19.1 C
New York
7 October 2024
Coastal

ಶ್ರೀಪತಿ ಅಸೋಶಿಯೇಟ್ಸ್ ಪ್ರೈವೇಟ್ ಲಿಮಿಟೆಡ್ ನ ಅಕ್ರಮ.ತೂಕ ಮತ್ತು ಮಾಪನ ಇಲಾಖೆ ಅಧಿಕಾರಿಗಳು ಕುಳಾಯಿ ಬಂದರು ಕಾಮಗಾರಿ ಪ್ರದೇಶಕ್ಕೆ ದಿಡೀರ್ ದಾಳಿ.

ಜುಲೈ -11-2023 Swabhimananews@gmail.com

ಮಂಗಳೂರು
ಕುಳಾಯಿ ಬಂದರು ಕಾಮಗಾರಿ ನಡೆಸುತ್ತಿರುವ ತಮಿಳುನಾಡು ಮೂಲದ ಶ್ರೀಪತಿ ಅಸೋಶಿಯೇಟ್ಸ್ ಪ್ರೈವೇಟ್ ಲಿಮಿಟೆಡ್
swabhimananews@gmail.com
ಎಂಬ ಸಂಸ್ಥೆಯು ಬಂದರು ಕಾಮಗಾರಿಕೆ ಹಾಗೂ ಸಮುದ್ರ ತಡೆಗೋಡೆ ನಿರ್ಮಾಣ ಗಳಂತಹ ಕಾಮಗಾರಿಗಳಗನ್ನು ನಿರ್ವಾಹಣೆ ಮಾಡಿ ಕೊಂಡು ಬರುತ್ತಿದ್ದು ಈ ಕಾಮಗಾರಿಗೆ ಬಳಸುವ ಸಾಮಾಗ್ರಿಗಳನ್ನು ತೂಕ ಮಾಡಲು ಇಟ್ಟಂಥಹ ತೂಕ ಮಾಪನವನ್ನು
(ವೇ ಬ್ರಿಡ್ಜ್)ಸರಕಾರದಿಂದ ಯಾವುದೇ ರೀತಿಯ ಅನುಮೋದನೆಗಳನ್ನು ಪಡೆದು ದುಕೊಳ್ಳದೆ ಅಕ್ರಮವಾಗಿ ಬಳಸಿಕೊಳ್ಳುತ್ತಿರುವುದನ್ನು ಅನೇಕ ಸಮಯಗಳಿಂದ ಅನೇಕರು ದೂರು ನೀಡುತ್ತ ಬಂದಿದ್ದಾರೆ.

swabhimananews@gmail.com
ಆದುದ್ದರಿಂದ ಇಂದು ತೂಕ ಹಾಗೂ ಮಾಪನದ ಅಧಿಕಾರಿಗಳು ದಿಢೀರನೇ ದಾಳಿ ನಡೆಸಿದ ಸಂದರ್ಭದಲ್ಲಿ ಇವರ ಬೃಹತ್ ಅಕ್ರಮ ವನ್ನುಕಂಡುಹಿಡಿದಿರುತ್ತಾರೆ,
swabhimananews@gmail.com
ಈ ತಮಿಳುನಾಡು ಮೂಲದ ಕಂಪೆನಿಯು ಈಗಾಗಲೇ ಭಟ್ಕಳದಲ್ಲಿ ಬ್ರೇಕ್ ವಾಟರ್ ಕಾಮಗಾರಿ ನಡೆಸಿದ್ದು. ಎಂಟು ಲಕ್ಷ ಟನ್ ಘನ ಗಾತ್ರದ ಬಂಡೆಕಲ್ಲುಹಾಗೂ ಎರಡರಿಂದ ಮೂರು ಲಕ್ಷ ಟನ್ಗಳಷ್ಟು ಜಲ್ಲಿ, ಎಂ ಸ್ಯಾಂಡ್ ಗಳನ್ನು ಕಾಮಗಾರಿಕೆಗೆ ಬಳಸಿಕೊಂಡಿದ್ದು.

