17.7 C
New York
9 May 2025
Coastal

ಉಡುಪಿ ಜಿಲ್ಲೆಯ CRZ ನದಿ ವ್ಯಾಪ್ತಿಯ Kg ರೋಡ್ , ಉಪ್ಪೂರು. ಪರಾರಿ, ಮತ್ತು ಹಾವಂಜೆಯ ಮುಗ್ಗೆರಿ ಎಂಬಲ್ಲಿ ಸ್ವರ್ಣ ನದಿಗೆ 188 ಕೋಟಿ ರೂಪಾಯಿ ವೆಚ್ಚದಲ್ಲಿ ಅವೈಜ್ಞಾನಿಕವಾಗಿ ನಿರ್ಮಾಣ ಮಾಡುತ್ತಿರುವ ಮೂರು ಬ್ಯಾರೇಜ್ ಗಳನ್ನು ಸ್ಥಗಿತ ಗೊಳಿಸುವಂತೆ DSS ಭೀಮವಾದ(ರಿ) ಉಡುಪಿ ಜಿಲ್ಲೆ ಮತ್ತು RPIK ಪಕ್ಷ ರಾಜ್ಯಪಾಲರಿಗೆ ದೂರು.

ಜನವರಿ-30-2025-swabhimaananews

ಉಡುಪಿ: ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಉಪ್ಪೂರು ಗ್ರಾಮದ ಕೆ.ಜಿ ರೋಡ್ ಎಂಬಲ್ಲಿರುವ ರಾಷ್ಟ್ರೀಯ ಹೆದ್ದಾರಿ 66 ರ ಸೇತುವೆಯ ಪಕ್ಕದಲ್ಲೆ ಪ್ರಸ್ತುತ ನಿರ್ಮಾಣ ಆಗುತ್ತಿರುವ.

ಉಪ್ಪುನೀರು ತಡೆಗೋಡೆ ಮತ್ತು ಸೇತುವೆ,ಹಾಗೂ ಅದರ ಮೇಲ್ಗಡೆ ಸುಮಾರು 2.5 ಕಿಲೋಮೀಟರ್ ಅಂತರದಲ್ಲಿ ಅಮ್ಮುಂಜೆ, ಪರಾರಿ, ಎಂಬಲ್ಲಿ ಅದೇ ನದಿಗೆ ಇನ್ನೊಂದು (ಬ್ಯಾರೇಜ್) ಉಪ್ಪುನೀರು ತಡೆಗೋಡೆ ನಿರ್ಮಾಣ, ಮುಂದುವರೆದು ಇನ್ನೊಂದು 3 ಕಿಲೋಮೀಟರ್ ದೂರದಲ್ಲಿ ಹಾವಂಜೆ ಗ್ರಾಮದ ಮುಗ್ಗೆರಿ ಎಂಬಲ್ಲಿ ಮತ್ತೊಂದು ಬ್ಯಾರೇಜ್ ಉಪ್ಪು ನೀರು ತಡೆಗೋಡೆ ನಿರ್ಮಾಣ ಯೋಜನೆ ಒಂದೇ ನದಿಯಲ್ಲಿ ಕೆಲವೇ ಕೆಲವು ಕಿಲೋ ಮೀಟರ್ ಅಂತರದಲ್ಲಿ ಮೂರು ಬ್ಯಾರೇಜ್ ನಿರ್ಮಾಣ ಮಾಡಿದರೆ ಇಲ್ಲಿನ ಗ್ರಾಮದ ಜನತೆ ಮಳೆಗಾಲದ ನೆರೆ ನೀರಲ್ಲಿ ಮುಳುಗಿ ಸಾಯಲಿ ಎಂದು ನಿರ್ಮಾಣ ಆಗುತ್ತಿರುವ ಕಾಮಗಾರಿಯು ಭರದಿಂದ ಸಾಗುತ್ತಿದೆ.

ಇಲ್ಲಿನ ಜನರ ಕಿವಿಗೆ ದಾಸವಾಳ ಇಟ್ಟು ಇಲ್ಲಿ ನಿಮಗೆ ರಸ್ತೆ ನಿರ್ಮಾಣ ಆಗ್ತದೆ, ಇಲ್ಲಿ ನಿಮ್ಮ ಭೂಮಿಗಳಿಗೆ ತುಂಬಾ ಬೆಲೆ ಬರುತ್ತದೆ, ನಿಮಗೆ ಕುಡಿಯುವ ನೀರು ಸಿಹಿ ಆಗುತ್ತದೆ ಎಂದು ಕಾಗಕ್ಕ ಗುಬ್ಬಕ್ಕನ ಕಥೆ, ಕವನ ಹೇಳಿ ಹಳ್ಳಿಯ ಮುಗ್ಧ ಜನರನ್ನು ಪುಸಲಾಯಿಸಿ.

