15 August 2026
Coastal

ಭೋಧಿಸತ್ವ ಬುದ್ಧವಿಹಾರದ ದ್ವಿತೀಯ ವರ್ಷಾಚರಣೆ ಪ್ರಯುಕ್ತ ಧಮ್ಮದೀಪ ಕಾರ್ಯಕ್ರಮ.

ಉಡುಪಿ:ಮಾರ್ಚ್ -17-2026.swabhimananews

ಉಡುಪಿ ಜಿಲ್ಲೆಯ ಕರಾವಳಿಯಲ್ಲಿ ಇರುವ ಏಕೈಕ ಬುದ್ಧ ವಿಹಾರ ಬೋಧಿಸತ್ವ ಬುದ್ಧ ಫೌಂಡೇಶನ್ ರವರ ಬೋಧಿಸತ್ವ ಬುದ್ಧ ವಿಹಾರ ಹಾವಂಜೆ.* ಈ ಬುದ್ಧ ವಿಹಾರದ 2 ನೇ ವರ್ಷಾಚರಣೆ ಕಾರ್ಯಕ್ರಮ ದಿನಾಂಕ:-16 ಮಾರ್ಚ್ 2026 ರ ಸೋಮವಾರ ಬೋಧಿಸತ್ವ ಬುದ್ಧ ವಿಹಾರದಲ್ಲಿ ನಡೆಯಿತು.

ಹಿರಿಯ ಧಮ್ಮಾಚಾರಿಗಳಾದ ಶಂಭು ಸುವರ್ಣ, ಧಮ್ಮಾಚಾರಿಗಳಾದ ಮುರಳಿಧರ.M, ಶೇಖರ್ ಹಾವಂಜೆ ಇವರ ನೇತೃತ್ವದಲ್ಲಿ ಧಮ್ಮದೀಪ ಕಾರ್ಯಕ್ರಮ ನಡೆಯಿತು. ಮೊದಲಿಗೆ ಬುದ್ಧವಂದನೆ,
ಧಮ್ಮವಂದನೆ, ಸಂಘವಂದನೆ, ಹಾಗೂ ಧ್ಯಾನ, ಮೈತ್ರಿ ಧ್ಯಾನ, ಬೋಧಿವೃಕ್ಷ ಪೂಜೆ ಹಾಗೂ ಧಮ್ಮೋಪದೇಶವು ನಡೆಯಿತು. ನಂತರ ಸ್ವತಂತ್ರ ಭಾರತದ ಸಂವಿಧಾನ ಶಿಲ್ಪಿ ಪರಮಪೂಜ್ಯ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಮೇಣದಬತ್ತಿಯ ಬೆಳಕನ್ನು ಚಿಮ್ಮಿಸುವ ಮೂಲಕ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.

ಸಭಾ ಕಾರ್ಯಕ್ರಮದ ಘನ ಅಧ್ಯಕ್ಷತೆಯನ್ನು ಹಿರಿಯ ಉಪಾಸಕರು, ವಿಪಶ್ಯನ ಧ್ಯಾನ ಸಾಧಕರಾದ ಚನ್ನಬಸವ ಪುತ್ತೂರ್ಕರ್ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿದ್ದ ಟ್ರಸ್ಟಿನ ಅಧ್ಯಕ್ಷರಾದ ಶೇಖರ್ ಹಾವಂಜೆ ಪ್ರಾಸ್ತಾವಿಕವಾಗಿ ಮಾತನಾಡಿ ವಿಹಾರದಲ್ಲಿ 2 ವರ್ಷಗಳಲ್ಲಿ ನಡೆದ ಧಮ್ಮ ಚಟುವಟಿಕೆ ಹಾಗೂ ದಾನಧರ್ಮ ಬಗ್ಗೆ ಸಂಕ್ಷಿಪ್ತವಾಗಿ ತಿಳಿಸಿದರು, ಹಿರಿಯ ಧಮ್ಮಾಚಾರಿಗಳಾದ ಶಂಭು ಸುವರ್ಣರವರ ಮಾತಲ್ಲಿ ಧಮ್ಮವನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ಮೊದಲು ಎಲ್ಲರೂ ವಿಪಶ್ಯನ ಧ್ಯಾನ ಮಾಡಬೇಕು ಮತ್ತು ಪ್ರತಿಯೊಬ್ಬರು ಬಾಬಾಸಾಹೇಬ್ ಅಂಬೇಡ್ಕರ್ ರವರ ಮತ್ತು ಭಗವಾನ್ ಬುದ್ಧರ ತತ್ವಸಿದ್ಧಾಂತಗಳನ್ನು ತಿಳಿದುಕೊಳ್ಳಬೇಕು ಎಂದು ಹೇಳಿದರು,

