13.2 C
New York
14 October 2025
Coastal

ಬೋಧಿಸತ್ವ ಬುದ್ಧವಿಹಾರ. ಹಾವಂಜೆಯಲ್ಲಿ ಧಮ್ಮಚಕ್ಕ ಪವತ್ತನ ದಿನಾಚರಣೆ.

ಉಡುಪಿ: ಜುಲೈ _07-2025 swabhimananews

ತಥಾಗತ ಭಗವಾನ್ ಬುದ್ಧರು 2530 ವರ್ಷಗಳ ಹಿಂದೆ.ಇವಾಗಿನ ಉತ್ತರ ಭಾರತವಾಗಿರುವ ಪ್ರದೇಶದಲ್ಲಿ ತಮಗೆ ಜ್ಞಾನೋದಯವಾದ ಅನುಭವದ ನಂತರ ನೇರವಾಗಿ ನೀಡಿದ ಮೊದಲ ದಮ್ಮೋಪದೇಶವನ್ನು ದಮ್ಮ ಚಕ್ಕ (ಪವತ್ತನ ಸುಟ್ಟ,ಸುತ್ತ)ಎನ್ನಲಾಗಿದೆ.

ಈ ಒಂದು ಐತಿಹಾಸಿಕ
ಜ್ಞಾನಭಂಡಾರ ವಿಶ್ವದ ಜನಮನದಲ್ಲಿ ಶಾಶ್ವತವಾಗಿ ಉಳಿಯುವಂತೆ ಹಾಗೂ ನವ ಬೌದ್ಧರಿಗೆ ಸತ್ಯದ ಮಾರ್ಗ ಅರಿವಾಗುವಂತೆ ಅಂದಿನಿಂದ ಇಂದಿನವರೆಗೂ ಬೌದ್ಧ ಧಮ್ಮದಲ್ಲಿ ಈ ಧಮ್ಮಚಕ್ಕ ಪವತ್ತನ ದಿನಾಚರಣೆ ಯನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಿಕೊಂಡು ಬಂದಿರುವುದಾಗಿದೆ.

ಉಡುಪಿ ಜಿಲ್ಲೆಯಲ್ಲೂ ಭಗವಾನ್ ಬುದ್ಧರ ಸತ್ಯದ ಮಾರ್ಗದಲ್ಲಿ ಜೀವನ ನಡೆಸುವವರಿಗೊಂದು ಅವಕಾಶ ಮಾಡಿಕೊಡಬೇಕೆಂದು ಮತ್ತು ಬೌದ್ಧ ಕುಟುಂಬಗಳಿಗೆ ಒಂದು ವಿಹಾರದ ಅವಶ್ಯಕತೆ ಇರುವುದನ್ನು ಮನಗಂಡು ಎರಡು ವರ್ಷದ ಹಿಂದೆ ಸ್ಥಾಪನೆಗೊಂಡಿರುವ ಬೋಧಿಸತ್ವ ಬುದ್ಧ ಫೌಂಡೇಶನ್ (ರಿ)ಉಡುಪಿ ಜಿಲ್ಲೆ ಇವರು.

ಹಾವಂಜೆಯಲ್ಲಿ ಭೋದಿ ಸತ್ವಬುದ್ಧ ವಿಹಾರವನ್ನು ಸ್ಥಾಪಿಸಿ. ಬೆಂಗಳೂರಿನ ಲೋಕಶಾಂತಿ ಮಹಾಬೋಧಿ ಬುದ್ಧ ವಿಹಾರದ ಬಿಕ್ಕು ಭಂತೇಜಿಗಳಾದ ಪೂಜ್ಯ ದಮ್ಮಾನಂದ, ಪೂಜ್ಯ ನ್ಯಾನನಂದ ಭಂತೇಜಿ ಹಾಗೂ ಪೂಜ್ಯ ಧಮ್ಮಾವರೋ ಭಂತೇಜಿರವರು ಭಗವಾನ್ ಬುದ್ಧರ ಪ್ರತಿಮೆ ಅನಾವರಣ ಗೊಳಿಸಿ,ಉದ್ಘಾಟನೆ ನೆರವೇರಿಸಿದ್ದಾರೆ.

ಈ ವಿಹಾರ ಉದ್ಘಾಟನೆ ಗೊಂಡಿರುವ ದಿನದಿಂದ ಇಂದಿನವರೆಗೂ ಪ್ರತಿದಿನ ಬೆಳಗ್ಗೆ ಸಂಜೆ ಬುದ್ಧವಂದನೆ, ಧಮ್ಮವಂದನೆ, ಸಂಘವಂದನೆ, ಸುತ್ತ ಪಠಣ ,ಧ್ಯಾನ ಮೈತ್ರಿ ಧ್ಯಾನ, ಧಮ್ಮೋಪದೇಶಗಳು ನಡೆಯುತ್ತಲೇಬಂದಿದೆ.

ಹಾಗೂ ಬುದ್ಧರ ವಿಶೇಷತೆಗಳನ್ನು ,ಹುಣ್ಣಿಮೆ,
ಮತ್ತು ಬಾಬಾಸಾಹೇಬ್ ಅಂಬೇಡ್ಕರ್ ಅವರಿಗೆ ಸಂಬಂಧಿಸಿದ ಎಲ್ಲಾ ಕಾರ್ಯಕ್ರಮಗಳು ನಿರಂತರವಾಗಿ ಈ ಬೋಧಿಸತ್ವ ಬುದ್ಧವಿಹಾರದಲ್ಲಿ ನಡೆದು ಬಂದಿರುತ್ತದೆ.

