ಅಕ್ಟೋಬರ್ -07-2024 swabhimananews
ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳ ಆದೇಶದಂತೆ ಬಂಟ್ವಾಳ ತಾಲೂಕಿನ ತುಂಬೆ, ಮಾರಿಪಳ್ಳ ಭಾಗದ ನೇತ್ರಾವತಿನದಿಯಲ್ಲಿ(ಬೃಹತ್ ಯಂತ್ರದ ದೋಣಿಗಳ) ಮೂಲಕ ನಡೆಯುತ್ತಿದ್ದ ಅಕ್ರಮ ಮರಳು ಅಡ್ಡೆಗೆ ದಿನಾಂಕ 04-10-2024 ರ ಶುಕ್ರವಾರ
ದ.ಕ. ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂವಿಜ್ಞಾನಿ ಕೃಷ್ಣವೇಣಿ ಎಂಬ ದಿಟ್ಟ ಹಾಗೂ ಪ್ರಾಮಾಣಿಕ, ಖಡಕ್ ಅಧಿಕಾರಿ ಎಂದೇ ರಾಜ್ಯದ ಉದ್ದಗಲಕ್ಕೂ ಹೆಸರುವಾಸಿಯಾದ ಇವರು ಉಡುಪಿ ಜಿಲ್ಲೆಯಲ್ಲಿ ಕಳೆದ ಕೆಲವು ತಿಂಗಳ ಹಿಂದೆ ಒಂದಷ್ಟು ತಿಂಗಳು ಕರ್ತವ್ಯ ನಿರ್ವಹಿಸಿದ್ದು.
ಇಡೀ ಉಡುಪಿ ಜಿಲ್ಲೆಯ ಎಲ್ಲಾ ಅಕ್ರಮ ಗಣಿ ದಂಧೆಕೋರರು ಬಾಲ ಮಡಚಿಕೊಂಡು ಕೆಲವು ತಿಂಗಳು ಮೂಲೆಯಲ್ಲಿ ಕುಳಿತಿರುವುದು ಮರೆಯಲಾಗದ ಇತಿಹಾಸ. ಇಂತಹದ್ದೇ ಬಹುಕೋಟಿಯ ಅಕ್ರಮ ಗಣಿಗಾರಿಕೆಯ ಬಗ್ಗೆ ಇವರು ಕರ್ತವ್ಯ ನಿರ್ವಹಿಸಿರುವ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಈ ರೆಬಲ್ ಕೃಷ್ಣವೇಣಿಯ ಘರ್ಜನೆಯ ಮುಂದೆ ಯಾವ ಪ್ರಭಾವಿಯದ್ದೂ ಆಟ /ಒತ್ತಡ/ ಬೆದರಿಕೆಗೆ ಬಗ್ಗದೆ, ಕುಗ್ಗದೆ, ಎದೆಗುಂದದೆ ಭ್ರಷ್ಟರಿಗೆ
ಸಿಂಹ ಸ್ವಪ್ನವಾಗಿ ಕಾಡಿದ್ದು /ಕಾಡುತ್ತಿರುವುದು
ಸೂರ್ಯ ಚಂದ್ರರಷ್ಟೇ ಸತ್ಯ. ಗೌರವಾನ್ವಿತ ಹಿರಿಯ ಭೂವಿಜ್ಞಾನಿ ಇವರು ಯಾವುದೇ ರೀತಿಯ ಆಮಿಷಗಳಿಗೆ ಮತ್ತು ಹಣದ ಆಸೆಗೆ ಬಗ್ಗುವವರು ಇವರಲ್ಲ. ಈ ರೆಬಲ್ ಅಧಿಕಾರಿಯ ನೇತೃತ್ವದ.
ಬಂಟ್ವಾಳ ಕಂದಾಯ ಇಲಾಖೆಯ ಅಧಿಕಾರಿಗಳ ಮತ್ತು ಪೊಲೀಸ್ ಇಲಾಖೆಯನ್ನು ಒಳಗೊಂಡ ತಂಡ 20 ಇಂಜಿನ್ ಮತ್ತು ಗ್ಯಾಸ್ ಸಿಲಿಂಡರ್ ಸಹಿತ ಬೋಟ್‌ಗಳನ್ನು ವಶಪಡಿಸಿಕೊಂಡಿದ್ದು ಅಧಿಕಾರಿಗಳ ದಾಳಿಯ ವೇಳೆ ಮರಳುಗಾರಿಕೆ ನಡೆಸುತ್ತಿದ್ದ ಕಾರ್ಮಿಕರು ಓಡಿ ತಪ್ಪಿಸಿಕೊಂಡಿದ್ದಾರೆ.
