ಉಡುಪಿ:ಅಕ್ಟೋಬರ್ -14-2025 swabhimananews
ಸ್ವತಂತ್ರ ಭಾರತದ ಸಂವಿಧಾನ ಶಿಲ್ಪಿ ಡಾ|| ಬಿ. ಆರ್. ಅಂಬೇಡ್ಕರ್ ರವರು 1956 ರ ಅಕ್ಟೋಬರ್ 14 ರಂದು ನಾಗಪುರದಲ್ಲಿ ಲಕ್ಷಾಂತರ ಅನುಯಾಯಿಗಳೊಂದಿಗೆ ಧಮ್ಮ ದೀಕ್ಷೆ ಪಡೆದು ಈ ದೇಶದಲ್ಲಿ ನಶಿಸಿ ಹೋಗುತ್ತಿರುವ ಬೌದ್ಧ ಧಮ್ಮವನ್ನು ಮತ್ತೆ ಮರು ಸ್ಥಾಪಿಸಿದರು ಎಂದರೂ ತಪ್ಪಾಗಲಾರದು.
ಆ ಒಂದು ಐತಿಹಾಸಿಕ ದಿನದ ನೆನಪಿಗಾಗಿ 14/10/2025ರ ಬೋಧಿಸತ್ವ ಬುದ್ಧ ಫೌಂಡೇಶನ್ (ರಿ) ಉಡುಪಿ ಜಿಲ್ಲೆ ಹಾಗೂ ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮವಾದ (ರಿ) ಉಡುಪಿ ಜಿಲ್ಲೆ ಇದರ ಜಂಟಿ ಸಹಯೋಗದೊಂದಿಗೆ ಬೋಧಿಸತ್ವ ಬುದ್ಧ ವಿಹಾರ ಹಾವಂಜೆಯಲ್ಲಿ ಧಮ್ಮ ದೀಕ್ಷಾ ದಿನಾಚರಣೆ ಕಾರ್ಯಕ್ರಮ ಆಚರಿಸಲಾಯಿತು.
ಮಂಗಳೂರಿನ ಹಿರಿಯ ಧಮ್ಮಾಚಾರಿಗಳಾದ ಎಸ್. ಆರ್. ಲಕ್ಷ್ಮಣ್ ರವರ ನೇತೃತ್ವದಲ್ಲಿ ಬೆಳಿಗ್ಗೆ 11:30 ಕ್ಕೆ ಬುದ್ಧ ವಂದನೆ, ಧಮ್ಮ ವಂದನೆ,
ಸಂಘ ವಂದನೆ, ಸುತ್ತ ಪಠಣ, ಧ್ಯಾನ, ಮೈತ್ರಿ ಧ್ಯಾನ ನಡೆಸಿಕೊಟ್ಟು ಬೌದ್ಧ ಧಮ್ಮಕ್ಕೆ ಸೇರ್ಪಡೆಯಾದವರಿಗೆ ಧಮ್ಮ ದೀಕ್ಷೆ ನೀಡಿದರು.
ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮೇಣದ ಬತ್ತಿಯ ಬೆಳಕನ್ನು ಚಿಮ್ಮಿಸುವ ಮೂಲಕ ಸಭಾ ಕಾರ್ಯಕ್ರಮದ ವೇದಿಕೆಯ ಎಲ್ಲಾ ಗಣ್ಯರು ಉದ್ಘಾಟಿಸಿದರು.
ಪ್ರಾಸ್ತವಿಕವಾಗಿ ವಿಠಲ್ ಸಾಲಿಕೇರಿಯವರು ಧಮ್ಮದ ಕುರಿತು ಅನೇಕ ಸಲಹೆ ಸೂಚನೆಗಳನ್ನು ನೀಡಿದರು. ಮುಖ್ಯ ಅತಿಥಿಗಳಾಗಿ ಎಸ್.ಆರ್. ಲಕ್ಷ್ಮಣ್ ಮಂಗಳೂರು ಹಿರಿಯ ಧಮ್ಮಾಚಾರಿಗಳು,
ಶಂಭು ಸುವರ್ಣ ಕೊಡವೂರು ಉಡುಪಿ ಧಮ್ಮಾಚಾರಿಗಳು, ಶೇಖರ್ ಹಾವಂಜೆ ಧಮ್ಮಾಚಾರಿಗಳು ಹಾಗೂ ಅಧ್ಯಕ್ಷರು ಬೋಧಿಸತ್ವ ಬುದ್ಧ ಫೌಂಡೇಶನ್ (ರಿ) ಉಡುಪಿ ಜಿಲ್ಲೆ , ಗೋಪಾಲ್ ಶಿವಪುರ ಜಿಲ್ಲಾ ಸಂಘಟನಾ ಸಂಚಾಲಕರು ಕ.ದ.ಸಂ.ಸ ಭೀಮವಾದ (ರಿ) ಉಡುಪಿ ಜಿಲ್ಲೆ,
ರವಿಕಲಾ ಟೀಚರ್, ಸುಜಾತ. ಎಸ್ ಹಾವಂಜೆ, ಅನಿಲ್ ಫೆರ್ನಾಂಡಿಸ್, ಪ್ರಭಾಕರ್ ಮೆಸ್ತಾ ಸಂತೆಕಟ್ಟೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ವಿಠಲ್ ಹಾವಂಜೆ, ಪ್ರತಾಪ್ ಒಳಗುಡ್ಡೆ, ಸತೀಶ್ ಹಾವಂಜೆ,
ರಮೇಶ್ ಮಾಬಿಯನ್, ಸತೀಶ್ ಒಳಗುಡ್ಡೆ, ದಿನೇಶ್ ಕೊಕ್ಕರ್ಣೆ, ಸುನೀತಾ ಒಳಗುಡ್ಡೆ, ಲೀಲಾ ಒಳಗುಡ್ಡೆ, ಮುತ್ತಕ್ಕ, ರೂಪ.ವಿ,ಸುಧೀರ್ ಒಳಗುಡ್ಡೆ, ನಾಥು ಒಳಗುಡ್ಡೆ, ವಸಂತಿ, ನಾಗಲಕ್ಷ್ಮೀ, ವಿಘ್ನೇಶ್, ಆಶಾ, ವರ್ಷ, ಸನ್ನತಿ, ಸಾತ್ವಿಕ್, ಸಾನ್ವಿ,
ಚಿರಾಗ್ ಹಾಗೂ ಬುದ್ಧ ಮತ್ತು ಅಂಬೇಡ್ಕರರ ಅನುಯಾಯಿಗಳು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಜಯಶೀಲಾ. ಬಿ ರೋಟೆ ನಿರೂಪಿಸಿ ಸ್ವಾಗತಿಸಿದರು. ಪೃಥ್ವಿ. ಒಳಗುಡ್ಡೆ ವಂದನಾರ್ಪಣೆಗೈದರು.