swabhimananews@gmail.com
ಇದೇ ರೀತಿ ಹೆಜಮಾಡಿ ಯಲ್ಲಿಯೂ ಮೀನುಗಾರಿಕಾ ಬಂದರು ಕಾಮಗಾರಿ ನಡೆಸುತ್ತಿದ್ದು.
ಇಲ್ಲಿಯ ಕಾಮಗಾರಿಗೂ ಆರರಿಂದ ಏಳು ಲಕ್ಷ ಟನ್ಗಳಷ್ಟು ಘನ ಗಾತ್ರದ ಬಂಡೆಕಲ್ಲು ಹಾಗೂ ಒಂದರಿಂದ ಎರಡು ಲಕ್ಷಗಳಷ್ಟು ಜಲ್ಲಿ ಹಾಗೂ ಎಂ ಸ್ಯಾಂಡ್ ಗಳನ್ನು ಬಳಸಿ ಕಾಮಗಾರಿ ನಡೆಸಿದ್ದು.
swabhimananews@gmail.com
ಇದೇ ಮಾಪನದಲ್ಲಿ ತೂಕ ಮಾಡಿದ್ದು ಹಲವು ಬಾರಿ ತೂಕದ ಬಗ್ಗೆ ಸಂಶಯ ಬಂದ್ದಿದ್ದು ಸರಬರಾಜುದಾರರೆಲ್ಲರೂ ಹೊರ ಪ್ರದೇಶದಲ್ಲಿರುವಂಥಹ ಸರಕಾರೀ ಅಧಿಕೃತ ಮಾಪನಗಳಲ್ಲಿ ತೂಕ ಮಾಡಿ ನೋಡಿದ್ದು ಪ್ರತಿಯೊಂದು ವಾಹನಗಳಲ್ಲೂ ಒಂದರಿಂದ ಎರಡೂವರೆ ಟನ್ ಗಳ ವರೆಗೆ ತೂಕಗಳಲ್ಲಿ ವ್ಯತ್ಯಾಸ ಬಂದಿರುತ್ತದೆ.

swabhimananews@gmail.com
ಅಂದರೆ ಅಧಿಕೃತ ಮಾಪನದಲ್ಲಿ ಹೆಚ್ಚು ಇದ್ದು ಶ್ರೀ ಪತಿ ಅಸೋಶಿಯೇಟ್ಸ್ ಕಂಪೆನಿಯವರ ಮಾಪನದಲ್ಲಿ ಕಡಿಮೆ ಇರುತ್ತಿದ್ದು ಈ ಬಗ್ಗೆ ಹಲವು ಬಾರಿ ತಮಿಳುನಾಡು ಮೂಲದ ಶ್ರೀಪತಿ ಕಂಪೆನಿಯ ಗಮನಕ್ಕೆ ತಂದರೂ ಕಂಪೆನಿಯ ಸಂಬಂಧ ಪಟ್ಟವರು ಇದರ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದುದರಿಂದ ಸರಬರಾಜುದಾರರು ತೂಕ ಮತ್ತು ಮಾಪನ ಮಾಡುವ ಇಲಾಖೆಯ ಗಮನಕ್ಕೆ ತಂದಿರುವುದರಿಂದ ಇಂದು ಈ ಕಂಪೆನಿಯ ಅಕ್ರಮ ಚಟುವಟಿಕೆಗಳು ಸಾರ್ವಜನಿಕರಿಗೆ ತಿಳಿಯುವಂತೆ ಆಗಿರುತ್ತದೆ,
swabhimananews@gmail.com
ಈ ಹಿಂದೆ ಭಟ್ಕಳದಲ್ಲೂ,ಹೆಜಮಾಡಿಯಲ್ಲೂ ತೂಕ ಮತ್ತು ಮಾಪನ ಮಾಡುವ ವೇಳೆ ತೂಕವು ನಿಖರವಾಗಿ ಸಾಮಾಗ್ರಿಗಳನ್ನು ತಂದಿರುವ ವಾಹನಗಳ ಚಾಲಕರಿಗೆ ಕಣ್ಣಿಗೆ ಕಾಣುವಂತೆ ಇಟ್ಟು ಕಂಪ್ಯೂಟರ್ ಬಿಲ್ ಕೊಡದೆ ಬೇಕಾಬಿಟ್ಟಿ ಕೈಬರಹದ ಬಿಲ್ಲ್ ನಲ್ಲಿ ಸುಳ್ಳು ಹಾಗೂ ತಪ್ಪು ತೂಕ. ಬರೆದು ಕೊಟ್ಟಿದ್ದು ವಾಹನ ಚಾಲಕರಿಗೂ ಶ್ರೀ ಪತಿ ಅಸೋಶಿಯೇಟ್ಸ್ ಕಂಪೆನಿಯ ನೌಕರರಿಗೂ ಗಲಾಟೆಯೂ ನಡೆದಿರುತ್ತದೆ.
swabhimananews@gmail.com
ಇದೇ ರೀತಿ ಕುಳಾಯಿ ಕಾಮಗಾರಿಯಲ್ಲೂ ಶ್ರೀ ಪತಿ ಅಸೋಶಿಯೇಟ್ಸ್ ಕಂಪೆನಿಯವರ ಮೋಸ ಕಂಡು ಬಂದಿದ್ದು ಕೂಡಲೇ ತೂಕ ಹಾಗೂ ಮಾಪನ ಅಧಿಕಾರಿಗಳ ಗಮನಕ್ಕೆ ತಂದಿದುದರಿಂದ ಇವತ್ತು ಅಂದರೆ ದಿನಾಂಕ 12-07-2023 ರಂದು ತೂಕ ಮತ್ತು ಮಾಪನ ಅಧಿಕಾರಿಗಳು ನಡೆಸಿದ ದಾಳಿಯಿಂದ ಶ್ರೀ ಪತಿ ಅಸೋಶಿಯೇಟ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು ಅಕ್ರಮವಾಗಿ ಸರ್ಕಾರದ ಮಾನ್ಯತೆ ಪಡೆಯದೆಯೇ ತನ್ನದೇ ಮಾಪನಗಳಲ್ಲಿ ಸರಬರಾಜುದಾರಿಗೆ ತೂಕದಲ್ಲಿ ಮೋಸ ಮಾಡುತ್ತಿರುವುದು ದೃಡ ಗೊಂಡಿರುತ್ತದೆ
swabhimananews@gmail.com
ಈ ವಂಚನೆಯ ಬಗ್ಗೆ ಬಂದರು ಮತ್ತು ಮೀನುಗಾರಿಕಾ ಸಚಿವರು.ಹಾಗೂ ಇಲಾಖೆಗೆ ಸಂಬಂಧ ಪಟ್ಟ ಅಧಿಕಾರಿಗಳು ಕೂಡಲೇ ಶ್ರೀ ಪತಿ ಅಸೋಶಿಯೇಟ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಮೇಲೆ ಕಾನೂನು ಕ್ರಮ ಕೈಗೊಳ್ಳಲೇಬೇಕು.
swabhimananews@gmail.com
ಸರಬರಾಜುದಾರಿಗೆ ಒಂದೆರಡು ಟನ್ ಗಳಂತೆ ಮೋಸ ಮಾಡಿರುವ ಈ ಕಂಪೆನಿಯು ಸರಕಾರಕ್ಕೂ ಕೋಟ್ಯಂತರ ರೂಪಾಯಿಗಳ ಮೋಸ ಮಾಡಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿ ಕಂಡುಬರುತ್ತದೆ .

