿ ಆನ್‌ಲೈನ್‌ನಲ್ಲಿ ಲಭ್ಯವಾಗಲಿದ್ದು, ಇದರಿಂದ ಲೋಪ ಎದುರಾಗದಂತೆ ಎಚ್ಚರಿಕೆ ವಹಿಸಲಾಗುವುದು ಎಂದು ತಿಳಿಸಿದರು.

swabhimananews@gmail.com
2022-23ನೆ ಸಾಲಿನಲ್ಲಿ ರಾಜ್ಯಾದ್ಯಂತ 716.55 ಕೋಟಿ ರೂ.ಹಣವನ್ನು ಪರಿಶಿಷ್ಟ ಜಾತಿ ಪಂಗಡದ ಕಲ್ಯಾಣ ಕಾರ್ಯಕ್ರಮಗಳಿಗೆ ಮೀಸಲಿಡಲಾಗಿತ್ತು. ಆದರೆ, 501ಕೋಟಿ ರೂ.
swabhimananews@gmail.com.

ಮಾತ್ರ ಖರ್ಚು ಮಾಡಿದ್ದಾರೆ. ಇನ್ನೂ 217 ಕೋಟಿ ರೂ.ಗೂ ಹೆಚ್ಚು ಹಣ ಬಾಕಿ ಇದೆ. ಹಿಂದಿನ ಸರಕಾರ ಈ ಹಣದ ಬಗ್ಗೆ ಸಮರ್ಪಕವಾಗಿ ಮೇಲ್ವಿಚಾರಣೆ ಮಾಡದ ಹಿನ್ನೆಲೆಯಲ್ಲಿ ಹಣ ಉಳಿದುಕೊಂಡಿದೆ. ಮುಂದಿನ ದಿನಗಳಲ್ಲಿ ಆ ರೀತಿ ಲೋಪವಾಗದಂತೆ ಪಂಚತಂತ್ರ-2 ತಂತ್ರಜ್ಞಾನದ ಮೂಲಕ ಎಚ್ಚರಿಕೆ ವಹಿಸಲಾಗುವುದು ಎಂದು ಹೇಳಿದರು. swabhimananews@gmail.com

Related posts

ರಾಜ್ಯದಲ್ಲಿ ಕಳೆದ ಐದು ವರ್ಷಗಳಲ್ಲಿ 10ಸಾವಿರಕ್ಕೂ ಅಧಿಕ ‘ಅಟ್ರಾಸಿಟಿ ಕೇಸ್’ ದಾಖಲು

Swabhimana News Desk

ಕಾಂಗ್ರೆಸ್ ಸರಕಾರ ದಲಿತರ ನಿಧಿಯನ್ನು ದುರ್ಬಳಕೆ ಮಾಡಿರುವುದನ್ನು ಉನ್ನತ ಮಟ್ಟದ ತನಿಖೆ ನಡೆಸುವಂತೆ. ಆಗ್ರಹಿಸಿ ಕ ದ ಸಂ ಸ ಭೀಮವಾದ ಮತ್ತು RPIK ವತಿಯಿಂದ ರಾಜ್ಯಪಾಲಾರಿಗೆ ದೂರು.

Swabhimana News Desk

ಎಸ್ಸಿ, ಎಸ್ಟಿಗೆ ವಿಶೇಷ ಅನುದಾನ, ದೇಶದಲ್ಲಿ ಜಾತಿ ಗಣತಿ ಜಾರಿ ಮಾಡ್ತೇವೆ: ಪ್ರಿಯಾಂಕಾ ಗಾಂಧಿ

Swabhimana News Desk

Leave a Comment