7 September 2026
Coastal

ಭಗವಾನ್ ಬುದ್ಧರ ಜ್ಞಾನ, ಡಾ.ಬಿ ಆರ್ ಅಂಬೇಡ್ಕರರ ವೈಚಾರಿಕತೆ ಸಾರುವ ‘ಸಂಗೀತ ಸುಧೆ–ಬುದ್ಧ ಗೀತೆ’ ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮ ವಿಜ್ರಂಭಣೆಯಿಂದ ನಡೆಯಿತು.

ಉಡುಪಿ: ಸೆಪ್ಟೆಂಬರ್ -07-2026 swabhimaananews .

ಬುದ್ಧರ ಜ್ಞಾನ, ಬಾಬಾಸಾಹೇಬ್ ಡಾ.ಬಿ.ಆರ್. ಅಂಬೇಡ್ಕರರ ವೈಚಾರಿಕತೆ ಹಾಗೂ ಮೈತ್ರಿಯ ಸಂದೇಶವನ್ನು ಸಂಗೀತದ ಮೂಲಕ ಜನರಿಗೆ ತಲುಪಿಸುವ ಉದ್ದೇಶದಿಂದ ಬೋಧಿಸತ್ವ ಬುದ್ಧ ಫೌಂಡೇಶನ್‌ (ರಿ.) ಹಾವಂಜೆ, ಉಡುಪಿ ಜಿಲ್ಲೆ ವತಿಯಿಂದ ನಿರ್ಮಿಸಲಾಗಿರುವ ‘ಸಂಗೀತ ಸುಧೆ–ಬುದ್ಧ ಗೀತೆ’ ಧ್ವನಿಸುರುಳಿ (ಆಡಿಯೋ ಆಲ್ಬಮ್)ನ್ನು ನಿನ್ನೆ ನಗರದ ಬಿ.ಆರ್. ಅಂಬೇಡ್ಕರ್ ಭವನದಲ್ಲಿ ನಡೆದ ಸಮಾರಂಭದಲ್ಲಿ ಬಿಡುಗಡೆಗೊಳಿಸಲಾಯಿತು.ಬೋಧಿಸತ್ವ ಬುದ್ಧ ಫೌಂಡೇಶನ್‌ (ರಿ.) ಉಡುಪಿ ಜಿಲ್ಲೆ ಹಾಗೂ ಸಂಬುದ್ಧ ಎಜುಕೇಶನಲ್, ಕಲ್ಚರಲ್ ಆ್ಯಂಡ್ ಚಾರಿಟೇಬಲ್ ಟ್ರಸ್ಟ್‌ (ರಿ.) ಉಡುಪಿ ಜಿಲ್ಲೆ (SECCT Udupi) ಸಹಯೋಗದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಬುದ್ಧ ವಂದನೆ, ಧಮ್ಮ ವಂದನೆ ಹಾಗೂ ಸಂಘ ವಂದನೆಯೊಂದಿಗೆ ಆರಂಭಗೊಂಡು ಬಳಿಕ ಬೋಧಿಸತ್ವ ಕಲಾತಂಡ, ಉಡುಪಿ ಹಾವಂಜೆ ಇವರಿಂದ ಭಗವಾನ್ ಬುದ್ಧರ ಹಾಗೂ ಬಾಬಾಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ಬಿಂಬಿಸುವ ವೈಚಾರಿಕ ಗೀತೆಗಳ ಗಾಯನ ಅದ್ಭುತವಾಗಿ ನಡೆಯಿತು.ಹಿರಿಯ ಬೌದ್ಧ ಧಮ್ಮಾಚಾರ್ಯರಾದ ಎಸ್.ಆರ್. ಲಕ್ಷಣ್, ಮಂಗಳೂರು ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮವನ್ನು ಬಿಎಸ್‌ಐ ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷ ಅಜಯ್ ಕುಮಾರ್ ಉದ್ಘಾಟಿಸಿದರು. ಬೋಧಿಸತ್ವ ಬುದ್ಧ ಫೌಂಡೇಶನ್ ಉಡುಪಿ ಜಿಲ್ಲೆ ಇದರ ಅಧ್ಯಕ್ಷರಾದ ಶೇಖರ್ ಹಾವಂಜೆ ಸಭಾಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮವನ್ನುಉದ್ಘಾಟಿಸಿ ಮಾತನಾಡಿದ ಬಿಎಸ್‌ಐ ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷ ಅಜಯ್ ಕುಮಾರ್ ರವರ ಉದ್ಘಾಟಕರ ಭಾಷಣದಲ್ಲಿ ಬೋಧಿಸತ್ವ ಬುದ್ಧ ಫೌಂಡೇಶನ್ ನ ಅಧ್ಯಕ್ಷರಾದ ಶೇಖರ್ ಹಾವಂಜೆ ರವರು ಧಮ್ಮದ ಹಾದಿಗೆ ಬಂದನಂತರ ಉಡುಪಿ ಜಿಲ್ಲೆಯಲ್ಲಿ ಬೌದ್ಧ ಧಮ್ಮಕ್ಕೆ ಮಹತ್ವ ಮತ್ತು ಹೆಚ್ಚಿನ ಪ್ರಚಾರ ದೊರೆಯಿತು ಎಂದು ನುಡಿದರು.