ಕೆಲವು ಅಮಾಯಕ, ಅನಕ್ಷರಸ್ಥ ಜನರಿಂದ ಸಹಿ ಪಡೆದುಕೊಂಡು (ಬ್ಯಾರೇಜ್ ಗೆ ) ಜನರ ಬೇಡಿಕೆ ಇಟ್ಟಂತೆ ಸೃಷ್ಟಿಸಿ ಸರಕಾರದ ಗಮನಕ್ಕೆ ತಂದು ಗುತ್ತಿಗೆದಾರರು ಮತ್ತು ಜನಪ್ರತಿನಿಧಿಗಳು ಹಾಗೂ ಕೆಲವು ಅಧಿಕಾರಿಗಳ
ಒಳ ಒಪ್ಪಂದದಿಂದ ಈ ಅವೈಜ್ಞಾನಿಕ ಯೋಜನೆಯನ್ನು ತಂದು ನೂರಾರು ಕೋಟಿ ರೂಪಾಯಿ ಯೋಜನೆಯ ಹಣದಿಂದ ಕೆಲವೇ ಕೆಲವು ಕೋಟಿ ರೂಪಾಯಿ ಮಾತ್ರ ಖರ್ಚು ಮಾಡಿ ಅವೈಜ್ಞಾನಿಕವಾಗಿ.

ಕಾನೂನುಬಾಹಿರವಾಗಿ, ಅಂದಾಜು ಪಟ್ಟಿಯ ವಿರುದ್ಧವಾಗಿ ಕಳಪೆ ಕಾಮಗಾರಿಗಳನ್ನು ನಿರ್ಮಿಸಿ ನೂರಾರು ಕೋಟಿ ರೂಪಾಯಿ ಕೊಳ್ಳೆ ಹೊಡೆಯುವ ಯೋಜನೆ ಇದಾಗಿದೆ.

ಈ ಸ್ವರ್ಣ ಏತ ನೀರಾವರಿ ಯೋಜನೆಯಿಂದ ಇಲ್ಲಿನ ಮುಗ್ಗೇರಿ/ ಕೀಳಿಂಜೆ/ಪರಾರಿ/ ಅಮ್ಮುಂಜೆ/ಕೆಜಿ ರೋಡ್ ಹಾಗೂ ಅನೇಕ ಪ್ರದೇಶಗಳು ಈ 3 ಬ್ಯಾರೇಜ್ ನಿರ್ಮಾಣದಂತಹ ಅವೈಜ್ಞಾನಿಕ ಯೋಜನೆಯಿಂದಾಗಿ

ಮುಂದಿನ ಮಳೆಗಾಲದ ನೆರೆಗೆ ಕೊಚ್ಚಿ ಹೋಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ಯಾಕೆಂದರೆ ಕಳೆದ ಹತ್ತಾರು ವರ್ಷಗಳಿಂದ ಈ ಸ್ವರ್ಣ ನದಿಗೆ ಯಾವುದೇ ಬ್ಯಾರೇಜ್/ ತಡೆಗೋಡೆ/ ಬ್ರಿಡ್ಜ್ ಗಳಿಲ್ಲದೆ ಇದ್ದಾಗನೇ ಪ್ರತಿ ವರ್ಷ ಮುಗ್ಗೇರಿ/ಗೋಳಿಕಟ್ಟೆ/ನೆರೆ ಕಾಲೋನಿ/ಕೀಳಿಂಜೆ/ ಪರಾರಿ /ಅಮ್ಮುಂಜೆ/ಉಪ್ಪೂರು/ ಕೆಜಿ ರೋಡ್ ಪ್ರದೇಶಗಳು ಮಳೆಗಾಲದ ನೆರೆಗೆ ಮುಳುಗಿ.

ಅದೆಷ್ಟೋ ಕುಟುಂಬಗಳು ದಿಕ್ಕಾಪಾಲಾಗುತ್ತಿದ್ದು, ರೈತರು ಬೆಳೆದ ನೂರಾರು ಎಕರೆ ಜಮೀನು ನೆರೆಗೆ ಕೊಚ್ಚಿ ಹೋಗುವುದು, ಅದೆಷ್ಟೋ ಜಾನುವಾರುಗಳು ನೆರೆಗೆ ಕೊಚ್ಚಿ ಹೋಗಿ

ನಂತರ ಸರಕಾರ/ ಇಲಾಖೆ, ಗ್ರಾಮ ಪಂಚಾಯತ್ ವತಿಯಿಂದ ಅಲ್ಪಮೊತ್ತದ ನೆರೆ ಪರಿಹಾರ ಕಾರ್ಯಗಳು ಪ್ರತಿ ವರ್ಷ ನೀಡುತ್ತಲೇ ಬಂದಿದ್ದಾರೆ.

