23.4 C
New York
27 July 2024
Karnataka

IT. ದಾಳಿ 4.8 ಕೋಟಿ ರೂಪಾಯಿ ಬಿಜೆಪಿ ಅಭ್ಯರ್ಥಿ ಸುಧಾಕರ್ ವಿರುದ್ಧ ಪ್ರಕರಣ ದಾಖಲು.

ಏಪ್ರಿಲ್ 27-2024 – swabhimananews

ಐಟಿ ದಾಳಿ: 4.8 ಕೋಟಿ ಜಪ್ತಿ, ಬಿಜೆಪಿ ಅಭ್ಯರ್ಥಿ ಸುಧಾಕರ್ ವಿರುದ್ಧ ಎಫ್ಐಆರ್ ದಾಖಲು!
ನೆಲಮಂಗಲ: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಕೆ ಸುಧಾಕರ್ ವಿರುದ್ಧ ಎಸ್ಎಸ್ಟಿ ಅಧಿಕಾರಿಗಳು ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಆದಾಯ ತೆರಿಗೆ ಇಲಾಖೆ (IT) ಅಧಿಕಾರಿಗಳು ಬಿಜೆಪಿ ಮುಖಂಡ, ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಡಾ. ಕೆ ಸುಧಾಕರ್ ಆಪ್ತ, ಬಿಜೆಪಿಯ ಮಾಜಿ ಜಿಲ್ಲಾಧ್ಯಕ್ಷ ಮಾದಾವರ ಗೋವಿಂದಪ್ಪ ಮನೆ ಮೇಲೆ ದಾಳಿ ಮಾಡಿ, 4.82 ಕೋಟಿ ಹಣವನ್ನು ಜಪ್ತಿ ಮಾಡಿದರು.

ಅಧಿಕಾರಿಗಳು ಹಣವನ್ನು ಜಪ್ತಿ ಮಾಡಿಕೊಂಡ ಬಳಿಕ ಬೆಂಗಳೂರು ಉತ್ತರ ತಾಲೂಕಿನ ಚುನಾವಣಾ ನೋಡೆಲ್ ಅಧಿಕಾರಿ ಮುನೀಶ್ ಮೌದ್ಗಿಲ್ ಅವರಿಗೆ ಬಿಜೆಪಿ ಅಭ್ಯರ್ಥಿ ಸುಧಾಕರ್ ವಾಟ್ಸಪ್ ಕರೆ ಮಾಡಿ, “ಗೋವಿಂದಪ್ಪ ಅವರಿಗೆ ಸಹಾಯ ಮಾಡಿ, ಅಲ್ಲದೆ ಹಣವನ್ನು ವಾಪಸು ಕೊಡಿಸುವಂತೆ” ಹೇಳಿದ್ದಾರೆ. ಅಲ್ಲದೆ ಗೋವಿಂದಪ್ಪ ಕೂಡ ಮುನೀಶ್ ಮೌದ್ಗಿಲ್ ಅವರಿಗೆ ವಾಟ್ಸಪ್ ಮೂಲಕ “Please Help will we great full to you” ಎಂದು ಸಂದೇಶ ಕಳುಹಿಸಿದ್ದಾರೆ.

ಈ ವಿಚಾರವನ್ನು ಸಾಕ್ಷಿ ಸಮೇತ ಮುನೀಶ್ ಮೌದ್ಗಿಲ್ ಅವರು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ನೀಡಿದ್ದಾರೆ. ಬಳಿಕ ಎಸ್ಎಸ್ಟಿ ತಂಡದ ಮುಖ್ಯಸ್ಥ ದಶರಥ್ .ವಿ. ಕಂಬಾರ್ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸುಧಾಕರ್ ವಿರುದ್ಧ ಅನುಚಿತ ಪ್ರಭಾವ, ಲಂಚ ಮತ್ತು ಭ್ರಷ್ಟಾಚಾರದ ಪ್ರಯತ್ನ ಮಾಡಿದ್ದಕ್ಕಾಗಿ RP ಕಾಯಿದೆ 1951ರ ಅಡಿಯಲ್ಲಿ ಸೆಕ್ಷನ್ 171ಇ (ಲಂಚ ಸ್ವೀಕಾರ), 171ಎಫ್ (ಚುನಾವಣೆಯಲ್ಲಿ ಅನಪೇಕ್ಷಿತ ಪ್ರಭಾವ ಬೀರುವಿಕೆ) 171ಬಿ (ಮತದಾರರಿಗೆ ಹಣದ ಆಮಿಷ), 171ಸಿ (ಚುನಾವಣೆ ಕರ್ತವ್ಯಕ್ಕೆ ಅಡ್ಡಿ ಹಾಗೂ ಹಸ್ತಕ್ಷೇಪ) ಆರೋಪದಡಿ ಎಫ್ಐಆರ್ ದಾಖಲಾಗಿದೆ.

