19.4 C
New York
14 June 2025
Coastal

ಪೆರ್ಡೂರು ಬಿಜೆಪಿ ಮುಖಂಡ, ವೈನ್ ಶಾಪ್ ಮಾಲೀಕ ಸುಭಾಷ್ ಹೆಗ್ಡೆ ಯಿಂದ ವಯೋವೃದ್ಧರ ಮೇಲೆ ಹಲ್ಲೆ ಜೀವ ಬೆದರಿಕೆ ಪ್ರಕರಣ ದಾಖಲು

ಮಾರ್ಚ್ -20-2025- swabhimananewsಉಡುಪಿ:ಪೆರ್ಡೂರು ಬಿಜೆಪಿ ಮುಖಂಡ, ವೈನ್ ಶಾಪ್ ಮಾಲೀಕ ಸುಭಾಷ್ ಹೆಗ್ಡೆ ಯಿಂದ ವಯೋವೃದ್ಧರ ಮೇಲೆ ಹಲ್ಲೆ ಹಾಗೂ ಜೀವ ಬೆದರಿಕೆ ದೂರು ದಾಖಲುಪದ್ಮನಾಭ ಎಂಬವರು ತಮ್ಮ ಪಟ್ಟಾ ಜಾಗದಲ್ಲಿದ್ದ ನಾಗಬನವನ್ನ ಅಭಿವೃದ್ಧಿಪಡಿಸಿ ಅದಕ್ಕೆ ಸುತ್ತಲೂ ಕಾಂಪೌಂಡ್ ನಿರ್ಮಿಸುವ ಕಾರ್ಯನಿರ್ವಹಿಸುತ್ತಿರುವ ಸಂದರ್ಭದಲ್ಲಿ ಅದಕ್ಕೆ ಅಡ್ಡಿ ಪಡಿಸುವ ಉದ್ದೇಶದಿಂದ ನಾಗಬನ ದಿಂದ
ಪಕ್ಕದಲ್ಲಿ ಅವರ ಪಟ್ಟಾ ಜಾಗದಲ್ಲಿ ಮೂರು ನಾಲ್ಕು ಮನೆಯವರಿಗೂ ಉಪಯೋಗಕ್ಕಾಗಿ ರಸ್ತೆಯನ್ನು ಕೂಡ ನೀಡಿದ್ದರು ಇವರ ನಾಗಬನದಲ್ಲಿ ಅಭಿವೃದ್ಧಿ ಕಾರ್ಯವನ್ನು ಹಾಗೂ ಇವರ ಜಾಗದಲ್ಲಿ ನಡೆಸಲುಉದ್ದೇಶಿಸಿದ್ದ ಅಭಿವೃದ್ಧಿ ಕಾರ್ಯವನ್ನ ತಡೆಯಬೇಕೆನ್ನುವ ದುರುದ್ದೇಶದಿಂದ ರಸ್ತೆ ಹಾಗೂ ಪದ್ಮನಾಭ ಅವರ ಜಾಗಕ್ಕೆ ಜಲ್ಲಿಹಾಗೂ ಮರಮಟ್ಟುಗಳನ್ನು ತಂದು ಹಾಕಿ ತೊಂದರೆ ನೀಡಿರುವುದು ಸುಭಾಸ್ ಹೆಗ್ಡೆಯ ಗೂಂಡಾಗಿರಿಗೆ ಸ್ಪಷ್ಟ ನಿದರ್ಶನವಾಗಿದೆಈ ಹಿಂದೆ ಕೂಡ ಹಣದ ದರ್ಪದಿಂದ ಅಧಿಕಾರಿಗಳನ್ನು ದುರುಪಯೋಗಪಡಿಸಿಕೊಂಡು ಬಡಜನರಿಗೆ ಅನ್ಯಾಯ ಮಾಡಿರುವುದು ಸಾಕಷ್ಟು ನಿದರ್ಶನವಿದೆ ಎನ್ನುತ್ತಾರೆ ಸ್ಥಳೀಯರು ಅಷ್ಟೇ ಅಲ್ಲ ತನ್ನ ವೈನ್ ಶಾಪ್ ರಾಜ್ಯ ಹೆದ್ದಾರಿಗೆ ತಾಗಿಕೊಂಡೇ ಇದೆ ಮತ್ತು ಇವರ ವೈನ್ ಶಾಪ್ ಗೆ ಯಾವುದೇ ಸಮಯ ಇಲ್ಲ ಬೆಳಿಗ್ಗೆ 5/6 ಗಂಟೆಗೆ ತೆರೆದು ತಡರಾತ್ರಿ 12/1 ಘಂಟೆಯ ವರೆಗೂ ತೆರೆದಿರುತ್ತದೆ ಎಂದು ಸಾರ್ವಜನಿಕರು, ಸ್ಥಳೀಯರು ಆರೋಪಿಸುತ್ತಿದ್ದಾರೆ.ಇವರು ಬಿಜೆಪಿ ಮುಖಂಡ ಎಂದು ಹೇಳಿಕೊಂಡು ನಾಗದೇವರ ಪೂಜೆ ಹಾಗೂ ನಾಗಬನವನ್ನು ಅಭಿವೃದ್ಧಿ ಪಡಿಸಲು ಆಡ್ಡಿ ಪಡಿಸಿದ್ದು ಎಷ್ಟು ಸರಿಯನ್ನೋದು ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ ಕೂಡಲೆ ಸುಭಾಸ್ ಹೆಗ್ಡೆ ಯನ್ನು ಬಂಧಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆದೂರುದಾರರಾದ ಪದ್ಮನಾಭ (78) ಇವರ ಬಾಬ್ತು 1.38 ಎಕ್ರೆ ಜಾಗವು ಪೆರ್ಡೂರು ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿದ್ದು