ಯುವ ಧಮ್ಮಾಚಾರಿಗಳಾದ
ಮುರಳೀಧರ್ M ರವರು ತಾನು ಯಾಕಾಗಿ, ಯಾವಾಗ ಮತ್ತು ನನಗಾದ ಅವಮಾನ ಸಹಿಸಲಾಗದೆ ತಾನು ಬೌದ್ಧ ಧಮ್ಮದ ಹಾದಿ ಹಿಡಿದಿರುವ ಬಗ್ಗೆ ಸಂಪೂರ್ಣವಾಗಿ ವಿವರಿಸಿದರು.

ಇನ್ನೊರ್ವ ಮುಖ್ಯ ಅತಿಥಿಗಳಾದ ವಿಚಾರವಂತರು, ವಾಗ್ಮಿ ವಿಠ್ಠಲ್ ಸಾಲಿಕೇರಿ ಮಾತನಾಡಿ ಬುದ್ಧ ಧಮ್ಮ ಎಂಬುದು ಧಮ್ಮ ಮಾತ್ರವಲ್ಲ ಅದು ಎಲ್ಲರನ್ನೂ ಒಂದುಗೂಡಿಸುವ ಹಾಗೂ ಎಲ್ಲರಲ್ಲಿಯೂ ಪ್ರೀತಿ, ಕರುಣೆ, ಮೈತ್ರಿ ಭಾವನೆಯನ್ನು ಮೂಡಿಸುವಂತಹ ಒಂದು ಶಕ್ತಿ ಎಂದು ಹೇಳಿದರು. ಮತ್ತೋರ್ವ ಅತಿಥಿಯಾದಂತಹ ಸಂಜೀವ ಕುಕ್ಕೆಹಳ್ಳಿಯವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಚೆನ್ನಬಸವ ಪುತ್ತೂರ್ಕರ್ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಾ ಎಲ್ಲರಿಗೂ ಧಮ್ಮ ಎಂಬುದು ಒಂದು ಕೇವಲ ಆಕರ್ಷಣೀಯ ವಸ್ತುವಾಗಿದೆ ಮತ್ತು ಕೇವಲ ಕ್ಷಣಿಕವಾಗಿದೆ. ಮೊದಲು ಇರುವಂತಹ ಉತ್ಸಾಹ, ಆದ್ಯತೆಗಳು ಕೊನೆಯವರೆಗೆ ಇರುವುದಿಲ್ಲ ಅದು ಒಂದು ಬೇಸರದ ಸಂಗತಿಯಾಗಿದೆ ಎಂದರು.

ನಂತರ ನಮಗೆ ಧಮ್ಮ ಯಾಕೆ ಬೇಕು ಎಂದು ಸವಿವರವಾಗಿ ಹೇಳಿದರು. ನಂತರ ಧ್ಯಾನ ಎಂದರೇನು ಧ್ಯಾನ ಮಾಡುವುದರಿಂದ ನಮಗೆ ಆಗುವ ಪ್ರಯೋಜನಗಳೇನು ಮತ್ತು ಮನಸ್ಸನ್ನು ಪರಿಶುದ್ಧಗೊಳಿಸಲು ಧ್ಯಾನ ಒಂದೇ ಮಾರ್ಗ. ಧ್ಯಾನದಿಂದ ನಮ್ಮಲ್ಲಿ ಆತ್ಮವಿಶ್ವಾಸವು ಬೆಳೆಯುತ್ತೆ, ಬದುಕನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುವ ಸಾಧನವಾಗುತ್ತದೆ ಎಂದು ಹೇಳಿದರು. ನಂತರ ಬೋಧಿಸತ್ವ ಬುದ್ಧ ವಿಹಾರದ ಒಂದು ವರುಷದ ಧಮ್ಮ ಚಟುವಟಿಕೆಯ ವಾರ್ಷಿಕ ವರದಿಯನ್ನು ಪೃಥ್ವಿರವರು ಮಂಡಿಸಿದರು. ಶಂಭು ಸುವರ್ಣರವರು ವಂದನಾರ್ಪಣೆಯನ್ನು ಮಾಡಿದರು.

