13.2 C
New York
14 October 2025
Coastal

ಉಡುಪಿಯ ಬನ್ನಂಜೆ ಡಿವೈಡರ್ ಧ್ವಂಸ ಪ್ರಕರಣ,ಮಾಹಿತಿ ಹಕ್ಕು ಮತ್ತು ಸಾಮಾಜಿಕ ಹೋರಾಟ ಸಮಿತಿ ಯಿಂದ ಜಿಲ್ಲಾಧಿಕಾರಿಗಳಿಗೆ ದೂರು.

Udupi: Agust-01-2025 Swabhimananews

ಉಡುಪಿ: ಬನ್ನಂಜೆಯಲ್ಲಿ ರಾತ್ರೋರಾತ್ರಿ ಅನಧಿಕೃತ ವಾಗಿ ಖಾಸಗಿ ಬಟ್ಟೆ ಮಳಿಗೆಯವರ ಲಾಭಕ್ಕೋಸ್ಕರ ರಾಷ್ಟ್ರೀಯ ಹೆದ್ದಾರಿಯ ಡಿವೈಡರನ್ನೆ ಧ್ವಂಸ ಮಾಡಿದ ಪ್ರಕರಣಕ್ಕೆ ಸಂಭಂಧಿಸಿ ಉಡುಪಿ ಜಿಲ್ಲಾ ಮಾಹಿತಿ ಹಕ್ಕು ಮತ್ತು ಸಮಾಜಿಕ ಹೋರಾ ಸಮಿತಿ ಜಿಲ್ಲಾಧಿಕಾರಿಗಳು ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಹಿರಿಯ ಅಧಿಕಾರಿಗಳಿಗೆ ದೂರು ಸಲ್ಲಿಸಿದೆ.ಕಳೆದ ಶನಿವಾರ ಸರಕಾರಿ ರಜೆ ದಿನದಂದು ಅನಧಿಕೃತವಾಗಿ ಸಾರ್ವಜನಿಕ ಸೊತ್ತನ್ನು ಹಾನಿ ಪಡಿಸಿದ ವಿಷಯಕ್ಕೆ ಸಂಭಂಧಿಸಿ ಸಾಮಾಜಿಕ ಜಾಲ ತಾಣಗಳಲ್ಲಿ ಭಾರೀ…ಆಕ್ರೋಶ ವ್ಯಕ್ತ ವಾಗಿತ್ತು.ಹೆದ್ದಾರಿ ಸುರಕ್ಷಾ ಸಮಿತಿ ಗಮನಕ್ಕೆ ತಾರದೆ ರಾತೊರಾತ್ರಿ ನಗರಸಭೆ ಗಮನಕ್ಕೂ ತಾರದೆ ಖಾಸಗಿ ಮಳಿಗೆಗಾಗಿ ಡಿವೈಡರ್ ಒಡೆದ ವಿಚಾರ ವಾಗಿ ನಗರಸಭೆ ಮೇಲೂ ಭ್ರಷ್ಟಾಚಾರದ ಅರೋಪ ಹೋರಿಸಲಾಗಿತ್ತು.
ಈ ಹಿನ್ನಲೆಯಲ್ಲಿ ನಗರಸಭೆಯಲ್ಲಿ ಗೋಣಿ ಚೀಲದ ವಿಚಾರವಾಗಿ ಭಾರೀ ಗದ್ದಲ ಎದ್ದಿತ್ತು.ಆದರೆ ಡಿವೈಡರ್ ಧ್ವಂಸ ವಿಚಾರದಲ್ಲಿ ನಗರಸಭೆ

ಸಮಾನ್ಯ ಸಭೆಯಲ್ಲಿ ಗೊಂದಲ ಸೃಷ್ಟಿ ಮಾಡಿದ್ದು ಹೊರತು ಪಡಿಸಿದರೆ,ನಮಗೂ ಇದಕ್ಕೂ ಸಂಬಂಧವೇ ಇಲ್ಲ ಅಂದಿದ್ದು ಬಿಟ್ಟರೆ ,ಯಾವುದೇ ಕ್ರಮಕ್ಕೆ ಸದಸ್ಯರುಗಳು ಆಗ್ರಹಿಸದಿರುವುದು ಸಾರ್ವಜನಿಕರ ಸಂಶಯಕ್ಕೆ ಕಾರಣವಾಗಿತ್ತು.ಇದನ್ನೆಲ್ಲ ಮನಗಂಡ ಉಡುಪಿ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಹೋರಾಗಾರರ ಸಮಿತಿ ,ಅಕ್ರಮ ಎಸಗಿರುವ ಸಂಸ್ಥೆ ಮತ್ತು ಹೆದ್ದಾರಿ ಇಲಾಖೆಯ ಇಂಜಿನಿಯರ್ ವಿರುದ್ದ ಕ್ರಮ ತೆಗೆದುಕೊಳ್ಳುವಂತೆ ಜಿಲ್ಲಾಧಿಕಾರಿಗಳು ಹಾಗೂ ರಾಷ್ಟ್ರೀಯ ಹೆದ್ದಾರಿ ಎಕ್ಸಿಕ್ಯೂಟಿವ್ ಇಂಜಿನಿಯರ್ ಶಿವಮೊಗ್ಗ ಹಾಗೂ ಕೇಂದ್ರ ಹೆದ್ದಾರಿ ಇಲಾಖೆಗೆ ದೂರು ನೀಡಿದೆ.
Swabhimananews

Related posts

ಉಡುಪಿಯಲ್ಲೊಂದು ಖಾಸಗಿ ಬಟ್ಟೆ ಮಳಿಗೆಗಾಗಿ ರಾಜ್ಯ ಹೆದ್ದಾರಿಯ ಡಿವೈಡರನ್ನೇ ಒಡೆದು ಹಾಕಿದ ಹೆದ್ದಾರಿಪ್ರಾಧಿಕಾರದ ಆಧಿಕಾರಿಗಳು.ನಗರಸಭೆಯ ಅಧಿಕಾರಿಗಳು ಅಧ್ಯಕ್ಷರು,ಸದಸ್ಯರು ಶಾಮೀಲು,ಸಾರ್ವಜನಿಕರ ಆಕ್ರೋಶ.

Swabhimana News Desk

ಡೀಲ್ ಚೈತ್ರಾಳ‌ ಸುಳಿವು  ಸಿಸಿಬಿ ಗೆ ಕೊಟ್ಟಿದ್ದೆ ಹಿಂದೂ ಸಂಘಟನೆಯ ಕಾರ್ಯಕರ್ತರು.!

Swabhimana News Desk

ಹಾವಂಜೆಯಲ್ಲೊಂದು ದೇಸೀಯ ಶೈಲಿಯ ಚಿಣ್ಣರ ಬೇಸಿಗೆ ಶಿಬಿರ. ಬಾಲಲೀಲಾ-2024.

Swabhimana News Desk

Leave a Comment