ಅದೇ ರೀತಿಯಲ್ಲಿ ದಿನಾಂಕ 10-07-2025 ರಂದು ಕೂಡ ತಥಾಗತ ಭಗವಾನ್ ಬುದ್ಧರ ಮೊದಲ ಧಮ್ಮೋಪದೇಶದ ದಿನಾಚರಣೆಯ ಅಂಗವಾಗಿ.

ಬೋಧಿಸತ್ವ ಬುದ್ಧ ವಿಹಾರ ಹಾವಂಜೆಯಲ್ಲಿ ಸಂಜೆ 6.30 ರಿಂದ ರಾತ್ರಿ 9.30 ರ ವರೆಗೆ ಬುದ್ಧವಂದನೆ,ಧಮ್ಮ ವಂದನೆ, ಸಂಘವಂದನೆ,ಧಮ್ಮ ಚಕ್ಕ ಚಕ್ಕಪವತ್ತನ (ಸುತ್ತ) ಪಟಣ, ಧ್ಯಾನ , ಮೈತ್ರಿ ಧ್ಯಾನ ಮತ್ತು ಧಮ್ಮೋಪದೇಶ ಕಾರ್ಯಕ್ರಮನಡೆಯಿತು.

ಧಮ್ಮಾಚಾರಿಗಳಾದ ಶಂಭು ಸುವರ್ಣ, ಶೇಖರ್ ಹಾವಂಜೆ ಹಿರಿಯ ಉಪಾಸಕರಾದ ಪ್ರಕಾಶ್ ಬಿಬಿ,ಜಯಶೀಲ ಬಿ ರೋಟೆ ಕುಟುಂಬ,ಪಕೀರಪ್ಪ ಎಂ ಮತ್ತು ಕುಟುಂಬ, ಚನ್ನಬಸವ ಪುತ್ತೂರ್ಕರ್, ಮುತ್ತಕ್ಕ ಮತ್ತು ಕುಟುಂಬ,ನಾಥು ಮತ್ತು ಕುಟುಂಬ, ಸಂಜೀವ ನಾಯ್ಕ್ ಮತ್ತು ಕುಟುಂಬ, ಗೋಪಾಲ್ ಶಿವಪುರ ಮತ್ತು ಕುಟುಂಬ, ಟ್ರಸ್ಟ್ ನ ಕಾರ್ಯದರ್ಶಿಗಳಾದ ಶರತ್ ಎಸ್ ಹಾವಂಜೆ, ಟ್ರಸ್ಟಿಗಳಾದ ವಿಠ್ಠಲ್,

ಉಪಾಸಕ ಉಪಾಸಿಕರಾದ ಸುಜಾತ ಎಸ್ ಹಾವಂಜೆ ,ಪೃಥ್ವಿ ಒಳಗುಡ್ಡೆ, ಸನ್ನತಿ, ಸುನಿತಾ ,ಸತೀಶ್,ಸುರೇಖಾ,
ರೂಪ ವಿ, ನಾಗಲಕ್ಷ್ಮಿ ,ಸುದೀರ ,ಶ್ರೇಯ, ಸಾನ್ವಿ ,ವನಿತಾ ,ಬೇಬಿ ,ಲೀಲಾ ,
ರಾಘವೇಂದ್ರ, ಗಗನ ,ಸಂತೋಷ್, ಕವಿತಾ, ವಸಂತಿ, ನಾರಾಯಣ, ಸಾತ್ವಿಕ್, ಗೌತಮಿ ,ಅರಿಯಾ, ಅಕಿಯಾ ,ಶೇಖರ್ ಮೂಡು ಕುಡೂರು.ಹಾಗೂ ಇನ್ನಿತರರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಕೊನೆಯಲ್ಲಿ ಸರಕಾರಿ ಸೇವೆಯಲ್ಲಿ ಅನೇಕ ವರ್ಷಗಳಿಂದ ಸೇವೆ ಸಲ್ಲಿಸಿ ಇತ್ತೀಚೆಗೆ ನಿವೃತ್ತಿ ಹೊಂದಿದ ಮಹಾಉಪಾಸಕರಾದ ಚನ್ನಬಸವ ಪುತ್ತೂರ್ಕರ್ ರವರಿಗೆ ವಿಹಾರದ ವತಿಯಿಂದ ಗೌರವಿಸಲಾಯಿತು.

Swabhimananews

Related posts

ಮೂವತ್ತಮೂರು ಎಕರೆ ಕೆರೆ ಈವಾಗ ಇರೋದು ಬರೀ ಇಪ್ಪತ್ತ ಮೂರು ಎಕರೆ.!

Swabhimana News Desk

ದಲಿತ ಸಂಘರ್ಷ ಸಮಿತಿ ಭೀಮವಾದ (ರಿ) ಉಡುಪಿ ಜಿಲ್ಲೆ ಇದರ ನೂತನ ಉಡುಪಿ ಜಿಲ್ಲಾ ಸಂಚಾಲಕರಾಗಿ.ಸಂಜೀವ ಕುಕ್ಕೆಹಳ್ಳಿ ಆಯ್ಕೆ.

Swabhimana News Desk

ಹಾವಂಜೆ ಗ್ರಾಮ ಪಂಚಾಯತ್ ಹಾಗೂ ಗ್ರಂಥಾಲಯ ಹಾಗೂ ಅರಿವು ಕೇಂದ್ರದ ವತಿಯಿಂದ ನಡೆದ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ.

Swabhimana News Desk

Leave a Comment