17.8 C
New York
8 October 2025
Coastal

ಮಲ್ಪೆ ಗೋಲ್‌ಮಾಲ್ ಸೆಂಟರ್ ನ ಸ್ಟೋರಿ.ಕೋಟ್ಯಾಂತರ ರೂಪಾಯಿಯ ಸರಕಾರಿ ಭೂಮಿ ನುಂಗಣ್ಣರು ಯಾರು ಗೊತ್ತಾ…?

ಉಡುಪಿ:26-09-2025-Swabhimananews

ಹೌದು….. ಇದು ಅಂತಿಂಥಾ ಸ್ಟೋರಿಯಲ್ಲ.ಒಂದೆಡೆ ಮೀನುಗಾರರು ಪ್ರತಿನಿತ್ಯ ಸ್ವಾಭಿಮಾನದಿಂದ ಒಂದೊತ್ತು ಊಟಕ್ಕಾಗಿ ಉರಿ ಬಿಸಿಲಲ್ಲಿ ಒದ್ದಾಡ್ತಾ ಇದ್ದಾರೆ,ಸಣ್ಣಪುಟ್ಟ ಸವಲತ್ತಿಗಾಗಿ ಮೀನುಗರಿಕಾ ಇಲಾಖೆಯ ಅಧಿಕಾರಿಗಳ ಕೈಕಾಲು ಹಿಡಿದು ಕಚೇರಿ ಅಲೆದಾಡುತ್ತಿರುತ್ತಾರೆ.ಅದ್ರೆ ಬಡ ಮೀನುಗಾರರ ಒಂದೇ ಒಂದು ಕೆಲಸ ಮಾಡಿಕೊಡದ ಮೀನುಗಾರಿಕೆ ಇಲಾಖೆ ಅಧಿಕಾರಿಗಳು ,ಮಲ್ಪೆಯ ಕೆಲ‌ ಬ್ರೋಕರ್ ಗಳ ಜೊತೆ ಸೇರಿ ಮಾಡಿದ ಐನಾತಿ ಕೆಲಸ ಏನದ್ರೂ ನಿಮಗೆ ಗೊತ್ತಾದ್ರೆ…ನೀವು ಖಂಡಿತ ಇವರನ್ನು ಕ್ಷಮಿಸಲ್ಲ.

ಮಲ್ಪೆ ಫಿಶ್ ಟ್ರೇಡ್ ಸೆಂಟರ್ ಎಂಬ ಹೆಸರಿನ ಸಂಸ್ಥೆಯಿಂದ ಸರಕಾರಕ್ಕೆ ಕೋಟ್ಯಂತರ ರೂಪಾಯಿ ವಂಚನೆ,ಇಲಾಖೆಯ ಭೂಮಿಯಲ್ಲಿ ಖಾಸಗಿಯವರ ಅಕ್ರಮ ಕಟ್ಟಡಗಳು,ವಾಣಿಜ್ಯ ಮಳಿಗೆಗಳ ಮಾಲೀಕರ ದರ್ಬಾರು*…!

ಉಡುಪಿ ಜಿಲ್ಲೆಯ ಉಡುಪಿ ತಾಲೂಕಿನ ಕೊಡವೂರು ಗ್ರಾಮದ ಮಲ್ಪೆಯಲ್ಲಿರುವ ಸರಕಾರಿ ಭೂಮಿಯಲ್ಲಿ ಬಂಡವಾಳಶಾಹಿಗಳು ಹಾಗೂ ಮೀನುಗಾರಿಕೆ ಇಲಾಖೆಯ. ಅಧಿಕಾರಿಗಳು ಮಾಡಿರುವ ಭಾರೀ ಅವ್ಯವಹಾರಗಳು ಬಯಲಿಗೆ ಬರಲಾರಂಭಿಸಿದೆ.

ಅಸಲಿಗೆ ಏನಿದು ಪ್ರಕರಣ?

