ಬೈಂದೂರು: ಜುಲೈ -03-2025
Swabhimananews
ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನಾದ್ಯಂತ ಅಕ್ರಮ ಕೆಂಪು ಕಲ್ಲು ಗಾಣಿಗರಿಕೆ ಬಗ್ಗೆ ದಲಿತ ಸಂಘರ್ಷ ಸಮಿತಿ ಭೀಮವಾದ ಸಂಘಟನೆ ದೂರು ನೀಡಿ ವರ್ಷ ಕಳೆದರು ಯಾವುದೇ ಕಾನೂನು ಕ್ರಮ ಕೈಗೊಳ್ಳದ ಅಧಿಕಾರಿಗಳ ವಿರುದ್ಧ ಕಟ್ಟು ನಿಟ್ಟಿನ ಕಾನೂನು ಕ್ರಮ ಕೈ ಗೊಳ್ಳುವಂತೆ.
ಮತ್ತು ಪ್ರಸ್ತುತ ಕಾಲ್ತೊಡು ಗ್ರಾಮದ ಬೇಟಿಯಾಣಿ ಸರ್ವೆ ನಂ. 57ಮತ್ತು 56 ರಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಕೆಂಪು ಕಲ್ಲು ಅಕ್ರಮವಾಗಿ ಗಣಿಗಾರಿಕೆ ನಡೆಸಿ ಸಾಗಾಟ ಮಾತ್ತಿರುವುದನ್ನು ಈ ಕೂಡಲೇ ಸ್ಥಗಿತಗೊಳಿಸಿ
ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಸಂಘಟನೆ ಸಂಭಂದ ಪಟ್ಟ ಇಲಾಖೆಗೆ,ಸರಕಾರದ ಮುಖ್ಯ ಕಾರ್ಯದರ್ಶಿರವರಿಗೆ ಮತ್ತು ಸಚೀವರಿಗೆ ದೂರು ನೀಡಿದೆ.
ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನಲ್ಲಿ ಇಡೀ ತಾಲೂಕಿನದ್ಯಂತ ಅಕ್ರಮವಾಗಿ ಕೆಂಪುಕಲ್ಲು ಗಾಣಿಗರಿಕೆ ನಡೆಸಿ ಅಕ್ರಮವಾಗಿ ಸಗಾಟ ಮಾಡುತ್ತಿರುವ ಬಗ್ಗೆ ಸಂಘಟನೆ ಕಳೆದವರ್ಷ ದಿನಾಂಕ 05-01-2024 ರಂದು ಮತ್ತು 23-05-2025 ರಂದು ಸಂಬಂಧ ಪಟ್ಟ ಎಲ್ಲಾ ಅಧಿಕಾರಿಗಳಿಗೆ ಲಿಖಿತವಾಗಿ ದೂರು ನೀಡಿದರೂ ಯಾವುದೇ ಕಾನೂನು ಕ್ರಮ ಕೈಗೊಳ್ಳದೆ
ಸಂಬಂಧ ಪಟ್ಟ ಎಲ್ಲಾ ಇಲಾಖೆಗಳ ಅಧಿಕಾರಿಗಳು ಈ ಅಕ್ರಮ ದಂದೆ ಕೊರರೊಂದಿಗೆ ಶಾಮೀಲಾಗಿರುವುದು ಈ ಪ್ರಕರಣದಲ್ಲೇ ಸಾಬೀತದಂತಾಗುತ್ತದೆ. ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಈ ಅಕ್ರಮ ಕೆಂಪು ಕಲ್ಲು ದಂದೆಕೋರರೊಂದಿಗೆ
ಕೆಲವು ಉನ್ನತ ಮಟ್ಟದ ಅಧಿಕಾರಿಗಳು ಒಳಒಪ್ಪಂದ ಮಾಡಿಕೊಂಡು, ಹೊಂದಾವಣಿಕೆಯಿಂದ ಕೆಲವು ಅಧಿಕಾರಿಗಳಿಗೆ ಒಂದು ಕೆಂಪು ಕಲ್ಲಿಗೆ ಇಂತಿಷ್ಟು ರೂಪಾಯಿ ಎಂದು ಫಿಕ್ಸ್ ಮಾಡಿಕೊಂಡು,
ಇಡೀ ಬೈಂದೂರು ತಾಲೂಕಿನ ಸರಕಾರಿ, ಗೋಮಾಳ, ಮೀಸಲು ಅರಣ್ಯ.ಮತ್ತು ದಲಿತರ dc ಮನ್ನಾ ಭೂಮಿಯಲ್ಲಿ ಎಲ್ಲೆಂದರಲ್ಲಿ ರಾತ್ರಿ ಹಗಲು ಎನ್ನದೆ ನಿರಂತರವಾಗಿ ಬೇಕಾಬಿಟ್ಟಿ ಅಕ್ರಮ ಕೆಂಪುಕಲ್ಲು ಗಾಣಿಗರಿಕೆ ನಡೆಸಿ ಸಾಗಟ ಮಾಡುತ್ತಿದ್ದಾರೆ.