ಸದರಿ ಜಾಗಕ್ಕೆ ದಿನಾಂಕ 18/03/2025 ರಂದು ಬೆಳಿಗ್ಗೆ 11 ಗಂಟೆಗೆ ಪದ್ಮನಾಭ ಅವರು ಹಾಗೂ ಅವರ ಮಗ ಹೋಗಿದ್ದು ಸದರಿ ಸ್ಥಳದಲ್ಲಿ ಪೆರ್ಡೂರಿನ ಸುಭಾಸ್‌ ಹೆಗ್ಡೆ ರವರು ಅಕ್ರಮವಾಗಿ ಪ್ರವೇಶಿಸಿ ಮರದ ತುಂಡು ಹಾಗೂ ಕಲ್ಲುಗಳನ್ನು ಶೇಖರಿಸಿಟ್ಟಿದ್ದು
ಸದರಿ ಸ್ವತ್ತುಗಳನ್ನು ತೆರವುಗೊಳಿಸುವಂತೆ ಅವರಲ್ಲಿ ವಿನಂತಿಸಿಕೊಂಡಾಗ ಅವರು ದೂರುದಾರರ ಕಾಲರ್‌ ಪಟ್ಟಿ ಹಿಡಿದು” ಅವ್ಯಾಚ್ಯ ಶಬ್ದದಿಂದ ಬೈದು ಕೈಯಿಂದ ತಳ್ಳಿದ್ದು ಅಲ್ಲದೇ ʼʼನಿನ್ನ ಕೈಕಾಲು ಕಡಿದು ಹಾಕಿ ಕೊಂದು ಜಮೀನಿನಲ್ಲಿ ಹೂತು ಹಾಕುತ್ತೇನೆ ʼʼ ಎಂದುಜೀವ ಬೆರದರಿಕೆ ಹಾಕಿರುತ್ತಾನೆ.ಈ ಬಗ್ಗೆ ಹಿರಿಯಡ್ಕ ಠಾಣಾ ಅಪರಾಧ ಕ್ರಮಾಂಕ 25/2025 U/S : 329(3), 115(2). 352, 351(2) BNS ರಂತೆ ಪ್ರಕರಣ ದಾಖಲಾಗಿದೆ.
Swabhimananews

Related posts

ಏ.23 ರಿಂದ 29 ರ ವರೆಗೆ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ವಿಶ್ವ ಪುಸ್ತಕ ದಿನಾಚರಣೆಯ ಪ್ರಯುಕ್ತ ‘ಪುಸ್ತಕ ಸಂತೆ’ ಕಾರ್ಯಕ್ರಮ

Swabhimana News Desk

ಕಾರ್ಕಳ ಕಟ್ಟಡ ಕಲ್ಲು ಕ್ವಾರಿಯಲ್ಲಿ ಸ್ಪೋಟ.ಕಾರ್ಮಿಕ ಸಾವು; ಗಣಿ ಮಾಲಿಕ ದಿನೇಶ್ ಶೆಟ್ಟಿ ಸೇರಿ
ಇಬ್ಬರ ವಿರುದ್ಧ ಪ್ರಕರಣ ದಾಖಲು.ಕಲ್ಲುಕ್ವಾರೆ, ಕ್ರಷರ್ ಮುಚ್ಚುವಂತೆ ಸಾರ್ವಜನಿಕರ ಒತ್ತಾಯ.

Swabhimana News Desk

ಕೋಟತಟ್ಟು ಗ್ರಾಮದಲ್ಲಿ ಅಕ್ರಮವಾಗಿ, ಕಾನೂನು ಬಾಹಿರವಾಗಿ, ಜನವಸತಿ ಪ್ರದೇಶದಲ್ಲಿ, ಗ್ರಾಮಸ್ಥರಿಗೆ ಮಾರಕ ವಾಗಿರುವ ಜನತಾ ಫಿಶ್ ಮಿಲ್ಲ್ ಬಂದ್ ಮಾಡಿ ಕಾನೂನು ಕ್ರಮ ಕೈಗೊಳ್ಳುವಂತೆ. ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮವಾದ (ರಿ) ಉಡುಪಿ ಜಿಲ್ಲೆ.ಮತ್ತು RPIK ಪಕ್ಷ ಚುನಾವಣಾಧಿಕಾರಿಗೆ ದೂರು.

Swabhimana News Desk

Leave a Comment