22.5 C
New York
11 September 2026
Coastal

ಸಾಮಾಜಿಕ ಹೋರಾಟಗಾರ, ಅಂಬೇಡ್ಕರ್ ರವರ ಅನುಯಾಯಿ ಚೇತನ್ ಅಹಿಂಸಾ ರವರ 4ನೇ ರಾಜಕೀಯ ಮುನ್ನೋಟ ಸಭೆ ಯಶಸ್ವಿ.

ಉಡುಪಿ, ಆ. 7: 2026 : Swbimaananews

ರಾಜಕೀಯದಲ್ಲಿನ ವ್ಯಾಪಾರೀಕರಣ ವ್ಯವಸ್ಥೆಯನ್ನು ಬದಲಾಯಿಸುವ ನಿಟ್ಟಿನಲ್ಲಿ ಸಮ ಸಮಾಜದ ನಿರ್ಮಾಣ ಈ ಕಾಲದ ಅಗತ್ಯವಾಗಿದೆ. ಹಾಗಾಗಿ ರಾಜ್ಯಾದ್ಯಂತ ಮತದಾರರ ಜಾಗೃತಿಯೊಂದಿಗೆ ಪ್ರಜ್ಞಾವಂತರ ಸಲಹೆ ಸೂಚನೆಗಳನ್ನು ತೆಗೆದುಕೊಂಡು ಸಮ ಸಮಾಜದ ನಿರ್ಮಾಣಕ್ಕಾಗಿ ಅಭಿಯಾನ ಹಮ್ಮಿಕೊಂಡಿರುವ ಸಂದರ್ಭದಲ್ಲಿ ಹೋರಾಟಗಾರ, ಚಿತ್ರನಟ ಚೇತನ್ ಅಹಿಂಸಾ ಅವರು ನುಡಿದರು.

ಅವರು ಉಡುಪಿ ವಿಧಾನಸಭಾ ಕ್ಷೇತ್ರದ ಬನ್ನಂಜೆಯ ನಾರಾಯಣ ಗುರು ಸಭಾಭವನದಲ್ಲಿ ಬೋಧಿಸತ್ವ ಬುದ್ಧ ಫೌಂಡೇಶನ್ (ರಿ) ಉಡುಪಿ ಮತ್ತು ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ) ಅಂಬೇಡ್ಕರ್ ಮಾರ್ಗ ಉಡುಪಿ ಜಿಲ್ಲೆ ಇವರು ಜಂಟಿಯಾಗಿ ಆಯೋಜಿಸಿದ್ದ 4 ನೇ ರಾಜಕೀಯ ಮುನ್ನೋಟ ಸಭೆ ಕಾರ್ಯಕ್ರಮದಲ್ಲಿ ಮಾತನಾಡುತ್ತಾ. ಪ್ರಜಾಪ್ರಭುತ್ವ ಎನ್ನುವುದು ವಿಚಾರಗಳ ರಣರಂಗ.

ಕಳೆದ 15 ವರ್ಷಗಳಿಂದಲೂ ಕರ್ನಾಟಕದ, ಭಾರತದ ರಾಜಕೀಯ ವ್ಯವಸ್ಥೆಯಲ್ಲಿನ ಲೋಪದೋಷಗಳನ್ನು ಪ್ರಶ್ನಿಸುವ ಮೂಲಕ ಚಳವಳಿ, ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದೇನೆ. ಭಾರತ ರತ್ನ ಬಾಬಾಸಾಹೇಬ್ ಅಂಬೇಡ್ಕರ್,

ಪೆರಿಯಾರ್ ಮುಂತಾದವರು‌ 20ನೇ ಶತಮಾನದಲ್ಲಿಯೇ‌ ರಾಜಕೀಯ ಪಕ್ಷ ಕಟ್ಟಿ ಸಮಾಜ ಪರಿವರ್ತನೆಗೆ ಮುಂದಾಗಿದ್ದನ್ನು‌ ನಾವ್ಯಾರೂ ಮರೆಯುವಂತಿಲ್ಲ.ನನ್ನ ಹೋರಾಟಕ್ಕೆ ಇವರುಗಳೂ‌ ಗುರುಗಳು ಎಂದು ನುಡಿದರು. ಸಭೆಯ ಆರಂಭದಲ್ಲಿ ತಮ್ಮ ಪರಿಕಲ್ಪನೆಯ “ಸಮ ಸಮಾಜ”ದ ಬಗ್ಗೆ ಸವಿವರವಾಗಿ ಸ್ಲೈಡ್ ಶೋ ನಡೆಸಿ ಆ ಹಿನ್ನೆಲೆಯಲ್ಲಿ ಸಂಬಂಧಿಕರೊಂದಿಗೆ ಮುಕ್ತ ಸಂವಾದ ನಡೆಸಿದರು.