ಇದರಿಂದ ಸರಕಾರಕ್ಕೆ ಒಂದೇ ಒಂದು ರೂಪಾಯಿ ಕೂಡ ಸಲ್ಲಿಕೆಯಾಗದೆ. ಸರಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ನಷ್ಟದ ಜೊತೆಗೆ ಸಾವಿರಾರು ಕೋಟಿ ರೂಪಾಯಿಯ ಸರಕಾರಿ ಭೂಮಿಯು ಕಳ್ಳಕಾಕರ ಪಾಲಾಗ್ತಿದೆ.
ಪ್ರಕೃತಿ ಸಂಪತ್ತು ಲೂಟಿ ಹೊಡೆದು ಪರಿಸರ ಸತ್ಯ ನಾಶವಾಗ್ತಿದೆ, ಈ ಅಕ್ರಮ ಗಣಿಗಾರಿಕೆ ನಡೆಸಿದ ಸರಕಾರಿ ಭೂಮಿಯ ಹೊಂಡವನ್ನು, ಈ ಅಕ್ರಮ ದಂದೆ ಕೋರರು ತಮ್ಮ ಹಣಬಲ, ಜನಬಲ, ರಾಜಕೀಯ ಪ್ರಭಾವದಿಂದ ಅಕ್ರಮವಾಗಿ ಬೇರೆಯವರಿಗೆ ಮಾರಾಟ ಮಾಡಿ.
ಆ ಭೂಮಿಯನ್ನು ಪಡೆದುಕೊಂಡವನ ಹೆಸರಲ್ಲಿ
ಕಲಂ 94 c, 50,57, ಇನ್ನಿತರೆ ಅಕ್ರಮ ಸಕ್ರಮದಡಿಯಲ್ಲಿ ಭೂಮಿ ಮಂಜೂರಾತಿಗೆ ಅರ್ಜಿ ಸಲ್ಲಿಸುವುದು ನಂತರ ಪ್ರಭಾವಿ ರಾಜಕಾರಣಿಗಳ ಮೂಲಕ ಸಂಬಂಧಪಟ್ಟ ಅಧಿಕಾರಿಗಳಿಗೆ,
ಸರಕಾರಕ್ಕೆ ಸುಳ್ಳು ಹಾಗೂ ತಪ್ಪು ಮಾಹಿತಿನೀಡಿ ಆ ಭೂಮಿಯನ್ನು ಮಂಜೂರು ಮಾಡಿಕೊಳ್ಳುವುದು ಅದರಲ್ಲಿ ಕೋಟಿ, ಕೋಟಿ ಹಣ ಸಂಪಾದಿಸುವುದು ಎಂದು ಹತ್ತಿರದಿಂದ ಬಲ್ಲವರು ಸ್ಥಳಿಯರು ,ಹಿರಿಯ ರಾಜಕಾರಣಿಯೊಬ್ಬರು ಸಂಘಟನೆಗೆ ತಿಳಿಸಿದ್ದಾರೆ ಎಂದು ಉಲ್ಲೇಖಿಸಲಾಗಿದೆ.
ಈ ಭೂಮಿಯ ಬಗ್ಗೆ ಉನ್ನತ ಮಟ್ಟದ ತನಿಖೆ ಆಗಲೇಬೇಕು.
