15 C
New York
27 September 2026
Coastal

ಹಾವಂಜೆಯಲ್ಲೊಂದು ದೇಸೀಯ ಶೈಲಿಯ ಚಿಣ್ಣರ ಬೇಸಿಗೆ ಶಿಬಿರ. ಬಾಲಲೀಲಾ-2024.

Swabhimananews -ಏಪ್ರಿಲ್-11-2024

ಭಾವನಾ ಪ್ರತಿಷ್ಠಾನ (ರಿ.) ಹಾವಂಜೆ ಹಾಗೂ ಭಾಸ ಗ್ಯಾಲರಿ ಮತ್ತು ಸ್ಟುಡಿಯೋ ಇದರ ಆಯೋಜಕತ್ವದಲ್ಲಿ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಹಾವಂಜೆ ಗ್ರಾಮದಲ್ಲಿ ನಾಲ್ಕು ದಿನದ ಚಿಣ್ಣರ ಬೇಸಿಗೆ ಶಿಬಿರ ದಿನಾಂಕ 11/04/2024 ರಂದು ಉದ್ಘಾಟನೆ ಗೊಂಡಿತು.

ಮಕ್ಕಳಲ್ಲಿ ಸೃಜನಶೀಲತೆಯನ್ನು ಉತ್ತೇಜಿಸಲು ಮತ್ತು ರಜೆಯನ್ನು ಇನ್ನಷ್ಟು ಮಜವಾಗಿಸಲು ರಾಷ್ಟ್ರೀಯ ಮಟ್ಟದ ಸಂಪನ್ಮೂಲ ವ್ಯಕ್ತಿಗಳಿಂದ ಹಲವಾರು ಕಲಾ ಸಂಬಂಧಿತ ವಿಷಯಗಳ ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ಗ್ರಾಮೀಣ ಪರಿಸರದಲ್ಲಿ ಕಲಿಸುವ ನಿಟ್ಟಿನಲ್ಲಿ ನಾಲ್ಕು ದಿನದ ಶಿಬಿರವನ್ನು ಏರ್ಪಡಿಸಲಾಗಿದೆ

ಗ್ರಾಮೀಣ ಭಾಗದ ಪ್ರಶಾಂತ ಪರಿಸರದಲ್ಲಿ ಕರಕುಶಲ ಕಲೆ, ಸಂಗೀತ, ಅಭಿನಯ, ದೇಶೀಯ ಆಟಗಳು, ಪಕ್ಷಿ ವೀಕ್ಷಣೆ, ಸರೀಸೃಪಗಳ ಪರಿಚಯ, ಮನೆ ಮದ್ದುಗಳು, ಮಕ್ಕಳ ಸಿನೇಮಾ ಮುಂತಾದ ಅನೇಕ ವಿಷಯಗಳ ಸೃಜನಶೀಲ ಕಲಿಕೆಗೆ ಪ್ರೋತ್ಸಾಹ ನೀಡಲಾಗುತ್ತಿದೆ..

ಶಿಬಿರದಲ್ಲಿ ಮಕ್ಕಳ ಚಲನಚಿತ್ರ, ಸಂಗೀತ, ಚಿತ್ರಕಲೆ, ಜಾಲಿ ಪ್ರೇಂ ಹಾಗೂ ಮಂಜೂಷಾ ಕಲೆ(ಬಿಹಾರ), ಆವೆಮಣ್ಣಿನ ಶಿಲ್ಪ, ಮುಖವರ್ಣಿಕೆ, ಕಸದಿಂದ ರಸ ಕ್ರಾಫ್ಟ್, ದೇಶೀಯ ಆಟಗಳು, ಕಸೂತಿ ಕಲೆ, ಹೂಗಳ ತಯಾರಿ, ವ್ಯಂಗ್ಯ ಚಿತ್ರಣ, ರೂಬಿಕ್ಸ್ ಕ್ಯೂಬ್ ಮುಂತಾದ ಹಲವಾರು ವಿಷಯಗಳ ಆಯೋಜಿಸಲಾಗಿದೆ ಎಂದು ಶಿಬಿರ ದ ಆಯೋಜಕರಾದ ಡಾ.ಜನಾರ್ದನ ರಾವ್ ಹಾವಂಜೆ ತಿಳಿಸಿದರು.

ಶಿಬಿರವು ದಿನಾಂಕ 11/04/2024 ರಿಂದ 14/04/2024 ರ ವರೆಗೆ ನಡೆಯಲಿದ್ದು 14/04/2024 ರಂದು ಸಮಾರೋಪಗೊಳ್ಳಲಿದೆ.

Swabhimananews

Related posts

ಪೆರ್ಡೂರು ಬಿಜೆಪಿ ಮುಖಂಡ, ವೈನ್ ಶಾಪ್ ಮಾಲೀಕ ಸುಭಾಷ್ ಹೆಗ್ಡೆ ಯಿಂದ ವಯೋವೃದ್ಧರ ಮೇಲೆ ಹಲ್ಲೆ ಜೀವ ಬೆದರಿಕೆ ಪ್ರಕರಣ ದಾಖಲು

Swabhimana News Desk

ಬೋಧಿಸತ್ವ ಬುದ್ಧ ಫೌಂಡೇಶನ್ (ರಿ) ಉಡುಪಿ ಜಿಲ್ಲೆ ಇವರ ಬೋಧಿಸತ್ವ ಕಲಾತಂಡದ ಉದ್ಘಾಟನಾ ಕಾರ್ಯಕ್ರಮ.    

Swabhimana News Desk

RPIK,ಕದಸಂಸ. ಭೀಮವಾದ ಉಡುಪಿ ಜಿಲ್ಲೆ. ಇದರ ವತಿಯಿಂದ ಮೀಸಲಾತಿಯ ಜನಕ ಛತ್ರಪತಿ ಶಾಹು ಮಹಾರಾಜ್ ಜಯಂತಿ.ಆಚರಣೆ

Swabhimana News Desk

Leave a Comment