ಮಿನುಗಾರಿಕಾ ಇಲಾಖೆಯ ಭೂಮಿ ಸರ್ವೇ ನಂಬರ್ 262 1/ಸಿ /1ರಲ್ಲಿ
ಹಲವಾರು ದಶಕಗಳ ಹಿಂದೆ. ಸ್ವಾತಂತ್ರ್ಯ ಹೋರಾಟಗಾರರಾದ ದಿ.ಕೆ ಆರ್ ಬಂಗೇರ ಎಂಬವರಿಗೆ ಅಂದಿನ ಸರಕಾರ ಸ್ವಾತಂತ್ರ್ಯ ಹೋರಾಟಗಾರರ ನೆಲೆಯಲ್ಲಿ 1ಎಕರೆ ಭೂಮಿಯನ್ನು ಗುತ್ತಿಗೆ ಆಧಾರದಲ್ಲಿ ಸುದರ್ಶನ್ ಐಸ್ ಪ್ಲಾಂಟ್ ಎಂಬ ಹೆಸರಿನ ಮಂಜುಗಡ್ಡೆ ಸ್ಥಾವರ ಸ್ಥಾಪಿಸಲು ಗುತ್ತಿಗೆ ಆಧಾರದಲ್ಲಿ ಭೂಮಿ ಮಂಜೂರು ಮಾಡಲಾಗಿತ್ತು.

ಕೆ ಆರ್ ಬಂಗೇರ ಮತ್ತು ಅವರ ಪತ್ನಿ ಮರಣದ ನಂತರ ಕೆ. ಆರ್ ಬಂಗೇರರ ಮಗಳಾದ ಶ್ರೀಮತಿ ಪ್ರೇಮಲತಾ ಕೆ.ಬಂಗೇರ ರವರು ಈ ಸುದರ್ಶನ್ ಐಸ್ ‌ಪ್ಲಾಂಟ್ ನ ಭೂಮಿಯ ಗುತ್ತಿಗೆ ಕರಾರನ್ನು ತನ್ನ ಹೆಸರಿಗೆ ವರ್ಗಾಯಿಸಿಕೊಳ್ಳುತ್ತಾರೆ.

ಆದರೆ ಸ್ಥಳೀಯರ ಪ್ರಕಾರ ಪ್ರೇಮಲತಾ ಕೆ. ಬಂಗೇರ ರವರು ಉಡುಪಿ ಜಿಲ್ಲೆಯ ನಿವಾಸಿಗರೇ ಅಲ್ಲ.! ಇವರು ದೂರದ ಮುಂಬೈ ನಿವಾಸಿಯಾಗಿದ್ದಾರೆ

. ಹಾಗೂ ಈ ಮೀನುಗಾರಿಕಾ ಚಟುವಟಿಕೆಗಳಲ್ಲಿ ಯಾವತ್ತೂ ಇವರು ಪಾಲ್ಗೊಂಡವರಲ್ಲ ,ಇವರ ಹೆಸರನ್ನು ಕೆಲವು ಪ್ರಭಾವಿ ಕಾಣದ ಕೈಗಳು ದುರುಪಯೋಗಪಡಿಸಿಕೊಂಡಿರುವ ಸಾಧ್ಯತೆ ಇದೇ ಎಂದು ಸಾಮಾಜಿಕ ಹೋರಾಟಗಾರರು ಅರೋಪಿಸಿ ಕೋರ್ಟ್ ಮೆಟ್ಟಲೇರಿದ್ದಾರೆ.

ಇಷ್ಟೇ ಅಲ್ಲ ಈ ಸುದರ್ಶನ್ ಐಸ್ ಪ್ಲಾಂಟ್ ಕಾರ್ಯಚರಿಸದೆ ಪಾಳು ಬಿದ್ದು ಹತ್ತಾರು ವರ್ಷಗಳೇ ಕಳೆದಿತ್ತು, ಅಷ್ಟೂ ವರ್ಷಗಳು ಇಲಾಖೆಗೆ ಭೂಮಿಯ ಗುತ್ತಿಗೆಯ ಹಣವನ್ನು ಪಾವತಿಸದೆ, ಗುತ್ತಿಗೆ ಕರಾರನ್ನು ನವೀಕರಿಸದೆ ಪಾಳು ಬಿದ್ದಿತ್ತು.

ಇಲ್ಲಿಗೆ ಶುರುವಾಯ್ತು ನೋಡಿ ತೆರೆಮರೆ ಕಸರತ್ತು.