ಈ ಬೈಂದೂರು ತಾಲೂಕಿನಲ್ಲಿ ಹೆಚ್ಚಿನ ಪ್ರದೇಶ ಮೂಕಾಂಬಿಕಾ ಅಭಯಅರಣ್ಯಕ್ಕೆ ಸಂಬಂಧಪಟ್ಟ ಸೂಕ್ಷ್ಮ ವಲಯ ಎಂದು ಗುರುತಿಸಿರುವ ಪ್ರದೇಶವಾಗಿದೆ ಆದರೂ ಈ ಅರಣ್ಯ ಭೂಮಿಯಲ್ಲೇ ನಿರಂತರವಾಗಿ, ಅಕ್ರಮವಾಗಿ ಕೆಂಪುಕಲ್ಲು ಗಾಣಿಗರಿಕೆ ನಡೆಯುತ್ತಲೇ ಇದೆ.
ಈ ಬಗ್ಗೆ ಸಂಘಟನೆ ಅನೇಕ ಲಿಖಿತವಾಗಿ ದೂರು ನೀಡಿದರು ಅಧಿಕಾರಿಗಳು ಯಾವುದೇ ರೀತಿಯ ಕಾನೂನುಕ್ರಮ ಕೈಗೊಂಡಿಲ್ಲ.ಯಾಕೆ ಎಂದರೆ ಈ ಅಕ್ರಮದಂದೆಯಲ್ಲಿ ಕೆಲವು ಅಧಿಕಾರಿಗಳು ಪಾಲುದಾರರು ಎಂದು ಸಾಬೀತಾದಂತಾಗಿದೆ ಎಂದು ಸಂಘಟನೆಯು ತಿಳಿಸಿದೆ.
ಪ್ರಸ್ತುತ ಕಾಲ್ತೊಡು ಗ್ರಾಮದ ಬೇಟಿಯಾಣಿ ಶಾಲೆಯ ಹಿಂಬಾಗದ ಸರ್ವೆ ನಂ. 57 ಮತ್ತು 56 ರಲ್ಲಿ ಖಾಸಗಿ ಹಾಗೂ ಸರಕಾರದ ಭೂಮಿಯಲ್ಲಿ ಬ್ರಹತ್ ಗಾತ್ರದ ಅಂದಾಜು ಸುಮಾರು 2,3 ಎಕರೆ ಪ್ರದೇಶದ ಕೆಂಪು ಕಲ್ಲು ಕ್ವಾರಿಯೊಂದರಲ್ಲಿ ರಾತ್ರಿ ಹಗಲು ಎನ್ನದೆ ನಿರಂತರವಾಗಿ, ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಯುತ್ತಿದೆ.
ಈ ಹಿಂದೆ ಸ್ಥಳಿಯರು ಅನೇಕ ದೂರು ನೀಡಿದ ಪರಿಣಾಮ ಈ ಕಲ್ಲುಗಣಿಗಾರಿಕೆ ಸ್ಥಗಿತಗೊಂಡಿತ್ತು. ಆದರೆ ಮತ್ತೆ ಇತ್ತೀಚಿಗೆ ಕೆಲವು ದಿನಗಳಿಂದ ರಾತ್ರಿ, ಹಗಲು ಎನ್ನದೆ ನಿರಂತರವಾಗಿ ಕಲ್ಲು ಗಣಿಗಾರಿಕೆ ನಡೆಯುತಿದೆ,ಈ ಅಕ್ರಮ ಕೆಂಪು ಕಲ್ಲು ಗಣಿಗಾರಿಕೆ ಮಾಡುವ ಸ್ಥಳವು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಬೇಟಿಯಾಣಿಗೆ ತಾಗಿ ಕೊಂಡಿದ್ದು,
ಈ ಹಿಂದೆ ಶಾಲಾಭಿವೃದ್ಧಿ ಸಮಿತಿಯವರು ಕೂಡ ಇದರ ವಿರುದ್ದ ದೂರು ನೀಡಿದ್ದು, ಮಕ್ಕಳಿಗೆ ಪಾಠ ಮಾಡಲು, ಇನ್ನಿತರ ಮಕ್ಕಳ ಚಟುವಟಿಕೆಗೆ ನಿರಂತರವಾಗಿ
ನನಾರೀತಿಯ ಸಮಸ್ಯೆ, ತೊಂದರೆಯಾಗುತ್ತಿದೆ ಎಂದು ದೂರಿರುತ್ತಾರೆ.
