ಮೇ 22-2024 swabhimananews
ದಿನಾಂಕ 22-05-2024 ಬುಧವಾರ ಆದಿ ಉಡುಪಿ ಡಾ ಬಿ ಆರ್ ಅಂಬೇಡ್ಕರ್ ಭವನದಲ್ಲಿ ಬುದ್ಧ ಪೂರ್ಣಿಮೆ ಪ್ರಯುಕ್ತ ವಿದ್ಯಾರ್ಥಿಗಳಿಗೆ ನಡೆದ ವಿವಿಧ ಸ್ಪರ್ಧೆಗಳ ಬಹುಮಾನ ವಿತರಣೆ ಹಾಗೂ ವಿದ್ಯಾರ್ಥಿ ವೇತನ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಉಡುಪಿ ವಲಯದ ಪೊಲೀಸ್ ಉಪ ಅಧೀಕ್ಷಕರಾದ ಶ್ರೀ ಪ್ರಭು ಡಿ ಟಿರವರು ,ಮಾತನಾಡಿ “ಯಾವುದೇ ಒಂದು ಧರ್ಮದಲ್ಲಿ ಅನಾಚಾರ, ಅಂಧಾನುಕರಣೆ ಮೌಡ್ಯಾಚರಣೆಗಳು ಹೆಚ್ಚಾದಾಗ ಹೊಸ ಧರ್ಮ ಹುಟ್ಟಿಕೊಳ್ಳುತ್ತದೆ.
ಹಿಂದೆ ಭಾರತದ ಇತಿಹಾಸದಲ್ಲಿ ಅಂತಹದ್ದೇ ವಾತಾವರಣ ಸೃಷ್ಟಿಯಾಗಿ ಜನರು ಬೇಸತ್ತು ಪರ್ಯಾಯ ಧರ್ಮಕ್ಕೆ ಹುಡುಕಾಡುತ್ತಿರುವ ಸಂದರ್ಭ ಬೌದ್ಧ ಧರ್ಮ ಹುಟ್ಟಿಕೊಂಡಿತು. ಬುದ್ಧರು ತನ್ನ ಜ್ಞಾನೋದಯದಿಂದ ಕಂಡುಕೊಂಡ ಸತ್ಯವನ್ನು ಜನರಿಗೆ ತಿಳಿಸಿ ದುಃಖ್ಖವನ್ನು ಮೆಟ್ಟಿ ನಿಲ್ಲುವ ಮಾರ್ಗವನ್ನು ತಿಳಿಸಿದರು. ಎಲ್ಲಾ ಧರ್ಮಗಳು ದೇವರು ಮತ್ತೆ ಪೂಜೆಯ ಬಗ್ಗೆ ತಿಳಿಸಿದರೆ, ಬುದ್ದರು ಎಂದೂ ತನ್ನನ್ನು ಪೂಜಿಸಲು ಹೇಳಲಿಲ್ಲ. ಬದಲಾಗಿ ತಾನು ಹೇಳಿದ ವಿಚಾರಗಳು ಸರಿಯಾಗಿದ್ದರೆ ಮಾತ್ರ ಅನುಸರಿಸುವಂತೆ ತಿಳಿಸಿದರು. ಬುದ್ದರು ಕೇವಲ ಮನುಷ್ಯನ ಒಳಿತಿನ ಬಗೆಗೆ ಚಿಂತಿಸಿದರು. ಹಾಗಾಗಿ ಮನುಷ್ಯನ ಐಹಿಕ ಸುಖಕ್ಕಾಗಿ ಬುದ್ಧರ ಬೋದನೆಗಳು ಧರ್ಮಾತೀತವಾಗಿ ಎಲ್ಲರಿಗೂ ಅಗತ್ಯವಾಗಿದೆ ಎಂದರು.
ಸಂಬುದ್ಧ ಟ್ರಸ್ಟ್ ನ ವತಿಯಿಂದ ಎಸ್ ಎಸ್ ಎಲ್ ಸಿ ಮತ್ತು ದ್ವಿತೀಯ ಪಿ ಯು ಸಿ ಯಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ಆರ್ಥಿಕವಾಗಿ ಹಿಂದುಳಿದ ಎಲ್ಲಾ ಸಮುದಾಯದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು.ಉಡುಪಿ ತಹಸಿಲ್ದಾರ್ P R ಗುರುರಾಜ್ ಮತ್ತು ಲೋಕೋಪಯೋಗಿ ಅಭಿಯಂತರರರಾದ ಶ್ರೀ ದಿನೇಶ್ ರವರು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಮತ್ತು ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಸ್ಪರ್ದಿಗಳಿಗೆ ಬಹುಮಾನ ವಿತರಿಸಿದರು. ಈ ವರ್ಷದ ವಿಶೇಷ ಶಿಷ್ಯವೇತನವನ್ನು ದ್ವಿತೀಯ ಪಿ ಯು ಸಿ ಯಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣ ಳಾದ ದ ಕ ಜಿಲ್ಲೆಯ ಉಪಾಸಕ ದೇವಪ್ಪ ಬೌದ್ ರವರ ಮಗಳು ಕು. ಗಾನಶ್ರೀ ರವರಿಗೆ ನೀಡಿ ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು BSI ಜಿಲ್ಲಾ ಘಟಕದ ಅಧ್ಯಕ್ಷರಾದ ಅಜಯ್ ಕುಮಾರ್ ವಹಿಸಿದ್ದರು. ರಾಘವೇಂದ್ರ ಅಥಿತಿಗಳನ್ನು ಸ್ವಾಗತಿಸುದರು. ಮಂಜುನಾಥ್ ವಿ ವಕೀಲರು ಪ್ರಾಸ್ತಾವಿಕವಾಗಿ ಮಾತನಾಡಿ, ನಾಗರಾಜ್ ಉಪ್ಪುರೂ ವಂದಿಸಿದರು.
ನಾಳೆ ದಿನಾಂಕ 23 -05-2024 ಗುರುವಾರ ಬೆಳಿಗ್ಗೆ ಸಮಯ 9.30 ಕ್ಕೆ ವೈಸಾಖ ಬುದ್ದ ಪೂರ್ಣಿಮೆಯ ಅಂಗವಾಗಿ ಬುದ್ದಿಸ್ಟ್ ಸೊಸೈಟಿ ಆಫ್ ಇಂಡಿಯಾ ವತಿಯಿಂದ ಉಡುಪಿ ನಗರದ ಜೋಡುಕಟ್ಟೆಯಿಂದ ಬನ್ನಂಜೆ ನಾರಾಯಣ ಗುರು ಸಭಾಭವನದವರೆಗೆ ಶಾಂತಿಗಾಗಿ ಪಂಚಶೀಲಾ ಪಾದಯಾತ್ರೆ ಕೈಗೊಳ್ಳಲಾಗುವುದು.
ನಮೋ ಬುದ್ದಾಯ
Swabhimananews