ಇಲ್ಲೊಂದು ಕಾಣದ ಕೈಗಳು ಪೂರ್ವ ನಿಯೋಜಿತ ಯೋಜನೆ ರೂಪಿಸಿ ಈ ಮೀನುಗಾರಿಕಾ ಇಲಾಖೆಯ ಕೋಟ್ಯಾಂತರ ರೂಪಾಯಿ ಬೆಲೆಬಾಳುವ ಭೂಮಿಯನ್ನು ಕಬಳಿಸುವ ಏಕೈಕ ಉದ್ದೇಶದಿಂದಲೇ ಈ ಪ್ರಭಾವಿಗಳು ತಮ್ಮ ಎಲ್ಲಾ ಪ್ರಭಾವವನ್ನು ಬಳಸಿ ಮೀನುಗಾರಿಕಾ ನಿರ್ದೇಶಕರ,ಸಚಿವರ, ಸ್ಥಳೀಯ ಜನಪ್ರತಿನಿದಿಗಳ ಹಾಗೂ ಇಲಾಖೆಯ ಅಧಿಕಾರಿಗಳ ಸಂಪೂರ್ಣ ಸಹಕಾರ ಮತ್ತು ಬೆಂಬಲವನ್ನು ಪಡೆದು ಈ ಭೂಮಿಯ ದಾಖಲೆಗಳಲ್ಲಿ ಹಾಗೂ ಭೂಮಿ ಗುತ್ತಿಗೆ ಕರಾರಿನಲ್ಲಿ ಸುದರ್ಶನ್ ಐಸ್ ಪ್ಲಾಂಟ್ ಎಂಬ ಹೆಸರು ನಮೂದಾಗಿದ್ದನ್ನು ಕಾನೂನುಬಾಹಿರವಾಗಿ ತಿರುಚಿ ಪ್ರೇಮಲತಾ ಕೆ. ಬಂಗೇರ ಎಂದು ನಮೂದಿಸಲಾಗಿದೆ.

ಅಸಲಿಗೆ ಈ ಪ್ರೇಮಲತಾ ಕೆ.ಬಂಗೇರ ಎಂಬವರು ಈ ಭೂಮಿ ಗುತ್ತಿಗೆ ಕರಾರು ಪ್ರಕ್ರಿಯೆಯಲ್ಲಿ ಬಾಗವಹಿಸಿರುವುದೇ ಅನುಮಾನ ಹಾಗೂ ಕರಾರಿಗೆ ಖುದ್ದಾಗಿ ಸಹಿ ಹಾಕಲು ಇಲಾಖೆಗೆ ಬಾರದೆ ಪ್ರೇಮಲತಾ ಕೆ. ಬಂಗೇರರ ಸಹಿ ಹಾಕಿದವರು ಯಾರು ಎನ್ನುವುದು ದೂರುದಾರರಿಗೆ,ಸಾರ್ವಜನಿಕರಿಗೆ ಕಾಡುವ ಪ್ರಶ್ನೆ
ಇದು ಸಂಪೂರ್ಣ ನಕಲಿ ಕರಾರುಪತ್ರ ಆಗಿರುತ್ತದೆ.
ಮೂಲ ಗುತ್ತಿಗೆ ಕರಾರಿನ ಷರತ್ತುಗಳನ್ನು ಸಂಪೂರ್ಣವಾಗಿ ಉಲ್ಲಂಘಿಸಲಾಗಿದೆ ಎನ್ನಲಾಗಿದೆ.

ಸದರಿ ಇಲಾಖೆಯ ಭೂಮಿಯಲ್ಲಿ ಮಂಜುಗಡ್ಡೆ ಸ್ಥಾವರ ಮತ್ತು ಮೀನು ಸಂಸ್ಕರಣ ಘಟಕ ಸ್ಥಾಪಿಸುವುದಾಗಿ ಇಲಾಖೆಗೆ ಸುಳ್ಳು ಹಾಗೂ ತಪ್ಪು ಮಾಹಿತಿನೀಡಿ, ಹಾಗೂ ನಕಲಿ ದಾಖಲೆಗಳನ್ನು ಸೃಷ್ಟಿಸಿ ಪ್ರೇಮಲತಾ ಕೆ. ಬಂಗೇರ ರವರ ಪೋರ್ಜರಿ ಸಹಿಯನ್ನು ಹಾಕಲಾಗಿದೆ. ಕರಾರಿನಲ್ಲಿ ಮತ್ತು ಇನ್ನಿತರ ದಾಖಲೆಗಳಲ್ಲಿ ಎನ್ನುವುದು ದೂರುದಾರರ ಮತ್ತು ಸಾಮಾಜಿಕ ಹೋರಾಟಗಾರರ ಆರೋಪ.