ಜಿಲ್ಲಾಡಳಿತಕ್ಕೆ ಇದೆಲ್ಲ ಗೊತ್ತಿದ್ದರೂ ಕೂಡ ಯಾವುದೇ ರೀತಿಯಲ್ಲಿ ಗ್ರಾಮದ ಜನರಿಗೆ ಅಥವಾ ಗ್ರಾಮ ಪಂಚಾಯಿತಿಗಳಿಗೆ ಈ ಯೋಜನೆಯ ಮಾಹಿತಿ ನೀಡದೆ ಸಾರ್ವಜನಿಕರಿಗೆ ಇದರ ಸಾಧಕ ಬಾಧಕಗಳ ಕುರಿತು ಏನು ತಿಳಿಸದೆ.

DPR ನೂ ಹಾಕದೆ ಏಕಾಏಕಿ ಈ ರೀತಿಯಾಗಿ ಕಾಮಗಾರಿ ನಿರ್ಮಾಣ ಮಾಡುತ್ತಿದ್ದಾರೆ.

ಇದೇ ಮುಂಬರುವ ಮಳೆಗಾಲದ ಮಳೆಯ ನೆರೆಯೊಂದಿಗೆ ಈ ಅವೈಜ್ಞಾನಿಕ ಬ್ಯಾರೇಜ್ ನಿರ್ಮಾಣದಿಂದ ಹಾವಂಜೆ/ಮುಗ್ಗೇರಿ/ಕೀಳಿಂಜೆ/ಗೋಳಿಕಟ್ಟೆ/ ನೆರೆಕಾಲೋನಿ/ಪರಾರಿ/ಅಮ್ಮುಂಜೆ /ಉಪ್ಪೂರು ಮತ್ತು ಕೆಜಿ ರೋಡ್ ಈ ಪ್ರದೇಶದ ಜನರು ಮಳೆಗಾಲದಲ್ಲಿ ಬದುಕಲು ಸಾಧ್ಯವೇ….?

ಈ ಅವೈಜ್ಞಾನಿಕ ಯೋಜನೆಯಿಂದ ಇಡೀ ಗ್ರಾಮದ ಜನತೆಯನ್ನು ಬಲಿ ನೀಡುವುದು ಎಷ್ಟು ಸರಿ ?.‌..ಈ ಯೋಜನೆ ರೂಪಿಸಬೇಕಾದರೆ ಯಾವುದೇ ನುರಿತ ತಂತ್ರಜ್ಞರ ತಂಡದ ವೈಜ್ಞಾನಿಕ ವರದಿ ಇಲ್ಲದೆ ಸ್ಥಳೀಯವಾಗಿ ಆಗುವ ಪ್ರಾಕೃತಿಕ ವಿಕೋಪದ ಬಗ್ಗೆ ಪರಿಶೀಲನೆ ಮಾಡದೆನೆ ನಿರ್ಮಾಣ ಮಾಡುತ್ತಿರುವ ಈ ಕಾಮಗಾರಿ ಕೇವಲ ಹಣದಾಸೆಗಾಗಿ,
ಪರ್ಸೆಂಟೇಜ್ ಗಾಗಿ ಎನ್ನುವುದು ಸ್ಪಷ್ಟವಾಗಿ ಕಂಡು ಬರುತ್ತದೆ.

ಹಾಗೂ ಇದೊಂದು ಉನ್ನತ ಮಟ್ಟದ ಕಳ್ಳ ರಾಜಕಾರಣಿಗಳು ಮತ್ತು ಕುತಂತ್ರಿ ಅಧಿಕಾರಿಗಳು ಹಾಗೂ ಪ್ರಕೃತಿ ಲೂಟಿಕೋರರು, ದಂಧೆಕೋರರು ಮಾಡಿರುವ,ಮಾಡುತ್ತಿರುವ ಪೂರ್ವ ನಿಯೋಜಿತ ಕುತಂತ್ರದ ಯೋಜನೆ ಇದಾಗಿದೆ ಎನ್ನುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿ ಕಂಡುಬರುತ್ತದೆ.

