ಉಡುಪಿ:ನವೆಂಬರ್ 05-2025swabhimananews
ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಕೊಕ್ಕರ್ಣೆ ಸಿಂಡಿಕೇಟ್ ರೈತರ ಸೇವಾ ಸಹಕಾರಿ ಸಂಘ(ನಿ) ಮುಖ್ಯ ಕಛೇರಿ ಕೊಕ್ಕರ್ಣೆ ಹಾಗೂ ಇದರ 7 ಶಾಖೆಗಳಲ್ಲಿ 20 ಕೋಟಿಗೂ ಅಧಿಕ ನಕಲಿ ಚಿನ್ನಾಭರಣಗಳನ್ನು ಅಡಮಾನ ಇಟ್ಟು ಕೋಟಿ ಕೋಟಿ ರೂಪಾಯಿ ವಂಚನೆ ಮಾಡಿರುವ.

ಈ ಸಹಕಾರಿ ಸಂಘವನ್ನು ಈ ಕೂಡಲೇ ಸರಕಾರದ/ಜಿಲ್ಲಾಡಳಿತದ ವಶಕ್ಕೆ ಪಡೆದುಕೊಂಡು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಟ್ಟು ನಿಟ್ಟಿನ ಕಾನೂನು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ, ಸರಕಾರಕ್ಕೆ, ಸಹಕಾರ ಇಲಾಖೆಗೆ ಹಾಗೂ ಸಂಬಂದಿಸಿದಇಲಾಖೆಗಳಿಗೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮವಾದ (ರಿ) ಉಡುಪಿ ಜಿಲ್ಲೆ ಹಾಗೂ ಅನೇಕ ಸಾಮಾಜಿಕ ಹೋರಾಟಗಾರರು ದೂರು ಸಲ್ಲಿಸಿ ಕಾನೂನು ಹೋರಾಕ್ಕೆ ಸಿದ್ಧತೆ ನಡೆಸಿರುವುದಾಗಿ ಇಂದು ಉಡುಪಿ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಹಾಗೂ ಇನ್ನೂ ಅನೇಕ ಕೋ ಆಪರೇಟಿವ್ ಸೊಸೈಟಿ, ಸಹಕಾರ ಸಂಘಗಳಲ್ಲಿ ಇಂತಹ ನಕಲಿ ಚಿನ್ನಆಭರಣ, ಬೇನಾಮಿ ಸಾಲ. ಮುಂತಾದ ಅಕ್ರಮಗಳು ನಡೆಯುತ್ತಿರುವ ಬಗ್ಗೆ ಯೂ ಕ್ರಮ ಜೈಗೊಳ್ಳುವಂತೆ ಆಗ್ರಹಿಸಿದರು. ಪತ್ರಿಕಾ ಗೋಷ್ಠಿಯಲ್ಲಿ ಡಿ ಎಸ್ ಎಸ್ ಭೀಮವಾದದ ಶೇಖರ್ ಹಾವಂಜೆ, ಸಾಮಾಜಿಕ ಹೋರಾಟಗಾರರಾದ ಸದಾಶಿವ ಶೆಟ್ಟಿ ಹೆರೂರ್, ಜಯಕರ ನಾಯ್ಕ್ ಕರ್ಜೆ ಉಪಸ್ಥಿತರಿದ್ದರು.

ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಕೊಕ್ಕರ್ಣೆಯ ಸಿಂಡಿಕೇಟ್ ರೈತರ ಸೇವಾ ಸರಕಾರ ಸಂಘ (ನಿ).ನೋಂದಣಿ ಸಂಖ್ಯೆ ಡಿ. ಆರ್. ಜಿ ಎಸ್ /2573 -76- 77 ಇಲ್ಲಿ ಹಾಗೂ ಇದರ ಈ ಶಾಖೆಗಳಲ್ಲಿ ಕೋಟಿ ಕೋಟಿ ರೂಪಾಯಿ ಮೌಲ್ಯದ ನಕಲಿ ಚಿನ್ನಾಭರಣ ಅಡವಿಟ್ಟು ಗ್ರಾಹಕರಿಗೆ ಅನೇಕ ವರ್ಷಗಳಿಂದ ವಂಚಿಸುತ್ತಾ ಬರಲಾಗಿದೆ ಎಂದು ನಮ್ಮ ಸಂಘಟನೆಗೆ ಬಂದ ಸಾರ್ವಜನಿಕ ದೂರಿನ ಮೇರೆಗೆ. ನಮ್ಮ ಸಂಘಟನೆಯ ವತಿಯಿಂದ ಈ ದೂರನ್ನು ನೀಡಲಾಗುತ್ತಿದೆ ಈ ನಕಲಿ ಚಿನ್ನ ಅಡವಿಟ್ಟು ಕೋಟ್ಯಂತರ ರೂಪಾಯಿ ಯ ಬೇನಾಮಿ ಭೂಮಿ ಖರೀದಿಸಿ ದುಬಾರಿ ಬೆಲೆಗೆ ಮಾರಾಟ ಮಾಡುವ ಕಾಯಕವನ್ನೇ ಅಧ್ಯಕ್ಷರುಗಳು,

ನಿರ್ದೇಶಕರುಗಳು ಮತ್ತು ಅಧಿಕಾರಿ ಸಿಬ್ಬಂದಿ ವರ್ಗ ಮಾಡಿಕೊಂಡಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ. ಅಷ್ಟೇ ಅಲ್ಲದೆ ಈ ಸಂಘದಲ್ಲಿ ಹತ್ತಾರು ಕೋಟಿರೂಪಾಯಿಗಳ ಬೆನಾಮೀ ಸಾಲವನ್ನು ನೀಡಿರುವ ಬಗ್ಗೆ ಗ್ರಾಹಕರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.

ಇಲ್ಲಿ ನಡೆಯುತ್ತಿರುವ/ ನಡೆದಿರುವ ನೂರಾರು ಕೋಟಿ ರೂಪಾಯಿಗಳ ಅಕ್ರಮ ಅವ್ಯವಹಾರವನ್ನು ಪಾರದರ್ಶಕವಾಗಿ ತನಿಖೆ ನಡೆಸಿ ನಕಲಿ ಚಿನ್ನಾಭರಣಗಳನ್ನು ಅಡವಿಟ್ಟ ವ್ಯಕ್ತಿಗಳನ್ನು ಪತ್ತೆ ಹಚ್ಚಿ ತನಿಖೆ ನಡೆಸಿ ಈ ಸಿಂಡಿಕೇಟ್ ರೈತರ ಸೇವಾ ಸಹಕಾರಿ ಸಂಘದ ಆಡಳಿತ ಮಂಡಳಿಯ ಹಾಗೂ ಸಿಬ್ಬಂದಿಗಳ ವಿರುದ್ಧ ಮತ್ತು ಬೇನಾಮಿ ಸಾಲಗಾರರನ್ನು ಪತ್ತೆಹಚ್ಚಿಅವರೆಲ್ಲರ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳುವಂತೆ ಸರಕಾರವನ್ನು ಆಗ್ರಹಿಸಿದರು

swabhimananews.
