27.9 C
New York
11 June 2025
Coastal

ಬೋಧಿಸತ್ವ ಬುದ್ಧ ಫೌಂಡೇಶನ್ ಉಡುಪಿ ಜಿಲ್ಲೆ,ಬೋಧಿಸತ ಬುದ್ಧ ವಿಹಾರ.ಹಾವಂಜೆ, ಕದಸಂಸ ಭೀಮವಾದ (ರಿ) ಉಡುಪಿ ಜಿಲ್ಲೆ ಇವರ ಜಂಟಿ ಸಹಯೋಗದಲ್ಲಿ ನಡೆದ ವಿಧ್ಯಾರ್ಥಿಗಳಿಗೆ ಬಾಬಾಸಾಹೇಬರ ಕುರಿತ ಸ್ಪರ್ಧೆಗಳು

ಉಡುಪಿ.
ಬ್ರಹ್ಮಾವರ :Swabhimananews ದಿನಾಂಕ10/04/2025 ರ ಗುರುವಾರ ಉಡುಪಿ ಜಿಲ್ಲೆಯ, ಬೋಧಿಸತ್ವ ಬುದ್ಧ ಫೌಂಡೇಶನ್ , ಹಾಗೂ ಕದಸಂಸ ಭೀಮವಾದ (ರಿ) ಉಡುಪಿ ಜಿಲ್ಲೆ.ಇವರ ಜಂಟಿ ‌ಸಹಯೋಗದಲ್ಲಿ ಮಹಾನಾಯಕ ಡಾ. ಬಿ ಆರ್ ಅಂಬೇಡ್ಕರ್ ಅವರ 134ನೇ ಜಯಂತಿಯ ಪ್ರಯುಕ್ತ

ವಿದ್ಯಾರ್ಥಿಗಳಿಗೆ ಬಾಬಾಸಾಹೇಬ್ ಅಂಬೇಡ್ಕರ್ ರವರ ಕುರಿತ ಸರ್ಧೆಗಳು ಹಾವಂಜೆಯ ಮಂಜುನಾಥ ಸಭಾಭವನದಲ್ಲಿ ನಡೆಯಿತು. ಉಪಾಸಕ, ಬ್ರಹ್ಮಾವರ ತಾಲೂಕು ಶಿಕ್ಷಣ ಸಂಯೋಜಕರು ಪ್ರಕಾಶ ಬಿ ಬಿ ರವರ ಪ್ರಸ್ತಾವಿಕ ಮಾತುಗಳಲ್ಲಿ ಮಕ್ಕಳಿಗೆ ಬಾಬಾ ಸಾಹೇಬರ ಕುರಿತು ಪರಿಚಯಿಸಿದರು.

” ಇಂದಿನ ಮಕ್ಕಳು ಮಾದ್ಯಮಗಳಿಂದ ಮತ್ತು ಅಂತರ್ ಜಾಲಗಳಿಂದ ಯಾರನ್ನು ಆದರ್ಶ ವ್ಯಕ್ತಿಗಳಾಗಿ ಕಾಣಬೇಕು..?

ಮನುಕುಲಕ್ಕೆ ಮಾನವ ಪ್ರೀತಿ,ಶಾಂತಿಯನ್ನು ಸಾರಿದ ಸಾಮಾಜಿಕ ವಿಜ್ಞಾನಿ ಗುರು ಗೌತಮ ಬುದ್ಧ ಮತ್ತು ಸಮಸಮಾಜ ಮತ್ತು ಸೌಹಾರ್ದತೆಯ ಆಶಯಗಳನ್ನು ನೀಡಿದ ಡಾ. ಬಿ ಆರ್ ಅಂಬೇಡ್ಕರ್ ರವರನ್ನು ಆದರ್ಶ ವ್ಯಕ್ತಿಗಳಾಗಿ ಕಾಣುವ-ಅನುಸರಿಸುವ ತುರ್ತು ಅಗತ್ಯವಿದೆ.

ಕರಾವಳಿಯಲ್ಲಿ ದಮ್ಮದ ಬೆಳಕನ್ನು ಚೆಲ್ಲುವ ಕಾರ್ಯವನ್ನು ಬೋಧಿಸತ್ವ ಬುದ್ಧ ಫೌಂಡೇಶನ್ ಉಡುಪಿ ಜಿಲ್ಲೆ ಹಾವಂಜೆ. ಮಾಡುತ್ತಾ ಸಾಗಿದೆ.ಮೈತ್ರಿಪೂರ್ಣ ಮಾನವೀಯ ಮೌಲ್ಯಗಳನ್ನು ಮಕ್ಕಳು ಮೈಗೂಡಿಸಿಕೊಂಡಾಗ ಬುದ್ಧ ಭಾರತ- ಪ್ರಬುದ್ಧ ಭಾರತ ನಿರ್ಮಾಣ ಸಾದ್ಯ” ಎಂದು ಉಪಾಸಕ ಎಂ ಪಕೀರಪ್ಪ ಕನ್ನಡ ಅಧ್ಯಾಪಕರು ಚೇತನ ಪ್ರೌಢಶಾಲೆ ಹಂಗಾರಕಟ್ಟೆ ಇವರು ಹೇಳಿದರು