ಈ ಭೂಮಿಯಲ್ಲಿ ಮೀಸಲು ಅರಣ್ಯ ಭೂಮಿ ಸೇರಿದಂತೆ ಸರಕಾರಿ ಭೂಮಿಯೂ ಸೇರಿದೆ ಇದರಲ್ಲೇ ಅಕ್ರಮವಾಗಿ ಕೆಂಪುಕಲ್ಲು ಗಣಿಗಾರಿಕೆ ನಡೆಸಿ ದಿನನಿತ್ಯ ಹತ್ತಾರು ಲಕ್ಷರೂಪಾಯಿ ಮೌಲ್ಯದ ಕೆಂಪು ಕಲ್ಲು ಮಾರಾಟ ಆಗುತ್ತಿದೆ.
ಈ ಒಂದೇ ಕ್ವಾರಿಯಲ್ಲಿ
ಇಷ್ಟೊಂದು ಅತ್ಯುತ್ತಮ ಕ್ವಾಲಿಟಿಯ ಕೆಂಪು ಕಲ್ಲು ಉಡುಪಿ ಜಿಲ್ಲೆಯಲ್ಲಿ ಯಾವ ಪ್ರದೇಶದಲ್ಲೂ ಇಲ್ಲ ಈ ಕಲ್ಲಿಗೆ ತುಂಬನೇ ಬೇಡಿಕೆ ಇದೆ ಹಾಗಾಗಿ ಕಲ್ಲು ಕೊರೆಯಲ್ಲೇ ಒಂದು ಕೆಂಪುಕಲ್ಲಿಗೆ 60 ರಿಂದ 80 ರೂಪಾಯಿಗೆ ಮಾರಾಟ ಮಾಡುತ್ತಿದ್ದಾರೆ ಈ ಅಕ್ರಮ ದಂದೆಕೋರರು.
ಎಂದು ಸ್ಥಳೀಯರು ಆಡಿಕೊಳ್ಳುತ್ತಿದ್ದಾರೆ ಈ ಅಕ್ರಮ ಕೆಂಪು ಕಲ್ಲು ಗಣಿಗಾರಿಕೆಯಿಂದ ಸರಕಾರಕ್ಕೆ ಕೋಟ್ಯಂತರ ರೂಪಾಯಿ ರಾಜಧನ ವಂಚನೆ ಆಗಿದೆ.
ಕಳೆದ ಮೂರು ವರ್ಷದ ಹಿಂದೆ ಇದೇ ಕಾಲ್ತೋಡು ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿ ದೊಡ್ಡ ಮೊತ್ತದ ದಂಡವನ್ನು ಇದೇ ಕ್ವಾರಿಗೆ ಇಲಾಖೆ ಹಾಕಿರುತ್ತಾರೆ ನಂತರ ಕಳೆದ ಆರು ತಿಂಗಳಿಂದ ಕದ್ದು ಮುಚ್ಚಿ ನಡೆಯುತ್ತಿದ್ದ ಅಕ್ರಮ ಗಣಿಗಾರಿಕೆ
ಈ ಹಿಂದಿನ ಪೊಲೀಸ್ ವರಿಷ್ಟಧಿಕಾರಿ ಅರುಣ್ ಕುಮಾರ್ ರವರು ವರ್ಗಾವಣೆ ಗೊಂಡ ಮರುದಿನದಿಂದ ಬಹು ದೊಡ್ಡ ಪ್ರಮಾಣದಲ್ಲಿ ರಾತ್ರಿ ಹಗಲು ಎನ್ನದೆ ಗಣಿಗಾರಿಕೆ ಮತ್ತು ಸಾಗಟ ನಡೆಯುತ್ತಿದೆ.