ಅದು ಹೇಗೆ ಎಂದರೆ CRZ ನದಿ ವ್ಯಾಪ್ತಿಯಲ್ಲಿ ಯಾವುದೇ ಕಟ್ಟಡಗಳನ್ನು ಕಟ್ಟಲು ಕಾನೂನಿನಲ್ಲಿ ಅವಕಾಶವೇ ಇಲ್ಲ.

ಅದಕ್ಕಾಗಿ ಈ CRZ ಸ್ವರ್ಣ ನದಿಗೆ ಮೇಲಿಂದ ಮೇಲೆ ಮೂರು ಕಿಂಡಿ ಅಣೆಕಟ್ಟು ನಿರ್ಮಾಣ ಮಾಡಿ ಉಪ್ಪು ನೀರು ತಡೆಗೋಡೆ ನಿರ್ಮಿಸಿದ್ದಲ್ಲಿ ಅಲ್ಲಿಗೆ ಉಪ್ಪು ನೀರು ಬರುವುದು ಬಂದಾಗಿ ಸಿಹಿ ನೀರು ಪ್ರದೇಶವಾಗಿ ಮಾರ್ಪಟ್ಟು NON CRZ ವ್ಯಾಪ್ತಿ ಎಂದು ಘೋಷಿಸಿ

ನಂತರ ಅಲ್ಲಿ ಪ್ರಭಾವಿಗಳು , ಕೆಲವು ರಾಜಕಾರಣಿಗಳ, ಕೆಲವು ಅಧಿಕಾರಿಗಳ,ಬೃಹತ್ ಐಶಾರಾಮಿ ರೆಸಾರ್ಟ್/ಲಾಡ್ಜ್/ಕ್ಲಬ್,ಪಬ್,ಬೋಟ್ ಹೌಸ್ ಹಾಗೂ ಇನ್ನಿತರ ಸಮಾಜ ವಿರೋಧಿ ಚಟುವಟಿಕೆ ನಡೆಸಲು ಎಲ್ಲಾ ರೀತಿಯಲ್ಲೂ ತಯಾರಿ ನಡೆಸುತ್ತಿದ್ದಾರೆ. ಕೆಲವು ಪ್ರಭಾವಿ ರಾಜಕಾರಣಿಗಳು, ಈಗಾಗಲೇ ಉಪ್ಪೂರು,ಕೀಳಿಂಜೆ,ಮುಗ್ಗೇರಿ, ಪರ್ಕಳ,ಹೆರ್ಗ,ಪರಿಕಾ, ಮುಂತಾದ ಅನೇಕ ಕಡೆಗಳಲ್ಲಿ ಈ ಸ್ವರ್ಣ ನದಿಗೆ ತಾಗಿಕೊಂಡಿರುವ ರೈತರ ನೂರಾರು ಎಕರೆ ಕೃಷಿ ಭೂಮಿಯನ್ನು ಖರೀದಿಸಿ ಆ ಕೃಷಿ ಭೂಮಿಗೆ ಸಾವಿರಾರು ಲೋಡ್ ಮಣ್ಣು ತುಂಬಿಸಿ ಕಾನೂನು ಬಾಹಿರವಾಗಿ ಕಟ್ಟಡಗಳನ್ನು ನಿರ್ಮಾಣ ಮಾಡಲು ತಯಾರಿಯೂ ನಡೆಯುತಿದೆ.

ಒಂದು ಕಡೆ ಸರ್ಕಾರದ ಕೋಟ್ಯಾಂತರ ರೂಪಾಯಿ ಲೂಟಿ ಹೊಡೆಯುವುದಾದರೆ ಇನ್ನೊಂದು ಕಡೆ ಅಕ್ರಮ/ಅನಾಚಾರ/ ಕಾನೂನು ಬಾಹಿರ ಚಟುವಟಿಕೆಗೆ ಕಾನೂನಿನಲ್ಲಿ ಅವಕಾಶವನ್ನು ತಾವೇ ಸೃಷ್ಟಿಸಿಕೊಳ್ಳುವುದು ಇದು ಜನರ ಒಳಿತಿಗಾಗಿ ಮಾಡುವ, ಮಾಡುತ್ತಿರುವ ಯೋಜನೆ ಅಲ್ಲವೇ ಅಲ್ಲ.

ಇದನ್ನು ಪ್ರಜ್ಞಾವಂತರು/ಚಿಂತಿಸಿ ವಿರೋಧಿಸಿ ಸರ್ಕಾರದ ನೂರಾರು ಕೋಟಿ ರೂಪಾಯಿ ಸೋರಿಕೆಯಾಗುವುದನ್ನು ತಡೆಯಬೇಕಾಗಿದೆ.