ಸಂವಾದದಲ್ಲಿ ಉಡುಪಿ ವಿಧಾನಸಭಾ ಕ್ಷೇತ್ರದ ನೂರಾರು ಪ್ರಜ್ಞಾವಂತ ಮತದಾರರು ಭಾಗವಹಿಸಿ, ರಾಜ್ಯದ ಪ್ರಸ್ತುತ ರಾಜಕೀಯ ಪರಿಸ್ಥಿತಿ, ಮುಂದಿನ ರಾಜಕೀಯ ಬೆಳವಣಿಗೆಗಳು ಹಾಗೂ ಜನರು ವಹಿಸಬೇಕಾದ ಜವಾಬ್ದಾರಿಗಳ ಕುರಿತು ಆಸಕ್ತಿಯಿಂದ ಚರ್ಚೆಯಲ್ಲಿ ಪಾಲ್ಗೊಂಡರು.

ಕಾರ್ಯಕ್ರಮದಲ್ಲಿ ಮಾನ್ಯ ಚೇತನ್ ಅಹಿಂಸಾ ಅವರು ಪ್ರೊಜೆಕ್ಟರ್ ಮೂಲಕ ಮುಂದಿನ ರಾಜಕೀಯ ಮುನ್ನೋಟ, ಅದರ ಸಾಧ್ಯತೆಗಳು ಹಾಗೂ ಜನಸಾಮಾನ್ಯರ ಪಾತ್ರದ ಕುರಿತು ಸವಿಸ್ತಾರವಾಗಿ ಮಾಹಿತಿ ನೀಡಿದರು.

ಕಾರ್ಯಕ್ರಮದ ನಡುವೆ ಶೇಖರ್ ಹಾವಂಜೆ‌ ನೇತೃತ್ವದಲ್ಲಿ ಬೋಧಿಸತ್ವ ಕಲಾ ತಂಡ ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಭಗವಾನ್ ಬುದ್ಧರ ಕುರಿತು ಜಾಗೃತಿ ಮೂಡಿಸುವ ಗೀತೆಗಳನ್ನು ಪ್ರಸ್ತುತಪಡಿಸಿ ನೆರೆದಿದ್ದವರ ಮೆಚ್ಚುಗೆಗೆ ಪಾತ್ರವಾಯಿತು.

ಇದೇ ಸಂದರ್ಭದಲ್ಲಿ ಮಾನ್ಯ ಚೇತನ್ ಅಹಿಂಸಾ ಅವರನ್ನು ಬೋಧಿಸತ್ವ ಬುದ್ಧ ಫೌಂಡೇಶನ್ (ರಿ), ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ), ಅಂಬೇಡ್ಕರ್ ಮಾರ್ಗ ಹಾಗೂ ಬೋಧಿಸತ್ವ ಕಲಾ ತಂಡದ ವತಿಯಿಂದ ಸ್ಮರಣಿಕೆ ನೀಡಿ ಗೌರವಿಸಲಾಯಿತು. ನಂತರ ತುಳುನಾಡ ಸೇನಾ ಪದಾಧಿಕಾರಿಗಳೂ ಅಹಿಂಸಾ ಚೇತನ್ ಅವರಿಗೆ ಗೌರವಾರ್ಪಣೆ ಸಲ್ಲಿಸಿದರು.

ಬಳಿಕ ಉಡುಪಿಯ ಕಿರುಚಿತ್ರ ನಿರ್ಮಾಪಕ, ನಿರ್ದೇಶಕ, ಸಾಹಿತಿ ಹಾಗೂ ಸಂಗೀತ ನಿರ್ದೇಶಕರಾದ ದಿನೇಶ್ ಕೊಡವೂರು ಅವರನ್ನು ಮಾನ್ಯ ಚೇತನ್ ಅಹಿಂಸಾ ಅವರು ಸನ್ಮಾನಿಸಿ ಗೌರವಿಸಿದರು.
ಪ್ರಜಾಪ್ರಭುತ್ವದ ಮೌಲ್ಯಗಳನ್ನು ಬಲಪಡಿಸುವುದು, ಜಾಗೃತ ಮತದಾರರನ್ನು ರೂಪಿಸುವುದು ಹಾಗೂ ಆರೋಗ್ಯಕರ ರಾಜಕೀಯ ಸಂವಾದಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ಆಯೋಜಿಸಲಾದ ಈ ಸಭೆಯು ಯಶಸ್ವಿಯಾಗಿ ಸಂಪನ್ನವಾಯಿತು.

ಈ ಸಂದರ್ಭದಲ್ಲಿ ಉಡುಪಿಯ ಅಂಬೇಡ್ಕರ್ ಸೇನೆಯ ಸಂಸ್ಥಾಪಕ ಜಯನ್ ಮಲ್ಪೆ, ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ) ಅಂಬೇಡ್ಕರ್ ಮಾರ್ಗ ಇದರ ರಾಜ್ಯ ಸಂಘಟನಾ ಸಂಚಾಲಕರು ಶೇಖರ್ ಹಾವಂಜೆ, ವಿಚಾರವಂತರು, ಸಾಮಾಜಿಕ ಹೋರಾಟಗಾರರು ಪ್ರೇಮಾನಂದ ಕಲ್ಮಾಡಿ,