ಈ ಭೂಮಿಯು ಉದ್ಯಮಿಗಳಾದ ಬಿ.ಎಸ್. ಸುರೇಶ ಶೆಟ್ಟಿ ಮತ್ತು ಪಾಂಡುರಂಗ ಪಡಿಯಾರ್ ರವರಿಗೆ ಸೇರಿದ ಪಟ್ಟಾ ಸ್ಥಳವಾಗಿರುತ್ತದೆ. ಇದಕ್ಕೆ ಹೊಂದಿಕೊಂಡ ಸರಕಾರಿ ಮತ್ತು ಅರಣ್ಯ ಭೂಮಿಯಲ್ಲೇ, ಈ ಒಂದು ಅಕ್ರಮ ಗಣಿಗಾರಿಕೆ ನಡೆಸುವುದಾಗಿ ಸ್ಥಳೀಯರ ಗಂಭೀರ ಆರೋಪ ಈ ಗಣಿಗಾರಿಕೆಯನ್ನು ಸ್ಥಳೀಯ ಗಣಿ ಉದ್ಯಮಿಯಾದ ಹೇರಂಜಾಲು ವಿಜಯಕುಮಾರ ಶೆಟ್ಟಿಯವರು ನಡೆಸುತ್ತಿದ್ದಾರೆ ಎಂದು ಬಲ್ಲ ಮೂಲಗಳಿಂದ ಸಂಘಟನೆಗೆ ತಿಳಿದುಬಂದಿದೆ.
ಆದುದ್ದರಿಂದ ಈ ಮೇಲೆ ತಿಳಿಸಿದ ಬಹುದೊಡ್ಡ ಅಕ್ರಮ ಕೆಂಪು ಕಲ್ಲು ಗಣಿಗಾರಿಕೆಯನ್ನು ತಕ್ಷಣವೇ ಸ್ಥಗಿತ ಗೊಳಿಸಿ, ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರುಗಿಸಲೇ ಬೇಕಾಗಿದೆ ಎಷ್ಟೇ ಪ್ರಭಾವ ಬಳಸಿದರೂ ಈ ಅಕ್ರಮ ಗಣಿಗಾರಿಕೆ ನಡೆಸಿದವರ ವಿರುದ್ಧ ಪ್ರಕರಣ ದಾಖಲಿಸಿ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಂಡು ಈ ಅಕ್ರಮ ಗಣಿಗಾರಿಕೆ ನಡೆಸಿದ ಪಟ್ಟಾ ಭೂಮಿಯನ್ನು ಸರಕಾರ ಮುಟ್ಟುಗೊಲು ಹಾಕಿಕೊಂಡು ಅವರ ಮಂಜೂರಾತಿ ರದ್ದು ಗೊಳಿಸಿ.
ಗಣಿ ನಿಯಮದಂತೆ 5 ಪಟ್ಟು ದಂಡ ವಿಧಿಸಿ ಭೂಮಿಯನ್ನು ಸರಕಾರದ ವಶಕ್ಕೆ ಪಡೆಯುವಂತೆ ಸಂಘಟನೆ ಆಗ್ರಹಿಸಿದೆ ಮತ್ತು ಬೈಂದೂರು ತಾಲೂಕಿನದ್ಯಂತ ಸರಕಾರಿ, ಅರಣ್ಯ, ಗೋಮಾಳ, dc ಮನ್ನಾ ಭೂಮಿಯಲ್ಲಿ ನಡೆಯುತ್ತಿರುವ ಅಕ್ರಮ ಕೆಂಪುಕಲ್ಲು ಗಣಿಗಾರಿಕೆಯನ್ನು ಸಂಪೂರ್ಣ ಸ್ಥಗಿತಗೊಳಿಸಿ ಅಕ್ರಮದಾರರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಅಕ್ರಮ ಗಾಣಿಗಾರಿಕೆಯ ಎಲ್ಲಾ ಮೆಷಿನ್, ಪರಿಕರ, ವಾಹನಗಳನ್ನು ಸಂಬಂಧ ಪಟ್ಟ ಇಲಾಖೆಗೆ ಮುಟ್ಟುಗೊಲು ಹಾಕಿಕೊಳುವಂತೆ ಆದೇಶ ಮಾಡಿ ಈ ಕೂಡಲೇ ಈ ಗಣಿಗಾರಿಕೆಯನ್ನು ಸ್ಥಗಿತ ಗೊಳಿಸುವಂತೆ ಕದಸಂಸ ಭೀಮವಾದ (ರಿ)ಉಡುಪಿ ಜಿಲ್ಲೆ ಆಗ್ರಹಿಸಿದೆ.
Swabhimananews