18.7 C
New York
7 October 2026
Coastal

ಉಡುಪಿ: ಯೂನಿಯನ್ ಬ್ಯಾಂಕ್ ಸೀಲ್ ದುರ್ಬಳಕೆ: ನಗರಸಭೆಗೆ ತೆರಿಗೆ ವಂಚನೆ – ಪೌರಾಯುಕ್ತರಿಂದ ದೂರು ದಾಖಲು.ಹತ್ತಾರು ಕೋಟಿ ರೂಪಾಯಿ ವಂಚಿಸಿರುವ ಬಗ್ಗೆ ಅನುಮಾನ..!

Udupi-February-13-2026 swabhimananewsಉಡುಪಿ:ನಗರಸಭೆಯ ಪೌರಾಯುಕ್ತರಾದ ಮಹಾಂತೇಶ್ ನಗರ ಸಭೆ, ಉಡುಪಿ ಇವರ ಕಚೇರಿಯಲ್ಲಿ ಆಸ್ತಿತೆರಿಗೆ ಪಾವತಿಯನ್ನು ಇ-ಸ್ವೀಕೃತಿ ಮೂಲಕ ಚಲನ್ ಸೃಜನೆ ಮಾಡಿ ಯೂನಿಯನ್ ಬ್ಯಾಂಕ್ ನಲ್ಲಿ ನಗರಸಭೆ ಖಾತೆ ಸಂಖ್ಯೆ ಗೆ ಜಮಾ ಮಾಡಲಾಗುತ್ತದೆ.ದಿನಾಂಕ 03/02/2026 ರಂದು ಕಚೇರಿಯಲ್ಲಿ ಆಸ್ತಿತೆರಿಗೆ ಪಾವತಿಯನ್ನು ತುಲನೆ ಮಾಡುತ್ತಿರುವಾಗ ದಿನಾಂಕ 28/01/2026 ರಂದು ಆಸ್ತಿತೆರಿಗೆ ಪಾವತಿ ಎಂದು ಚಲನ್ ಮೇಲೆ ಯೂನಿಯನ್ ಬ್ಯಾಂಕ್ ನ ಸೀಲ್ ಲಭ್ಯವಿದ್ದು, ಆದರೆ ಅದೇ ದಿನಾಂಕದಲ್ಲಿ ಯೂನಿಯನ್ ಬ್ಯಾಂಕ್ ಪುಸ್ತಕದ ವಿವರ ಪಟ್ಟಿಯಲ್ಲಿ ಪಾವತಿ ಆಗಿರುವ ಬಗ್ಗೆ ನಮೂದು ಇಲ್ಲದಿರುವುದು ಕಂಡು ನಗರಸಭೆಯ ಸಿಬ್ಬಂದಿ ಯವರು ಪೌರಾಯುಕ್ತರ ಗಮನಕ್ಕೆ ತಂದಿರುತ್ತಾರೆ.ಮುಂದುವರೆದು ದಿನಾಂಕ 04/02/2026 ರಂದು ಪುನಃ ಆಸ್ತಿತೆರಿಗೆ ಪಾವತಿಯನ್ನು ತುಲನೆ ಮಾಡುತ್ತಿರುವಾಗ ದಿನಾಂಕ 04/02/2026 ರಂದು ಯೂನಿಯನ್ ಬ್ಯಾಂಕ್ ಸೀಲ್ ಹೊಂದಿದ ಚಲನ್ ಗಳನ್ನು ಪರಿಶೀಲನೆ ನಡೆಸಿದಾಗ ಅವುಗಳಲ್ಲಿ ಈಗಾಗಲೇ ದಿನಾಂಕ 28/01/2026 ರಂದು ಜನರೇಟ್ ಆಗಿದ್ದ ಚಲನ್ ಸಂಖ್ಯೆ ಆಗಿರುತ್ತವೆ.ಒಂದೇ ಚಲನ್ ಸಂಖ್ಯೆಗೆ ಎರಡು ಬೇರೆ ಬೇರೆ ದಿನಾಂಕಗಳಲ್ಲಿ ಯೂನಿಯನ್ ಬ್ಯಾಂಕ್ ಸೀಲ್ ಉಳ್ಳ ಚಲನ್ ಗಳು ದೊರೆತಿದ್ದು, ಆರೋಪಿಗಳು ಯೂನಿಯನ್ ಬ್ಯಾಂಕ್ ನ ಸೀಲ್ ನ್ನು ದುರ್ಬಳಕೆ ಮಾಡಿ ಆಸ್ತಿ ತೆರಿಗೆ ಪಾವತಿ ಮಾಡಿದ ಹಣವನ್ನು ಪಡೆದು ಮೋಸ ವಂಚನೆ ಮಾಡಿರುವುದಾಗಿದೆ.ಇಂದು ಮಾತ್ರವಲ್ಲದೆ ಇದರ ಹಿಂದೆ ಬ್ಯಾಂಕ್ ನ ಮತ್ತು ನಗರಸಭೆಯ ಅಧಿಕಾರಿಗಳು ಸಿಬ್ಬಂದಿಗಳು ಸೇರಿ ಹತ್ತಾರು ಕೋಟಿ ರೂಪಾಯಿ ವಂಚಿಸಲಾಗಿದೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ.ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 26/2026 ಕಲಂ: 336(2), 336(3), 340(2), 318(4) R/W 3(5) BNS ರಂತೆ ಪ್ರಕರಣ ದಾಖಲಾಗಿರುತ್ತದೆ.
Swabhimananews

Related posts

ಸರಕಾರದ ಕೋಟಿ ಕೋಟಿ ರೂಪಾಯಿ ಹಾಗೂ ಕೋಟ್ಯಂತರ ರೂಪಾಯಿ ಮೌಲ್ಯದ ಕೆರೆಯ ಭೂಮಿಯನ್ನೇ ನುಂಗಿದ.
ವರುಣತೀರ್ಥದ ಕರುಣಕಥೆ.ಇದು

Swabhimana News Desk

ಬ್ರಹ್ಮಾವರ: ಸೈಬರ್‌ ಅಪರಾಧ ಜಾಗೃತಿ ಕಾರ್ಯಾಗಾರ – ತಿಳುವಳಿಕೆ ಇದ್ದವರೇ ಸೈಬರ್‌ ಅಪರಾಧದಿಂದ ವಂಚನೆಗೊಳಗಾಗುವುದು ಹೆಚ್ಚು: ಜಯಪ್ರಕಾಶ ಹೆಗ್ಡೆ.

Swabhimana News Desk

ಸಿದ್ಧಾಂತಗಳ ಪಾಲನೆಯಿಂದ ಸದೃಢ ಹೋರಾಟ ಸಾಧ್ಯ  ಚೇತನ್.ಅಹಿಂಸಾ

Swabhimana News Desk

Leave a Comment