ಬೋಧಿಸತ್ವ ಬುದ್ಧ ವಿಹಾರದ ಕುರಿತು ಸೋಮಪ್ಪ ಹೆಚ್.ಜಿ. ಕೋಲಾರ ರವರು ಪ್ರಮುಖ ಭಾಷಣ ಮಾಡಿದರು. ಬುದ್ಧ ವಿಹಾರಗಳು ಕೇವಲ ಧಾರ್ಮಿಕ ಕೇಂದ್ರಗಳಾಗಿರದೆ ಜ್ಞಾನ, ವಿಚಾರ, ಸಮಾನತೆ ಮತ್ತು ಸಾಮಾಜಿಕ ಜಾಗೃತಿಯ ಕೇಂದ್ರಗಳಾಗಬೇಕು. ಬುದ್ಧರ ಧಮ್ಮದ ಮೂಲ ಆಶಯಗಳನ್ನು ಸಮಾಜದಲ್ಲಿ ಮತ್ತಷ್ಟು ಬಲಪಡಿಸುವಲ್ಲಿ ಇಂತಹ ಚಟುವಟಿಕೆಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ಅವರು ಹೇಳಿದರು.‘ಸಂಗೀತ ಸುಧೆ–ಬುದ್ಧ ಗೀತೆ’ ಧ್ವನಿಸುರುಳಿಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಹಿರಿಯ ಬೌದ್ಧ ಧಮ್ಮಾಚಾರ್ಯರಾದ ಎಸ್.ಆರ್. ಲಕ್ಷಣ್, ಬುದ್ಧರ ಕರುಣೆ, ಸಮಾನತೆ, ಶಾಂತಿ ಮತ್ತು ಮೈತ್ರಿಯ ಸಂದೇಶಗಳು ಇಂದಿನ ಸಮಾಜಕ್ಕೆ ಅತ್ಯಂತ ಅಗತ್ಯವಾಗಿದೆ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಬುದ್ಧರ ವಿಚಾರಧಾರೆಯಿಂದ ಪ್ರೇರಣೆ ಪಡೆದು ಸಮಾನತೆ, ಸಾಮಾಜಿಕ ನ್ಯಾಯ ಹಾಗೂ ಮಾನವ ಘನತೆಯ ಪರವಾಗಿ ಹೋರಾಟ ನಡೆಸಿದ್ದರು. ಇಂತಹ ಮಹತ್ವದ ವಿಚಾರಗಳನ್ನು ಸಂಗೀತದ ಮೂಲಕ ಜನಸಾಮಾನ್ಯರಿಗೆ ತಲುಪಿಸುವ ಪ್ರಯತ್ನ ಶ್ಲಾಘನೀಯವಾಗಿದೆ ಎಂದು ಅಭಿಪ್ರಾಯಪಟ್ಟರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಬೋಧಿಸತ್ವ ಬುದ್ಧ ಫೌಂಡೇಶನ್ ಉಡುಪಿ ಜಿಲ್ಲೆ ಅಧ್ಯಕ್ಷ ಶೇಖರ್ ಹಾವಂಜೆ, ಸಂಗೀತದ ಮೂಲಕ ಬುದ್ಧರ ಜ್ಞಾನ, ಅಂಬೇಡ್ಕರರ ವೈಚಾರಿಕತೆ, ಸಮಾನತೆ ಮತ್ತು ಮೈತ್ರಿಯ ಸಂದೇಶವನ್ನು ಜನರಿಗೆ ತಲುಪಿಸುವ ಈ ಪ್ರಯತ್ನವೇ ಈ ಕಾರ್ಯಕ್ರಮದ ಆಶಯ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಉಡುಪಿಯ ಧಮ್ಮಾಚಾರಿಗಳಾದ ಶಂಭು ಸುವರ್ಣ, SECCT ಉಡುಪಿ ಅಧ್ಯಕ್ಷ ಆನಂದ್ ಬ್ರಹ್ಮಾವರ, ಮುರಳೀಧರ್ ಮಾರ್ಪಳ್ಳಿ, ಕುಮಾರಿ ಪ್ರಥಾ ಎಂ. ಮಾರ್ಪಳ್ಳಿ ಸೇರಿದಂತೆ ವಿವಿಧ ಗಣ್ಯರು ಉಪಸ್ಥಿತರಿದ್ದರು.ಧ್ವನಿಸುರುಳಿಯ ಸಾಹಿತ್ಯ ಹಾಗೂ ಸಂಗೀತ ನಿರ್ದೇಶನವನ್ನು ದಿನೇಶ್ ಕೊಡವೂರು ನಿರ್ವಹಿಸಿದ್ದು, ಶೇಖರ್ ಹಾವಂಜೆ ಹಾಗೂ ಬೋಧಿಸತ್ವ ಕಲಾತಂಡದ ಕಲಾವಿದರು ಗೀತೆಗಳಿಗೆ ಧ್ವನಿ ನೀಡಿದ್ದಾರೆ.ಕಾರ್ಯಕ್ರಮವನ್ನು ಪಕೀರಪ್ಪ ಎಂ. ಬ್ರಹ್ಮಾವರ ನಿರೂಪಿಸಿದರು. ಜಯಶೀಲಾ ಬಿ. ರೋಟೆ, ಬ್ರಹ್ಮಾವರ ಸ್ವಾಗತಿಸಿ, ಧನ್ಯವಾದ ಸಲ್ಲಿಸಿದರು.