ದಾಳಿ ನಡೆದಿದ್ದು ಹೇಗೆ?
ಗೋವಿಂದಪ್ಪನವರ ನೆಲಮಂಗಲದ ಮನೆಯಲ್ಲಿ ಹಣ ಇದೆ ಎಂದು ಮಾಹಿತಿ ತಿಳಿಯುತ್ತಿದ್ದಂತೆಯೇ ಐಟಿ ಅಧಿಕಾರಿಗಳು ಶುಕ್ರವಾರ (ಏಪ್ರಿಲ್ 25) ರಂದು ದಾಳಿ ಮಾಡಿದ್ದರು. 10 ಜನ ಐಟಿ ಅಧಿಕಾರಿಗಳು ಮನೆಯ ಇಂಚಿಂಚು ಪರಿಶೀಲನೆ ಮಾಡಿದ್ದರು. ಈ ವೇಳೆ ಕೋಟ್ಯಾಂತರ ರೂಪಾಯಿ ನಗದು ಹಣ ಹಾಗೂ ಚಿನ್ನಾಭರಣೆ ಪತ್ತೆಯಾಗಿತ್ತು. ಕೂಡಲೇ ಐಟಿ ಸಿಬ್ಬಂದಿ ಹಣ ಎಣಿಕೆ ಮೆಷಿನ್ ಹಾಗೂ ಚಿನ್ನಭರಣ ತೂಕದ ಮೆಷಿನ್ ತಗೆದುಕೊಂಡು ಬಂದು ಎಣಿಕೆ ಮಾಡಿದ್ದು, ಮನೆಯಲ್ಲಿ ದಾಖಲೆ ಇಲ್ಲದೆ ಪತ್ತೆಯಾದ ಬರೋಬ್ಬರಿ 4 ಕೋಟಿ 80ಲಕ್ಷ ರೂ. ಹಣ ವಶಕ್ಕೆ ಪಡೆದುಕೊಂಡಿದ್ದರು. ಈ ಹಣವನ್ನು ಚುನಾವಣೆ ಸಂದರ್ಭದಲ್ಲಿ ಮತದಾರರಿಗೆ ಹಂಚಲೆಂದು ಸಂಗ್ರಹಿಸಲಾಗಿತ್ತು ಎನ್ನಲಾಗಿದೆ.

Swabhimananews

Related posts

ಲಂಚ ಪಡೆದು ಸಿಕ್ಕಿಬಿದ್ದು ಓಡಿ ಹೋಗುತ್ತಿದ್ದ ಭ್ರಷ್ಟ ಅಧಿಕಾರಿಯನ್ನು ಬೆನ್ನಟ್ಟಿ ವಶಕ್ಕೆ ಪಡೆದ ಲೋಕಾಯುಕ್ತ ಪೊಲೀಸರು,

Swabhimana News Desk

ಆರ್ ಆರ್ ನಗರ ಕ್ಷೇತ್ರದ ಶಾಸಕ ಮುನಿರತ್ನ ವಿರುದ್ದ ಎಫ್ಐಆರ್.

Swabhimana News Desk

ಹೆಚ್‌.ಡಿ. ರೇವಣ್ಣ , ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ.ಪ್ರಕರಣ ದಾಖಲು!

Swabhimana News Desk

Leave a Comment