6 December 2025
Coastal

ಕಟಪಾಡಿ:ಕಾರ್ಮಿಕರಿಬ್ಬರ ನಡುವೆ ಗಲಾಟೆ ಓರ್ವನ ಕೊಲೆ.!

ಜುಲೈ -17-2023 Swabhimananews@gmail.com
ಕಾಪು: ಕೆಲಸದ ವಿಚಾರವಾಗಿ ಕಾರ್ಮಿಕರಿಬ್ಬರ ಮಧ್ಯೆ ನಡೆದ ಗಲಾಟೆ ಓರ್ವನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಜು.17ರಂದು ಸಂಜೆ ಉಡುಪಿ ಜಿಲ್ಲೆಯ ಕಟಪಾಡಿಯಲ್ಲಿ ನಡೆದಿದೆ

ಕೊಲೆಗೀಡಾದ ಕಾರ್ಮಿಕನನ್ನು ಒರಿಸ್ಸಾ ಮೂಲದ ಗಣೇಶ್ (50) ಎಂದು ಗುರುತಿಸಲಾಗಿದೆ. ಕೊಲೆ ಆರೋಪಿ ಪರಾರಿಯಾಗಿರುವುದಾಗಿ ತಿಳಿದುಬಂದಿದೆ.

ಕಟಪಾಡಿ – ಶಿರ್ವ ರಸ್ತೆಯಲ್ಲಿರುವ ಕಟ್ಟಡ ಕಾಮಗಾರಿ ಮಾಡುತ್ತಿದ್ದ ಇವರಿಬ್ಬರ ಮಧ್ಯೆ ಕೆಲಸದ ವಿಚಾರವಾಗಿ ಜಗಳ ನಡೆದಿತ್ತು. ಹೊಡೆದಾಟದಲ್ಲಿ ಗಣೇಶ್ ಗಂಭೀರವಾಗಿ ಗಾಯಗೊಂಡಿದ್ದರೆನ್ನಲಾಗಿದೆ. ಕೂಡಲೇ ಸ್ಥಳೀಯರು ಹಾಗೂ ಇತರ ಕಾರ್ಮಿಕರು ಗಣೇಶ್‌ನನ್ನು ಆಸ್ಪತ್ರೆಗೆ ಸಾಗಿಸಿದ್ದು, ದಾರಿ ಮಧ್ಯೆ ಗಣೇಶ್ ಮೃತಪಟ್ಟರೆಂದು ತಿಳಿದುಬಂದಿದೆ.
ಸ್ಥಳಕ್ಕೆ ಉಡುಪಿ ಎಸ್ಪಿ ಅಕ್ಷಯ್ ಹಾಕೇ ಮಚೀಂದ್ರ , ಹೆಚ್ಚುವರಿ ಎಸ್ಪಿ ಸಿದ್ದಲಿಂಗಪ್ಪ ಕಾರ್ಕಳ ಡಿವೈಎಸ್ಪಿ ಅರವಿಂದ ಕುಲಗುಜ್ಜಿ, ಕಾಪು ಪೊಲೀಸ್ ವೃತ್ತ ನಿರೀಕ್ಷಕ ಕೆ.ಸಿ.ಪೂವಯ್ಯ ಕಾಪು ಎಸ್ಐ ಶ್ರೀಶೈಲ ಮುರಗೋಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Related posts

ಪ್ರೀಯಕರನ ಜೊತೆ ಸೇರಿ ಗಂಡನನ್ನು ಕೊಂದೇ ಬಿಟ್ಟ ರೀಲ್ಸ್ ರಾಣಿ ಹೆಂಡತಿ ಪ್ರತಿಮಾ.

Swabhimana News Desk

ಬೋಧಿಸತ್ವ ಬುದ್ಧ ಫೌಂಡೇಶನ್ ಉಡುಪಿ ಜಿಲ್ಲೆ ಇದರ ವತಿಯಿಂದ ಭಗವಾನ್ ಬುದ್ಧರ 2568 ನೇ ಜಯಂತಿ ಆಚರಣೆ.

Swabhimana News Desk

ಆಭರಣ ಹೆಸರಿನ ಚಿನ್ನಾಭರಣ ತಯಾರಿಕಾ ಘಟಕದಲ್ಲಿ ವಿಷ ಅನಿಲ ಸೋರಿಕೆ.ಉಡುಪಿ ನಗರದ ಜನತೆ ಆತಂಕದಲ್ಲಿ..!!

Swabhimana News Desk

Leave a Comment