ಪ್ರಮುಖರಾದ ಮುರಳಿ ಮಾರ್ಪಳ್ಳಿ, ಮಂಜುನಾಥ್ ವಿ, ರವೀಂದ್ರ ಬಂಟಕಲ್ಲು, ಶ್ರಿ ರಾಮ್ ದಿವಾನ್, ಜಯನ್ ಮಲ್ಪೆ, ಹರೀಶ್ ಸಾಲ್ಯಾನ್ ಮಲ್ಪೆ, ಸುಜಾತ ಹಾವಂಜೆ, ಪೃಥ್ವಿ,ವಿಠಲ್ ಸಾಲಿಕೇರಿ, ಪುಷ್ಪಕರ್, ನಾಥು, ಸದಾಶಿವ ಶೆಟ್ಟಿ ಹೇರೂರು, ಗೋಪಾಲ ಶಿವಪುರ, ವಿಠಲ್ ಹಾವಂಜೆ, ರಾಘವೇಂದ್ರ ಐರೋಡಿ, ಸದಾಶಿವ ಕೋಟೆಗಾರ್, ಪ್ರಭಾಕರ್ ಮೆಸ್ತಾ, ಸುಜಯ್ ಪೂಜಾರಿ, ಗೋಪಾಲ್ ಕೃಷ್ಣ ಕುಂದಾಪುರ, ಹಾಗೂ ಬುದ್ಧರ ಹಾಗೂ ಅಂಬೇಡ್ಕರ್ ರವರ ನೂರಾರು ಅಭಿಮಾನಿಗಳು ಅನುಯಾಯಿಗಳು ಈ ಐತಿಹಾಸಿಕ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

Swabhimaananews.

Related posts

ಸಂವಿಧಾನ ಸಮರ್ಪಣಾ ದಿನಾಚರಣೆ

Swabhimana News Desk

ನೀಟ್ ಫಲಿತಾಂಶ ಪ್ರಕಟ: ಉಡುಪಿ ಜಿಲ್ಲೆಯಲ್ಲಿ ನಕಲಿ ಅಂಕಪಟ್ಟಿ ಜಾಲ ಶಂಕೆ.

Swabhimana News Desk

ಉಡುಪಿಯ ಬನ್ನಂಜೆ ಡಿವೈಡರ್ ಧ್ವಂಸ ಪ್ರಕರಣ,ಮಾಹಿತಿ ಹಕ್ಕು ಮತ್ತು ಸಾಮಾಜಿಕ ಹೋರಾಟ ಸಮಿತಿ ಯಿಂದ ಜಿಲ್ಲಾಧಿಕಾರಿಗಳಿಗೆ ದೂರು.

Leave a Comment