21.1 C
New York
14 September 2025
Coastal

ಉಡುಪಿಯಲ್ಲೊಂದು ಖಾಸಗಿ ಬಟ್ಟೆ ಮಳಿಗೆಗಾಗಿ ರಾಜ್ಯ ಹೆದ್ದಾರಿಯ ಡಿವೈಡರನ್ನೇ ಒಡೆದು ಹಾಕಿದ ಹೆದ್ದಾರಿಪ್ರಾಧಿಕಾರದ ಆಧಿಕಾರಿಗಳು.ನಗರಸಭೆಯ ಅಧಿಕಾರಿಗಳು ಅಧ್ಯಕ್ಷರು,ಸದಸ್ಯರು ಶಾಮೀಲು,ಸಾರ್ವಜನಿಕರ ಆಕ್ರೋಶ.

ಉಡುಪಿ: ಜುಲೈ 26-2025 swabhimananewsಉಡುಪಿ ನಗರದ ಬನ್ನಂಜೆ ಯಲ್ಲಿರುವ ಒಂದು ಬಟ್ಟೆ ಮಳಿಗೆ ಇಲ್ಲಿಗೆ ಬಂದ ನಂತರ ಒಂದಲ್ಲ ಒಂದು ಸಾರ್ವಜನಿಕರಿಗೆ , ಸಮಸ್ಯೆ, ತೊಂದರೆ,ಕಿರಿಕ್ ಅಗುತ್ತಲೆ ಇದೆ.ಬನ್ನಂಜೆಯ ನಿಟ್ಟೂರು ತಿರುವಿನಲ್ಲಿ ಬಟ್ಟೆ ಮಳಿಗೆಗೆ ಬರುವ ವಾಹನಗಳಿಂದ ಸದಾ ಟ್ರಾಫಿಕ್ ಜಾಮ್ ಕಿರಿಕ್ ಉಂಟಾಗಿ ಸಮಸ್ಯೆ ನಿರಂತರವಾಗಿ ಸೃಷ್ಟಿಯಾಗುತ್ತಿತ್ತು.ಈ ಕಟ್ಟಡಕ್ಕೆ ಸೆಟ್ ಬ್ಯಾಕ್ ನೀಡದೆ ಹೆದ್ದಾರಿ ನಿಯಮಗಳ ಪ್ರಕಾರ ರಸ್ತೆಗೆ ಭೂಮಿಯನ್ನು ನೀಡದೆ ಈ ಕಟ್ಡಡ ನಿರ್ಮಿಸಲಾಗಿದೆ.ನಗರಸಭೆಯ ಭ್ರಷ್ಟ ಅಧಿಕಾರಿಗಳು ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಶೃಂಗೇರಿ ವಿಭಾಗದ ಅಧಿಕಾರಿಯೊಬ್ಬರ ಧನದಾಹದಿಂದ ಸಾರ್ವಜನಿಕರು ಪಡಬಾರದ ಸಮಸ್ಯೆ ಪಡುವಂತಾಗಿತ್ತು.ಇದೀಗ ನಗರ ಸಭೆಯ ಅಧಿಕಾರಿಗಳು ,ಜನಪ್ರತಿನಿಧಿಗಳು ಹಾಗೂ ರಾಷ್ಟೀಯ ಹೆದ್ದಾರಿ ಪ್ರಾಧಿಕಾರದ ಇಂಜಿನಿಯರ್ ಈ ಬಟ್ಟೆ ಅಂಗಡಿಯ ಮಾಲೀಕ ನೀಡಿದ ಲಕ್ಷಾಂತರ ರೂಪಾಯಿ ಮೌಲ್ಯದ ಕಪ್ಪ ಕಾಣಿಕೆ ಪಡೆದುಕೊಂಡು ರಾಜ್ಯ ಹೆದ್ದಾರಿಯ ಡಿವೈಡರನ್ನೆ ಅಕ್ರಮವಾಗಿ ಒಡೆದು ಹಾಕಿದ್ದಾರೆ.ಇದರಿಂದಾಗಿ ಹೆದ್ದಾರಿಯ ವಿರುದ್ಧ ದಿಕ್ಕಿನಿಂದ ವಾಹನಗಳು ನೇರವಾಗಿ,ಸರಾಗವಾಗಿ ಬಟ್ಟೆ ಅಂಗಡಿಯ ಒಳಗೆ ಹೋಗುವಂತೆ ಅನುಕೂಲ ಮಾಡಿಕೊಟ್ಟಂತ್ತಾಗಿದೆ ಕಳೆದ ಒಂದೆರಡು ವರ್ಷಗಳಿಂದ ಈ ಡಿವೈಡರ್ ಜಾಗದಲ್ಲಿ ಹಲವು ಅಫಘಾತಗಳು ಸಂಭವಿಸಿವೆ.ಇದೆಲ್ಲ ವೂ ಬಟ್ಟೆ ಅಂಗಡಿ ಇಲ್ಲಿ ಆರಂಭವಾದ ನಂತರ ನಡೆಯುತ್ತಿರುವ ಅಪಘಾತಗಳು