swabhimananews@gmail.com ಆದುದರಿಂದ ಈ ಕಂಪೆನಿಯು ಈವರೆಗೆ ಕರ್ನಾಟಕದ ಸಾಗರ ತೀರದಲ್ಲಿ ಪೂರ್ತಿಗೊಳಿಸಿರುವ ಪ್ರತಿ ಕಾಮಗಾರಿಗಳ ಬಗ್ಗೆ ಉನ್ನತ ಮಟ್ಟದ ಸಮಿತಿ ರಚಿಸಿ ಸಂಪೂರ್ಣ ತನಿಖೆ ನಡೆಸಿ ಸದ್ರಿ ಕಂಪೆನಿಯ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು. swabhimananews@gmail.com ಸದ್ರಿ ಕಂಪೆನಿಯು ಸರಕಾರಕ್ಕೆ ಮತ್ತು ವ್ಯಾಪಾರಸ್ಥರಿಗೆ ಮಾಡಿರುವ ಮೋಸವನ್ನು, ವಂಚನೆಯನ್ನು ಬಹಿರಂಗಗೊಳಿಸಿ.ಸದ್ರಿ ಕಂಪೆನಿಯನ್ನು ವಜಾ ಮಾಡಬೇಕು ಎಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.
Swabhimananews@gmail.com

Related posts

ಕಾಲೇಜು ವಿಡಿಯೋ ಪ್ರಕರಣ: ಸ್ವತಂತ್ರ ತನಿಖೆಯ ನಿಟ್ಟಿನಲ್ಲಿ ಸಿಐಡಿ ಗೆ ಹಸ್ತಾಂತರ. ಲಕ್ಷ್ಮೀ ಹೆಬ್ಬಾಳ್ಕರ್

Swabhimana News Desk

ಸೌಜನ್ಯ ಪ್ರಕರಣ ಮರು ತನಿಖೆಗೆ ಒತ್ತಾಯಿಸಿ RPI. KARNATAKA ಮತ್ತು KDSS. ಭೀಮವಾದ(ರಿ) ಉಡುಪಿ ಜಿಲ್ಲೆ ಇದರ ವತಿಯಿಂದ ಸರ್ಕಾರಕ್ಕೆ ಮನವಿ.

Swabhimana News Desk

ಮಾಜಿ ಶಾಸಕ ಬಸವರಾಜ್ ಅವರನ್ನು ಭೇಟಿಯಾದ ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ

Swabhimana News Desk

Leave a Comment