23.9 C
New York
7 July 2025
Coastal

ಅಂಬೇಡ್ಕರ್ ರವರ ಮಹಾ ಪರಿನಿರ್ವಾಣ ದಿನಾಚರಣೆ ಕಾರ್ಯಕ್ರಮ.

ಡಿಸೆಂಬರ್ 06-2023 swabhimananews@gmail.com ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ ಉಡುಪಿ ಜಿಲ್ಲೆ ಮತ್ತು.
ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮವಾದ (ರಿ) ಉಡುಪಿ ಜಿಲ್ಲೆ.


ಇದರ ವತಿಯಿಂದ ಇಂದು ದಿನಾಂಕ 06 -12-2023 ರಂದು ಉಡುಪಿ ಜಿಲ್ಲೆಯ ಉಡುಪಿ ತಾಲೂಕಿನ ಪೆರ್ಡೂರು ಅಂಬೇಡ್ಕರ್ ಭವನದಲ್ಲಿ ರಾಜ್ಯ ಸಂಘಟನಾ ಸಂಚಾಲಕರಾದ ಶೇಖರ್ ಹಾವಂಜೆ ರವರ ನೇತೃತ್ವದಲ್ಲಿ.

ಜಿಲ್ಲಾ ಸಂಚಾಲಕರಾದ ಸಂಜೀವ ಕುಕ್ಕೆಹಳ್ಳಿ ರವರ ಅಧ್ಯಕ್ಷತೆ ವಹಿಸಿದ್ದರು.ಕಾರ್ಯಕ್ರಮದ ಉದ್ಘಾಟನೆಯನ್ನು ಪಂಚಾಯತ್ ಅಧ್ಯಕ್ಷರಾದ ಚೇತನ ಶೆಟ್ಟಿ, ಹಾಗೂ ಮುಖ್ಯ ಅತಿಥಿಗಳು ನೆರವೇರಿಸಿದರು.

ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಶೇಖರ್ ಹಾವಂಜೆ ರವರು ತಮ್ಮ ಭಾಷಣದಲ್ಲಿ.ಮಾತನಾಡುತ್ತಾ ನಿಜವಾಗಿಯೂ ನೀವೆಲ್ಲಾ ಬಾಬಾಸಾಹೇಬರಿಗೆ ಗೌರವ ಕೊಡುವುದೇ ಹೌದಾದರೆ ಬಾಬಸಾಹೇಬರ ತತ್ವಸಿದ್ಧಾಂತಗಳನ್ನು ನಿಮ್ಮ ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು,

ಮಹಿಳೆಯರು ದೇವಾಸ್ಥಾನ,
ಗುಡಿ ಗುಂಡಾರ ಸುತ್ತುವುದನ್ನು ಬಿಟ್ಟು ಬೌದ್ಧ ಧಮ್ಮದ ಕಡೆಗೆ ಹೋಗಬೇಕು, ಅಧಿಕಾರಿಗಳು ಸರಕಾರಿ ಕೆಲಸ ಸಿಕ್ಕಿದಕೂಡಲೇ ಧರ್ಮಸ್ಥಳ, ತಿರುಪತಿ ಇನ್ನಿತರ ದೇವಾಸ್ಥನಕ್ಕೆ ಹರಕೆ ಹೊತ್ತು
ಕೊಂಡ ಫಲವಾಗಿ ನಮಗೆ ಕೆಲಸ ಸಿಕ್ಕಿದೆ ಎಂದು ಹರಕೆ ತೀರಿಸುತ್ತಾರೆ.

ಆದರೆ ಬಾಬಸಾಹೇಬರು ಕೊಟ್ಟ ಮೀಸಲಾತಿ ಎಂಬ
ಬಿಕ್ಷೆಯಿಂದ ಸಿಕ್ಕಿರುವುದು ಎಂದು ಅವರಿಗೆ ಅರಿವಿರುವುದಿಲ್ಲ. ಅವರೆಲ್ಲಾ ಬಾಬಸಾಹೇಬರ ವಿರೋಧಿಗಳು ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ
ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುಮನಾ ಕೆ ಮಾತನಾಡಿ.

ದಲಿತರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಹೆಚ್ಚಿನ ಪ್ರಮಾಣದಲ್ಲಿ ಶಿಕ್ಷಣ ಪಡೆದು ಕೊಳ್ಳಬೇಕು, ಮಹಿಳೆಯರು ಪ್ರಶ್ನೆ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು.