ಈ ಒಂದು ಬಹುಕೋಟಿ ರೂಪಾಯಿಯ ಹಗರಣದಲ್ಲಿ.
ನಕಲಿ ಮೀನುಗಾರಿಕಾ ಐಸ್ ಪ್ಲಾಂಟ್ ಬ್ರೋಕರ್ ಒಬ್ಬನ ಮಾಸ್ಟರ್ ಪ್ಲಾನ್ ನಿಂದ ಈ ನೂರಾರು ಕೋಟಿ ಲೂಟಿ ಹೊಡೆಯುವ ಯೋಜನೆ ಹುಟ್ಟಿಕೊಂಡಿದ್ದು.

ಈ ನಕಲಿ ಮೀನು ಗಾರಿಕ ಎಜೇಂಟ್. ಪ್ರಭಾವಿಗಳ,ಮತ್ತು ಕೆಲವು ರಾಜಕಾರಣಿಗಳ,
ಉನ್ನತಮಟ್ಟದ ಅಧಿಕಾರಿಗಳನ್ನು ಸಂಪರ್ಕಿಸಿ ಅವರೆಲ್ಲರನ್ನು ಈ ಅಕ್ರಮ ದಂದೆಯಲ್ಲಿ ಗೌಪ್ಯ ಪಾಲುದಾರರನ್ನಾಗಿಸಿ ಕೊಂಡು ಸರಕಾರದ ಬಹುಕೋಟಿ ಲೂಟಿಮಾಡಲಾಗಿದೆ. ಹಾಗೂ ಈ ಇಲಾಖೆಯ 1ಎಕರೆ ಭೂಮಿಯ ಜೊತೆಗೆ ಸುತ್ತಮುತ್ತಲಿನ ಇಲಾಖೆಗೆ,ಸರಕಾರಕ್ಕೆ ಸಂಬಂಧಿಸಿದ ಇತರ ಭೂಮಿಯಲ್ಲೂ ಸುಮಾರು ಅಂದಾಜು ಒಂದು ಎಕರೆಗೂ ಹೆಚ್ಚಿನ ಭೂಮಿಯನ್ನು ಒತ್ತುವರಿ ಮಾಡಿಕೊಂಡು ಒಟ್ಟು 2 ಎಕರೆ ಸರಕಾರಿ ಭೂಮಿಯನ್ನು ಅಕ್ರಮವಾಗಿ ಕಬಳಿಸಿ ಬೇರೆಯವರಿಗೆ ಅಕ್ರಮವಾಗಿ ಕೋಟ್ಯಂತರ ಬೆಲೆಗೆ ಮಾರಾಟ ಮಾಡುವ ಉದ್ದೇಶದಿಂದಲೇ ನಡೆಸಿರುವ ಬಹುದೊಡ್ಡ ಕುತಂತ್ರ ಇದಾಗಿದೆ.

ಮತ್ತು ಇಲಾಖೆಯು ಭೂಮಿಗುತ್ತಿಗೆ ನೀಡಿದ ಉದ್ದೇಶ ಮಂಜುಗಡ್ಡೆ ಸ್ಥಾವರ ಹಾಗೂ ಮೀನು ಸಂಸ್ಕರಣ ಘಟಕ ಸ್ಥಾಪಿಸಲು ಆಗಿರುತ್ತದೆ .ಆದರೆ ಇಲ್ಲಿ ಈ ಇಲಾಖೆಯ ಭೂಮಿಯಲ್ಲಿ ಮಂಜುಗಡ್ಡೆ ಸ್ಥಾವರನು ಇಲ್ಲ ಮೀನು ಸಂಸ್ಕರಣ ಘಟಕವು ಇರುವುದಿಲ್ಲ ಇಲಾಖೆಯ ಭೂಮಿಯಲ್ಲಿ ಇರುವುದು.

