ಅಕ್ಟೋಬರ್ -12-2024 swabhimananews
ಉಡುಪಿ ಜಿಲ್ಲೆಯ ಹಿಂದೂ ಜಾಗರಣ ವೇದಿಕೆ ಉಡುಪಿ ಜಿಲ್ಲಾ ಮುಖಂಡ ಉಮೇಶ ನಾಯ್ಕ.
ಎಂಬವನು ಬಾಬಸಾಹೇಬ್ ಅಂಬೇಡ್ಕರ್ ರವರು ಕೊಟ್ಟ ಮೀಸಲಾತಿ ಭಿಕ್ಷೆಯಿಂದ ತಾನು,ತನ್ನ ಕುಟುಂಬ,ತನ್ನ ಜಾತಿ ಬೆಳೆದು ಬಂದು ಇಂದು ಬಹಿರಂಗವಾಗಿ ಸಮಾಜದ ಮುಂದೆ ಸೋಶಿಯಲ್ ಮೀಡಿಯಾದಲ್ಲಿ ಪರಮಪೂಜ್ಯ ಬಾಬಸಾಹೇಬ್ ಅಂಬೇಡ್ಕರ್ ರವರಿಗೆ ಅವಮಾನ ಮಾಡಿದ್ದಾನೆ ಮತ್ತು ರಾಜ್ಯದ, ದೇಶದ ಪರಿಶಿಷ್ಟ ಜಾತಿಯವರು ದನ, ಕೋಣ, ತಿನ್ನುವವರು, ಸ್ಮಶಾನದಲ್ಲಿ ಮಲಗುವವರು ಎಂದು ಅಸಹ್ಯವಾಗಿ ನಿಂದಿಸಿ. ಬಹಿರಂಗವಾಗಿ ನಾವು ದಲಿತರಲ್ಲ ಎಂದು ಹೇಳಿರುವ ಆಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ
ಹೇ…ಮಿಸ್ಟರ್ ಉಮೇಶ್ ನಾಯ್ಕ ನಿನಗೆ ತಾಕತ್ತಿದ್ದರೆ ಇಡೀ ನಿನ್ನ ಮರಾಠಿ ಸಮುದಾಯಕ್ಕೆ ಅಂಬೇಡ್ಕರ್ ಕೊಟ್ಟಂತಹ ಮೀಸಲಾತಿಯಿಂದ ಹೊರಬರಲು ಹೇಳು. ಆ ತಾಕತ್ತು, ಧಮ್ ನಿಮಗಿದೆಯೇ..? ನಿನ್ನ ಜಾತಿಯ ಮೂಲ ಮಹಾರಾಷ್ಟ್ರ 14 ನೇ ಶತಮಾನದಲ್ಲಿ ಇಲ್ಲಿಗೆ ವಲಸೆ ಬಂದು ಅಕ್ರಮವಾಗಿ ಪರಿಶಿಷ್ಟ ಪಂಗಡ ಮೀಸಲಾತಿ ಭಿಕ್ಷೆಯನ್ನು ಪಡೆದುಕೊಳ್ಳಲು ನಿನ್ನವರಿಗೆ ಕರ್ನಾಟಕದ ಮೂರು ಜಿಲ್ಲೆಗಳಲ್ಲಿ ಮಾತ್ರ ಸಾಧ್ಯವಾಯಿತು ಎಂದು ನಮಗೂ ಗೊತ್ತು. ಕರಾವಳಿಗೆ ವಲಸೆ ಬಂದು ಅಕ್ರಮವಾಗಿ ಮೀಸಲಾತಿ ಪಡ್ಕೊಂಡು ಇಂದು ಇಡೀ ನಿನ್ನ ಸಮುದಾಯ ಸಮಾಜದಲ್ಲಿ ಅತೀ ಎತ್ತರಕ್ಕೆ ಬೆಳೆದು ನಿಂತಿದೆ.
ಅಂಬೇಡ್ಕರ್ ಕೊಟ್ಟ ಮೀಸಲಾತಿ ಬೇಕು ಹಾಗೂ ಮುಗ್ಧ ಕೊರಗ ಸಮುದಾಯಕ್ಕೆ ಮೀಸಲಿದ್ದ ಮೀಸಲಾತಿಯನ್ನು ಕೂಡ
ಎಸ್‌ಟಿ ಸಮುದಾಯ ಎಂದು ಅದನ್ನು ನೀವೇ ನುಂಗುತ್ತೀರಿ
ಆ ಜಾತಿಯ ವಿರುದ್ಧವೇ ಅವಮಾನ ಮಾಡ್ತೀರಿ.
ಪ್ರತಿ ವರ್ಷ ಹೋಳಿ ಹಬ್ಬದ ನಿಮಿತ್ತ ನೀವು ಜಿಲ್ಲೆಯ ಎಲ್ಲರ ಮನೆ ಮನೆಗೆ ತೆರಳಿ ಗುಮ್ಟೆ ಬಡಿದು ಅವರು ನೀಡುವ ಕಾಣಿಕೆ ಸ್ವೀಕರಿಸಿ ಬರುವ ನೀವುಗಳು.ಅದೇ ಪರಿಶಿಷ್ಟ ಜಾತಿಯವರ ಮನೆಗೆ ಮತ್ತು ಕಾನೂನಿನಡಿಯಲ್ಲಿ ನಿಮ್ಮದೇ ಜಾತಿಗೆ ಸೇರಿರುವ ಎಸ್ ಟಿ. ಸಮುದಾಯ ಕೊರಗರ ಮನೆಗೆ ಹೋಗದೆ ಅಸ್ಪ್ರಶ್ಯರಲ್ಲೇ ಒಳ ಅಸ್ಪೃಶ್ಯತೆ ಆಚರಣೆ ಮಾಡುವ/ ಮಾಡ್ತಾ ಇರುವವರೇ ನಿನ್ನ ಈ ಮರಾಠಿ ನಾಯ್ಕ ಜಾತಿ.