ವಶಪಡಿಸಿಕೊಂಡ ದೋಣಿಗಳನ್ನು 4 ರಂತೆ ಜೋಡಿಸಿಕೊಂಡು 5 ತಂಡಗಳ ಮೂಲಕ ನದಿಯಲ್ಲೇ ಮಂಗಳೂರಿನ ಅಡ್ಯಾರ್‌ವರೆಗೆ ಸಾಗಿಸಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ವಶಕ್ಕೆ ಒಪ್ಪಿಸಲಾಗಿದೆ.
ದಾಳಿಯ ವಿಷಯ ತಿಳಿದು ಅಕ್ರಮ ದಂಧೆಕೋರರು ಈ ದೋಣಿಗಳನ್ನು ಗೌಪ್ಯ ಸ್ಥಳದಲ್ಲಿ ಬಚ್ಚಿಟ್ಟರು ಅದೆಲ್ಲವನ್ನು ಹುಡುಕಿ ವಶಕ್ಕೆ ಪಡೆದ ಸಿಂಹ ಕೃಷ್ಣವೇಣಿ.ಬೋಟ್‌ಗಳಲ್ಲಿ ಮರಳುಗಾರಿಕೆಯಲ್ಲಿ ತೊಡಗಿದ್ದವರು ಯಾರು, ಬೋಟ್‌ಗಳು ಯಾರಿಗೆ ಸೇರಿದ್ದು, ಎನ್ನುವ ಬಗ್ಗೆ ದಿಟ್ಟ ಅಧಿಕಾರಿಗಳ ತನಿಖೆಯ ಬಳಿಕ ತಿಳಿದು ಬರಲಿದೆ.
ಬಂಟ್ವಾಳ ತಾಲೂಕಿನ ಹಲವೆಡೆ
ನದಿಯಲ್ಲಿ ದೋಣಿಗಳ ಸಹಾಯದಿಂದ ಉತ್ತರ ಭಾರತದ ಕಾರ್ಮಿಕರನ್ನು ಬಳಸಿಕೊಂಡು ಅಕ್ರಮ ಮರಳುಗಾರಿಕೆ ನಡೆಯುತ್ತಿದೆ ಎಂಬ ಆರೋಪಗಳು ಸಾಕಷ್ಟು ಸಮಯದಿಂದ ಕೇಳಿಬರುತ್ತಿದ್ದು ಈ ಕುರಿತು ದ.ಕ.ಜಿಲ್ಲಾಧಿಕಾರಿಗಳಿಗೆ ಸಾರ್ವಜನಿಕರು ಸಾಕಷ್ಟು ದೂರು ನೀಡಿದ್ದಾರೆ.
ಈ ಹಿನ್ನೆಲೆಯಲ್ಲಿ ದಾಳಿ ನಡೆಸಿ ಅಕ್ರಮವನ್ನು ಮಟ್ಟ ಹಾಕುವಂತೆ ಗಣಿ ಇಲಾಖೆಗೆ ಆದೇಶ ಮಾಡಿದ್ದರು. ಗಣಿ ಇಲಾಖೆಯ
ಹಿರಿಯ ಭೂವಿಜ್ಞಾನಿ ದಿಟ್ಟ ಮಹಿಳೆ ಕೃಷ್ಣವೇಣಿ, ಬಂಟ್ವಾಳ ತಹಶೀಲ್ದಾರ್ ಅರ್ಚನಾ ಡಿ. ಭಟ್, ಮಂಗಳೂರು ತಹಶೀಲ್ದಾರ್ ಪ್ರಶಾಂತ್ ಪಾಟೀಲ್, ಭೂ ವಿಜ್ಞಾನಿ ಗಿರೀಶ್ ಮೋಹನ್,ಮಹಾದೇಶ್ವರ, ಬಂಟ್ವಾಳ ಕಂದಾಯ ನಿರೀಕ್ಷಕ ಜನಾರ್ಧನ್ ಜೆ., ಗ್ರಾಮಕರಣಿಕರು, ಕಂದಾಯ ಇಲಾಖೆ ಸಿಬ್ಬಂದಿ ಹಾಗೂ ಬಂಟ್ವಾಳ ಗ್ರಾಮಾಂತರ ಪೊಲೀಸರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಈ ಕೃಷ್ಣವೇಣಿ ರವರು ದಿನಾಂಕ 04-10-2024 ರಂದು ನಡೆಸಿದ ಮಿಂಚಿನ ದಾಳಿಯಿಂದಾಗಿ.
ಬಹುಕೋಟಿ ರೂಪಾಯಿಯ ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದ ಮಂಗಳೂರಿಗೆ ಈ ಸಿಂಹ ಘರ್ಜನೆಯ ಸಿಂಹಿಣಿ ಕೃಷ್ಣವೇಣಿ ಅಧಿಕಾರ ವಹಿಸಿಕೊಂಡಿದ್ದು ಮಂಗಳೂರಿನ ಅಕ್ರಮ ಗಣಿಧನಿಗಳ ಎದೆಯಲ್ಲಿ ನಡುಕ ಶುರುವಾಗಿದೆ.