ಅದರೆ ನಗರಸಭೆಯಾಗಲೀ.ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಇಂಜಿನಿಯರ್ ಅಗಲೀ ಇದಕ್ಕೆ ತಲೆಕೆಡಿಸಿಕೊಂಡಿಲ್ಲ.ಇದೀಗ ಮೊದಲೇ ಇದ್ದ ರಾಷ್ಟ್ರೀಯ ಹೆದ್ದಾರಿಯ ಡಿವೈಡರನ್ನು ಶ್ರೀಮಂತ ಉದ್ಯಮಿಗಾಗಿ ಒಡೆದು ಹಾಕಿ ತಮ್ಮ ಸ್ವಾಮಿ ನಿಷ್ಟೆ ತೋರಿಸಿದ್ದಾರೆ.ದಿನಾಂಕ 26-07-2025 ರಿ ಶನಿವಾರ ಹಾಗೂ ಭಾನುವಾರ ಸರಕಾರಿ ರಜೆ ಇರುವುದರಿಂದ ಬೆಳ್ಳಂಬೆಳಗ್ಗೆ ಇಲ್ಲಿ ಜೆಸಿಬಿ ಕಾರ್ಯಚರಣೆಗಿಳಿದಿದೆ.ಈ ಬಗ್ಗೆ ಯಾವುದೇ ಅಧಿಕಾರಿಗಳಿಗೆ ಸಾರ್ವಜನಿಕರು ಫೋನ್ ಮಾಡಿದರೂ ಯಾವೊಬ್ಬ ಅಧಿಕಾರಿಯಾಗಲಿ, ಇಂಜಿನಿಯರ್ ಆಗಲಿ, ಜನಪ್ರತಿನಿಧಿಗಳಾಗಲಿ ಫೋನ್ ರಿಸೀವ್ ಮಾಡ್ತಾಇಲ್ಲ.ಈ ಕಾಮಗಾರಿ ಮುಗಿಯೋವರೆಗೂ ಸ್ಥಳೀಯ ಜನಪ್ರತಿನಿಧಿಗಳು ನಾಟ್ ರೀಚೇಬಲ್.ಹೈವೆ ಇಂಜಿನಿಯರ್ ಫೊನ್ ಡಿಸ್ ಕನೆಕ್ಟ್ ಮಾಡಿ ಮಾಲಿಕನ ಸೇವೆಯನ್ನು ಪರಿಪೂರ್ಣವಾಗಿ ಮಾಡ್ತಿದ್ದಾರೆ ಎಂದು ಸ್ಥಳೀಯ ಸಾಮಾಜಿಕ ಹೋರಾಟಗಾರರ ಆರೋಪ.ಅಸಲಿಗೆ ಇಲ್ಲಿಯ ಈ ಜ್ವಲಂತ ಸಮಸ್ಯೆಗಳಿಗೆ ಮೂಲ ಕಾರಣ ಈ ಬಟ್ಟೆ ಅಂಗಡಿಗೆ .ಬರುವ ವಾಹನಗಳಿಂದಲೇ ದಿನನಿತ್ಯ ಟ್ರಾಫಿಕ್ ಜಾಮ್ ಆಗುತ್ತಲೇ ಇರುತ್ತದೆ.ಹೆದ್ದಾರಿ ನಿಯಮ ಹಾಗೂ ನಗರ ಸಭೆ ನಿಯಮದಂತೆ ಕಟ್ಟಡ ಮಾಲೀಕ ಹೆದ್ದಾರಿ ಅಗಲೀಕರಣಕ್ಕೆ ಭೂಮಿ ಬಿಟ್ಟು ಕೊಡಬೇಕು ,ಅದರೆ ನಗರಸಭೆ ಅಧಿಕಾರಿಗಳಾಗಲೀ.. ಹೆದ್ದಾರಿ ಪ್ರಾಧಿಕಾರದ ಇಂಜಿನಿಯರ್ ಆಗಲಿ , ಅಧಿಕಾರಿಗಳಾಗಲಿ ಒಂದು ಇಂಚು ಭೂಮಿಯನ್ನು ಪಡಯದೇ ಪ್ರಭಾವಿ ಬಟ್ಟೆ ಮಳಿಗೆಯ ಮಾಲಿಕ ಕೊಟ್ಟ ಕಪ್ಪಕಾಣಿಕೆಯ ಸೂಟ್ ಕೇಸ್ ಪಡೆದು ಕಾನೂನು ಬಾಹಿರವಾಗಿ ಅನುಮತಿ ಕೊಟ್ಟಿದ್ದಾರೆ.ಇನ್ನೂ ಕಾನೂನು ಬಾಹಿರ ಕಾಮಗಾರಿಗಳಿಗೆ ಅನುಮತಿ ನೀಡುತ್ತಲೇ ಇದ್ದಾರೆ.ಇಲ್ಲಿ ಡಿವೈಡರ್ ಒಡೆಯುವ ಬದಲು ಹೆದ್ದಾರಿಗೆ ಬಿಟ್ಟುಕೊಟ್ಟ ಭೂಮಿಯನ್ನು ವಶಕ್ಕೆ ಪಡೆದು ರಸ್ತೆ ಅಗಲೀಕರಣಗೊಳಿಸಬೇಕಾಗಿತ್ತು.
