24 January 2026
Coastal

ಉಡುಪಿಯಲ್ಲಿ.ಅಕ್ರಮವಾಣಿಜ್ಯ/ವಸತಿ ಕಟ್ಟಡಗಳದ್ದೇ ಕಾರುಬಾರು.ಯಾವ ದಕ್ಷ ಅಧಿಕಾರಿಯನ್ನು ಕೇರ್ ಮಾಡದ ಅಕ್ರಮ ದಂಧೆಕೋರರು.

ಉಡುಪಿಯಲ್ಲಿ ಬಡವನಿಗೊಂದು ಕಾನೂನು ಶ್ರೀಮಂತನಿಗೊಂದು‌ ಕಾನೂನು ಎನ್ನುವ ಮಾತು ಮತ್ತೆ ನಿಜವಾಗಿದೆ.ಸಾಮಾನ್ಯ ಜನರು ಮನೆ ಕಟ್ಟಲು ನೂರಾರು ಕಂಡೀಷನ್ ಗಳನ್ನು ಹಾಕುವ ನಗರ ಸಭೆ ರಸ್ತೆ ಯಲ್ಲೇ ಅಕ್ರಮವಾಗಿ ಕಟ್ಟಿರುವ ಕಟ್ಟಡದ ಉದ್ಘಾಟನೆಗೆ ರತ್ನಕಂಬಳಿ ಹಾಕಿ ಕೊಟ್ಟಿದೆ.ಈ ಅಕ್ರಮಕ್ಕೆ ಅಧಿಕಾರದಲ್ಲಿ ರುವ ಕಾಂಗ್ರೆಸ್ಸಿನ‌ ಕೆಲ ಪುಡಿ ನಾಯಕರು ಕೈ ಬಿಸಿ ಮಾಡುಕೊಂಡು ಬೆಂಬಲಕ್ಕೆ ನಿಂತಿದ್ದಾರೆ ಎನ್ನಲಾಗಿದೆ.

ಅಕ್ಟೋಬರ್ -18-2023 swabhimananews@gmail.com

ನಗರ ಸಭೆಯಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ಭ್ರಷ್ಟ ಸದಸ್ಯರು ಹಾಗೂ ಕಾಸಿಗೆ ಬಾಯಿ ಬಿಡುವ ನಗರಸಭೆಯ ಅಧಿಕಾರಿಗಳಿಂದ ಹುಟ್ಟಿದ ಅಕ್ರಮ ಎಂಬ ಕೂಸಿಗೆ ,ಕಾಂಗ್ರೆಸ್. ಜೊಯಾಲುಕ್ಕಾಸ್ ಎಂಬ ಹೆಸರಿಟ್ಟು ರಕ್ಷಿಸುತ್ತಿದೆ.ಭ್ರಷ್ಟಚಾರ ವಿರೋಧಿ ಎನ್ನುವ ಹೆಸರಲ್ಲಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ,ಉಡುಪಿ ಜಿಲ್ಲೆಯಲ್ಲಿ ಮಾತ್ರ ಕಾಂಗ್ರೆಸ್ ಪುಡಿ ನಾಯಕರ ಧನದಾಹಕ್ಕೆ ಕಡಿವಾಣ ಹಾಕುವಲ್ಲಿ ವಿಫಲವಾಗಿದೆ.

ಉಸ್ತುವಾರಿ ಮಂತ್ರಿಗಳ ಹೆಸರಲ್ಲಿ ಕೆಲವೊಬ್ಬ ನಾಯಕರುಗಳು ಈ ಅಕ್ರಮ ಕಟ್ಟಡಕ್ಕೆ ಅನುಮತಿ‌ ನೀಡುವಂತೆ , ನಗರ ಸಭೆಯ ಅಧಿಕಾರಿಗಳಿಗೆ ಒತ್ತಡ ಹಾಕಿದ್ದಾರೆ ಎನ್ನಲಾಗಿದೆ.

ಇನ್ನು ಅಕ್ರಮದಲ್ಲಿ ಕಾಂಗ್ರೆಸ್ ಬಿಜೆಪಿ ಸಮಪಾಲು ಹೊಂದಿದ್ದು,ಸ್ಥಳೀಯ ಬಿಜೆಪಿ ಸದಸ್ಯರಾಗಲೀ…ಶಾಸಕರಾಗಲೀ ತುಟಿ ಪಿಟಿಕ್ ಎನ್ನುತ್ತಿಲ್ಲ.! ಹೀಗಾಗಿ ಕಾಂಗ್ರೆಸ್ ಬಿಜೆಪಿ ಭ್ರಷ್ಟಚಾರದ ವಿಚಾರದಲ್ಲಿ ಅಡ್ಜಸ್ಟ್ ಮೆಂಟ್ ಪೊಲಿಟಿಕ್ಸ್ ಮಾಡುತ್ತಿದ್ದಾರೆ ಎನ್ನುವುದು ಸ್ಥಳೀಯರ ಅರೋಪವಾಗಿದೆ.

ಈ ಬಗ್ಗೆ ಜಿಲ್ಲಾಧಿಕಾರಿಗಳಿಗೂ ದೂರು ಹೋಗಿದ್ದು,ಜಿಲ್ಲಾಡಳಿತ ದೂರನ್ನ ಫಾರ್ವರ್ಡ್ ಮಾಡಿ ತೆಪ್ಪಗೆ ಕುಳಿತಿದೆ.

ಒಟ್ಟಿನಲ್ಲಿ ಉಡುಪಿ ನಗರ ಸಭೆಯಲ್ಲಿ ಬಿಜೆಪಿ ಯ ಭ್ರಷ್ಟಚಾರ ಕಂಡು ಪುಳಕಿತರಾದ ಜನ ಸಮಾನ್ಯರಿಗೆ ಕಾಂಗ್ರೆಸ್ ಭ್ರಷ್ಟಚಾರವನ್ನು ಕಣ್ಣೆದುರು ನೋಡುವ ಕಾಲ ಬಂದೊದಗಿದೆ.

swabhimananews@gmail.com

Related posts

ಹೆಣದಿಂದ ಹಣ.
ಮಾಜಿ ಗ್ರಾಮಪಂಚಾಯತ್ ಅಧ್ಯಕ್ಷ ಹಾಲಿ ಪಂಚಾಯತ್ ಅಧ್ಯಕ್ಷೆ ಸೇರಿ ನಾಲ್ವರ ವಿರುದ್ದ ಲೋಕಾಯುಕ್ತಕ್ಕೆ ದೂರು.

Swabhimana News Desk

ಸರಕಾರದ ಕೋಟಿ ಕೋಟಿ ರೂಪಾಯಿ ಹಾಗೂ ಕೋಟ್ಯಂತರ ರೂಪಾಯಿ ಮೌಲ್ಯದ ಕೆರೆಯ ಭೂಮಿಯನ್ನೇ ನುಂಗಿದ.
ವರುಣತೀರ್ಥದ ಕರುಣಕಥೆ.ಇದು

Swabhimana News Desk

ಕೊಕ್ಕರ್ಣೆ ಸಿಂಡಿಕೇಟ್ ರೈತರ ಸೇವಾ ಸಹಕಾರಿ ಸಂಘ(ನಿ)ದಲ್ಲಿ ಕೋಟ್ಯಂತರ ರೂಪಾಯಿಯ ನಕಲಿ ಚಿನ್ನಾಭರಣಗಳನ್ನು ಅಡವಿಟ್ಟು ವಂಚನೆ.!

Swabhimana News Desk

Leave a Comment