ಈ ದ.ಕ ಜಿಲ್ಲೆಯು ಬ್ರಹತ್ ಅಕ್ರಮ ಗಣಿಗಾರಿಕೆಯ ಜಿಲ್ಲೆಯಾಗಿತ್ತು. ಇಲ್ಲಿಂದಲೇ ಹೊರ ರಾಜ್ಯಕ್ಕೆ ಕೋಟ್ಯಾಂತರ ರೂಪಾಯಿ ಬೆಲೆಬಾಳುವ ಇಲ್ಲಿನ ಕೆಂಪುಮಣ್ಣು ಅಕ್ರಮವಾಗಿ ನಕಲಿ ಸಾಗಾಟ ಪರವಾನಗಿಯ ಮೂಲಕ ಸಾಗಾಟ ಆಗುತ್ತಿರುವ ಬಗ್ಗೆ
ಮತ್ತು ಈ ಕೆಂಪು ಮಣ್ಣು ಗಣಿಗಾರಿಕೆಗೆ ಪರವಾನಗಿಯನ್ನು ಪಡೆದು ಆ ಪ್ರದೇಶದಲ್ಲಿ ಗಣಿಗಾರಿಕೆ ನಡೆಸದೆನೆ ಕೋಟಿ ಕೋಟಿ ರೂಪಾಯಿಯ ಸಾಗಾಟ ಪರವಾನಗಿಯನ್ನು ಪಡೆದಿರುವುದು ILMS ತಂತ್ರಾಂಶದಲ್ಲಿ ತಿಳಿಯುತ್ತದೆ.
ಇದಕ್ಕೆಲ್ಲಾ ಅನೇಕ ಸಮಯಗಳಿಂದ ಸಾರ್ವಜನಿಕರು ದೂರು ನೀಡುತ್ತಿದ್ದರು. ಆದರೂ ಈ ಅಕ್ರಮ ದಂಧೆಗೆ ಯಾರು ಕಡಿವಾಣ ಹಾಕಿಲ್ಲ. ಮುಂದೆ ಇದೆಲ್ಲದಕ್ಕೂ ಹೊಸ ಹಿರಿಯ ಭೂ ವಿಜ್ಞಾನಿ ಗೌರವಾನ್ವಿತ ಕೃಷ್ಣವೇಣಿರವರಿಂದ ಸಂಪೂರ್ಣ ಬ್ರೇಕ್ ಬೀಳುವ ಭರವಸೆ ನಮಗಿದೆ. ಎಂದು ಅನೇಕ ಸಾಮಾಜಿಕ ಹೋರಾಟಗಾರರು, ಕೆಲವು ಸಂಘಟನೆಗಳು ಆಶಾಭಾವನೆ ವ್ಯಕ್ತಪಡಿಸುತ್ತಿದ್ದಾರೆ. ಇಂತಹ ಖಡಕ್ ಅಧಿಕಾರಿಯನ್ನು ಇಲ್ಲಿಗೆ ನಿಯೋಜನೆ ಮಾಡಲು ಕಾರಣಕರ್ತರಾದ ಮಾನ್ಯ ಗೌರವಾನ್ವಿತ ಸಭಾಪತಿಗಳಾದ
ಯು ಟಿ. ಖಾದರ್ ಸಾಹೇಬರಿಗೆ ಸಾರ್ವಜನಿಕರು ಅಭಿನಂದಿಸಿದ್ದಾರೆ.
ಮಂಗಳೂರಿನ ಬಹುತೇಕ ಎಲ್ಲಾ ಅಕ್ರಮ ಗಣಿಗಾರಿಕೆಗೆ ಬ್ರೇಕ್ ಬಿದ್ದು ಸರಕಾರಕ್ಕೆ ಕೋಟ್ಯಾಂತರ ರೂಪಾಯಿ ರಾಜಧನ ಪಾವತಿಸಿ ಕಾನೂನು ಚೌಕಟ್ಟಿನಲ್ಲಿ ಗಣಿಗಾರಿಕೆ ನಡೆಸುವ ಎಲ್ಲಾ ಗಣಿ ವ್ಯಾಪಾರಸ್ಥರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಈ ಖಡಕ್ ಅಧಿಕಾರಿಯನ್ನು ನೇಮಿಸಲಾಗಿದೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ.
ಇಡೀ ಮಂಗಳೂರಿನ ಜನತೆ
ಕೃಷ್ಣವೇಣಿರವರಿಗೆ ಪ್ರೀತಿ ಪೂರ್ವಕ ಶುಭಾಶಯಗಳನ್ನು ಕೋರಿದ್ದಾರೆ.
Swabhimananews