ಎಂದು ಹೇಳಿದರು, ಇನ್ನೋರ್ವ ಮುಖ್ಯ ಅತಿಥಿ ಪಂಚಾಯತ್ ಉಪಾಧ್ಯಕ್ಷರಾದ ದೇವ್ ಪೂಜಾರಿಯವರು ಮಾತನಾಡಿ ಅಂಬೇಡ್ಕರ್ ರವರ ಬಗ್ಗೆ ಪ್ರತಿಯೋರ್ವ ವ್ಯಕ್ತಿಯು.ತಿಳಿದುಕೊಳ್ಳಬೇಕು.ಅದನ್ನು ಇತರರಿಗೂ ತಿಳಿಸಿಕೊಡುವ ಕೆಲಸವನ್ನು ತಿಳಿದವರು ಮಾಡಬೇಕು
ಎಂದರು,

ಜಿಲ್ಲಾ ಸಂಘಟನಾ ಸಂಚಾಲಕರಾದ ರಮೇಶ್ ಹರಿಖಂಡಿಗೆ ಮಾತನಾಡಿ ದಲಿತ ಸಂಘಟನೆಗಳ ಇತಿಹಾಸದಲ್ಲಿ ಉಡುಪಿ ಜಿಲ್ಲೆಯಲ್ಲಿ.ಡಾ.ಆರ್ ಮೋಹನ್ ರಾಜ್ ರವರ.ನಾಯಕತ್ವದ.


ಶೇಖರ್ ಹಾವಂಜೆ ರವರ ನೇತೃತ್ವದ ಭೀಮವಾದ ಮೊದಲ ಸ್ಥಾನದಲ್ಲಿ ಇದೆ ಯಾಕೆಂದರೆ ಈ ದೇಶಕ್ಕೆ ಸಮಾನತೆಗಾಗಿ ಹೋರಾಡಿದ ಎಲ್ಲಾ ನಾಯಕರುಗಳ ಜಯಂತಿ ಹಾಗೂ ಅವರ ಸವಿನೆನಪಿಗಾಗಿ ಆಚರಿಸುವ ಎಲ್ಲಾ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಉಡುಪಿ ಜಿಲ್ಲೆಯಲ್ಲಿ ಮೊದಲ ಸ್ಥಾನದಲ್ಲಿ ಇದೆ.

ಅಂಬೇಡ್ಕರರಿಗೆ ಗೌರವ ಕೊಡುವುದೆಂದರೆ ಮೆರವಣಿಗೆ,
ಜೈ ಕಾರ ಹಾಕಿದರೆ ಸಾಲದು ಅವರು ತೋರಿದ ಮಾರ್ಗದಲ್ಲಿ ನಡೆಯಬೇಕು ಬೌದ್ಧ ಧಮ್ಮವನ್ನು ಎಲ್ಲಾರೂ ಸ್ವೀಕರಿಸಬೇಕು ಎಂದರು.

ಇನ್ನೋರ್ವ ಮುಖ್ಯ ಅತಿಥಿ ಗೋಪಾಲ್ ಶಿವಪುರ ರವರ ಮಾತಿನಲ್ಲಿ ದಲಿತರು, ಒಬಿಸಿ ಗಳು ಶೂದ್ರರು.ದೇವಾಸ್ಥಾನ ಸುತ್ತುವುದು ಬಿಟ್ಟು ಅಂಬೇಡ್ಕರರು ತೋರಿದ ಬೌದ್ಧ ಧಮ್ಮದಕ್ಕೆ.ಸೇರಬೇಕು ಆಗ ಮಾತ್ರ ಸಮಾನತೆ ತಾನಾಗಿಯೇ ಬರುತ್ತದೆ ಎಂದು ಹೇಳಿದರು.

ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ವಹಿಸಿದ್ದ ಜಿಲ್ಲಾ ಸಂಚಾಲಕರಾದ ಸಂಜೀವ ನಾಯ್ಕ್ ಮಾತನಾಡಿ ಎಲ್ಲಿ ನೋಡಿದರೂ ಜಾತಿ, ಜಾತಿ ಧರ್ಮ ಎಂದು ಹೊಡೆದಾಡುವ ಈ ಕಾಲಘಟ್ಟದಲ್ಲಿ ದಲಿತರನ್ನು ಅಸ್ಪೃಶ್ಯರನ್ನಾಗಿಯೇ ನೋಡುತ್ತಾರೆ.ಮನುವಾದಿ ರಾಜಕಾರಣಿಗಳು.ನಮ್ಮ ದೇಶದ ನೂತನ ಸಂಸತ್ ಭವನ ಉದ್ಘಾಟನೆಗೆ ದೇಶದ ಪ್ರಥಮ ಪ್ರಜೆ ರಾಷ್ಟ್ರಪತಿ ದ್ರೌಪತಿ ಮುರ್ಮು ದಲಿತರೆಂಬ ಕಾರಣಕ್ಕೆ ಕರೆಯದೆ ಅಸ್ಪೃಶ್ಯತೆ ಆಚರಣೆ ಮಾಡಿದ್ದಾರೆ.ಅಸ್ಪೃಶ್ಯತೆ ಆಚರಣೆ ಇನ್ನೂ ಜೀವಂತ ಇದೆ ಎನ್ನುವುದಕ್ಕೆ ಇದೇ ಸಾಕ್ಷಿ.ಈ ಹಿಂಸೆಯಿಂದ ಪಾರಾಗಬೇಕಾದರೆ ಅಂಬೇಡ್ಕರ್ ಹೇಳಿದಂತೆ/ಅನುಸರಿಸಿದಂತೆ. ಹಿಂಧೂಧರ್ಮವನ್ನು ತ್ಯಜಿಸಿ ಎಲ್ಲರೂ ಬೌದ್ಧರಾಗಬೇಕು.