ಅಕ್ರಮವಾಗಿ ಯಾವುದೇ ಸಂಬಂಧ ಪಟ್ಟ ಇಲಾಖೆಗಳ ನಿರಕ್ಷೆಪಣಾ ದೃಢಪತ್ರ ಇಲ್ಲದೆ,ಕಟ್ಟಡ ಕಟ್ಟೋಣ ಪರವಾನಗಿಯೂ ಪಡೆಯದೆ
ಮಲ್ಪೆ ಫಿಶ್ ಟ್ರೇಡ್ ಸೆಂಟರ್ ಮಲ್ಪೆ ಎಂಬ ಹೆಸರಿನ ಬೃಹತ್ ಆರ್ ಸಿ ಸಿ ಕಟ್ಟಡಗಳು,ವಾಣಿಜ್ಯ ಮಳಿಗೆಗಳು ವ್ಯಾಪಾರ ವಹಿವಾಟುಗಳನ್ನು ಭರ್ಜರಿಯಾಗಿ ಅಬ್ಬರದಿಂದ ನಡೆಸುತ್ತಿರುವುದು ಕಾಣುತ್ತದೆ.
ಸರಕಾರದ/ಮೀನುಗಾರಿಕಾ ಇಲಾಖೆಯ ಭೂಮಿಯನ್ನು ಇಲಾಖೆಯ ಅನುಮತಿ ಇಲ್ಲದೆ. ಗುತ್ತಿಗೆ ನೀಡಲಾದ ಉದ್ದೇಶವನ್ನೇ ಧಿಕ್ಕರಿಸಿ ಇಲಾಖೆಯ ಕೋಟ್ಯಾಂತರ ರೂಪಾಯಿ ಬೆಲೆಬಾಳುವ ಭೂಮಿಯಲ್ಲಿ ಅಕ್ರಮವಾಗಿ ಇಂತಹ ಶಾಶ್ವತ ಕಟ್ಟಡಗಳು ತಲೆಯೆತ್ತಿದರು ತಮ್ಮ ಗಮನಕ್ಕೆ ಇಲ್ಲದಂತೆ ಕುಳಿತಿರುವ ಇಲಾಖೆಯ ಅಧಿಕಾರಿಗಳ ಕರ್ತವ್ಯ ಲೋಪಕ್ಕೆ ಶಿಕ್ಷೆ ಶಾಶ್ವತವಾಗಿ ಅಧಿಕಾರಿಗಳು ಜೈಲು ಸೇರಾಗಬೇಕಾಗುತ್ತದೆ.

ಹಾಗೂ ಸರಕಾರಕ್ಕೆ ಇದುವರೆಗೆ ವಂಚಿಸಲಾದ ನೂರಾರು ಕೋಟಿ ರೂಪಾಯಿಯ ಬಡ್ಡಿ ಸಮೇತ ವಸೂಲಿ ಮಾಡಿ ಸದರಿ ಭೂಮಿಯಲ್ಲಿರುವ ಅಕ್ರಮ ಕಟ್ಟಡಗಳನ್ನು ಈ ಕೂಡಲೇ ಇಲಾಖೆ ಮತ್ತು ಜಿಲ್ಲಾಡಳಿತ ತಮ್ಮ ವಶಕ್ಕೆ ಪಡೆದುಕೊಂಡು ಅದನ್ನು ಕಾನೂನು ಬದ್ಧಗೊಳಿಸಿ ಅಲ್ಲಿನ ಪರಿಶಿಷ್ಟ ಜಾತಿಯ ಮೀನುಗಾರರಿಗೆ ನಿಜವಾದ ಮೀನುಗಾರಿಕಾ ಚಟುವಟಿಕೆ ಮಾಡುವ ಪರಿಶಿಷ್ಟ ಜಾತಿಯ ಮೀನುಗಾರರಿಗೆ ನೀಡಬೇಕೆಂದು ಸ್ಥಳೀಯ ದಲಿತ ಮೀನುಗಾರರು ದಲಿತ ಸಂಘಟನೆಗಳು ದಲಿತಪರ ಹೋರಾಟಗಾರರು ಹಾಗೂ ನ್ಯಾಯಪರ ಹೋರಾಟಗಾರರು, ಕಾನೂನು ಹೋರಾಟಗಾರರು ಒಕ್ಕೊರಳಿನಿಂದ ಆಗ್ರಹಿಸಿದ್ದಾರೆ.

ಈ ಪ್ರಕರಣದಬಗ್ಗೆ ಈಗಾಗಲೇ ಮಾನ್ಯ ಲೋಕಾಯುಕ್ತದಲ್ಲಿ ಮೀನುಗಾರಿಕಾ ಇಲಾಖೆಯ ನಿರ್ದೇಶಕರು ಸೇರಿದಂತೆ ಅನೇಕ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.
ಪ್ರಕರಣ ತನಿಖಾ ಹಂತದಲ್ಲಿದೆ ಮತ್ತು ಈಗಾಗಲೇ ಇದರ ವಿರುದ್ಧ ಮಾನ್ಯ ಉಚ್ಚನ್ಯಾಯಾಲಯದಲ್ಲಿಯೂ ದಾವೆ ಹೂಡಲಾಗಿದೆ ಎಂದು ಪ್ರಕರಣದ ಕಾನೂನು ಹೋರಾಟಗಾರರು ತಿಳಿಸಿದ್ದಾರೆ.