ಇವರು ರಾಜ್ಯದ ಕೇವಲ ಕರಾವಳಿ ಜಿಲ್ಲೆಗಳಲ್ಲಿ ಮಾತ್ರ ಇವರಿಗೆ ಮೀಸಲಾತಿ ಹೇಗೆ ಪಡ್ಕೊಂಡ್ರು ಎಂದು ಸರಕಾರ/ಸಂಬಂಧಪಟ್ಟ ಇಲಾಖೆಗಳು, ಅಧಿಕಾರಿಗಳು ಎಚ್ಚೆತ್ತುಕೊಂಡು ಈ ಪ್ರಕರಣವನ್ನು ಗಂಭೀರವಾಗಿ ಪುನರ್ ಪರಿಶೀಲನೆ ಮಾಡಿ ಮರಾಠಿ ನಾಯ್ಕ ಜಾತಿಯವರ ಮೀಸಲಾತಿ ರದ್ದುಗೊಳಿಸಿ ಇವರನ್ನು ಮೇಲ್ವರ್ಗಕ್ಕೆ ಸೇರಿಸಲು ದಲಿತಪರ ಇರುವ ಸಿದ್ದರಾಮಯ್ಯರವರ ಕಾಂಗ್ರೆಸ್ ಸರಕಾರ ಗಂಭೀರವಾಗಿ ಪರಿಗಣಿಸಿ ಸ್ವತಂತ್ರ ಭಾರತದ ಸಂವಿಧಾನ ಶಿಲ್ಪಿ ಬಾಬಸಾಹೇಬ್ ಅಂಬೇಡ್ಕರರಿಗೆ ಮತ್ತು ಇಡೀ ರಾಜ್ಯದ, ದೇಶದ ದಲಿತ ಸಮುದಾಯಕ್ಕೆ ಬಹಿರಂಗವಾಗಿ ನಿಂದಿಸಿ ,ಅವಮಾನ ಮಾಡಿ ಆಡಿಯೋ ಹರಿಬಿಟ್ಟ ಈ ಕೆಟ್ಟ ಹುಳ ಉಮೇಶ ನಾಯ್ಕ ಹಾಗೂ ಅವನ ಜೊತೆಗಾರರ ವಿರುದ್ಧ ದೇಶದ್ರೋಹದ ಅಡಿಯಲ್ಲಿ ಪ್ರಕರಣ ದಾಖಲಿಸಿ ಬಂಧಿಸಿ ಕಾನೂನು ಶಿಕ್ಷೆ ವಿಧಿಸುವಂತೆ ಮಾನ್ಯ ಗೌರವಾನ್ವಿತ ಕರ್ನಾಟಕ ರಾಜ್ಯ ಸರಕಾರದ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯರವರು ತಾಕತ್ತಿದ್ದರೆ ಇವರನ್ನು ಬಂಧಿಸಿ. ಇದು ನಿಮಗೆ ನನ್ನ ಬಹಿರಂಗ ಸವಾಲು.
ಉಡುಪಿ ಜಿಲ್ಲೆಯ ಗೌರವಾನ್ವಿತ ಜಿಲ್ಲಾಧಿಕಾರಿಗಳಾದ ಡಾ.ವಿದ್ಯಾ ಕುಮಾರಿ ಮತ್ತು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಅರುಣ್ ಕುಮಾರ್ ಮತ್ತು ಉಡುಪಿ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಅನಿತಾ ಮಡ್ಲುರು ರವರಿಗೂ ನನ್ನ ಸವಾಲು. ತಾಕತ್ತಿದ್ದರೆ ನನ್ನ ಸವಾಲು ಸ್ವೀಕರಿಸಿ.
ಸಿದ್ಧರಾಮಯ್ಯರವರೆ ಈ ಪ್ರಕರಣವನ್ನು ತಾವು ತಮ್ಮ ಸರಕಾರ ಕೇವಲವಾಗಿ ಮಾಡಿದರೆ, ನೋಡಿದರೆ ಮುಂದೆ
ಇಡೀ ರಾಜ್ಯದ ದಲಿತ ಸಂಘಟನೆಗಳು ನಿಮ್ಮ ಮನೆ ಮುಂದೆ ಧರಣಿ ಸತ್ಯಾಗ್ರಹ ನಡೆಸುವುದು ಅನಿವಾರ್ಯವಾಗಿದೆ ಎನ್ನುವುದನ್ನು ತಮ್ಮ ಗಮನಕ್ಕೆ ತರ್ತಾ ಇದ್ದೇನೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮವಾದ (ರಿ)ನ ರಾಜ್ಯ ಸಂಘಟನಾ ಸಂಚಾಲಕರು,RPIK ಪಕ್ಷದ ರಾಜ್ಯ ಉಪಾಧ್ಯಕ್ಷರಾದ ಶೇಖರ್ ಹಾವಂಜೆ ಮುಖ್ಯಮಂತ್ರಿ ಸಿದ್ಧರಾಮಯ್ಯರವರಿಗೆ ಸವಾಲು ಹಾಕಿದ್ದಾರೆ.
Swabhimananews.