ಡಾ. ಬಾಬಾ ಸಾಹೇಬ್ ಅವರ ವಿಚಾರಗಳನ್ನು ಬುದ್ಧರ ದಮ್ಮವನ್ನು ಮಾನವ ಬಂಧುತ್ವವನ್ನು ಮನೆ ಮನಗಳಿಗೆ ಪಸರಿಸುವ ಕಾರ್ಯವನ್ಙು ಬೋಧಿಸತ್ವ ಬುದ್ಧ ಫೌಂಡೇಶನ್ ನ

ಬುದ್ಧ ವಿಹಾರ .ಹಾವಂಜೆ ನಡೆಸುತ್ತದೆ ಎಂದು ಬೋಧಿಸತ್ವ ಬುದ್ಧ ಪೌಂಡೇಷನ್ ಅಧ್ಯಕ್ಷರಾದ ಆಯುಷ್ಮಾನ್ ಶೇಖರ್ ಹಾವಂಜೆ ಹೇಳಿದರು.
ಉಡುಪಿಯ ಧಮ್ಮಾಚಾರಿಗಳಾದ ಶಂಭು ಸುವರ್ಣ ಅವರು ದ್ಯಾನ ಮತ್ತು ಮೈತ್ರಿ ಧ್ಯಾನ ಮಕ್ಕಳ ಮನಸನ್ನು ಶುಚಿಗೊಳಿಸುತ್ತದೆ ಅಳವಡಿಸಿಕೊಳ್ಳಲು ಕರೆ ನೀಡಿದರು.
ವಿಚಾರವಂತರು,

ಚಿಂತಕರು .ಹೆಚ್ ಜಿ ಸೋಮಪ್ಪ ಕೆ,
ಕದಸಂಸ ಭೀಮವಾದ ಜಿಲ್ಲಾ ಸಂಚಾಲಕ ಸಂಜೀವ ನಾಯ್ಕ್ ಕುಕ್ಕೆಹಳ್ಳಿ, ECO ನಾಗಾರ್ಜುನ್, CRP ಶಾಂತಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಬೌದ್ಧ ಚಿಂತಕರು, ವಿಚಾರವಂತರು
ಸೋಮಪ್ಪ ಹೆಚ್ ಜಿ ತಮ್ಮ ಸ್ವಾಗತ ಭಾಷಣದಲ್ಲಿ ಸರ್ವರಿಗೂ ಮೈತ್ರಿಪೂರ್ಣ ಸ್ವಾಗತ ಕೋರಿದರು.
ಪ್ರಶಾಂತ ಶೆಟ್ಟಿ ಹಾವಂಜೆ ಶಿಕ್ಷಕರು.ಕಾರ್ಯಕ್ರಮ ನಿರೂಪಿಸಿದರು.ಉಪಾಸಕಿ ಜಯಶೀಲ ಬಿ ರೋಟೆ ವಂದಿಸಿದರು. ರಾಷ್ಟ್ರಗೀತೆಯೊಂದಿಗೆ ಸ್ಪರ್ಧಾ ಕಾರ್ಯಕ್ರಮ ಮುಕ್ತಾಯಗೊಂಡಿತು.

150 ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಮಹಾಉಪಾಸಕ,ವಿಚಾರವಂತರು ವಿಠಲ್ ಸಾಲಿಕೇರಿ,

ಟ್ರಸ್ಟ್ ನ,ವಿಹಾರದ, ಸಂಘಟನೆಯ.ಹಾಗೂ BSI ಉಡುಪಿ ಜಿಲ್ಲೆ ಇದರ ಅಧ್ಯಕ್ಷರು, ಕಾರ್ಯದರ್ಶಿಗಳು, ಪದಾಧಿಕಾರಿಗಳು, ಕಾರ್ಯಕರ್ತರು,ಉಪಾಸಕ ಉಪಾಸಿಕರು ಮತ್ತು ಅನೇಕ ಶಿಕ್ಷಕರು,ಶಿಕ್ಷಕಿಯರು, ಮಕ್ಕಳ ಪೋಷಕರು ಉಪಸ್ಥಿತರಿದ್ದರು.

Swabhimananews

Related posts

ಆಭರಣ ಹೆಸರಿನ ಚಿನ್ನಾಭರಣ ತಯಾರಿಕಾ ಘಟಕದಲ್ಲಿ ವಿಷ ಅನಿಲ ಸೋರಿಕೆ.ಉಡುಪಿ ನಗರದ ಜನತೆ ಆತಂಕದಲ್ಲಿ..!!

Swabhimana News Desk

ಬ್ರಹ್ಮಾವರ ತಾಲೂಕಿನಲ್ಲಿ ಲೋಕಾಯುಕ್ತರಿಂದ ಅಹವಾಲು ಸ್ವೀಕಾರ.

Swabhimana News Desk

ಕಟಪಾಡಿ:ಕಾರ್ಮಿಕರಿಬ್ಬರ ನಡುವೆ ಗಲಾಟೆ ಓರ್ವನ ಕೊಲೆ.!

Swabhimana News Desk

Leave a Comment