ಎನ್ನುವುದು ಪ್ರಜ್ಞಾವಂತರ, ಸಾಮಾಜಿಕ ಹೋರಾಟಗಾರರ, ಸಂಘಟನೆಗಳ ನಿಲುವು ಆಗಿದೆ ಆದುದ್ದರಿಂದ ಈ ಮಳೆಗಾಲದಲ್ಲಿ ಹಾವಂಜೆ, ಉಪ್ಪೂರು ಗ್ರಾಮದ ಬಡ, ಮುಗ್ಧ ಅಮಾಯಕರ ಕೃಷಿ, ಭೂಮಿ, ಮನೆ, ಗದ್ದೆ ನೆರೆಗೆ ಕೊಚ್ಚಿ ಹೋಗಿ ಆನಂತರ ಸರಕಾರ ಪರಿಹಾರ ನೀಡಿ ಗೊಂದಲ ಸೃಷ್ಟಿಸುವ ಮುನ್ನ ಈ ಅವೈಜ್ಞಾನಿಕ ಬ್ಯಾರೇಜ್ ಕಾಮಗಾರಿಯನ್ನು ಈ ಕೂಡಲೇ ಸ್ಥಗಿತಗೊಳಿಸಿ ಸರಕಾರದ ನೂರಾರುಕೋಟಿ ರೂಪಾಯಿ ವ್ಯರ್ಥ ಆಗುವುದನ್ನು ತಡೆದು ಇಲ್ಲಿನ ನಿವಾಸಿಗಳಿಗೆ ನ್ಯಾಯ ದೊರಕಿಸಿಕೊಡುವಂತೆ ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮವಾದ ರಿ ಉಡುಪಿ ಜಿಲ್ಲೆ ಮತ್ತು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ ಪಕ್ಷ ಈ ಅವೈಜ್ಞಾನಿಕ ಬ್ಯಾರೇಜ್ ಗಳನ್ನು ನಿರ್ಮಿಸದಂತೆ.ರಾಜ್ಯಪಾಲರಿಗೆ ಮತ್ತು, ಸಂಬಂದಿಸಿದ ಇಲಾಖಾಧಿಕಾರಿಗಳಿಗೆ ದೂರುನೀಡಿದೆ.

Swabhimaananews.

Related posts

ಉಡುಪಿ ಜಿಲ್ಲೆಯ. ಬೈಂದೂರು ತಾಲೂಕಿನಾದ್ಯಂತ. ಅಕ್ರಮ ಕೆಂಪು ಕಲ್ಲು ಗಣಿಗಾರಿಕೆ,ಕೋಟ್ಯಾಂತರ ರೂಪಾಯಿ ಸರಕಾರಕ್ಕೆ ವಂಚನೆ, ದಲಿತರಿಗೆ ಮೀಸಲಿಟ್ಟ ಡಿ ಸಿ ಮನ್ನಾ ಭೂಮಿಯನ್ನು,ಹಾಗೂ ಬಹುಕೋಟಿ ರೂಪಾಯಿ ಮೌಲ್ಯದ ಸರಕಾರಿ
ಭೂಮಿ.ಲೂಟಿ ಹೊಡೆದರೂ,ಎಷ್ಟೇ ದೂರು ನೀಡಿದರು. ಕಣ್ಣ್ ಮುಚ್ಚಿ ಕುಳಿತ ಇಲಾಖೆಗಳ ಅಧಿಕಾರಿಗಳು.

Swabhimana News Desk

ನಳಂದ ಬೌದ್ಧ ವಿಹಾರ ಟಿ ನರಸೀಪುರದ ಬಂತೆ ಪೂಜ್ಯ ಬೋದಿ ರತ್ನ ರವರ ನೇತೃತ್ವದಲ್ಲಿ ಗೃಹಪ್ರವೇಶ.

Swabhimana News Desk

ಬ್ರಹ್ಮಾವರ: ಸೈಬರ್‌ ಅಪರಾಧ ಜಾಗೃತಿ ಕಾರ್ಯಾಗಾರ – ತಿಳುವಳಿಕೆ ಇದ್ದವರೇ ಸೈಬರ್‌ ಅಪರಾಧದಿಂದ ವಂಚನೆಗೊಳಗಾಗುವುದು ಹೆಚ್ಚು: ಜಯಪ್ರಕಾಶ ಹೆಗ್ಡೆ.

Swabhimana News Desk

Leave a Comment