ಆದರೆ ಅದನ್ನು ಬಿಟ್ಟು ಡಿವೈಡರ್ ಒಡೆದದ್ದು ಎಷ್ಟು ಸರಿ ?ಅಂಗಡಿ ಮಾಲೀಕನಿಗೆ ತನ್ನ ಅಂಗಡಿ ಪ್ರವೇಶ ಮಾಡೋ ಗೇಟ್ ಗಳು ವಾಸ್ತು ಪ್ರಕಾರ ಇರಬೇಕಂತೆ…ಹಾಗಾಗಿ ತನ್ನ ಕಟ್ಟಡದ ಗೋಡೆಗಳನ್ನು ಒಡೆಯುವ ಬದಲು ಸಾರ್ವಜನಿಕ ರಸ್ತೆ, ಸರಕಾರಿ ಭೂಮಿಯನ್ನು ಅಕ್ರಮವಾಗಿ ಅತಿಕ್ರಮಣ ಮಾಡಲು ಬಿಸ್ಕಿಟ್ ತಿನ್ನುವ ನಾಯಿಗಳ ಮೂಖಾಂತರ ಸಾರ್ವಜನಿಕರಿಗೆ ತೊಂದರೆ ಮಾಡುತ್ತಿದ್ದಾರೆ.ಈ ಕಳ್ಳಕಾಕ ಅಧಿಕಾರಿಗಳು ಮತ್ತು ನಗರಸಭೆಯ ಜನಪ್ರತಿನಿಧಿಗಳು ತಡ ರಾತ್ರಿಸ್ವತಃ ಅಧ್ಯಕ್ಷರೇ ಈ ಸ್ಥಳಕ್ಕೆ ಬಂದು ವಿದ್ಯುತ್ ದೀಪಗಳ ತೆರವುಗೊಳಿಸಿರುವ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.ಈ ಜನಪ್ರತಿನಿಧಿಗಳು ಈ ಐಷಾರಾಮಿ ಅಂಗಡಿ ಮಾಲಿಕನಮೆಲೆ ತೋರಿಸೋ ಕಾಳಾಜಿ, ಪ್ರೀತಿ,ಕಣಿಕರ ಲಕ್ಷಾಂತರ ರೂಪಾಯಿ ಸರಕಾರಕ್ಕೆ ತೆರಿಗೆ ಕಟ್ಟುವ…ನಿಮ್ಮ ಮತದಾರರ ಮೇಲೆ ಯಾಕಿಲ್ಲ…? ಎಂದು ಸಾರ್ವಜನಿಕರು ಮುಖಕ್ಕೆ ಉಗಿಯುತ್ತಿದ್ದಾರೆ.ಬಡವರ ಒಂದು ಪೆಟ್ಟಿಗೆಅಂಗಡಿ ಮೇಲೆ ದರ್ಪ,ದಬ್ಬಾಳಿಕೆ ತೋರಿಸುವ ನಗರಸಭೆ ಈ ಬಟ್ಟೆ ಅಂಗಡಿ ಮಾಲೀಕ ಸೆಟ್ ಬ್ಯಾಕ್ ಬಿಟ್ಟಿರುವ ಜಾಗದಲ್ಲಿ ಅನಧಿಕೃತ ಹೊಟೇಲ್ ಗಳನ್ನು ಮಾಡಿದ್ದು, ನಿಮ್ಮ ಕಣ್ಣಿಗೆ ಕಾಣಲಿಲ್ಲವೇ ಇದರ ಮೇಲೆ ಯಾಕೆ ಕಾನೂನು ಕ್ರಮಕೈಗೊಂಡಿಲ್ಲ.ಸರಕಾರ ಇಂತಹ ಅಕ್ರಮಗಳಿಗೆ ಬೆಂಬಲಿಸುವ ಹೆದ್ದಾರಿ ಪ್ರಾಧಿಕಾರದ ಇಂಜಿನಿಯರ್ , ಅಧಿಕಾರಿಗಳು ಹಾಗೂ ನಗರಸಭೆ ಅಧಿಕಾರಿಗಳ ವಿರುದ್ದ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಂಡು ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಿ ಸೇವೆಯಿಂದ ವಜಾ ಮಾಡುವಂತೆ ಅನೇಕ ಸಂಘಟನೆಗಳು, ಸಾಮಾಜಿಕ ಹೋರಾಟಗಾರರು ಒಕ್ಕೊರಲಿನಿಂದ ಆಗ್ರಹಿಸುತ್ತಿದ್ದಾರೆ.ಈ ಕುರಿತು ಮಾನ್ಯ ಲೊಕಾಯುಕ್ತ ಸಂಸ್ಥೆ ಖುದ್ದಾಗಿ ಸ್ಥಳಕ್ಕೆ ಪರಿಶೀಲನೆ ಮಾಡಿ, ಸ್ವಯಂ ಪ್ರೇರಿತರಾಗಿ ಪ್ರಕರಣ ದಾಖಲಿಸಿ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಮತ್ತು ಜನಪ್ರತಿನಿಧಿಗಳ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ಅಗ್ರಹಿಸಿದ್ದಾರೆ.

