9 May 2025
Coastal

ಬಾಬಸಾಹೇಬ್ ಅಂಬೇಡ್ಕರ್ ರವರನ್ನು ಸ್ವಾರ್ಥಕ್ಕಾಗಿ ಬಳಸುವುದು ದೇಶದ್ರೋಹಕ್ಕೆ ಸಮಾನ ದಲಿತ ಮುಖಂಡ ಶೇಖರ್ ಹಾವಂಜೆ !!

ಏಪ್ರಿಲ್-28-2024
swabhimananews

ಜೈ ಭೀಮ್ ಬಳಗ ಹಂಗಾರಕಟ್ಟೆ ಇದರ ವತಿಯಿಂದ ದಿನಾಂಕ 28-04-2024 ರಂದು ಬಾಬಸಾಹೇಬ್ ಅಂಬೇಡ್ಕರ್ ರವರ 133 ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ದಲಿತ ಮುಖಂಡ ಶೇಖರ್ ಹಾವಂಜೆ ಮಾತನಾಡಿ ಇತ್ತೀಚೆಗೆ ಅಂಬೇಡ್ಕರ್‌ರನ್ನು ಸ್ವಾರ್ಥಕ್ಕೆ ಬಳಸುವುದು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುತ್ತವೆ ಇದು ಬಹುದೊಡ್ಡ ಅಪಾಯಕಾರಿ ಇದು ದೇಶದ್ರೋಹಕ್ಕೆ ಸಮಾನ,ನಿಜವಾದ ದಲಿತ ನಾಯಕರು ಅವರ ತತ್ವ ಸಿದ್ಧಾಂತವನ್ನು ಮೈಗೂಡಿಸಿಕೊಳ್ಳಬೇಕು,

ಅಂಬೇಡ್ಕರ್ ರವರ ಅಭಿಮಾನಿಗಳು ಆದರೆ ಸಾಲದು ಅಂಬೇಡ್ಕರ್ ರವರ ಅನುಯಾಯಿಗಳು ಆಗಬೇಕು, ಮೂಡನಂಬಿಕೆ,ಮೌಢ್ಯಕ್ಕೆ ಬಲಿಯಾಗದೆ.ಬಾಬಸಾಹೇಬರು ಹೇಳಿರುವಂತೆ ಧಮ್ಮ ಮಾರ್ಗದಲ್ಲಿ ನಡೆದರೆ ಮಾತ್ರ ದಲಿತರು ಅಭಿವೃದ್ಧಿಹೊಂದಲು ಸಾಧ್ಯ,ಮುಂದಿನ ದಿನಗಳಲ್ಲಿ ಎಲ್ಲರೂ ಬೌದ್ಧರಾಗಬೇಕು ಎಂದರು.

ಕಾರ್ಯಕ್ರಮದ ಸಭಾಧ್ಯಕ್ಷತೆತನ್ನು ವಹಿಸಿದ್ದ ಸಾಮಾಜಿಕ ಹೋರಾಟಗಾರ,ದಲಿತ ಚಿಂತಕರಾದ ಜಯನ್ ಮಲ್ಪೆ ರವರ ಅಧ್ಯಕ್ಷರ ಭಾಷಣದಲ್ಲಿ
ದಲಿತ ವಿದ್ಯಾವಂತರು ಮೋದಿಯ ಕಪಟ ನಾಟಕವನ್ನು ಅರ್ಥಮಾಡಿಕೊಳ್ಳದೆ ಅಂಧಭಕ್ತರಂತೆ ವರ್ತಿಸುವುದು ಅಂಬೇಡ್ಕರ್‌ಗೆ ಬಗೆದ ದ್ರೋಹ
ಮೋದಿಯ ಸರ್ವಾಧಿಕಾರ ದಲಿತರಿಗೆ ಸಂಚಕಾರ. ಧರ್ಮದ ಹೆಸರಿನಲ್ಲಿ ಸರ್ವಾಧಿಕಾರ ಮಾಡುವ ಮೋದಿಯ ಹಿಂದೆ ದಲಿತರನ್ನು ಮತ್ತು ಅಂಬೇಡ್ಕರ್ ಬರೆದ ಸಂವಿಧಾನವನ್ನು ನಾಶಮಾಡುವ ಸಂಚು ರೂಪಿಸಿರುವುದಾಗಿ ಜಯನ್ ಮಲ್ಪೆ ಆರೋಪಿಸಿದ್ದಾರೆ.