ಈ ಒಂದು ಅರ್ಥಪೂರ್ಣವಾದ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲೆಯ ಹಿರಿಯ ಧಮ್ಮಾಚಾರಿಗಳಾದ ಶಂಭು ಸುವರ್ಣ, ಯುವ ಧಮ್ಮಾಚಾರಿಗಳಾದ ಮುರಳೀಧರ.ಎಂ ಮಾರ್ಪಳ್ಳಿ, ಧಮ್ಮಾಚಾರಿ ಹಾಗೂ ಬೋಧಿಸತ್ವ ಬುದ್ಧ ಫೌಂಡೇಶನ್ ನ ಅಧ್ಯಕ್ಷರಾದ ಶೇಖರ್ ಹಾವಂಜೆ, ಹಿರಿಯ ಉಪಾಸಕ ಹಾಗೂ ವಿಪಶ್ಯನ ಸಾಧಕರಾದ ಚೆನ್ನಬಸವ ಪುತ್ತೂರ್ಕರ್, ವಿಠಲ್ ಸಾಲಿಕೇರಿ, ಸಂಜೀವ ಕುಕ್ಕೆಹಳ್ಳಿ, ಗೋಪಾಲ್ ಶಿವಪುರ, ನಾಥು ಒಳಗುಡ್ಡೆ, ಸುಧೀರ್, ರಮೇಶ್, ಮುತ್ತಕ್ಕ, ಸುಜಾತ.ಎಸ್ ಹಾವಂಜೆ, ರೂಪಾ.ವಿ, ಪೂರ್ಣಿಮಾ, ಸುಗಂಧಿ, ಲೀಲಾ, ಬೇಬಿ, ವಸಂತಿ, ಸುನೀತಾ, ಪುಟಾಣಿ ಸನ್ನತಿ ಹಾಗೂ ಉಪಾಸಿಕ, ಉಪಾಸಕರು ಮತ್ತು ಅನೇಕ ಬುದ್ಧ, ಅಂಬೇಡ್ಕರ್ ರವರ ಅನುಯಾಯಿಗಳು ಉಪಸ್ಥಿತರಿದ್ದರು ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿತು.

Swabhimaananews.

Related posts

ಉಡುಪಿ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ವಿದ್ಯಾಕುಮಾರಿ.ಕೆ. ನೇಮಕ…!!

Swabhimana News Desk

ಮೂಲ ನಿವಾಸಿ ನಾಗ ಜನಾಂಗದ ಸ್ಮರಣಾರ್ಥವಾಗಿ ನಾಗರ ಪಂಚಮಿ ಆಚರಣೆ, ವಿಶೇಷ ಚೇತನರಿಗೆ ಹಾಲು, ಹಣ್ಣು, ಸಿಹಿ ತಿಂಡಿ ವಿತರಣೆ.

ಕುಂದಾಪುರ ಬ್ಲಾಕ್ ಕಾಂಗ್ರೆಸ್‌ ವತಿಯಿಂದ ನಗರದಲ್ಲಿ ಬೃಹತ್ ಪಾದಯಾತ್ರೆ: ಕಾಂಗ್ರೆಸ್ ಅಭ್ಯರ್ಥಿ ಕೆ. ಜಯಪ್ರಕಾಶ್ ಹೆಗ್ಡೆ ಮತಯಾಚನೆ-ಅಭಿವೃದ್ಧಿಗೆ ನಿಮ್ಮ ಮತ ನೀಡಿ: ಜಯಪ್ರಕಾಶ್‌ ಹೆಗ್ಡೆ.

Swabhimana News Desk

Leave a Comment