Swabhimananews.

Related posts

ಕುಂದಾಪುರ ಬ್ಲಾಕ್ ಕಾಂಗ್ರೆಸ್‌ ವತಿಯಿಂದ ನಗರದಲ್ಲಿ ಬೃಹತ್ ಪಾದಯಾತ್ರೆ: ಕಾಂಗ್ರೆಸ್ ಅಭ್ಯರ್ಥಿ ಕೆ. ಜಯಪ್ರಕಾಶ್ ಹೆಗ್ಡೆ ಮತಯಾಚನೆ-ಅಭಿವೃದ್ಧಿಗೆ ನಿಮ್ಮ ಮತ ನೀಡಿ: ಜಯಪ್ರಕಾಶ್‌ ಹೆಗ್ಡೆ.

Swabhimana News Desk

ನಾಳೆ ಜುಲೈ 25ರಂದು ಉಡುಪಿ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ : ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ…!!

Swabhimana News Desk

ದಲಿತ ಸಂಘರ್ಷ ಸಮಿತಿ ಭೀಮವಾದ (ರಿ) ಉಡುಪಿ ಜಿಲ್ಲೆ ಇದರ ನೂತನ ಉಡುಪಿ ಜಿಲ್ಲಾ ಸಂಚಾಲಕರಾಗಿ.ಸಂಜೀವ ಕುಕ್ಕೆಹಳ್ಳಿ ಆಯ್ಕೆ.

Swabhimana News Desk

Leave a Comment