ಹಾಗೂ ಸರಕಾರಕ್ಕೆ ಕೋಟ್ಯಂತರ ರೂಪಾಯಿ ವಂಚನೆ ಮಾಡಿರುವ ಹಾಗೂ ಈ ನೆಲದ ಕಾನೂನನ್ನು ದಿಕ್ಕರಿಸಿ ಈ ಬಹುಕೋಟಿ ವಂಚನೆಯಲ್ಲಿ.ಅಧಿಕಾರಿಗಳು, ಜನಪ್ರತಿನಿಧಿಗಳನ್ನು ಬಳಸಿಕೊಂಡು ಈ ಯೋಜನೆ ರೂಪಿಸಿದ ನಕಲಿ ಮೀನುಗಾರಿಕ ಎಜೇಂಟ್ ನ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಆತನನ್ನು ಈ ಕೂಡಲೇ ಬಂಧಿಸಿ ಸಂಪೂರ್ಣ ತನಿಖೆ ನಡೆಸಬೇಕು ಅವಾಗ ಇನ್ನಷ್ಟು ಮೀನುಗಾರಿಕ ಹೆಸರಲ್ಲಿಇವನು ಇನ್ನಷ್ಟು ಕೋಟಿ ಲೂಟಿಮಾಡಿದ ನಿಜ ಸ್ಟೋರಿ ಹೊರ ಬರಲಿದೆ.

ಈ ಪ್ರಕರಣದಲ್ಲಿ ಭಾಗಿಯಾದ ಎಲ್ಲಾ ಅಧಿಕಾರಿಗಳನ್ನು ಸೇವೆಯಿಂದ ವಜಾ ಮಾಡುವಂತೆ ಮತ್ತು ಕಟ್ಟುನಿಟ್ಟಿನ ಕಾನೂನು ಶಿಕ್ಷೆ ವಿಧಿಸುವಂತೆ. ಕಾನೂನು ಹೋರಾಟಗಾರರು, ಸ್ಥಳೀಯರು ದಲಿತ ಸಂಘಟನೆಗಳು,ಸಾಮಾಜಿಕ ಹೋರಾಟಗಾರರು ಈ ಮೂಲಕ ಆಗ್ರಹಿಸಿದ್ದಾರೆ.

Swabhimananews

Related posts

ಭಾರತದ ಸಂವಿಧಾನ ಶಿಲ್ಪಿ ಡಾ.ಬಾಬಸಾಹೇಬ್ ಅಂಬೇಡ್ಕರ್ ರವರಿಗೆ ಮತ್ತು ರಾಜ್ಯದ, ದೇಶದ ದಲಿತ ಸಮುದಾಯಕ್ಕೆ ಬಹಿರಂಗವಾಗಿ ನಿಂದಿಸಿ, ಅಪಮಾನ ಮಾಡಿರುವ ಉಡುಪಿ ಹಿಂದೂ ಜಾಗರಣಾ ವೇದಿಕೆಯ ಉಮೇಶ್ ನಾಯ್ಕನನ್ನು ಕಾಂಗ್ರೆಸ್ ಸರಕಾರ ಈ ಕೂಡಲೇ ಬಂಧಿಸಿ, ಅಂಬೇಡ್ಕರ್ ಮತ್ತು ಸಂವಿಧಾನದ ಪರ ಇರುವುದನ್ನು ಸಾಬೀತು ಪಡಿಸಲಿ.ಶೇಖರ್ ಹಾವಂಜೆ.

Swabhimana News Desk

ಸರಕಾರದ ಕೋಟಿ ಕೋಟಿ ರೂಪಾಯಿ ಹಾಗೂ ಕೋಟ್ಯಂತರ ರೂಪಾಯಿ ಮೌಲ್ಯದ ಕೆರೆಯ ಭೂಮಿಯನ್ನೇ ನುಂಗಿದ.
ವರುಣತೀರ್ಥದ ಕರುಣಕಥೆ.ಇದು

Swabhimana News Desk

ಚುನಾವಣಾ ದಿನದಂದು ಪದವಿ ಪೂರ್ವ ಶಿಕ್ಷಣ ಸಂಸ್ಥೆಗಳನ್ನು ಬಂದ್ ಮಾಡಿ : ಜಿಲ್ಲಾಧಿಕಾರಿ ಸೂಚನೆ…!!

Swabhimana News Desk

Leave a Comment