RTI ಮತ್ತು ಸಾಮಾಜಿಕ ಹೋರಾಟ ಸಮಿತಿಯ ಜಿಲ್ಲಾಧ್ಯಕ್ಷರು ಸದಾಶಿವ ಶೆಟ್ಟಿ ಹೇರೂರು, RTI ಕಾರ್ಯಕರ್ತರು ಪ್ರಭಾಕರ್ ಮೆಸ್ತಾ, ಸಾಮಾಜಿಕ ಹೋರಾಟಗಾರರು ವಿಜಯ್ ಬಾರ್ಕುರು, ಸಾಮಾಜಿಕ ಹೋರಾಟಗಾರರು ಅನಿಲ್ ಫೆರ್ನಾಂಡಿಸ್, ತುಳುನಾಡ ರಕ್ಷಣಾ ವೇದಿಕೆಯ ಅಧ್ಯಕ್ಷರು ಫ್ರ್ಯಾಂಕಿ ಡಿಸೋಜ, ತುಳುನಾಡ ರಕ್ಷಣಾ ವೇದಿಕೆಯ ಪ್ರಧಾನ ಕಾರ್ಯದರ್ಶಿ ಸುರೇಂದ್ರ ಪೂಜಾರಿ ಹಾವಂಜೆ,

ಉಡುಪಿಯ ಧಮ್ಮಾಚಾರಿಗಳಾದ ಶಂಭು ಸುವರ್ಣ, ಚೆನ್ನಬಸವ ಪುತ್ತೂರ್ಕರ್, ಗಣೇಶ್ ನೆರ್ಗಿ, ಸಂಗೀತ ಶಿಕ್ಷಕರು ದಿನೇಶ್ ಕೊಡವೂರು, ಡಾ. ಬೊಮ್ಮಯ್ಯ, ಸೋಮಪ್ಪ HG , ವಿಠ್ಠಲ್ ಸಾಲಿಕೇರಿ, ರವೀಂದ್ರ ಬಂಟೆಕಲ್ಲು , ಮುರಳೀಧರ್.M, ಸಂಜೀವ ನಾಯ್ಕ್ ಕುಕ್ಕೆಹಳ್ಳಿ ಜಿಲ್ಲಾ ಸಂಚಾಲಕರು ಕ.ದ.ಸಂ. ಸ. ಅಂಬೇಡ್ಕರ್ ಮಾರ್ಗ,

ವಿಠ್ಠಲ್ ಹಾವಂಜೆ, ಪುರಂದರ, ಶೇಖರ್ ಮುನಿಯಾಲು, ಕುಶಲ ರವೀಂದ್ರ, ಸುಜಾತ ಹಾವಂಜೆ, ಪೃಥ್ವಿ ಒಳಗುಡ್ಡೆ,ಅನುಷಾ, ನಿಶ್ಮಿತಾ, ನಾಥು, ಮಹಾಬಲ, ಬೇಬಿ, ಲೀಲಾ, ಸುನೀತಾ, ಸುಗಂಧಿ. M, ಸಾನ್ವಿ, ರಮೇಶ್ ಮಾಬಿಯಾನ್,

ಚಿರಾಗ್, ಕೊರಪಳು ಹಾಗೂ ಉಡುಪಿ ವಿಧಾನಸಭಾ ಕ್ಷೇತ್ರದ ಅನೇಕ ಪ್ರಜ್ಞಾವಂತ ಮತದಾರರು ಉಪಸ್ಥಿತರಿದ್ದರು.

ಆಗಮಿಸಿದಂತಹ ಎಲ್ಲರನ್ನೂ ಖ್ಯಾತ ಹೋರಾಟಗಾರ, ಬೋಧಿಸತ್ವ ಬುದ್ಧ ಫೌಂಡೇಶನ್ ಅಧ್ಯಕ್ಷರು ಶೇಖರ್ ಹಾವಂಜೆ‌ಯವರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ ಕೊನೆಯಲ್ಲಿ ವಂದನಾರ್ಪಣೆ ಮಾಡಿದರು.

Swabhimananews.

Related posts

ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ಮಾರ್ಗ (ರಿ) ಉಡುಪಿ ಜಿಲ್ಲಾ ಸಂಚಾಲಕರಾಗಿ ಗೋಪಾಲ್ ಶಿವಪುರ ಆಯ್ಕೆ

Swabhimana News Desk

ಹಾವಂಜೆ ಗ್ರಾಮ ಪಂಚಾಯತ್ ಹಾಗೂ ಗ್ರಂಥಾಲಯ ಹಾಗೂ ಅರಿವು ಕೇಂದ್ರದ ವತಿಯಿಂದ ನಡೆದ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ.

Swabhimana News Desk

ದ್ವಿತೀಯ ಪಿಯುಸಿ ಫಲಿತಾಂಶ: ಕಾರ್ಕಳ ಕ್ರಿಯೇಟಿವ್ ಕಾಲೇಜಿನ ಸಾನ್ವಿ ರಾವ್ ರಾಜ್ಯಮಟ್ಟದಲ್ಲಿ ತೃತೀಯ.

Swabhimana News Desk

Leave a Comment