ಮುಂದಿನದಿನಗಳಲ್ಲಿ ನಾವೆಲ್ಲರೂ ಹಿಂದೂ ಧರ್ಮ ತ್ಯಜಿಸಿ ಬೌದ್ಧ ಧಮ್ಮದ ಪರಿಪಾಲನೆ ಮಾಡುವವರಾಗ ಬೇಕು ಎಂದು ಸಬಿಕರಿಗೆ ಕರೆನೀಡಿದರು.
ಸಂದರ್ಭದಲ್ಲಿ
ಜಿಲ್ಲಾ ಸಂಘಟನಾ ಸಂಚಾಲಕರಾದ ರಮೇಶ್ ಮಾಬಿಯಾನ್ ,ಶೀನ ಬೈರಂಪಳ್ಳಿ,
ಜಿಲ್ಲಾ ಖಜಾಂಚಿ ಪೃಥ್ವಿ ಒಳಗುಡ್ಡೆ, ಕಲಾ ಮಂಡಳಿಯ ಜಿಲ್ಲಾ ಸಂಚಾಲಕರಾದ ಸತೀಶ್ ಒಳಗುಡ್ಡೆ,ಸಮಿತಿ ಸದಸ್ಯರಾದ ಪ್ರಭಾಕರ ಅಮ್ಮುಂಜೆ,ಸುಜಾತ ಹಾವಂಜೆ, ಪೂರ್ಣಿಮಾ ಬೈರಂಪಳ್ಳಿ, ಮಂಜು ಹರಿಖಂಡಿಗೆ, ಮಹಾಬಲ ಕಡ್ತಲ,ನಾಥು ಒಳಗುಡ್ಡೆ, ಬೇಬಿ,ಕರ್ಣ ಬೈರಂಪಳ್ಳಿ, ಹಾಗೂ ವನಿತಾ, ಪ್ರತಾಪ್, ನಾರಾಯಣ, ಇಂದಿರಾ,ವಸಂತಿ.
ಹಿರಿಯ ಮುಖಂಡರಾದ ಶೇಖರ್ ಪೆರ್ಡೂರು.ಹಾಗೂ ಹೆಚ್ಚಿನ ಕಾರ್ಯಕರ್ತರು, ಅಂಬೇಡ್ಕರ್ ರವರ ಅಭಿಮಾನಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮದ ನಿರೂಪಣೆ ಪೃಥ್ವಿ ಒಳಗುಡ್ಡೆ , ಮುಖ್ಯ ಅತಿಥಿಗಳನ್ನು ಶೇಖರ್ ಪೆರ್ಡೂರು ಸ್ವಾಗತಿಸಿದರು.
ದಲಿತ ಕಲಾಮಂಡಳಿಯ ಜಿಲ್ಲಾ ಸಂಚಾಲಕರಾದ ಸತೀಶ್ ಒಳಗುಡ್ಡೆ ವಂದನಾರ್ಪಣೆ ಗೈದರು. swabhimananews@gmail.com

Related posts

ಪ್ರೀಯಕರನ ಜೊತೆ ಸೇರಿ ಗಂಡನನ್ನು ಕೊಂದೇ ಬಿಟ್ಟ ರೀಲ್ಸ್ ರಾಣಿ ಹೆಂಡತಿ ಪ್ರತಿಮಾ.

Swabhimana News Desk

ಬಾಬಸಾಹೇಬ್ ಅಂಬೇಡ್ಕರ್ ರವರನ್ನು ಸ್ವಾರ್ಥಕ್ಕಾಗಿ ಬಳಸುವುದು ದೇಶದ್ರೋಹಕ್ಕೆ ಸಮಾನ ದಲಿತ ಮುಖಂಡ ಶೇಖರ್ ಹಾವಂಜೆ !!

Swabhimana News Desk

ಉಡುಪಿ ಜಿಲ್ಲೆಯ. ಬೈಂದೂರು ತಾಲೂಕಿನಾದ್ಯಂತ. ಅಕ್ರಮ ಕೆಂಪು ಕಲ್ಲು ಗಣಿಗಾರಿಕೆ,ಕೋಟ್ಯಾಂತರ ರೂಪಾಯಿ ಸರಕಾರಕ್ಕೆ ವಂಚನೆ, ದಲಿತರಿಗೆ ಮೀಸಲಿಟ್ಟ ಡಿ ಸಿ ಮನ್ನಾ ಭೂಮಿಯನ್ನು,ಹಾಗೂ ಬಹುಕೋಟಿ ರೂಪಾಯಿ ಮೌಲ್ಯದ ಸರಕಾರಿ
ಭೂಮಿ.ಲೂಟಿ ಹೊಡೆದರೂ,ಎಷ್ಟೇ ದೂರು ನೀಡಿದರು. ಕಣ್ಣ್ ಮುಚ್ಚಿ ಕುಳಿತ ಇಲಾಖೆಗಳ ಅಧಿಕಾರಿಗಳು.

Swabhimana News Desk

Leave a Comment