ಮೋದಿ ಎಷ್ಟು ದೊಡ್ಡ ಹಗರಣ ಮಾಡಿದರೂ ಅವರನ್ನೇ ದೇವರು ಅನ್ನೋ ಜನ ನಮ್ಮ ದಲಿತ ಸಮಾಜದಲ್ಲೂ ಇದ್ದಾರೆ.ಮೋದಿ ಭ್ರಷ್ಟಾಚಾರ ಮಾಡಿ,ಬಡಜನರ ದುಡ್ಡನ್ನು ನುಂಗಿ ನೀರು ಕುಡಿಯುತ್ತಾ,ಬಡವರ ರಕ್ತ ಹೀರಿ ಅದನ್ನು ಉದ್ಯಮಿಗಳಗೆ ಅಭಿಷೇಕ ಮಾಡುತ್ತಿದ್ದಾರೆ ಎಂದಿರುವ ಜಯನ್ ಮಲ್ಪೆ ದಲಿತ ವಿದ್ಯಾವಂತರು ಕೂಡ ಮೋದಿಯ ಕಪಟ ನಾಟಕವನ್ನು ಅರ್ಥಮಾಡಿಕೊಳ್ಳದೆ ಅಂಧಭಕ್ತರಂತೆ ವರ್ತಿಸುವುದು ಅಂಬೇಡ್ಕರ್‌ಗೆ ಬಗೆದ ದ್ರೋಹ ಎಂದರು.

ಉಡುಪಿ ವಿಧ್ಯಾರ್ಥಿ ಒಕ್ಕೂಟದ ಅಧ್ಯಕ್ಷರಾದ ಸೌರಭ ಬಳ್ಳಾಲ್ ಮಾತನಾಡಿ ಅಂಬೇಡ್ಕರ್ ಬರೆದ ಸಂವಿಧಾನದ ಆಶಯವನ್ನು ಉಳಿಸುವುದು ಇಂದು ಪ್ರತಿಯೊಬ್ಬರ ಕರ್ತವ್ಯ,ದಲಿತರು ತಮ್ಮ ಮಕ್ಕಳಿಗೆ ಶಿಕ್ಷಣಕ್ಕೆ ಹೆಚ್ಚು ಮಹತ್ವ ನೀಡುವಂತೆ ಕೆಲಸಮಾಡಬೇಕು ಎಂದರು. ವೇದಿಕೆಯಲ್ಲಿ ಅಂಬೇಡ್ಕರ್ ಯುವಸೇನೆಯ ಜಿಲ್ಲಾಧ್ಯಕ್ಷರಾದ ಹರೀಶ್ ಸಾಲ್ಯಾನ್,ಗ್ರಾ.ಐರೋಡಿ ಗ್ರಾಮ ಪಂಚಾಯತ್ ಸದಸ್ಯೆ ಶ್ರೀಮತಿ ಸುಲೋಚನಾ ಸುಧಾಕರ್, ಜೈಭೀಮ್ ಬಳಗದ ಅಧ್ಯಕ್ಷರಾದ ಅಣ್ಣಪ್ಪ ಗೆದ್ದೆಮನೆ,ಗಣೇಶ್ ಹಂಗಾಕಟ್ಟೆ ಉಪಸ್ಥಿತರಿದ್ದರು.
ಸಂತೋಷ್ ಸ್ವಾಗತಿಸಿ,ರಂಗ ಹಂಗಾರಕಟ್ಟೆ ವಂದಿಸಿದರು.ಸದಾನಂದ ಕಾರ್ಯಕ್ರಮ ನಿರೂಪಿಸಿದರು.
ಅನೇಕ ಜೈ ಭೀಮ್ ಬಳಗದ ಸದಸ್ಯರು, ಕಾರ್ಯಕರ್ತರು ಉಪಸ್ಥಿತರಿದ್ದರು

Swabhimana news

Related posts

ದಕ್ಷಿಣಕನ್ನಡ: ಎಳನೀರು ಕುಡಿದು ಅಸ್ವಸ್ಥ ಪ್ರಕರಣ – ಫ್ಯಾಕ್ಟರಿಗೆ ಭೇಟಿ ನೀಡಿದ ಅಧಿಕಾರಿಗಳ ತಂಡ.

Swabhimana News Desk

RPIK,ಕದಸಂಸ. ಭೀಮವಾದ ಉಡುಪಿ ಜಿಲ್ಲೆ. ಇದರ ವತಿಯಿಂದ ಮೀಸಲಾತಿಯ ಜನಕ ಛತ್ರಪತಿ ಶಾಹು ಮಹಾರಾಜ್ ಜಯಂತಿ.ಆಚರಣೆ

Swabhimana News Desk

ಬೋಧಿ ಸತ್ವ ಬುದ್ಧ ಫೌಂಡೇಶನ್ ಉಡುಪಿ ಜಿಲ್ಲೆ ಇದರ ವತಿಯಿಂದ ಬೋಧಿಸತ್ವ ಬುದ್ಧ ವಿಹಾರ ಹಾವಂಜೆಯಲ್ಲಿ ಧಮ್ಮ ದೀಪ ಕಾರ್ಯಕ್ರಮ ನಡೆಯಿತು.

Swabhimana News Desk

Leave a Comment